ಕಪ್ಪು ಸೀರೆಯಲ್ಲಿ ನಮಿತಾ ಮಸ್ತ್ ಪೋಸ್; 'ನೀಲಕಂಠ' ನಟಿಯ ಬೇಬಿ ಬಂಪ್ ಫೋಟೋ ವೈರಲ್
ಬಹುಭಾಷಾ ನಟಿ ನಮಿತಾ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ನಮಿತಾ ಇತ್ತೀಚಿಗೆ ಸಾಕಷ್ಟು ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ತರಹೇವಾರಿ ಫೋಟೋ ಶೂಟ್ ಮಾಡಿಸುತ್ತಿರುವ ನಮಿತಾ ಇದೀಗ ಕಪ್ಪು ಬಣ್ಣದ ಸೀರಿಯಲ್ಲಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ.

ಸೀರೆಯಲ್ಲಿ ಮಿಂಚಿರುವ ಗರ್ಭಿಣಿ ನಮಿತಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನಮಿತಾ ಫೋಟೋಗೆ ಅಭಿಮಾನಿಗಳಿಂದ ಮತ್ತು ಸಿನಿ ಗಣ್ಯರಿಂದ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ.
ನೀಲಕಂಠ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದ ನಟಿ ನಮಿತಾ ಬಳಿಕ ಕೆಲವು ಸಿನಿಮಾಗಳಲ್ಲಿ ಮಿಂಚುವ ಮೂಲಕ ಕನ್ನಡ ಅಭಿಮಾನಿಗಳ ಹೃದಯ ಗೆದ್ದಿದ್ದರು.
ನಟಿ ನಮಿತಾ 2017ರಲ್ಲಿ ಚೆನ್ನೈ ಮೂಲದ ತೆಲುಗು ವ್ಯಕ್ತಿ ವೀರೇಂದ್ರ ಚೌಧರಿ ಜೊತೆ ಹಸೆಮಣೆ ಏರಿದರು. ತಿರುಪತಿಯಲ್ಲಿ ಇಬ್ಬರೂ ಸಪ್ತಪದಿ ತುಳಿದರು. ಮದುವೆಯ ನಂತರ ನಮಿತಾ ಸಿನಿಮಾದಲ್ಲಿ ಹೆಚ್ಚು ಸಕ್ರೀಯರಾಗಿರಲಿಲ್ಲ.
2002ರಲ್ಲಿ ನಮಿತಾ ತೆಲುಗು ಸಿನಿಮಾರಂಗದ ಮೂಲಕ ಬಣ್ಣದ ಲೋಕದ ಜರ್ನಿ ಪ್ರಾರಂಭ ಮಾಡಿದರು. ಗುಜರಾತ್ ಮೂಲದ ನಟಿ ನಮಿತಾ ಖ್ಯಾತಿಗಳಿಸಿದ್ದು ದಕ್ಷಿಣ ಭಾರತದಲ್ಲಿ. ತೆಲುಗಿನ ಸೊಂತಮ್ ಸಿನಿಮಾ ಮೂಲಕ ನಮಿತಾ ಮೊದಲ ಬಾರಿಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು.
ನಮಿತಾ ಕೊನೆಯದಾಗಿ ಮಲಯಾಳಂ ಮತ್ತು ತಮಿಳು ಸಿನಿಮಾದಲಲಿ ಮಿಂಚಿದ್ದರು. ಕನ್ನಡದಲ್ಲಿ ಕೊನೆಯದಾಗಿ ಬೆಂಕಿ ಬಿರುಗಾಳಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.