- Home
- Entertainment
- Cine World
- ಗಂಡನಿಂದ ದೂರವಿರಲು ಕಾರಣವೇನು? ಡಿವೋರ್ಸ್ ಬಗ್ಗೆ ಮೋಹನ್ ಬಾಬು ಪುತ್ರಿ ಮಂಚು ಲಕ್ಷ್ಮಿ ಸ್ಪಷ್ಟನೆ!
ಗಂಡನಿಂದ ದೂರವಿರಲು ಕಾರಣವೇನು? ಡಿವೋರ್ಸ್ ಬಗ್ಗೆ ಮೋಹನ್ ಬಾಬು ಪುತ್ರಿ ಮಂಚು ಲಕ್ಷ್ಮಿ ಸ್ಪಷ್ಟನೆ!
ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿಗಳಿಗೆ ನಟಿ ಮತ್ತು ಮೋಹನ್ ಬಾಬು ಅವರ ಪುತ್ರಿ ಮಂಚು ಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.

ನಟ ಮೋಹನ್ ಬಾಬು ಅವರ ಮಗಳು, ನಟಿ ಮಂಚು ಲಕ್ಷ್ಮಿ ಈಗ ನಟಿಯಾಗಿ ಮಾತ್ರವಲ್ಲದೆ ನಿರ್ಮಾಪಕಿಯಾಗಿಯೂ, ಬರಹಗಾರ್ತಿಯಾಗಿಯೂ, ನಿರ್ದೇಶಕಿಯಾಗಿಯೂ, ನಿರೂಪಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಸಿನಿಮಾದಲ್ಲಿ ಸಾಕಷ್ಟು ಅವಕಾಶಗಳಿಲ್ಲದಿದ್ದರೂ, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ನಟನಾ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿಕೊಂಡಿರುವ ಇವರು, ತಮ್ಮ ಇಂಗ್ಲಿಷ್ ಜ್ಞಾನದಿಂದ ಇನ್ನಷ್ಟು ಪ್ರಸಿದ್ಧರಾಗಿದ್ದಾರೆ. ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದ ಲಕ್ಷ್ಮಿ ಮಂಚು, ಈಗ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ. ತಮಿಳಿನಲ್ಲಿ ಕಡಲ್ ಚಿತ್ರದಲ್ಲಿ ನಟಿಸಿದ್ದರು. ಪ್ರಸ್ತುತ ತೆಲುಗು ಸಿನಿಮಾದಲ್ಲಿ ಅಡಿಪರ್ವಂ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಅದೇ ರೀತಿ ಮಂಚು ಲಕ್ಷ್ಮಿಯವರ ಅಪ್ಪ ಮೋಹನ್ ಬಾಬು ಕುಟುಂಬದ ಬಗ್ಗೆ ಹೇಳಬೇಕಾಗಿಲ್ಲ. ಕೆಲವು ದಿನಗಳ ಹಿಂದೆ, ಅವರು ತಮ್ಮ ಕಿರಿಯ ಮಗ ಮಂಚು ಮನೋಜ್ ಜೊತೆ ಆಸ್ತಿ ವಿಚಾರದಲ್ಲಿ ಜಗಳವಾಡಿದ್ದು, ನಂತರ ಮಾಧ್ಯಮಗಳ ಮುಂದೆ ಕ್ಷಮೆ ಕೇಳಿದ್ದು ಸುದ್ದಿಯಾಗಿತ್ತು. ಆಸ್ತಿಗಾಗಿ ಮಕ್ಕಳು ಜಗಳವಾಡಿದರು ಎಂದು ಅವರು ಹೇಳಲಿಲ್ಲ, ಆದರೆ ಅದು ಸಣ್ಣ ವಾಗ್ವಾದಗಳಿಂದ ನಡೆದಿದೆ ಎಂದು ಹೇಳಲಾಗಿತ್ತು.
