MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ವಿವಾಹಿತ ನಟನ ಜೊತೆ ಸಂಬಂಧ; ಈಗ‌ ಲವ್ವರ್, ಮನೆ, ವೃತ್ತಿ ಎಲ್ಲ ಬಿಟ್ಟು ಹೋದ ಬೆಂಗಳೂರಿನ ಗಾಯಕಿ!

ವಿವಾಹಿತ ನಟನ ಜೊತೆ ಸಂಬಂಧ; ಈಗ‌ ಲವ್ವರ್, ಮನೆ, ವೃತ್ತಿ ಎಲ್ಲ ಬಿಟ್ಟು ಹೋದ ಬೆಂಗಳೂರಿನ ಗಾಯಕಿ!

Singer Keneeshaa Francis Ravi Mohan: ನಟ ರವಿ ಮೋಹನ್ ಹಾಗೂ ಗಾಯಕಿ ಕೆನಿಶಾ ಫ್ರಾನ್ಸಿಸ್ ಪ್ರೀತಿಸುತ್ತಿದ್ದರು ಎನ್ನಲಾಗಿತ್ತು. ಆದರೆ ಈಗ ಕೆನಿಶಾ, ತಾನು ಚೆನ್ನೈ ತೊರೆಯುತ್ತಿರುವುದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ರವಿ ಮೋಹನ್‌ ಕೂಡ ಅಧಿಕೃತಪಡಿಸಿದ್ದಾರೆ. 

2 Min read
Author : Padmashree Bhat
Published : May 16 2026, 05:37 PM IST
Share this Photo Gallery
  • FB
  • TW
  • Linkdin
  • Whatsapp
15
ಚೆನ್ನೈ ಬಿಡ್ತೀನಿ!
Image Credit : instagram

ಚೆನ್ನೈ ಬಿಡ್ತೀನಿ!

ನಟ ರವಿ ಮೋಹನ್ ವಿಚಾರದಲ್ಲಿ ನಿರಂತರ ಟೀಕೆಗಳನ್ನು ಎದುರಿಸುತ್ತಿದ್ದ ಗಾಯಕಿ ಕೆನಿಶಾ, ಈಗ ಅವರಿಂದ ದೂರ ಸರಿಯುತ್ತಿರುವುದಾಗಿ ಭಾವುಕ ಪೋಸ್ಟ್ ಹಾಕಿದ್ದಾರೆ. 'ಚೆನ್ನೈ ನಗರವನ್ನು ತೊರೆಯುತ್ತಿದ್ದೇನೆ. ಸಂಗೀತ, ಥೆರಪಿ ಚಿಕಿತ್ಸೆ, ನಾನು ಬದುಕಿದ ಜೀವನ ಎಲ್ಲವನ್ನೂ ಬಿಡುತ್ತಿದ್ದೇನೆ. ಸೋಶಿಯಲ್ ಮೀಡಿಯಾ ಕಿರುಕುಳ, ಖಿನ್ನತೆ ಕಾರಣಗಳಿಂದ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುತ್ತಿದ್ದೇನೆ. ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳು ನನಗೆ ಅಗತ್ಯವಿರುವ ಖಾಸಗಿತನವನ್ನು ನೀಡಬೇಕು. ಈ ವಿಷಯದ ಬಗ್ಗೆ ನಾನು ಈಗಾಗಲೇ ಹೆಚ್ಚು ಮಾತನಾಡಿದ್ದೇನೆ, ಇನ್ನು ನನ್ನನ್ನು ಒಳ್ಳೆಯವಳು ಎಂದು ಸಾಬೀತುಪಡಿಸಲು ಪ್ರಯತ್ನಿಸುವುದಿಲ್ಲ. ಇನ್ನು ಮುಂದೆ ಮೌನವಾಗಿ ದೂರ ಸರಿಯುತ್ತೇನೆ' ಎಂದು ಬರೆದುಕೊಂಡಿದ್ದಾರೆ.

Add Asianetnews Kannada as a Preferred SourcegooglePreferred
25
ರವಿ ಮೋಹನ್‌ರನ್ನು ಬಿಡ್ತೀನಿ!
Image Credit : X

ರವಿ ಮೋಹನ್‌ರನ್ನು ಬಿಡ್ತೀನಿ!

