ಕುಟುಂಬದ ಇಚ್ಚೆಗೆ ವಿರುದ್ಧವಾಗಿ 23ನೇ ವಯಸ್ಸಿಗೆ ಮದುವೆ 25ಕ್ಕೆ ವಿಚ್ಚೇದನ ಪಡೆದ ನಟಿ ರಣಬೀರ್ ಜತೆ ಡೇಟಿಂಗ್
ಈ ನಟಿ ಬಾಲಿವುಡ್ ನ ಶಾರುಖ್ ಖಾನ್ ಅವರೊಂದಿಗೆ ಹಿಟ್ ಚಿತ್ರವಾದ ರಯೀಸ್‌ನಲ್ಲಿ ಕೆಲಸ ಮಾಡಿದ ನಂತರ ಭಾರತದಲ್ಲಿ ಜನಪ್ರಿಯರಾದರು. ಲಾಸ್ ಏಂಜಲೀಸ್‌ನಲ್ಲಿ ತನ್ನ ಪತಿಯನ್ನು ಭೇಟಿಯಾದ ನಟಿ ಕುಟುಂಬದ ಇಚ್ಚೆಗೆ ವಿರುದ್ಧವಾಗಿ 23ನೇ ವಯಸ್ಸಿಗೆ ಮದುವೆಯಾದರು. ಆ ಮದುವೆ ಎರಡೇ ವರ್ಷಕ್ಕೆ ಮುರಿದುಬಿತ್ತು ಈಗ ಮತ್ತೆ ಈ ನಟಿ ಮದುವೆಯಾಗಲಿದ್ದಾರೆಂದು ಗುಲ್ಲು ಎದ್ದಿದೆ. ತನ್ನ ಬಹುಕಾಲದ ಗೆಳೆಯ ಸಲೀಂ ಕರೀಂ ಜೊತೆ ಸೆಪ್ಟೆಂಬರ್ ನಲ್ಲಿ ಮದುವೆಯಾಗಲಿದ್ದು, ಪಂಜಾಬ್‌ನ ಗಿರಿಧಾಮವೊಂದರಲ್ಲಿ ಆತ್ಮೀಯ ಸಮಾರಂಭ ನಡೆಯಲಿದ್ದು, ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಪಾಲ್ಗೊಳ್ಳಲಿದ್ದಾರಂತೆ.
ಪಾಕಿಸ್ತಾನ ಚಿತ್ರರಂಗದಲ್ಲಿ ಸೂಪರ್‌ಸ್ಟಾರ್ ಆಗಿರುವ ಮಹಿರಾ ಖಾನ್, ಭಾರತದಲ್ಲಿಯೂ ಉತ್ತಮ ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ನಟಿ ಶಾರುಖ್ ಖಾನ್ ಅವರೊಂದಿಗೆ ಹಿಟ್ ಚಿತ್ರವಾದ ರಯೀಸ್‌ನಲ್ಲಿ ಕೆಲಸ ಮಾಡಿದ ನಂತರ ಭಾರತದಲ್ಲಿ ಜನಪ್ರಿಯರಾದರು.
ಬಾಲಿವುಡ್‌ಗೆ ಪದಾರ್ಪಣೆ ಮಾಡುವ ಮೊದಲು, ಮಹಿರಾ ಖಾನ್ ಪಾಕಿಸ್ತಾನಿ ಚಲನಚಿತ್ರೋದ್ಯಮದಲ್ಲಿ ಚಿರಪರಿಚಿತ ಮುಖವಾಗಿದ್ದರು. ಮಹಿರಾ ಖಾನ್ 2006 ರಲ್ಲಿ ವಿಜೆ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
2006 ರಲ್ಲಿ, ಮಹಿರಾ ಖಾನ್ ತನ್ನ ಮಾಜಿ ಪತಿ ಅಲಿ ಅಕ್ಸಾರಿಯನ್ನು ಲಾಸ್ ಏಂಜಲೀಸ್‌ನಲ್ಲಿ ಭೇಟಿಯಾದಳು ಮತ್ತು ಮಹಿರಾ ಅಲಿ ಅಕ್ಸಾರಿಯನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದಾಗ, ಆಕೆಯ ತಂದೆ ಹಫೀಜ್ ಖಾನ್ ಇದಕ್ಕೆ ಒಪ್ಪಲಿಲ್ಲ. ಆದಾಗ್ಯೂ, ಮಹಿರಾ ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ 2007 ರಲ್ಲಿ ಅಕ್ಷರಿಯನ್ನು ವಿವಾಹವಾದರು.
