- Home
- Entertainment
- Cine World
- ಮುಚ್ಚಿಡಲು ಏನೂ ಇಲ್ಲ, ಮೂರು ಡಿವೋರ್ಸ್ ಬಳಿಕ ಮದ್ವೆ ಜೀವನ ಬಗ್ಗೆ ಮೌನ ಮುರಿದ ನಟಿ ಮೀರಾ
ಮುಚ್ಚಿಡಲು ಏನೂ ಇಲ್ಲ, ಮೂರು ಡಿವೋರ್ಸ್ ಬಳಿಕ ಮದ್ವೆ ಜೀವನ ಬಗ್ಗೆ ಮೌನ ಮುರಿದ ನಟಿ ಮೀರಾ
ಮುಚ್ಚಿಡಲು ಏನೂ ಇಲ್ಲ, ಮೂರು ಡಿವೋರ್ಸ್ ಬಳಿಕ ಮದ್ವೆ ಜೀವನ ಬಗ್ಗೆ ಮೌನ ಮುರಿದ ನಟಿ ಮೀರಾ, ಮೂರು ಮದುವೆಯಾಗಿ ಡಿವೋರ್ಸ್ ಆಗಿರುವ ಮೀರಾ ಇತ್ತೀಚೆಗೆ ತಾನು ಸಿಂಗಲ್ ಎಂದು ಹೇಳಿಕೊಂಡಿದ್ದರು.

ಮೌನ ಮುರಿದ ನಟಿ ಮೀರಾ
ನಟಿ ಮೀರಾ ವಾಸುದೇವನ್ ಸಿನಿಮಾ, ಸೀರಿಯಲ್ ಜೊತೆಗೆ ತಮ್ಮ ವೈಯುಕ್ತಿಕ ಬದುಕಿನಿಂದಲೂ ಭಾರಿ ಸುದ್ದಿಯಾಗಿದ್ದಾರೆ. ಒಂದಲ್ಲ, ಎರಡಲ್ಲ, ಮೂರು ಮುದುವೆಯಾಗಿ ಮೂರು ಡಿವೋರ್ಸ್ ಪಡೆದಿರುವ ಮೀರಾ ಇತ್ತೀಚೆಗೆ ತಾವು ಸಿಂಗ್ ಎಂದು ಹೇಳಿಕೊಂಡಿದ್ದರು. ಇದು ಘೋಷಣೆಯೋ ಸೂಚನೆಯೋ ಅನ್ನೋ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು. ಇದೀಗ ಮುಚ್ಚಿಡಲು ಏನೂ ಇಲ್ಲ ಎಂದು ವೈವಾಹಿಕ ಜೀವನ ಕುರಿತು ಹೇಳಿದ್ದರೆ.
ಮುಚ್ಚಿಡಲು ಏನೂ ಇಲ್ಲ
ಬ್ಲೆಸ್ಸಿ ನಿರ್ದೇಶನದ, ಮೋಹನ್‌ಲಾಲ್ ನಟನೆಯ 'ತನ್ಮಾತ್ರ' ಚಿತ್ರದ ಮೂಲಕ ಪ್ರೇಕ್ಷಕರ ಮನಗೆದ್ದ ನಟಿ ಮೀರಾ ವಾಸುದೇವ್, ಇದೀಗ ತಮ್ಮ ಡಿವೋರ್ಸ್ ಹಾಗೂ ವೃತ್ತಿ ಜೀವನದ ಬಗ್ಗೆ ಮೀರಾ ಹಂಚಿಕೊಂಡ ಮಾತುಗಳು ಚರ್ಚೆಗೆ ಬಂದಿವೆ. ತಾನು ವಿಚ್ಛೇದಿತೆ ಮತ್ತು ಸದ್ಯಕ್ಕೆ ಸಿಂಗಲ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದಕ್ಕೆ ಕಾರಣವನ್ನೂ ಅವರು ಬಿಚ್ಚಿಟ್ಟಿದ್ದಾರೆ. ಸುಳ್ಳು ಸುದ್ದಿ ಹರಡಬಾರದು ಅನ್ನೋದು ಅವರ ಉದ್ದೇಶವಾಗಿತ್ತು. 'ನನ್ನಿಂದ ತಪ್ಪುಗಳಾಗಿವೆ, ಮುಚ್ಚಿಡಲು ಏನೂ ಇಲ್ಲ, ಇನ್ಮುಂದೆ ಜೀವನದಲ್ಲಿ ಮುಂದೆ ಸಾಗಬೇಕು' ಅಂತ ಮೀರಾ ಹೇಳಿದ್ದಾರೆ.
