Katrina Kaif ಪ್ರೆಗ್ನೆಂಟ್? ಹೌದು ಅಂತ ಸರ್ಟಿಫಿಕೇಟ್ ಕೊಟ್ಟ ನೆಟಿಜನ್ಸ್!
ಈ ನಡುವೆ ಕತ್ರಿನಾ ಕೈಫ್ (Katrina Kaif) ತಾಯಾಗಲಿದ್ದಾರೆ ಎಂಬ ವರದಿಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಇದಕ್ಕೆ ಪೂರಕವಾಗಿ ಕತ್ರೀನಾರ ಇತ್ತೀಚಿನ ಏರ್‌ಪೋರ್ಟ್ ಲುಕ್ ಜನರ ಊಹೆಗೆ ತುಪ್ಪ ಸುರಿದ ಹಾಗಿದೆ. ಲೆಟೆಸ್ಟ್ ಏರ್‌ಪೋರ್ಟ್ ಫೋಟೋಗಳು ಸಖತ್ ವೈರಲ್ ಆಗಿದ್ದು ಇಂಟರ್ ನೆಟ್ ನಟಿ ಪ್ರೆಗ್ನೆಂಟ್ ಎನ್ನುತ್ತಿದೆ.
ಸೋಮವಾರ, ಕತ್ರಿನಾ ಕೈಫ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು ಮತ್ತು ಪೀಚ್ ಬಣ್ಣದ ಸಡಿಲವಾದ ಕುರ್ತಾ ಮತ್ತು ಪ್ಯಾಂಟ್ ಧರಿಸಿದ್ದರು. ಕತ್ರಿನಾ ಕೈಫ್ ಅವರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತಕ್ಷಣ, ನಟಿ ಗರ್ಭಿಣಿ ಎಂಬ ಕಮೆಂಟ್ ಗಳು ಬರಲು ಆರಂಭಿಸಿದವು.
'ಅವಳು ಗರ್ಭಿಣಿಯಂತೆ ಕಾಣುತ್ತಾಳೆ' ಎಂಬ ಕಮೆಂಟ್ ಗಳು ಒಂದಾದ ಮೇಲೆ ಒಂದು ಬಂದವು. ಇನ್ನೊಬ್ಬರು 'ಕ್ಯಾಟ್ ಗರ್ಭಿಣಿ' ಎಂದು ಬರೆದರು. ಇದು ಸಂತಸ ಪಡುವ ಸುದ್ದಿ ಎಂದು ಕರೆದವರಿಗೂ ಕಡಿಮೆ ಇಲ್ಲ.
ನಟಿ ಮತ್ತಷ್ಟು ಸುಂದರವಾಗಿ ಕಾಣಿಸುತ್ತಿದ್ದಾರೆ. ಗರ್ಭವತಿಯಾಗಿದ್ದರೆ ಇದಕ್ಕಿಂತ ಖುಷಿಯ ವಿಚಾರ ಇನ್ನೊಂದು ಏನಿದೆ ಎಂದು ಹಂಚಿಕೊಂಡವರು ಇದ್ದಾರೆ.
ಕತ್ರಿನಾ ಕೈಫ್ ಡಿಸೆಂಬರ್ 9 ರಂದು ರಾಜಸ್ಥಾನದಲ್ಲಿ ನಟ ವಿಕ್ಕಿ ಕೌಶಲ್ ಅವರನ್ನು ವಿವಾಹವಾದರು. ವಿವಾಹ ಅದ್ದೂರಿಯಾಗಿ ನೆರವೇರಿದ್ದರೂ ಆಪ್ತರು ಮಾತ್ರ ಪಾಲ್ಗೊಂಡಿದ್ದರು.
ಮದುವೆಗಾಗಿ, ಕತ್ರಿನಾ ಕೆಂಪು ಲೆಹೆಂಗಾವನ್ನು ಧರಿಸಿದ್ದರು ಮತ್ತು ವಿಕ್ಕಿ ಶೆರ್ವಾನಿಯಲ್ಲಿ ಸುಂದರವಾಗಿ ಕಾಣುತ್ತಿದ್ದರು. ಮದುವೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಸಂಬಂಧವನ್ನು ಗೌಪ್ಯವಾಗಿಟ್ಟಿದ್ದರು ಮತ್ತು ಅವರ ಮದುವೆಯ ನಂತರವೇ ಒಟ್ಟಿಗೆ ಕಾಣಿಸಿ ಕೊಂಡು ಜೊತೆಯಾಗಿ ಪೋಸ್ ನೀಡಿದ್ದರು.
ಕತ್ರಿನಾ ಕೈಫ್ ಟೈಗರ್ 3 ನಲ್ಲಿ ಸಲ್ಮಾನ್ ಖಾನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ವಿಕ್ಕಿ ಕೌಶಲ್ ಸಾರಾ ಅಲಿ ಖಾನ್ ಸಹ ಜತೆಯಾಗಲಿದ್ದಾರೆ.