ನನ್ನ ಮಗ ಝುನೈದ್ ಖಾನ್‌ಗೆ ಡಿಸ್ಲೆಕ್ಸಿಯಾ ಇತ್ತು: ಅಮೀರ್ ಖಾನ್
ಆತ ಇಂಗ್ಲೀಷ್‌ನ ‘ಎ’ ಅಕ್ಷರವನ್ನು ಸರಿಯಾಗಿ ಬರೆಯುತ್ತಿರಲಿಲ್ಲ. ‘ಫಾರ್’ ಅಂತ ಬರೆಯುವಲ್ಲಿ ‘ಫ್ರಮ್’ ಅಂತ ಬರೆಯುತ್ತಿದ್ದ. ಇವನ್ಯಾಕೆ ಹೀಗೆ ಎಂದೇ ಗೊತ್ತಾಗುತ್ತಿರಲಿಲ್ಲ.

ನನ್ನ ಮಗ ಝುನೈದ್‌ಗೆ ಡಿಸ್ಲೆಕ್ಸಿಯಾ ಇತ್ತು. ತಾರೆ ಜಮೀನ್ ಪರ್ ಸಿನಿಮಾದ ಕಥೆಯನ್ನು ಮೊದಲ ಸಲ ಕೇಳಿಸಿಕೊಂಡಾಗ ನನಗೆ ಜೀರ್ಣಿಸಿಕೊಳ್ಳುವುದು ಕಷ್ಟವಾಗಿತ್ತು.
ಏಕೆಂದರೆ ಆ ಸಿನಿಮಾದಲ್ಲಿ ಡಿಸ್ಲೆಕ್ಸಿಯಾ ಇರುವ ಹುಡುಗನನ್ನು ಬೈಯ್ಯುವ ತಂದೆಯ ಜಾಗದಲ್ಲಿ ಆಗ ನಾನಿದ್ದೆ ಎಂದು ಅಮೀರ್ ಖಾನ್ ಹೇಳಿದ್ದಾರೆ.
ಇದೇ ಮೊದಲ ಬಾರಿ ಅವರು ತನ್ನ ಮಗ ಝುನೈದ್‌ಗಿದ್ದ ಡಿಸ್ಲೆಕ್ಸಿಯಾ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ನಾನು ಈವರೆಗೆ ಮಗ ಝುನೈದ್‌ನ ಈ ಸಮಸ್ಯೆ ಬಗ್ಗೆ ಎಲ್ಲೂ ಮಾತಾಡಿರಲಿಲ್ಲ.
ಈಗ ಆತನೇ ತನ್ನ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾನೆ. ಹೀಗಾಗಿ ಈ ವಿಚಾರ ಹೇಳುತ್ತಿದ್ದೇನೆ. ಆರಂಭದಲ್ಲಿ ಮಗನ ಸಮಸ್ಯೆ ಅರ್ಥ ಮಾಡಿಕೊಳ್ಳದೇ ಆತನನ್ನು ಬೈಯ್ಯುತ್ತಿದ್ದೆ.
ಆತ ಇಂಗ್ಲೀಷ್‌ನ ‘ಎ’ ಅಕ್ಷರವನ್ನು ಸರಿಯಾಗಿ ಬರೆಯುತ್ತಿರಲಿಲ್ಲ. ‘ಫಾರ್’ ಅಂತ ಬರೆಯುವಲ್ಲಿ ‘ಫ್ರಮ್’ ಅಂತ ಬರೆಯುತ್ತಿದ್ದ. ಇವನ್ಯಾಕೆ ಹೀಗೆ ಎಂದೇ ಗೊತ್ತಾಗುತ್ತಿರಲಿಲ್ಲ.
ಕ್ರಮೇಣ ಅರ್ಥ ಮಾಡಿಕೊಂಡು ಆತನಿಗೆ ಮಾರ್ಗದರ್ಶನ ಮಾಡಿದೆ ಎಂದಿದ್ದಾರೆ. ಅಮೀರ್ ಖಾನ್ ನಟನೆಯ ‘ಸಿತಾರೆ ಜಮೀನ್ ಪರ್’ ಜೂ.20ಕ್ಕೆ ತೆರೆ ಕಾಣುತ್ತಿದೆ.