- Home
- Entertainment
- Cine World
- Malaika Arora: ಬ್ಲ್ಯಾಕ್ ಗೌನ್ ಡ್ರೆಸ್ನಲ್ಲಿ ಹಾಟ್ ಬೆಡಗಿ: 50ರ ವಯಸ್ಸಿನಲ್ಲೂ ಮಾಸಿಲ್ಲ ಮಲೈಕಾ ಬ್ಯೂಟಿ!
Malaika Arora: ಬ್ಲ್ಯಾಕ್ ಗೌನ್ ಡ್ರೆಸ್ನಲ್ಲಿ ಹಾಟ್ ಬೆಡಗಿ: 50ರ ವಯಸ್ಸಿನಲ್ಲೂ ಮಾಸಿಲ್ಲ ಮಲೈಕಾ ಬ್ಯೂಟಿ!
ಸಾಮಾಜಿಕ ಮಾಧ್ಯಮದಲ್ಲಿ ನಟಿ ಮಲೈಕಾ ಅರೋರಾ ಅವರ ಚಂದದ ಫೋಟೋಗಳು ಆಗಾಗ ವೈರಲ್ ಆಗುತ್ತವೆ. ಈಗ ಅವರು ಕಪ್ಪು ಬಣ್ಣದ ಲಾಂಗ್ ಗೌನ್‌ನಲ್ಲಿ ಮಿಂಚಿದ್ದಾರೆ.

ಬಾಲಿವುಡ್ ನಟಿ ಮಲೈಕಾ ಅರೋರಾ ಸಖತ್ ಬಿಡಿ. 50 ರ ಆಸು-ಪಾಸಿನ ವಯಸ್ಸಿನಲ್ಲೂ ಹುಡುಗಿಯರು ನಾಚೋ ಹಾಗೆ ಇದ್ದಾರೆ. ದೈಹಿಕವಾಗಿ ಫಿಟ್ ಆಗಿರೋ ಮಲೈಕಾ ಅರೋರಾ, ಮೋಹಕ ಅನಿಸೋ ಬಟ್ಟೆ ಧರಿಸಿಕೊಂಡು ಪಡ್ಡೆಗಳ ನಿದ್ದೆ ಗೆಡಿಸುತ್ತಲೇ ಇರುತ್ತಾರೆ.
ಮಲೈಕಾ ಅರೋರಾ ಧರಿಸಿರೋ ಬಟ್ಟೆ ತುಂಬಾ ಇಂಟ್ರಸ್ಟಿಂಗ್ ಅನಿಸುತ್ತಿದೆ. ಕಪ್ಪು ಬಣ್ಣದ ಲಾಂಗ್ ಗೌನ್ ಧರಿಸಿರೋ ಮಲೈಕಾ ಅರೋರಾ, ಸಖತ್ ಹಾಟ್ ಲುಕ್‌ನಲ್ಲಿ ಫೋಸ್ ಕೊಟ್ಟಿದ್ದಾರೆ.
ಮಲೈಕಾ ಅರೋರಾ ಧರಿಸಿರೋ ಈ ಒಂದು ಗೌನ್ ಸ್ಪೆಷಲ್ ಅನಿಸುತ್ತದೆ. ಮಲೈಕಾ ದೇಹ ಸಿರಿಗೂ ಒಪ್ಪೋ ರೀತಿನೇ ಇದೆ. ಆದರೂ ಇದನ್ನ ನೋಡಿದ ನೆಟ್ಟಿಗರು ಮನಸ್ಸಿಗೆ ಬಂದ ರೀತಿ ಕಾಮೆಂಟ್ ಮಾಡಿದ್ದಾರೆ.
ಮಲೈಕಾ ಅರೋರಾ ಹೊಸ ರೀತಿಯ ಬಟ್ಟೆ ನೋಡಿ ಕೆಲವು ನೆಟ್ಟಿಗರು ತುಂಬಾ ಇಷ್ಟ ಪಟ್ಟಿದ್ದಾರೆ. ಇನ್ನು ಕೆಲವು ಫ್ಯಾನ್ಸ್ ಕೆಟ್ಟದಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಮಲೈಕಾ ಅವರು ಶೋ ನಡೆಸಿಕೊಡುವುದು ಮಾತ್ರವಲ್ಲದೆ ತಮ್ಮ ಯೋಗ ಕ್ಲಾಸ್ಗಳಲ್ಲಿ ತುಂಬಾ ಸ್ಟ್ರಿಕ್ಟ್ ಆಗಿದ್ದಾರೆ. ಇವರು ಯೋಗ ಇನ್ಸ್ಟಕ್ಟರ್ ಕೂಡಾ ಹೌದು.
ತಮ್ಮ ಅತ್ಯಂತ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ಮಲೈಕಾ ಅರೋರಾ ಯೋಗ ತರಗತಿಗಳನ್ನು ಮಿಸ್ ಮಾಡುವುದೇ ಇಲ್ಲ. ಇದರ ಜೊತೆ ರಿಯಾಲಿಟಿ ಶೋ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಾರೆ.
50ರ ಆಸುಪಾಸಿನಲ್ಲಿರುವ ಬಾಲಿವುಡ್ ಬ್ಯೂಟಿ ಮಲೈಕಾ ಅರೋರಾ ಅವರು ನಟಿಗಿಂತ ಮೊದಲು ರೂಪದರ್ಶಿ. ನಟಿಯಾಗಿ ಮಾತ್ರವಲ್ಲದೆ ಮಲೈಕಾ ಅರೋರಾ ಮಾಡೆಲಿಂಗ್ನಲ್ಲಿ ಯಾವಾಗಲೂ ಸಕ್ರಿಯರಾಗಿದ್ದಾರೆ.