ಆದರೆ ನಿಜವಾದ ಜಗಳಕ್ಕೆ ಕಾರಣವೇನು ಎಂಬುದನ್ನು ಕುಟುಂಬದವರು ಬಹಿರಂಗಪಡಿಸಲು ಇಷ್ಟಪಡಲಿಲ್ಲ. ಆಸ್ತಿ ತಕರಾರುಗಳು ನಡೆಯುತ್ತಿದ್ದಾಗ, ಮಂಚು ಲಕ್ಷ್ಮಿ ಎಲ್ಲವನ್ನೂ ನಿರ್ಲಕ್ಷಿಸಿ ಮುಂಬೈನಲ್ಲೇ ಇದ್ದರು. ಈ ನಡುವೆ ಮಂಚು ಲಕ್ಷ್ಮಿ ತನ್ನ ಗಂಡ ಆಂಡಿ ಶ್ರೀನಿವಾಸನ್ ಅವರನ್ನು ವಿಚ್ಛೇದನ ಮಾಡಲು ಹೊರಟಿದ್ದಾರೆ ಎಂಬ ಸುದ್ದಿ ತೆಲುಗು ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತು.
ಮಂಚು ಕುಟುಂಬದಲ್ಲಿರುವ ಜಗಳಗಳು ಸಾಲದು ಎಂದು ಈಗ ಇದು ಬೇರೆನಾ ಎಂದು ಗೊಣಗುವಷ್ಟು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಹೊರಬಿದ್ದವು. ಸದ್ಯ ಇದಕ್ಕೆ ಪ್ರತಿಕ್ರಿಯಿಸಿದ ಮಂಚು ಲಕ್ಷ್ಮಿ, 'ನನ್ನ ಗಂಡ ಶ್ರೀನಿವಾಸ್ ವಿದೇಶದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದಾರೆ.' ನಾವು ತುಂಬಾ ಹತ್ತಿರವಾಗಿದ್ದೇವೆ, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳೆಲ್ಲವೂ ಸುಳ್ಳು. ಸಮಾಜದಲ್ಲಿ ನೆಮ್ಮದಿಯಿಂದ ಬದುಕುವ ಸ್ವಾತಂತ್ರ್ಯವನ್ನು ನಾವಿಬ್ಬರೂ ಹಂಚಿಕೊಳ್ಳುತ್ತೇವೆ. ನಾವು ಸ್ವಾತಂತ್ರ್ಯ, ವೈಯಕ್ತಿಕ ಗೌಪ್ಯತೆ ಮತ್ತು ಜವಾಬ್ದಾರಿಗೆ ಆದ್ಯತೆ ನೀಡುತ್ತೇವೆ. ನಾವು ನಮ್ಮ ಇಷ್ಟದಂತೆ ಬದುಕುತ್ತೇವೆ. ಬೇರೆಯವರು ಏನು ಅಂದುಕೊಳ್ಳುತ್ತಾರೆ ಎಂದು ಚಿಂತಿಸುವ ಮೂಲಕ ನಮ್ಮ ಸಂತೋಷವನ್ನು ಹಾಳು ಮಾಡಿಕೊಳ್ಳುವುದಿಲ್ಲ. "ಈಗ ನಮ್ಮ ಮಗಳು ಆಕೆಯ ತಂದೆಯೊಂದಿಗೆ ಇದ್ದಾಳೆ," ಎಂದು ಹೇಳಿದ್ದಾರೆ.
ಲಕ್ಷ್ಮಿ ಈಗ ಮುಂಬೈಗೆ ಶಿಫ್ಟ್ ಆಗಿದ್ದಾರೆ. ಟಾಲಿವುಡ್‌ನಲ್ಲಿ ಸರಿಯಾದ ಅವಕಾಶಗಳು ಸಿಗದ ಕಾರಣ ಇದಕ್ಕೇ ಕಾರಣ ಎನ್ನಲಾಗುತ್ತಿದೆ. ಚೆನ್ನಾಗಿ ಇಂಗ್ಲಿಷ್ ಬಲ್ಲ ಮಂಚು ಲಕ್ಷ್ಮಿ, ಹಿಂದಿ ಭಾಷೆಯನ್ನೂ ಬಲ್ಲವರು. ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್‌ಗೆ ತುಂಬಾ ಆಪ್ತರು. ಆದ್ದರಿಂದ ಅಲ್ಲೇ ಉಳಿದುಕೊಂಡು ಈಗ ಬಾಲಿವುಡ್ ಸಿನಿಮಾಗಳಿಗೆ ಗಾಳ ಹಾಕುತ್ತಿದ್ದಾರೆ ಎನ್ನಲಾಗಿದೆ.