ಆ ಸಮಯದಲ್ಲಿ ಮಹಿರಾ ಕೇವಲ 23 ವರ್ಷ ವಯಸ್ಸಿನವರಾಗಿದ್ದರು. ದಂಪತಿಗಳು ಎರಡು ವರ್ಷಗಳ ನಂತರ ಮೊದಲ ಮಗು ಹುಟ್ಟಿತು. ಮಗ ಅಜ್ಲಾನ್ ಅಕ್ಸರಿ ಹುಟ್ಟಿದ ನಂತರ ಮಹಿರಾ ಕೇವಲ ಎರಡು ವರ್ಷಗಳ ಅಕ್ಸರಿಯೊಂದಿಗಿನ ಜೀವನಕ್ಕೆ ಫುಲ್‌ಸ್ಟಾಪ್ ಇಟ್ಟರು. ವಿಚ್ಛೇದನ ಪಡೆದು ಪರಸ್ಪರ ಒಪ್ಪಿಗೆ ಮೇರೆಗೆ ಮಹಿರಾ ಖಾನ್ ಅವರ ಮಗನನ್ನು ತನ್ನ ಪಾಲನೆಗೆ ಪಡೆದರು.
2021 ರಲ್ಲಿ, ಮಹಿರಾ ಖಾನ್ ತನ್ನ ದಾಂಪತ್ಯದ ಬಗ್ಗೆ ಮುಕ್ತವಾಗಿ ಹೇಳಿಕೊಂಡರು. ಮತ್ತು ಮಗ ಅಜ್ಲಾನ್ ಅವರ ತಂದೆ ಮತ್ತು ಅವರ ಕುಟುಂಬ ಮತ್ತು ನನ್ನ ಕುಟುಂಬ, ಅಜ್ಲಾನ್ ವಿಷಯಕ್ಕೆ ಬಂದಾಗ ಜೊತೆಗಿದ್ದೇನೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದರು.
ಮಹಿರಾ ಮತ್ತು ರಣಬೀರ್ ಯುರೋಪ್‌ನಲ್ಲಿ ಒಟ್ಟಿಗೆ ಕೆಲವು ಸಮಯವನ್ನು ಆನಂದಿಸುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಬಳಿಕ ಮಹಿರಾ ಖಾನ್ ಬಾಲಿವುಡ್ ಸೂಪರ್‌ಸ್ಟಾರ್ ರಣಬೀರ್ ಕಪೂರ್ ಅವರೊಂದಿಗೆ ಪ್ರಣಯ ಸಂಬಂಧ ಹೊಂದಿದ್ದರು.
ಖ್ಯಾತ ಪಾಕಿಸ್ತಾನಿ ನಿರ್ದೇಶಕ ಶೋಯಬ್ ಮನ್ಸೂರ್ ಅವರು ಬೋಲ್ ಚಿತ್ರದಲ್ಲಿ ಅವಕಾಶ ನೀಡಿದರು. ಹಮ್ಸಾಫರ್‌ನ ಯಶಸ್ಸು ಮಹಿರಾ ಖಾನ್ ಪಾಕಿಸ್ತಾನದಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಜನಪ್ರಿಯತೆ ತಂದುಕೊಟ್ಟಿತು.
ಇದೀಗ ಅತಿಫ್ ಅಸ್ಲಾಮ್ ಜೊತೆಗೆ 'ಬೋಲ್' ಮತ್ತು ಶಾರುಖ್ ಖಾನ್ ಅವರ 'ರಯೀಸ್' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ತಾರೆ , ಪಾಕಿಸ್ತಾನಿ ನಟಿ ಮಹಿರಾ ಖಾನ್ ಅವರು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ. ಸೆಪ್ಟೆಂಬರ್‌ನಲ್ಲಿ ತನ್ನ ದೀರ್ಘಕಾಲದ ಗೆಳೆಯ ಸಲೀಂ ಕರೀಮ್‌ನೊಂದಿಗೆ ಮದುವೆಯಾಗಲಿದ್ದಾರೆ ಎನ್ನಲಾಗಿದೆ.
ಫವಾದ್ ಖಾನ್ ಜೊತೆಗೆ 'ಹಮ್ಸಫರ್' ಎಂಬ ದೂರದರ್ಶನ ಕಾರ್ಯಕ್ರಮದೊಂದಿಗೆ ನಟಿ ಮಹಿರಾ ಖಾನ್ ಭಾರತದಲ್ಲಿ ಮನೆಮಾತಾಗಿದ್ದರು. ನಟಿಗೆ ಈಗ 38 ವರ್ಷವಾಗಿದ್ದು, ಎರಡನೇ ಮದುವೆಗೆ ಸಿದ್ಧವಾಗಿದ್ದಾರೆ.