ಇಂಟಿಮೇಟ್ ಸೀನ್‌ಗಳಿಗೆ ರಿಹರ್ಸಲ್ ಮಾಡಕ್ಕಾಗಲ್ಲ: ನಟಿ ಭೂಮಿ ಪೆಡ್ನೇಕರ್
‘ದಿ ರಾಯಲ್ಸ್’ ಸೀರೀಸ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭೂಮಿ, ಚಿತ್ರೀಕರಣಕ್ಕೂ ಮೊದಲೇ ಚಿತ್ರತಂಡ ನಾಯಕ ಇಷಾನ್ ಕಟ್ಟರ್ ಜೊತೆಗೆ ಆತ್ಮೀಯತೆ ಬೆಳೆಸಿಕೊಳ್ಳಲು ಹೇಳಿತ್ತು.

‘ತೆರೆಯಲ್ಲಿ ನೀವು ನೋಡುವ ಇಂಟಿಮೇಟ್ ಸನ್ನಿವೇಶಗಳಲ್ಲಿ ಅಭಿನಯಿಸುವುದು ಸುಲಭ ಅಲ್ಲ. ಎಷ್ಟೋ ಕಲಾವಿದರು ಇಂಥಾ ಸಂದರ್ಭಗಳಲ್ಲಿ ಬಹಳ ಮುಜುಗರ, ಕಷ್ಟ ಅನುಭವಿಸುತ್ತಾರೆ.
ಏಕೆಂದರೆ ಇಂಟಿಮೇಟ್ ಸೀನ್‌ಗಳಿಗೆ ರಿಹರ್ಸಲ್‌ಗಳಿರುವುದಿಲ್ಲ. ನೇರ ಕ್ಯಾಮರಾ ಮುಂದೆ ಸಹ ನಟನೊಂದಿಗೆ ಆಪ್ತವಾಗಿ ಕಾಣಿಸಿಕೊಳ್ಳಬೇಕಾಗುತ್ತದೆ. ಆದರೆ ದಿ ರಾಯಲ್ಸ್ ಸೀರೀಸ್‌ನಲ್ಲಿ ಅಂಥಾ ಇಂಟಿಮೇಟ್ ಸೀನ್‌ಗಳಿದ್ದರೂ ಅಭಿನಯಿಸುವುದು ಕಷ್ಟವೆನಿಸಲಿಲ್ಲ’ ಎಂದು ನಟಿ ಭೂಮಿ ಪೆಡ್ನೇಕರ್ ಹೇಳಿದ್ದಾರೆ.
ಇಂದು (ಮೇ 9) ‘ದಿ ರಾಯಲ್ಸ್’ ಸೀರೀಸ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರು, ‘ಚಿತ್ರೀಕರಣಕ್ಕೂ ಮೊದಲೇ ಚಿತ್ರತಂಡ ನಾಯಕ ಇಷಾನ್ ಕಟ್ಟರ್ ಜೊತೆಗೆ ಆತ್ಮೀಯತೆ ಬೆಳೆಸಿಕೊಳ್ಳಲು ಹೇಳಿತ್ತು. ನಾವು ಪ್ರಾಮಾಣಿಕ ಪ್ರಯತ್ನ ಮಾಡಿದೆವು.
ಒಂದಿಷ್ಟು ಸಮಯದಲ್ಲಿ ನಮ್ಮ ಸ್ನೇಹ ಬೆಳೆಯಿತು. ಆಪ್ತರಾದೆವು. ಹೀಗಾಗಿ ಇಂಟಿಮೇಟ್ ಸೀನ್‌ಗಳಲ್ಲಿ ನಟಿಸುವುದು ಕಷ್ಟವೆನಿಸಲಿಲ್ಲ. ನಾನು ಅಲ್ಲೂ ನಟನೆಯನ್ನು ಎಂಜಾಯ್ ಮಾಡುವುದು ಸಾಧ್ಯವಾಯಿತು’ ಎಂದಿದ್ದಾರೆ.
ಭೂಮಿ ಪಡ್ನೆಕರ್ ಅವರು ಹಿಂದಿ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಯಶ್ ರಾಜ್ ಫಿಲ್ಮ್ಸ್‌ನಲ್ಲಿ ಆರು ವರ್ಷಗಳ ಕಾಲ ಅಸಿಸ್ಟೆಂಟ್ ಕಾಸ್ಟಿಂಗ್ ಡೈರೆಕ್ಟರ್ ಆಗಿದ್ದರು. ದೂಮ್ ಲಗಾ ಕೇ ಹೈಸಾ ಸಿನಿಮಾದ ಮೂಲಕ ನಟನಾ ಕರಿಯರ್ ಆರಂಭಿಸಿದ್ದರು. ಈ ಸಿನಿಮಾದ ನಟನೆಗೆ ಫಿಲ್ಮ್‌ಫೇರ್ ಅವಾರ್ಡ್ ಪಡೆದರು.