'ಖಿನ್ನತೆಯಲ್ಲಿದ್ದ ವ್ಯಕ್ತಿಯನ್ನು ಉಳಿಸಲು ಮತ್ತು ಅವರಿಗೆ ಬೆಂಬಲವಾಗಿ ನಿಲ್ಲಲು ನಾನು ಪ್ರಯತ್ನಿಸಿದೆ. ಆದರೆ ನೀವು ಈಗಾಗಲೇ ಅವರ ಬಗ್ಗೆ ಒಂದು ನಿರ್ಧಾರಕ್ಕೆ ಬಂದಿದ್ದೀರಿ. ಈ ಜಗತ್ತಿನಲ್ಲಿ ಒಳ್ಳೆಯವರಿಗಿಂತ ಸುಳ್ಳುಗಾರರು, ಸಂಚುಕೋರರು, ಮೋಸಗಾರರನ್ನೇ ಜಗತ್ತು ಹೆಚ್ಚು ನಂಬುತ್ತದೆ. ನಾನು ಈಗ ಅವರನ್ನು ಈ ಜಗತ್ತಿಗೇ ಬಿಟ್ಟುಬಿಡುತ್ತೇನೆ. ಇನ್ನು ಮುಂದೆ ಯಾವುದೇ ವಿವರಣೆ, ರಕ್ಷಣೆ, ಹೋರಾಟ ಇರುವುದಿಲ್ಲ. ನಿಜವಾದ ಪ್ರೀತಿ, ವಿಶ್ವಾಸವನ್ನು ಜಗತ್ತು ಗೌರವಿಸಲಿಲ್ಲ. ನೀವು ಬಯಸಿದ್ದು ಕೊನೆಗೂ ನಡೆಯಿತು. ಅಂತಿಮವಾಗಿ ಸ್ತ್ರೀವಾದ ಗೆದ್ದಿತು, ಆದರೆ ನನ್ನ ಸಂತೋಷ ಸೋತುಹೋಯಿತು' ಎಂದು ಕೆನಿಶಾ ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ.

Related Articles

Related image1
ನಟ ರವಿ ಮೋಹನ್‌ ಪತ್ನಿ ಆರತಿಗೆ ಧನುಷ್‌ ಜೊತೆ ಸಂಬಂಧವಿದೆ ಎಂದಿದ್ದ ಗಾಯಕಿ ವಿರುದ್ಧ ದೂರು ದಾಖಲು!
Related image2
ಮೋಹನ್‌ಲಾಲ್‌ ಜೊತೆಗಿನ 'ಆಪರೇಷನ್ ಸಿಂದೂರ್' ಸಿನಿಮಾ ನಿಂತು ಹೋಯ್ತಾ? ಮೇಜರ್ ರವಿ ಕೊಟ್ಟ ಸ್ಪಷ್ಟನೆಯೇನು?
35
ಮೊದಲೇ ಮದುವೆ ಆಗಿತ್ತು
Image Credit : Ravi Mohan X Page

ಮೊದಲೇ ಮದುವೆ ಆಗಿತ್ತು

ನಟ ರವಿ ಮೋಹನ್ ಮತ್ತು ತನ್ನನ್ನು ಸಂಬಂಧ ಕಲ್ಪಿಸಿ ಬರುವ ವಿವಾದಗಳಿಗೆ ಕೆನಿಶಾ ಫ್ರಾನ್ಸಿಸ್ ಈ ಹಿಂದೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದರು. ಆದರೆ ಈಗ ಅದನ್ನು ಅಳಿಸಿಹಾಕಿದ್ದಾರೆ. ಆ ವಿಡಿಯೋದಲ್ಲಿ, 'ನಾನು ನನ್ನ ಪೋಷಕರಿಗೆ ಒಬ್ಬಳೇ ಮಗಳು. ನನ್ನ ತಂದೆ-ತಾಯಿ ಈಗ ಬದುಕಿಲ್ಲ. ನನಗೆ 4 ವರ್ಷವಿದ್ದಾಗ, ಸಂಬಂಧಿಕರೊಬ್ಬರಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ. 18ನೇ ವಯಸ್ಸಿನಲ್ಲಿ ನನಗೆ ಮದುವೆಯಾಯಿತು. ಆದರೆ ಅದು ಕೇವಲ ನಾಲ್ಕು ತಿಂಗಳು ಮಾತ್ರ ಉಳಿಯಿತು. ನನ್ನ ಗಂಡನಿಗೆ ಬೇರೆ ಮಹಿಳೆಯರೊಂದಿಗೆ ಸಂಬಂಧವಿತ್ತು. ಆ ಸಂಬಂಧ ನರಕವಾಗಿತ್ತು. ಮಾನಸಿಕ ಮತ್ತು ದೈಹಿಕವಾಗಿ ನಾನು ಅನುಭವಿಸಿದ ಕಷ್ಟದಿಂದ ನನ್ನ ಗರ್ಭಪಾತವಾಯಿತು. ಇದೆಲ್ಲಾ ನನಗೆ 19-20 ವರ್ಷ ವಯಸ್ಸಿನಲ್ಲಿ ನಡೆಯಿತು' ಎಂದು ಹೇಳಿದ್ದರು.