ನನ್ನಿಂದಲೂ ತಪ್ಪುಗಳಾಗಿದೆ
"ನಾನು ಡಿವೋರ್ಸ್ ಪಡೆದಿದ್ದೇನೆ, ಸಿಂಗಲ್ ಆಗಿದ್ದೇನೆ ಅಂತ ಹೇಳಿಕೊಂಡಿದ್ದೇ ತಪ್ಪು ಸುದ್ದಿಗಳು ಹರಡಬಾರದು ಮತ್ತು ತಪ್ಪು ತಿಳುವಳಿಕೆ ಉಂಟಾಗಬಾರದು ಅಂತ. ನನ್ನ ಬಗ್ಗೆ ಬರುವ ನೆಗೆಟಿವಿಟಿ, ವಿಡಿಯೋಗಳು ಯಾವುದೂ ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ಇದೆಲ್ಲಾ ಆಗುತ್ತೆ ಅಂತ ನಾನು ಮೊದಲೇ ಅಂದುಕೊಂಡಿದ್ದೆ. ನನ್ನಿಂದಲೂ ತಪ್ಪುಗಳಾಗಿವೆ. ಮುಚ್ಚಿಡಲು ನನ್ನ ಬಳಿ ಏನೂ ಇಲ್ಲ. ಇನ್ಮುಂದೆ ಜೀವನದಲ್ಲಿ ಮುಂದೆ ಸಾಗಬೇಕು ಅಷ್ಟೇ ಎಂದು ಮೀರಾ ಹೇಳಿದ್ದಾರೆ.
ಸುಂದರ ಘಟ್ಟದಲ್ಲಿ ನಾನಿದ್ದೇನೆ
"ಸದ್ಯ ನಾನು ನನ್ನ ಕೆರಿಯರ್‌ನಲ್ಲಿ ತುಂಬಾ ಬ್ಯುಸಿಯಾಗಿದ್ದೇನೆ. ಜೀವನದಲ್ಲಿ ಬಹಳ ಖುಷಿಯಾಗಿದ್ದೇನೆ. ನನ್ನ ಬದುಕಿನ ಒಂದು ಸುಂದರ ಘಟ್ಟದಲ್ಲಿ ನಾನೀಗ ಇದ್ದೇನೆ. ಅನುಭವಗಳಿಂದಲೇ ಜೀವನದಲ್ಲಿ ಸ್ಪಷ್ಟತೆ ಸಿಗುವುದು. ನಮ್ಮ ಜಾಗದಲ್ಲಿ ನಮಗೆ ಕಂಫರ್ಟ್ ಇಲ್ಲದಿದ್ದರೆ, ನಾವು ಬೇರೆಯವರಿಂದ ಮನ್ನಣೆ ಕೇಳಬೇಕಾಗುತ್ತದೆ. ಆಗ ಬೇರೆಯವರು ಹೇಳಿದ್ದೇ ನಮ್ಮ ಸತ್ಯವಾಗಿಬಿಡುತ್ತದೆ.
ಅನುಭವಗಳೇ ಪಾಠ
ಹಾಗಂತ ನಾವು ಬೇರೆಯವರನ್ನು ನೋಯಿಸಬೇಕು ಅಂತಲ್ಲ. ಆದರೆ, ಅನುಭವಗಳಿಂದ ಪಾಠ ಕಲಿತು ಬೆಳೆಯಬೇಕು," ಎಂದು ಮೀರಾ ವಾಸುದೇವ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮೂವಿ ವರ್ಲ್ಡ್ ಮೀಡಿಯಾಗೆ ನೀಡಿದ ಸಂದರ್ಶನದಲ್ಲಿ ಮೀರಾ ಈ ಮಾತುಗಳನ್ನಾಡಿದ್ದಾರೆ.
ಅನುಭವಗಳೇ ಪಾಠ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

