ಈ ನಟನಿಂದ ಹತ್ತಿರವಾದ Abhishek Bachchan ಮತ್ತು Aishwarya Rai!
ಅಭಿಷೇಕ್ ಬಚ್ಚನ್ (Abhishek Bachchan) ಅವರ ಚಿತ್ರ ದಸ್ವಿ ಏಪ್ರಿಲ್ 7 ರಂದು OTT ವೇದಿಕೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ದಿನಗಳಲ್ಲಿ ಅವರು ತಮ್ಮ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರಚಾರದ ಸಮಯದಲ್ಲಿ, ಅವರು ಕೆಲವು ಸಂದರ್ಶನಗಳನ್ನು ಸಹ ನೀಡಿದರು. ಅದರಲ್ಲಿ ಅವರು ತಮ್ಮ ಜೀವನ, ಕುಟುಂಬ ಮತ್ತು ಪತ್ನಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಬಗ್ಗೆ ಸಾಕಷ್ಟು ಮಾತನಾಡಿದರು ಮತ್ತು ಕೆಲವು ರಹಸ್ಯಗಳನ್ನು ಸಹ ಬಹಿರಂಗಪಡಿಸಿದರು. ಅಂದಹಾಗೆ, ಅಭಿಷೇಕ್-ಐಶ್ವರ್ಯಾ ಜೋಡಿಯು ಬಾಲಿವುಡ್ ಇಂಡಸ್ಟ್ರಿಯ ಮೋಸ್ಟ್ ಅಡರೋಬಲ್ ಜೋಡಿಯಾಗಿದೆ. ಅಷ್ಟಕ್ಕೂ ಅಭಿಷೇಕ್-ಐಶ್ವರ್ಯ ಹೇಗೆ ಹತ್ತಿರವಾದರು ಮತ್ತು ಇಬ್ಬರ ನಡುವೆ ಆತ್ಮೀಯತೆ ಹೇಗೆ ಬೆಳೆಯಿತು? ಇದಕ್ಕೆ ಕಾರಣ ಯಾರು ಗೊತ್ತಾ.
ಮದುವೆಯ ನಂತರ ಐಶ್ವರ್ಯಾ ರೈ ಕೆಲವೇ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಗಳು ಹುಟ್ಟಿದ ನಂತರ ಆರಾಧ್ಯಳ ಪೋಷಣೆಯತ್ತ ಸಂಪೂರ್ಣ ಗಮನ ಹರಿಸಿದರು. ನಂತರ ಸ್ವಲ್ಪ ಬಿಡುವು ಮಾಡಿಕೊಂಡು ಪುನರಾಗಮನ ಮಾಡಿದರು. ಆದರೆ ಅವರಿಗೆ ಹೆಚ್ಚಿನ ಯಶಸ್ಸು ಸಿಗಲಿಲ್ಲ.ಈ ನಡುವೆ, ಅಭಿಷೇಕ್ ನಿರಂತರವಾಗಿ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವೆ ಅಂತಹ ಅದ್ಭುತ ಕೆಮಿಸ್ಟ್ರಿ ಇದೆ. ಅದೇ ಸಮಯದಲ್ಲಿ, ಇಬ್ಬರ ಪ್ರೇಮಕಥೆಯು ಯಾವುದೇ ಬಾಲಿವುಡ್ ಚಿತ್ರದ ಕಥೆಗಿಂತ ಕಡಿಮೆಯಿಲ್ಲ. ಇಬ್ಬರ ಮೊದಲ ಭೇಟಿಗೆ ಬಾಬಿ ಡಿಯೋಲ್ ಕಾರಣ ಎಂದು ಬಹುಶಃ ಹೆಚ್ಚಿನವರಿಗೆ ತಿಳಿದಿಲ್ಲ.
ಸ್ವಿಟ್ಜರ್ಲೆಂಡ್‌ನಲ್ಲಿ ಐಶ್ವರ್ಯಾ ರೈ ಪ್ಯಾರ್ ಹೋ ಗಯಾ ಚಿತ್ರದ ಶೂಟಿಂಗ್‌ನಲ್ಲಿದ್ದಾಗ ಮೊದಲು ಭೇಟಿಯಾಗಿದ್ದಾಗಿ ಸಂದರ್ಶನದಲ್ಲಿ ಅಭಿಷೇಕ್ ಬಚ್ಚನ್ ಹೇಳಿದ್ದರು. ವಾಸ್ತವವಾಗಿ, ಬಾಬಿ ಡಿಯೋಲ್ ಮತ್ತು ಅಭಿಷೇಕ್ ಶೂಟಿಂಗ್‌ಗಾಗಿ ಒಂದು ಒಳ್ಳೆ ಸ್ಥಳವನ್ನು ನೋಡಲು ಅಲ್ಲಿಗೆ ಬಂದಿದ್ದರು ಮತ್ತು ಇಲ್ಲಿಯೇ ಬಾಬಿ ಐಶ್ವರ್ಯಾಗೆ ಅಭಿಷೇಕ್ ಅನ್ನು ಪರಿಚಯಿಸಿದರು.
ನಾನು ಪ್ರೊಡಕ್ಷನ್ ಕೆಲಸ ಮಾಡುವಾಗ ನಾನು ಮೊದಲ ಬಾರಿಗೆ ಐಶ್ವರ್ಯಾ ರೈ ಅವರನ್ನು ಭೇಟಿ ಮಾಡಿದ್ದೇನೆ. ನನ್ನ ತಂದೆ ಮೃತ್ಯುದಾತ ಎಂಬ ಸಿನಿಮಾ ಮಾಡುತ್ತಿದ್ದು, ಅದೇ ಚಿತ್ರದ ಶೂಟಿಂಗ್ ಲೊಕೇಶನ್ ನೋಡಲು ಸ್ವಿಟ್ಜರ್ಲೆಂಡ್ ಗೆ ಹೋಗಿದ್ದೆ ಎಂದು ಸಂದರ್ಶನವೊಂದರಲ್ಲಿ ಅಭಿಷೇಕ್ ಬಚ್ಚನ್ ಹೇಳಿದ್ದರು
ಬಾಬಿ ನನ್ನ ಬಾಲ್ಯದ ಗೆಳೆಯ ಮತ್ತು ನಾನು ಸಹ ಅದೇ ನಗರದಲ್ಲಿ ಇದ್ದೇನೆ ಎಂದು ತಿಳಿದ ತಕ್ಷಣ ಅವರು ನನ್ನನ್ನು ಊಟಕ್ಕೆ ಕರೆದರು. ನಾನು ಬಾಬಿ-ಆಶ್ ಶೂಟಿಂಗ್ ಅನ್ನು ಮೊದಲ ಬಾರಿಗೆ ನೋಡಿದೆ ಮತ್ತು ಇಲ್ಲಿ ನಾವು ಮೊದಲ ಬಾರಿಗೆ ಭೇಟಿಯಾದವು. ಈ ಭೇಟಿಯು ಸಾಂದರ್ಭಿಕವಾಗಿತ್ತು ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ.
ಅದರ ನಂತರ ನಾವು ನಮ್ಮ ಕೆಲಸದಲ್ಲಿ ನಿರತರಾದೆವು. ನಂತರ ಕೆಲವು ವರ್ಷಗಳ ನಂತರ ಒಂದಾಗುವ ಅವಕಾಶ ಸಿಕ್ಕಿತು. ಸಿನಿಮಾ ಶೂಟಿಂಗ್ ಸಮಯದಲ್ಲಿಯೂ ನಾವು ಹೆಚ್ಚು ಮಾತನಾಡುತ್ತಿರಲಿಲ್ಲ. ಬಂಟಿ ಔರ್ ಬಾಬ್ಲಿ ಚಿತ್ರದಲ್ಲಿ ಐಶ್ವರ್ಯ ರೈ ಐಟಂ ಸಾಂಗ್ ಮಾಡಿದ್ದು, ಶೂಟಿಂಗ್ ವೇಳೆ ನಮ್ಮ ನಡುವೆ ಸ್ನೇಹ ಬೆಳೆದಿತ್ತು ಎಂದ ಅಭಿಷೇಕ್.
ನಂತರ ನಾವು ಗುರು ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದೆವು ಮತ್ತು ಈ ಚಿತ್ರದ ಪ್ರಥಮ ಪ್ರದರ್ಶನದ ಸಮಯದಲ್ಲಿ ನಾನು ಐಶ್ವರ್ಯಾಗೆ ಮದುವೆಯ ಪ್ರಸ್ತಾಪವನ್ನು ಮಾಡಿದೆ ಮತ್ತು ಅವರು ತಕ್ಷಣ ಒಪ್ಪಿಕೊಂಡರು ಎಂದು ಅಭಿಷೇಕ್ ಹೇಳಿದ್ದಾರೆ.
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಏಪ್ರಿಲ್ 2007 ರಲ್ಲಿ ವಿವಾಹವಾದರು.ಅಭಿಷೇಕ್ ಅವರ ದಸ್ವಿ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.ಈ ಚಿತ್ರದಲ್ಲಿ ನಿಮ್ರತ್ ಕೌರ್ ಮತ್ತು ಯಾಮಿ ಗೌತಮ್ ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿದ್ದಾರೆ.