45
ಬಾರ್‌ನಲ್ಲಿ ಹಾಡಿದ್ದು ಸತ್ಯ
Image Credit : Aari Ravi Instagram

ಬಾರ್‌ನಲ್ಲಿ ಹಾಡಿದ್ದು ಸತ್ಯ

'ಮೊದಲು ನನ್ನ ತಾಯಿ ತೀರಿಕೊಂಡರು. ನಾಲ್ಕು ವರ್ಷಗಳ ನಂತರ ತಂದೆಯೂ ಹೋದರು. ಆ ಬಳಿಕ, ಸುಮಾರು ಹತ್ತು ವರ್ಷಗಳ ಕಾಲ ನಾನು ಒಂಟಿಯಾಗಿಯೇ ಬದುಕಿದೆ. ನನ್ನ ಭೂತಕಾಲವನ್ನು ಕೆದಕಿ ತೆಗೆದು ಟೀಕೆ ಮಾಡುವವರು ಇದ್ದಾರೆ. ಹೌದು, ಒಂದು ರಾತ್ರಿಗೆ 500 ರೂಪಾಯಿ ಪಡೆದು ಬಾರ್‌ಗಳಲ್ಲಿ ಹಾಡಿ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದೆ. ಇಂದು ಅದಕ್ಕಿಂತ ಹೆಚ್ಚು ಸಂಪಾದಿಸುತ್ತೇನೆ. ಈಗ ಎಲ್ಲರೂ ನನ್ನನ್ನೇ ಗುರಿಯಾಗಿಸಿಕೊಂಡಿದ್ದಾರೆ. ನನ್ನ ವೈಯಕ್ತಿಕ ಜೀವನವನ್ನು ತಿಳಿಯಲು ಬೆಂಗಳೂರಿಗೆ ಕೆಲವು ಡಿಟೆಕ್ಟಿವ್‌ಗಳನ್ನು ಕಳುಹಿಸಿದ್ದರು. ನನ್ನ ತಂದೆಯನ್ನು ನಾನು ವೃದ್ಧಾಶ್ರಮದಲ್ಲಿ ಬಿಟ್ಟಿದ್ದೆ ಎಂದು ಕೂಡ ಕಥೆ ಕಟ್ಟಿದರು. ಅವರು ಅಮಾನವೀಯರು' ಎಂದು ಕೆನಿಶಾ ಹೇಳಿಕೊಂಡಿದ್ದರು.

