- Home
- Entertainment
- Cine World
- ಸಿನಿಮಾಕ್ಕೆ ಗುಡ್‌ಬೈ ಹೇಳಿ ಬ್ರಹ್ಮಕುಮಾರಿ ದಾರಿ ಹಿಡಿದ ಖ್ಯಾತ ನಟಿ! ಇಂಥ ನಿರ್ಧಾರ ಯಾಕೆ?
ಸಿನಿಮಾಕ್ಕೆ ಗುಡ್‌ಬೈ ಹೇಳಿ ಬ್ರಹ್ಮಕುಮಾರಿ ದಾರಿ ಹಿಡಿದ ಖ್ಯಾತ ನಟಿ! ಇಂಥ ನಿರ್ಧಾರ ಯಾಕೆ?
ಟಾಲಿವುಡ್‌ನಲ್ಲಿ ಹಿಟ್ ಸಿನಿಮಾಗಳನ್ನು ಮಾಡಿದ ನಾಯಕಿ ಒಬ್ಬರು ಸಿನಿಮಾಗಳನ್ನ ಬಿಟ್ಟು, ಮದುವೆ ಪ್ರೇಮವನ್ನೆಲ್ಲ ಬದಿಗೊತ್ತಿ ಬ್ರಹ್ಮಕುಮಾರಿಯಾಗಿದ್ದಾರೆ. ಯಾರು ಅಂತ ಗೊತ್ತಾ?

ಟಾಲಿವುಡ್‌ನಲ್ಲಿ ಮಿಂಚಿದ್ದ ನಟಿಯರು ನಂತರ ಎಲ್ಲೋ ಕಣ್ಮರೆಯಾಗಿದ್ದಾರೆ. ಕೆಲವರು ಬೇರೆ ಬೇರೆ ಕ್ಷೇತ್ರಗಳಲ್ಲಿ ನೆಲೆಸಿದ್ದಾರೆ. ಕೆಲವರು ಪಾತ್ರಧಾರಿಗಳಾಗಿ ಮತ್ತೆ ಬಣ್ಣ ಹಚ್ಚಿದ್ದಾರೆ. ಇನ್ನು ಕೆಲವರು ಮದುವೆಯಾಗಿ ವಿದೇಶಗಳಲ್ಲಿ ನೆಲೆಸಿದ್ದಾರೆ. ಆದರೆ ಕೆಲವರು ಏನು ಮಾಡುತ್ತಿದ್ದಾರೆಂದು ತಿಳಿಯದೆ ಮಾಯವಾಗಿದ್ದಾರೆ. ಒಬ್ಬ ನಟಿ ಮಾತ್ರ ವಿಭಿನ್ನವಾಗಿ ಯೋಚಿಸಿ ಬ್ರಹ್ಮಕುಮಾರಿಯಾಗಿದ್ದಾರೆ.
ಆ ನಟಿ ಯಾರು ಅಂದ್ರೆ ಗ್ರೇಸಿ ಸಿಂಗ್. ಈ ಹೆಸರು ಕೇಳಿದ್ರೆ ಯಾರಿಗೆ ಗೊತ್ತಾಗಲ್ಲ. ಆದರೆ ನಾಗಾರ್ಜುನ 'ಸಂತೋಷಂ' ಚಿತ್ರದ ನಾಯಕಿ ಅಂದ್ರೆ ಎಲ್ಲರಿಗೂ ನೆನಪಾಗುತ್ತೆ. ತೆಲುಗಿನಲ್ಲಿ ಕಡಿಮೆ ಸಿನಿಮಾಗಳನ್ನೇ ಮಾಡಿದ್ರೂ ನೆನಪಿನಲ್ಲಿ ಉಳಿಯುವಂತಹ ಚಿತ್ರಗಳನ್ನು ಮಾಡಿದ್ದಾರೆ. ತೆಲುಗು ಜೊತೆಗೆ ಹಿಂದಿ, ಪಂಜಾಬಿ, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಸುಮಾರು ೩೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್‌ನಲ್ಲಿ 'ಲಗಾನ್', 'ಮುನ್ನಾಭಾಯಿ ಎಂಬಿಬಿಎಸ್' ಹಿಟ್ ಚಿತ್ರಗಳಲ್ಲಿ ನಟಿಸಿದ ಗ್ರೇಸಿ ಸಿಂಗ್ ಈಗ ಸಿನಿಮಾಗೆ ಗುಡ್‌ಬೈ ಹೇಳಿದ್ದಾರೆ.
ಗ್ರೇಸಿ ಸಿಂಗ್ ತಮ್ಮ ವೃತ್ತಿಜೀವನದಲ್ಲಿ ನಾಗಾರ್ಜುನ, ಮೋಹನ್ ಬಾಬು, ಶ್ರೀಕಾಂತ್, ಅಬ್ಬಾಸ್, ಆಕಾಶ್, ಅರ್ಜುನ್ ಮುಂತಾದ ಪ್ರಮುಖ ನಟರೊಂದಿಗೆ ಕೆಲಸ ಮಾಡಿದ್ದಾರೆ. ತೆಲುಗಿನಲ್ಲಿ 'ಸಂತೋಷಂ' ಜೊತೆಗೆ 'ತಪ್ಪು ಚೇಸಿ ಪಪ್ಪು ಕೂಡು', 'ರಾಮ ರಾಮ ಕೃಷ್ಣ ಕೃಷ್ಣ', 'ರಾಮ್ ದೇವ್' ಚಿತ್ರಗಳಲ್ಲಿಯೂ ಮಿಂಚಿದ್ದಾರೆ. ಆದರೆ ಕಳೆದ ದಶಕದಿಂದ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ.
ಈಗ ಗ್ರೇಸಿ ಸಿಂಗ್ ಆಧ್ಯಾತ್ಮಿಕ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಮದುವೆಯಾಗದೆ ಜೀವನಪರ್ಯಂತ ಬ್ರಹ್ಮಚಾರಿಣಿಯಾಗಿ ಉಳಿಯಲು ನಿರ್ಧರಿಸಿದ್ದಾರೆ. ಪ್ರಸ್ತುತ ಬ್ರಹ್ಮಕುಮಾರಿ ಸಂಸ್ಥೆಯ ಸದಸ್ಯರಾಗಿದ್ದಾರೆ. ಧ್ಯಾನ, ಸೇವೆ, ಯೋಗ ಮುಂತಾದವುಗಳಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಈಗ ಸಂಪೂರ್ಣವಾಗಿ ಬ್ರಹ್ಮಕುಮಾರಿಯಾಗಿದ್ದಾರೆ.
ಗ್ರೇಸಿ ಸಿಂಗ್ ಒಂದು ಸಂದರ್ಶನ ನೀಡಿದ್ದಾರೆ. ಅದರಲ್ಲಿ ಅವರು “ಇಲ್ಲಿ ನನಗೆ ಅಪಾರ ಆನಂದ, ಶಾಂತಿ ಸಿಗುತ್ತಿದೆ. ನನ್ನ ಆತ್ಮಕ್ಕೆ ಇದೇ ಬೇಕು ಅನಿಸುತ್ತಿದೆ” ಎಂದಿದ್ದಾರೆ. ಈಗ ಆ ಸಂಸ್ಥೆ ನಡೆಸುವ ಕಾರ್ಯಕ್ರಮಗಳಲ್ಲಿ ಚುರುಕಾಗಿ ಭಾಗವಹಿಸುತ್ತಿದ್ದಾರೆ. ಗ್ರೇಸಿ ಸಿಂಗ್ ತಾವು ಆರಿಸಿಕೊಂಡ ಮಾರ್ಗದಲ್ಲಿ ಸಂತೃಪ್ತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಶಾಂತಿಗಿಂತ ದೊಡ್ಡ ಸಂಪತ್ತು ಬೇರೆ ಏನಿಲ್ಲ ಎನ್ನುತ್ತಿದ್ದಾರೆ. ಅವರ ಇತ್ತೀಚಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಬದಲಾವಣೆಗೆ ಪ್ರೇಕ್ಷಕರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.