MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಮಗನ ಆಸೆಯಂತೆ ವಿಭಿನ್ನವಾಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ನಟಿ ಕಾಜಲ್ ಅಗರ್ವಾಲ್

ಮಗನ ಆಸೆಯಂತೆ ವಿಭಿನ್ನವಾಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ನಟಿ ಕಾಜಲ್ ಅಗರ್ವಾಲ್

ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ತಮ್ಮ ಮುದ್ದು ಮಗ ನೀಲ್ ಹುಟ್ಟುಹಬ್ಬವನ್ನು ಅವನು ಇಷ್ಟಪಟ್ಟಂತೆ ವಿಭಿನ್ನವಾಗಿ ಆಚರಿಸಿದ್ದು, ಫೋಟೋಗಳನ್ನು ಶೇರ್ ಮಾಡಿದ್ದಾರೆ.  

2 Min read
Pavna Das
Published : Apr 21 2025, 02:09 PM IST| Updated : Apr 21 2025, 03:02 PM IST
Share this Photo Gallery
  • FB
  • TW
  • Linkdin
  • Whatsapp
110

ಬಾಲಿವುಡ್, ಕಾಲಿವುಡ್, ಟಾಲಿವುಡ್ ನಲ್ಲಿ ಕಳೆದ 20 ವರ್ಷಗಳಿಂದ ಮಿಂಚುತ್ತಿರುವ ನಟಿ ಕಾಜಲ್ ಅಗರ್ವಾಲ್ (Kajal Agarwal)ಮಗ ನೀಲ್ ಗೆ ಮೂರು ವರ್ಷ ತುಂಬಿದ್ದು, ಈ ಹಿನ್ನೆಲಯಲ್ಲಿ ಅದ್ಧೂರಿಯಾಗಿ ಬರ್ತ್ ಡೇ ಸೆಲೆಬ್ರೇಶನ್ ಮಾಡಿದ್ದಾರೆ. 
 

210

ಕಾಜಲ್ ಅಗರ್ವಾಲ್ ಪುತ್ರ ನೀಲ್ ಗೆ ವೆಹಿಕಲ್  ಕನ್’ಸ್ಟ್ರಕ್ಷನ್ ಮಾಡೋದು ತುಂಬಾನೆ ಇಷ್ಟವಾದ ಕೆಲಸವಾಗಿದ್ದು, ಈ ಹಿನ್ನೆಲೆಯಲ್ಲಿ ಮಗನ ಆಸೆಯಂತೆ, ಪೂರ್ತಿಯಾಗಿ ಕನ್’ಸ್ಟ್ರಕ್ಷನ್ ಥೀಮ್ ನಲ್ಲಿ ಡೆಕೊರೇಶನ್ ಮಾಡುವ ಮೂಲಕ ಪುಟ್ಟ ಮಗನ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. 
 

310

ಕಾಜಲ್ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದು, ಈ ಫೊಟೋಗಳನ್ನು ನಟಿ ಮಗನ ಹುಟ್ಟುಹಬ್ಬವನ್ನು ಹೇಗೆಲ್ಲಾ ಆರೇಂಜ್ ಮಾಡಿದ್ದಾರೆ, ಯಾರೆಲ್ಲಾ ಭಾಗಿಯಾಗಿದ್ದರು ಅನ್ನೋದನ್ನು ಕಾಣಬಹುದು. 
 

410

ಮಗನ ಬರ್ತ್ ಡೇ ಫೋಟೊ ಶೇರ್ ಮಾಡಿರುವ ಕಾಜಲ್ ಅದರ ಜೊತೆಗೆ ಹೀಗೆ ಬರೆದುಕೊಂಡಿದ್ದಾರೆ. ಸ್ನಾಕ್ ಮಾತುಕತೆಗಳ ಸಿಇಒ, ಮಲಗುವ ಸಮಯ ಲೇಟ್ ಮಾಡುವ ಮಾಸ್ಟರ್, ಮತ್ತು ಬ್ರೊಕೊಲಿಯನ್ನು ಚೀ ಎನ್ನುವ ಆದರೆ ಮಣ್ಣು ಮಾತ್ರ ವಾವ್ ಎನ್ನುವ ಏಕೈಕ ವ್ಯಕ್ತಿಗೆ 3 ನೇ ಹುಟ್ಟುಹಬ್ಬದ ಶುಭಾಶಯಗಳು(Happy birthday)! 
 