55
ನಾನು, ರವಿ ಫ್ರೆಂಡ್ಸ್‌ ಅಷ್ಟೇ
Image Credit : others

ನಾನು, ರವಿ ಫ್ರೆಂಡ್ಸ್‌ ಅಷ್ಟೇ

'ಕುಟುಂಬವನ್ನು ಹಾಳು ಮಾಡಿದವಳು' ಎಂದು ಎಲ್ಲರೂ ನನ್ನನ್ನು ಕರೆಯುತ್ತಾರೆ. ಗರ್ಭದಲ್ಲಿ ತನ್ನ ಮಗುವನ್ನು ಕಳೆದುಕೊಂಡ ಮಹಿಳೆ, ಇನ್ನೊಬ್ಬರನ್ನು ಅವರ ಕುಟುಂಬ ಅಥವಾ ಮಕ್ಕಳಿಂದ ಬೇರ್ಪಡಿಸುತ್ತಾಳೆ ಎಂದು ನಿಮಗೆ ಅನಿಸುತ್ತದೆಯೇ? ರವಿ ಮೋಹನ್ ಮಾನಸಿಕವಾಗಿ ತುಂಬ ಕುಸಿದು ಹೋಗಿದ್ದಾಗ ನನ್ನ ಬಳಿ ಸಹಾಯ ಕೇಳಿ ಬಂದರು. ಒಬ್ಬ ಥೆರಪಿಸ್ಟ್ ಆಗಿ, ಅವರಿಗೆ ಬೇಕಾದ ಎಲ್ಲಾ ಸಹಾಯವನ್ನು ನಾನು ಮಾಡಿದೆ. ಅವರು ಕುಟುಂಬದೊಂದಿಗಿನ ಸಮಸ್ಯೆಯನ್ನು ಸರಿಪಡಿಸಿಕೊಳ್ಳಿ ಎಂದೇ ನಾನು ಹೇಳಿದೆ. ಆದರೆ, ಅದಕ್ಕೂ ಮೊದಲೇ ರವಿ ಮೋಹನ್ ಮಾನಸಿಕವಾಗಿ ತನ್ನ ಕುಟುಂಬದಿಂದ ದೂರವಾಗಿದ್ದರು. ಆ ಸಮಯದಲ್ಲಿ ನಾವು ಸ್ನೇಹಿತರಾದೆವು. ಇಂದಿಗೂ ಹಾಗೆಯೇ ಇದ್ದೇವೆ. ಉಳಿದಂತೆ, ನಾನು ಯಾರ ಕುಟುಂಬವನ್ನೂ ಮುರಿದಿಲ್ಲ. ನನಗೆ ಆ ಅಗತ್ಯವೂ ಇಲ್ಲ. ಜನರೇ ಈ ಸಂಬಂಧವನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ' ಎಂದು ಕೆನಿಶಾ ವಿವರಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ತಮಿಳು
ಸೆಲೆಬ್ರಿಟಿಗಳು
ಜಯಂ ರವಿ

Latest Videos
Recommended Stories
Recommended image1
ಆ ಪವರ್‌ಫುಲ್‌ ಪಾತ್ರದಲ್ಲಿ ಶಿವಣ್ಣ: ಮೆಗಾಸ್ಟಾರ್ ಮಗನಿಗೆ ಕುಸ್ತಿ ಗುರುವಾದ ಹ್ಯಾಟ್ರಿಕ್ ಹೀರೋ!
Recommended image2
Salman Khan: 'ಇಲ್ಲಿಯವರೆಗೂ ಯಾವತ್ತೂ ನಾನು ನನ್ನ ಸಿನಿಮಾದ ಸ್ಕ್ರಿಪ್ಟ್ ಓದಿಲ್ಲ'.. ಇನ್ಮುಂದೆ ಏನಂತೆ?
Recommended image3
ಮಗಳ ಡೇಟಿಂಗ್ ಬಗ್ಗೆ ಹೇಳಿಕೆ ನೀಡಿ ಟ್ರೋಲ್ ಆಗ್ತಿರೋ ಟಾಕ್ಸಿಕ್‌ ಬ್ಯೂಟಿ: ಏನೆಲ್ಲಾ ಹೇಳಿದ್ರು ನೋಡಿ!
Related Stories
Recommended image1
ನಟ ರವಿ ಮೋಹನ್‌ ಪತ್ನಿ ಆರತಿಗೆ ಧನುಷ್‌ ಜೊತೆ ಸಂಬಂಧವಿದೆ ಎಂದಿದ್ದ ಗಾಯಕಿ ವಿರುದ್ಧ ದೂರು ದಾಖಲು!
Recommended image2
ಮೋಹನ್‌ಲಾಲ್‌ ಜೊತೆಗಿನ 'ಆಪರೇಷನ್ ಸಿಂದೂರ್' ಸಿನಿಮಾ ನಿಂತು ಹೋಯ್ತಾ? ಮೇಜರ್ ರವಿ ಕೊಟ್ಟ ಸ್ಪಷ್ಟನೆಯೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved