MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಐಶ್ವರ್ಯಾ ರೈ, ಟಬು ಜತೆ ರೊಮ್ಯಾನ್ಸ್ ಮಾಡಿದ್ದ ಕನ್ನಡ ನಟ ದಿವಾಳಿಯಾಗಿ ತುತ್ತು ಅನ್ನಕ್ಕೆ ಶೌಚಾಲಯ ತೊಳೆದರು

ಐಶ್ವರ್ಯಾ ರೈ, ಟಬು ಜತೆ ರೊಮ್ಯಾನ್ಸ್ ಮಾಡಿದ್ದ ಕನ್ನಡ ನಟ ದಿವಾಳಿಯಾಗಿ ತುತ್ತು ಅನ್ನಕ್ಕೆ ಶೌಚಾಲಯ ತೊಳೆದರು

90ರ ದಶಕದಲ್ಲಿ ತಮಿಳು ಚಿತ್ರರಂಗವು ತನ್ನ ಮುಂದಿನ ಸೂಪರ್‌ಸ್ಟಾರ್‌ಗಾಗಿ ಹುಡುಕುತ್ತಿತ್ತು.  ಅನೇಕ ಯುವ ನಟರು ಆ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದರು. ಅಂತವರಲ್ಲಿ ಈ ನಟನ ಹೆಸರು ಮುಂಚೂಣಿಯಲ್ಲಿತ್ತು. ಕನ್ನಡದ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಈ  ನಟ ಎಲ್ಲವನ್ನೂ ಹೊಂದಿದ್ದನು. ಅಷ್ಟೇ ಬೇಗ ಎಲ್ಲವನ್ನೂ ಕಳೆದುಕೊಂಡನು.

2 Min read
Author : Gowthami K
| Updated : Nov 03 2023, 05:07 PM IST
Share this Photo Gallery
  • FB
  • TW
  • Linkdin
  • Whatsapp
17

ಯಶಸ್ವಿ ಚಲನಚಿತ್ರಗಳು, ದೊಡ್ಡ ನಿರ್ದೇಶಕರು ಮತ್ತು ದೊಡ್ಡ ಅಭಿಮಾನಿ ಬಳಗ. ಆದರೆ ಇನ್ನೂ 30 ವರ್ಷಕ್ಕೆ ಮುಂಚೆಯೇ ಕಳೆದುಕೊಂಡ ಯುವ ನಟ ದಿವಾಳಿಯಾದನು, ಚಲನಚಿತ್ರಗಳನ್ನು ತೊರೆದರು ಮತ್ತು ಹಣ ಸಂಪಾದಿಸಲು ಟ್ಯಾಕ್ಸಿ ಓಡಿಸುವುದು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತಹ ಕೆಲಸಗಳನ್ನು ಮಾಡಬೇಕಾಯ್ತು.

27

ಆ ನಟನೇ ಮಿರ್ಜಾ ಅಬ್ಬಾಸ್ ಅಲಿ.  1975 ರಲ್ಲಿ ಜನಿಸಿದ ಅಬ್ಬಾಸ್ ಇನ್ನು ಹದಿಹರೆಯದ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ಮಾಡೆಲಿಂಗ್ ಮಾಡುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1996 ರ ಕಾದಲ್ ದೇಶಂ ಚಿತ್ರಕ್ಕೆ  ಸಹಿ ಮಾಡಿ ಆ ಚಿತ್ರದ ಯಶಸ್ಸು ಅವರನ್ನು ರಾತ್ರೋರಾತ್ರಿ ಸ್ಟಾರ್‌ ಗಿರಿ ತಂದು ಕೊಟ್ಟಿತು. 

37

ಆ ನಂತರ ನಟಿಸಿದ ಕೆಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ  ವಿಫಲವಾದ ನಂತರ, ಅಬ್ಬಾಸ್ ರಜನಿಕಾಂತ್-ನಟನೆಯ ಪಡಯಪ್ಪದಲ್ಲಿ ವಿಲನ್‌ ಆಗಿ  ಕಾಣಿಸಿಕೊಂಡರು. ಕಮಲ್ ಹಾಸನ್ ಅವರ ಹೇ ರಾಮ್ ನಲ್ಲಿ ಪೋಷಕ ಪಾತ್ರವನ್ನು ಮಾಡಿದರು. ನಂತರ ಅವರು ಐಶ್ವರ್ಯಾ ರೈ, ಅಜಿತ್ ಮತ್ತು ಟಬು ಅವರೊಂದಿಗೆ ಕಂಡುಕೊಂಡೇನ್ ಕಂಡುಕೊಂಡೇನ್‌ನಲ್ಲಿ ಕೆಲಸ ಮಾಡಿದರು, ಅದು ಅವರ ವೃತ್ತಿಜೀವನವನ್ನು ಪುನರುಜ್ಜೀವನಗೊಳಿಸಿತು. ಅವರು ಮಿನ್ನಲೆ, ಆನಂದಂ, ಮತ್ತು ಪಮ್ಮಲ್ ಕೆ.ಸಂಬಂಧಂನಂತಹ ಹಲವು ಹಿಟ್‌ ಚಿತ್ರದಲ್ಲಿ ಕೆಲಸ ಮಾಡಿದರು. 

47

2002 ರಲ್ಲಿ ವ್ಯಾಪಾರ ಪಂಡಿತರು (trade pundits ) ಅವರನ್ನು ಅವರ ವೃತ್ತಿಜೀವನದ ಉನ್ನತ ಮಟ್ಟದ ಬಗ್ಗೆ ಬಣ್ಣಿಸಿದರು. ಆದರೆ ಹಾಗಾಗಲಿಲ್ಲ. ಉತ್ತಮ ಹಿರೋ ಆಗುವ ಕನಸು ಕಮರಿತು. 2000 ರ ದಶಕದ ಮಧ್ಯಭಾಗದಲ್ಲಿ ಅಬ್ಬಾಸ್ ಅವರು ತಮಿಳು ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುವಂತಾಯ್ತು. ಬಿಪಾಶಾ ಬಸು ಜೊತೆಗಿನ ಹಿಂದಿ ಚಿತ್ರವೊಂದು ರದ್ದಾಗಿತ್ತು. 2014 ರ ನಂತರ, ಅವರು ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದರಿಂದ, ಅವರ ನಟನೆಯ ಆಸಕ್ತಿಯು ಮರೆಯಾಗುತ್ತಿರುವುದು ಕಂಡುಬಂತು. ನಂತರ ಅಬ್ಬಾಸ್‌ ನಟನೆಯನ್ನು ತೊರೆದು ನ್ಯೂಜಿಲೆಂಡ್‌ಗೆ ತೆರಳಿದರು. 
 

57

ಕೆಲವು ವರದಿಗಳ ಪ್ರಕಾರ ಹಣಕಾಸಿನ ವಿಚಾರದಲ್ಲಿ ಅವರ ಕೆಟ್ಟ ನಿರ್ಧಾರಗಳು ನಟನನ್ನು ದಿವಾಳಿಯಾಗುವಂತೆ ಮಾಡಿತು ಎಂದು ಹೇಳಿವೆ.  ನ್ಯೂಜಿಲೆಂಡ್‌ನಲ್ಲಿ ಮಾಜಿ ನಟ ಹಣ ಸಂಪಾದಿಸಲು, ಮೆಕ್ಯಾನಿಕ್ ಮತ್ತು ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಿದರು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಕೆಲಸಗಳನ್ನು ಮಾಡಿದರು. ಅಂತಿಮವಾಗಿ ಪ್ರೇರಕ ಭಾಷಣಕಾರರಾದರು. (motivational  speaker ) 

 

67

ತಮಿಳಿನ ಬಿಗ್ ಬಾಸ್  ಸೀಸನ್‌ 7 ನಡೆಯುತ್ತಿದೆ. ಕಮಲ್ ಹಾಸನ್ ನಿರೂಪಣೆ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದ ಮೂಲಕ ಸುಮಾರು ಒಂದು ದಶಕದ ನಂತರ ಅಬ್ಬಾಸ್ ಮೊದಲ ಬಾರಿಗೆ ಭಾರತೀಯ ಶೋ ಗೆ ಮರಳುತ್ತಾರೆ ಎಂದು ವದಂತಿಗಳಿತ್ತು. ಆದರೆ ಅದು ನಿಜವಾಗಿಲ್ಲ. ಮಾಜಿ ನಟ ನ್ಯೂಜಿಲೆಂಡ್‌ನಲ್ಲೇ ಉಳಿದು ಬಣ್ಣದ ಬದುಕಿನಿಂದ ದೂರ ಉಳಿದಿದ್ದಾರೆ. 

 

77

ಇನ್ನು ಅಬ್ಬಾಸ್‌ ಹಲವು ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ. 1998ರಲ್ಲಿ ಶಾಂತಿ ಶಾಂತಿ ಶಾಂತಿ ಚಿತ್ರದಲ್ಲಿ ಹಿರಿಯ ನಟಿ ಪ್ರೇಮಾ ಅವರೊಂದಿಗೆ, 2003ರಲ್ಲಿ ನಟಿ ಭಾವನಾ ರಾಮಣ್ಣ ಜೊತೆ ಹೆಲೋ ಚಿತ್ರದಲ್ಲಿ, 2004ರಲ್ಲಿ ದಿವಂಗತ ನಟಿ ಸೌಂದರ್ಯ ಅವರೊಂದಿಗೆ ಶ್ವೇತ ನಾಗು ಚಿತ್ರದಲ್ಲಿ, 2010ರಲ್ಲಿ  ನಟಿ  ರೇಖಾ ವೇದವ್ಯಾಸ್ ಅವರೊಂದಿಗೆ ಶ್ವೇತ ನಾಗು ಚಿತ್ರದಲ್ಲಿ ಅಪ್ಪು ಪಪ್ಪು ಚಿತ್ರದಲ್ಲಿ,  2014ರಲ್ಲಿ  ನಟ ಶ್ರೀನಗರ ಕಿಟ್ಟಿ ಅವರೊಂದಿಗೆ ಸವಾರಿ 2 ಚಿತ್ರದಲ್ಲಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬಾಲಿವುಡ್

Latest Videos
Recommended Stories
Recommended image1
2ನೇ ಪತಿಯಿಂದ ಸಮಂತಾ ರುತ್​ ಪ್ರಭು ಡಿವೋರ್ಸ್​? ಕೆಂಡಾಮಂಡಲವಾದ ನಟಿ ಹೇಳಿದ್ದೇನು?
Recommended image2
ಗರ್ಭಿಣಿ ಆಗಿದ್ದಾಗ ಹೆಂಡ್ತಿ ಕತ್ರಿನಾ ಕೈಫ್ ಮಾಡಿರೋ 'ಆ ಕೆಲಸ'ದ ಸೀಕ್ರೆಟ್ ಹೇಳಿ ಶಾಕ್ ಕೊಟ್ಟ ಗಂಡ ವಿಕ್ಕಿ ಕೌಶಲ್
Recommended image3
ಮುರಿದ ಬಿದ್ದ ಮದುವೆ.. ಮತ್ತೆ 8 ವರ್ಷಕ್ಕೆ ಹಸೆಮಣೆ ಏರುತ್ತಿರುವ ರಶ್ಮಿಕಾ; ವಿಜಯ್ ದೇವರಕೊಂಡ ಜತೆ ಲವ್ ಆಗಿರೋ ಸೀಕ್ರೆಟ್ ಹೊರಬಂತು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved