- Home
- Entertainment
- Cine World
- ಅಭಿಷೇಕ್ ಐಶ್ವರ್ಯಗೆ ಸೆಪ್ಟೆಂಬರ್ ವರೆಗೆ ಗಂಡಾಂತರ ಎಂದ ಜ್ಯೋತಿಷಿ, ವೈಮನಸ್ಸಿಗೆ ಕಾರಣ ಬಹಿರಂಗ
ಅಭಿಷೇಕ್ ಐಶ್ವರ್ಯಗೆ ಸೆಪ್ಟೆಂಬರ್ ವರೆಗೆ ಗಂಡಾಂತರ ಎಂದ ಜ್ಯೋತಿಷಿ, ವೈಮನಸ್ಸಿಗೆ ಕಾರಣ ಬಹಿರಂಗ
ಅಭಿಷೇಕ್ ಹಾಗೂ ಐಶ್ವರ್ಯ ರೈ ಬಚ್ಚನ್ ನಡುವೆ ಕೇಳಿಬಂದ ದಾಂಪತ್ಯ ಕಲಹ ಸದ್ಯ ತಣ್ಣಗಾಗಿದೆ. ಇಬ್ಬರು ಜೊತೆಯಾಗಿಕಾಣಿಸಿಕೊಂಡು ಉತ್ತರ ನೀಡಿದ್ದರು. ಆದರೆ ಇವರ ಸಮಸ್ಯೆ ಬಗೆಹರಿದಿಲ್ಲ ಎನ್ನುತ್ತಿದ್ದಾರೆ ಜ್ಯೋತಿಷಿ. ಸೆಪ್ಟೆಂಬರ್ ವರೆಗೆ ಗಂಡಾಂತರ ಇದೆ ಎಂದಿದ್ದಾರೆ. ಇದೇ ವೇಳೆ ಇವರ ವೈಮನಸ್ಸಿಕೆ ಕಾರಣ ಏನು ಅನ್ನೋದು ಬಹಿರಂಗಪಡಿಸಿದ್ದಾರೆ.

ಬಾಲಿವುಡ್ ಸೆಲೆಬ್ರೆಟಿ ಜೋಡಿಗಳ ಪೈಕಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ಹೆಚ್ಚು ಜನಪ್ರಿಯ.ಆದರೆ ಕಳೆದ ಹಲವು ತಿಗಂಗಳಲ್ಲಿ ಈ ಜೋಡಿ ದಾಂಪತ್ಯ ಕಲಹದ ಕುರಿತು ನೋವು ಎದುರಿಸಿದ್ದಾರೆ. ಅಭಿಷೇಕ್ ಹಾಗೂ ಐಶ್ವರ್ಯ ದಾಂಪತ್ಯ ಜೀವನ ಸುಖಕರವಾಗಿಲ್ಲ, ಇಬ್ಬರು ಬೇರೆಯಾಗುತ್ತಿದ್ದಾರೆ ಅನ್ನೋ ವರದಿಗಳು ಕೇಳಿಬಂದಿತ್ತು. ಕಳೆದ ಕೆಲ ದಿನಗಳಿಂದ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡು ಈ ಊಹಾಪೋಹಗಳಿಗೆ ಬ್ರೇಕ್ ಹಾಕಿತ್ತು. ಆದರೆ ಇವರ ಸಂಬಂಧ, ದಾಂಪತ್ಯ ಜೀವನದ ಸಮಸ್ಯೆ ಮುಗಿದಿಲ್ಲ ಎಂದು ಖ್ಯಾತ ಸಂಖ್ಯಾಶಾಸ್ತ್ರ ಜ್ಯೋತಿಷಿ ಹೇಳಿದ್ದಾರೆ.
ಖ್ಯಾತ ಸಂಖ್ಯಾಶಾಸ್ತ್ರ ಜ್ಯೋತಿಷಿ ಗೀತಾಂಜಲಿ ಸಕ್ಸೇನ್ ಇತ್ತೀಚೆಗೆ ಸಿದ್ದಾರ್ಥ ಖನ್ನಾ ನಡೆಸಿಕೊಡುವ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ.ಈ ವೇಳೆ ಹಲವು ಬಾಲಿವುಡ್ ಸೆಲೆಬ್ರೆಟಿಗಳ ರಿಲೇಶನ್‌ಶಿಪ್ ಕುರಿತು ಭವಿಷ್ಯ ನುಡಿದಿದ್ದಾರೆ. ಈ ಪೈಕಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಕುರಿತು ಸುದೀರ್ಘವಾಗಿ ಮಾತನಾಡಿದ್ದಾರೆ. ಡಾ.ಗೀತಾಂಜಲಿ ಸಕ್ಸೇನಾ ಪ್ರಕಾರ, ಸದ್ಯ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ದಾಂಪತ್ಯ ಕಲಹ ತಣ್ಣಾಗಾಗಿದ್ದರೂ ಅವರ ಕಂಟಕ ಸೆಪ್ಟೆಂಬರ್ ತನಕ ಮುಂದುವರಿಯಲಿದೆ ಎಂದಿದ್ದಾರೆ.