510

ನೀನು ನಮ್ಮ ಕಣ್ಣಿನ ಬೆಳಕು, ನಮ್ಮ ಸಣ್ಣ ಸುಂಟರಗಾಳಿ, ನಮ್ಮ ನಗು, ನಮ್ಮ ಕಾಫಿಯಲ್ಲಿರುವ ಶಕ್ತಿ! ನೀವು ನಮ್ಮ ಜಗತ್ತನ್ನು ಅತ್ಯಂತ ಉಲ್ಲಾಸದ, ಹೃದಯ ಕರಗಿಸುವ ರೀತಿಯಲ್ಲಿ ಬೆಳಗಿಸುತ್ತಿರುವೆ.  ಬ್ಲೂಯಿ, ನಿರ್ಮಾಣ ವಾಹನಗಳು, ವೇಫಲ್ಸ್, ಪೆಪ್ಪಾ ಮತ್ತು ಸತತವಾಗಿ 17 ರೌಂಡ್ 'ಏಕೆ?' ಎನ್ನುವುದಕ್ಕಿಂತ ಹೆಚ್ಚು ನಿನ್ನನ್ನು ನಾನು ಹೆಚ್ಚು ಪ್ರೀತಿಸುತ್ತೇನೆ!  ಲವ್ ಯು ಟು ದ ಮೂನ ಆಂಡ್ ಬ್ಯಾಕ್ ಎಂದು ಬರೆದುಕೊಂಡಿದ್ದಾರೆ. 
 

610

ಅಷ್ಟೇ ಅಲ್ಲ ಕನ್’ಸ್ಟ್ರಕ್ಷನ್ ಟ್ರಕ್‌ಗಳು, ಕೇಕ್, ಐಸ್ ಕ್ರೀಮ್, ಕ್ಯಾಂಡಿ, ಕೇಕ್ ಪಾಪ್‌ಗಳು, ಕಪ್‌ಕೇಕ್‌ಗಳು, ಆಟಗಳು, ಪಪೆಟ್ ಶೋ, ಕುಟುಂಬ ಮತ್ತು ಅವನ ಎಲ್ಲಾ ಸ್ನೇಹಿತರು  ಸೇರಿ ನೀಲ್ ಹುಟ್ಟುಹಬ್ಬವನ್ನು ಆತನ ಕನಸಿನ ದಿನವನ್ನು ನನಸಾಗಿಸಿದ್ದಾರೆ. 
 

710

ಥೀಮ್ ಪರ್ಫೆಕ್ಟ್ ಆಗಿತ್ತು,  ನಗು, ಎಲ್ಲವೂ ಸೇರಿ ಹುಟ್ಟುಹಬ್ಬವನ್ನು ಸುಂದರವಾಗಿಸಿದ್ದೀರಿ. ಎಲ್ಲಾ ಪ್ರೀತಿ ಮತ್ತು ಆಶೀರ್ವಾದಗಳಿಗೆ ಧನ್ಯವಾದಗಳು - ಇದು ಇದುವರೆಗಿನ ಅತ್ಯುತ್ತಮ ಹುಟ್ಟುಹಬ್ಬವಾಗಿತ್ತು!   "ಅಮ್ಮಾ, ನನಗೆ ನನ್ನ ಹುಟ್ಟುಹಬ್ಬ ತುಂಬಾ ಇಷ್ಟ! ಎಂದು ನೀಲ್ ಹೇಳುತ್ತಲೇ ಇದ್ದನ್ನು ಎಂದು ಮಗನ ಹುಟ್ಟುಹಬ್ಬದ ಕುರಿತು ತಾಯಿ ಕಾಜಲ್ ಹೇಳಿದ್ದಾರೆ. 
 

810

ಕಾಜರ್ ಅಗರ್ವಾಲ್ 2020ರಲ್ಲಿ ಬ್ಯುಸಿನೆಸ್ ಮ್ಯಾನ್ ಆಗಿರುವ ಗೌತಮ್ ಕಿಚ್ಲು (Goutam Kitchlu)ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ 2023ರಲ್ಲಿ ನೀಲ್ ಹುಟ್ಟಿದ್ದು. ಇದೀಗ ನೀಲ್ 3ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 
 

910

ಕಾಜಲ್ ಅಗರ್ವಾಲ್ ಕುರಿತು ಹೇಳೋದಾದ್ರೆ, 2004 ರಲ್ಲಿ ಕ್ಯೋ ಹೋ ಗಯಾನ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅಲ್ಲಿಂದ ಇಲ್ಲಿವರೆಗೆ ನಿರಂತರವಾಗಿ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಈ ಮಗಧೀರ ಬ್ಯೂಟಿ. 
 

1010

ಈಗಾಗಲೇ ಕಾಜಲ್ ಅಗರ್ವಾಲ್ ನಟಿಸಿರುವ ಸಿಕಂದರ್ ಸಿನಿಮಾ ರಿಲೀಸ್ ಆಗಿದ್ದು, ಇನ್ನೂ 5 ಸಿನಿಮಾಗಳು ನಟಿಯ ಕೈಯಲ್ಲಿದೆ. ಕನ್ನಪ್ಪ, ದ ಇಂಡಿಯಾ ಸ್ಟೋರಿ, ಇಂಡಿಯನ್ 3, ಉಮಾ, ಪ್ಯಾರೀಸ್ ಪಾರೀಸ್ ಸಿನಿಮಾಗಳಲ್ಲಿ ನಟಿ ನಟಿಸಲಿದ್ದಾರೆ. ಹಾಗಾಗಿ ಸದ್ಯದ ಬ್ಯುಸಿ ನಟಿ ಕಾಜಲ್. 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ನಟಿ
ಬಾಲಿವುಡ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved