- Home
- Entertainment
- Cine World
- ಮತ್ತೆ ಮದ್ವೆ ಆಗ್ತೀನಾ ಗೊತ್ತಿಲ್ಲ, ಆಗಿದ್ದು ಎರಡೂ ಉಳಿಸಿಕೊಳ್ಳಲು ಆಗಲಿಲ್ಲ: ಅಮಿರ್ ಖಾನ್ ಬೇಸರ
ಮತ್ತೆ ಮದ್ವೆ ಆಗ್ತೀನಾ ಗೊತ್ತಿಲ್ಲ, ಆಗಿದ್ದು ಎರಡೂ ಉಳಿಸಿಕೊಳ್ಳಲು ಆಗಲಿಲ್ಲ: ಅಮಿರ್ ಖಾನ್ ಬೇಸರ
ಒಂಟಿಯಾಗಿ ಜೀವನ ನಡೆಸುವುದು ತುಂಬಾನೇ ಕಷ್ಟ ಅಂತಿದ್ದಾರೆ ಅಮಿರ್ ಖಾನ್. ಹಾಗಿದ್ರೆ ಮೂರನೇ ಮದುವೆ ಸುಳಿವು ಕೊಡ್ತಿದ್ದಾರಾ?

ಬಾಲಿವುಡ್ ಅದ್ಭುತ ನಟ ಅಮಿರ್ ಖಾನ್ ಎಷ್ಟೇ ಸೂಪರ್ ಹಿಟ್ ಸಿನಿಮಾ ಕೊಟ್ಟ ಕೋಟಿಗಟ್ಟಲೆ ಸಂಪಾದನೆ ಮಾಡಿದರೂ ಕೂಡ ವೈಯಕ್ತಿಕ ಜೀವನ ಬಿಗ್ ಫ್ಲಾಪ್ ಎನ್ನಬಹುದು.
ಹೀಗೆ ಮದುವೆ ಜೀವನದ ಬಗ್ಗೆ ಸಲಹೆ ಕೊಡಿ ಅಥವಾ ಸದ್ಯದ ಸಿಂಗಲ್ ಲೈಫ್ ಹೇಗಿದೆ ಎಂದು ರಿಯಾ ಚಕ್ರವರ್ತಿ ಸಂದರ್ಶನದಲ್ಲಿ ಪ್ರಶ್ನೆ ಮಾಡಿದಾಗ ಸಿಕ್ಕ ಉತ್ತರ ನಿಜಕ್ಕೂ ಶಾಕಿಂಗ್.
ನನಗೀಗ 59 ವರ್ಷ. ನಾನು ಮತ್ತೆ ಮದುವೆ ಆಗುತ್ತೆನಾ ಎಂಬುವುದು ಗೊತ್ತಿಲ್ಲ. ಮದುವೆ ವಿಚಾರ ಹಾಗೂ ಅದಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟವೆನಿಸುತ್ತಿದೆ .ಸದ್ಯ ನಾನು ಹಲವು ಸಂಬಂಧಗಳ ಜೊತೆ ಜೀವಿಸುತ್ತಿದ್ದೇನೆ.
ಕುಟುಂಬ ಹಾಗೂ ಮಕ್ಕಳ ಜೊತೆ ಬೆರೆತುಕೊಂಡಿದ್ದೇನೆ. ಎರಡು ಮದುವೆಯಾದರೂ, ಅದನ್ನು ಮುಂದುವರಿಸಿಕೊಂಡು ಅಥವಾ ಉಳಿಸಿಕೊಳ್ಳಲು ಸಂಪೂರ್ಣ ವಿಫಲವಾಗಿದ್ದೇನೆ. ಹಾಗಾಗಿ ಮದುವೆ ಕುರಿತ ಸಲಹೆಗಳನ್ನು ನನ್ನ ಬಳಿ ಕೇಳಬೇಡಿ.
ಒಂಟಿಯಾಗಿ ಜೀವನ ನಡೆಸಲು ನನ್ನಿಂದ ಆಗಲ್ಲ. ನಾನು ಏಕಾಂಗಿಯಲ್ಲ, ನನಗೆ ಒಡನಾಟ ಇಷ್ಟ. ನನ್ನ ಮಾಜಿ ಪತ್ನಿಯರಾದ ರೀನಾ ಮತ್ತು ಕಿರಣ್‌ಗೆ ಹತ್ತಿರವಾಗಿದ್ದು, ನಾವೆಲ್ಲರೂ ಒಂದೇ ಕುಟುಂಬದಂತೆ ಇದ್ದೇವೆ ಎಂದು ಅಮಿರ್ ಖಾನ್ ಹೇಳಿದ್ದಾರೆ.
ಅಮೀರ್ ಖಾನ್ ಮಾತುಗಳನ್ನು ಕೇಳಿದ್ರೆ ಮೂರನೇ ಮದುವೆ ಆಗುವ ಆಲೋಚನೆ ಬಂದಿದೆ ಅನಿಸುತ್ತದೆ ಇಲ್ಲವಾದರೆ ಅದೇ ಮಾಜಿ ಹೆಂಡತಿ ಬಳಿ ಹೋಗಬಹುದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
21 ವರ್ಷವಿದ್ದಾಗ ಅಮಿರ್ ಖಾನ್ ರಹಸ್ಯವಾಗಿ ರೀನಾ ದತ್ತಾರನ್ನು ಮದುವೆ ಮಾಡಿಕೊಂಡಿದ್ದರು. ಮನಸ್ಥಾಪಗಳಿಂದ ದೂರವಾದ ಮೇಲೆ ಮತ್ತೊಂದು ಮದುವೆ ಆಲೋಚನೆ ಮಾಡಿದರು.
ರಣ್ ರಾಜ್‌ರನ್ನು ಪ್ರೀತಿ ಮದುವೆ ಮಾಡಿಕೊಂಡರು. ಈ ಜೋಡಿಗೆ ಮೂವರು ಮಕ್ಕಳಿದ್ದಾರೆ. ಮೊದಲನೇ ಪತ್ನಿಗೂ ಇಬ್ಬರು ಮಕ್ಕಳಿದ್ದಾರೆ. ಇಲ್ಲೂ ಕೂಡ ವೈಯಕ್ತಿಕ ಕಾರಣದಿಂದ ಡಿವೋರ್ಸ್ ಪಡೆದು ಸಿಂಗಲ್ ಲೈಫ್ ಎಂಜಾಯ್ ಮಾಡ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.