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ಅವರ ಕುಂಡಲಿ, ಸಂಖ್ಯೆಗಳ ಪ್ರಕಾರ ಸೆಪ್ಟೆಂಬರ್ ವರಗೆ ಗಂಡಾಂತರ ಇದೆ. ಸೆಪ್ಟೆಂಬರ್ ವರೆಗೆ ಈ ಜೋಡಿ ಎಲ್ಲವನ್ನೂ ನಿಭಾಯಿಸಿದರೆ, ತಾಳ್ಮೆಯಿಂದ ಇದ್ದರೆ ಮುಂದಿನ ಬದುಕು ಸುಂದರ ವಾಗಲಿದೆ ಎಂದಿದ್ದಾರೆ. ಸೆಪ್ಟೆಂಬರ್ ವರೆಗೆ ಈ ಜೋಡಿ ಹಲವು ಸಮಸ್ಯೆಗಳನ್ನು ಮಾನಸಿಕವಾಗಿ ಎದುರಿಸಲಿದ್ದಾರೆ. ಈ ಕಠಿಣ ಪರಿಸ್ಥಿತಿಯಲ್ಲಿ ಜೊತೆಯಾಗಿದ್ದರೆ ಮುಂದಿನ ಬಾಳು ಸುಂದರವವಾಗಲಿದೆ ಎಂದಿದ್ದಾರೆ.
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ನಡುವಿನ ದಾಂಪತ್ಯ ಕಲಹಕ್ಕೆ ಭಾವನಾತ್ಮಕ ಕಾರಣಗಳಿಲ್ಲ. ಇದು ಆರಂಭಗೊಂಡಿದ್ದು ಆರ್ಥಿಕವಾಗಿ ಕೆಲ ವಾದ ವಿವಾದಗಳ ಮೂಲಕ ಎಂದು ಡಾ.ಗೀತಾಂಜಲಿ ಸಕ್ಸೇನಾ ಭವಿಷ್ಯ ನುಡಿದಿದ್ದಾರೆ. ಇದರ ಜೊತೆಗೆ ಕೂಡು ಕುಟುಂಬದ ಮಾನಸಿಕ ಸಮಸ್ಯೆಗಳು, ಕೆಲ ಅಡೆ ತಡೆಗಳು, ರೀತು ರಿವಾಜು, ಮಾತುಗಳು ಸೇರಿಕೊಂಡಿದೆ. ಇದರಿಂದ ದಾಂಪತ್ಯ ಕಲಹ ಹೆಚ್ಚಾಗಿತ್ತು ಎಂದಿದ್ದಾರೆ.
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ಬಚ್ಚನ್ ಅವರ ಮುಂದಿನ ಬದುಕು ಸುಂದರವಾಗಲು ಡಾ.ಗೀತಾಂಜಲಿ ಸಕ್ಸೇನಾ ಕೆಲ ಸಲಹೆ ನೀಡಿದ್ದಾರೆ. ಈ ಪೈಕಿ ಪ್ರಮುಖವಾಗಿ ಈ ಜೋಡಿ ಕೂಡು ಕುಟುಂಬ ಬಿಟ್ಟು ಪ್ರತ್ಯೇಕವಾಗಬೇಕು ಎಂದಿದ್ದಾರೆ. ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಹಾಗೂ ಪುತ್ರಿ ಆರಾಧ್ಯ ಬೇರೆ ನೆಲೆಸಬೇಕು ಎಂದಿದ್ದಾರೆ. ಇದು ಇವರ ಅರ್ಧ ಸಮಸ್ಯೆಗೆ ಪರಿಹಾರ ನೀಡಲಿದೆ ಎಂದಿದ್ದಾರೆ.
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ನಡುವಿನ ದಾಂಪತ್ಯ ಕಲಹ ಕುರಿತು ಹಲವು ಮಾಹಿತಿಗಳು ಹರಿದಾಡಿದೆ. ಈ ಪೈಕಿ ಅಭಿಷೇಕ್ ಬಚ್ಚನ್ ಅಕ್ರಮಾಗಿ ಸಹ ನಟಿ ನಿಮ್ರತ್ ಕೌರ್ ಜೊತೆ ಸಂಬಂಧ ಹೊಂದಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೇ ಕಾರಣದಿಂದ ಜಗಳ ಶುರುವಾಗಿದೆ ಎಂದು ಹೇಳಲಾಗುತ್ತಿತ್ತು.