ಆಮೀರ್ ಖಾನ್ ಫೋಟೋ ವೈರಲ್; ವಯಸ್ಸಾಯಿತು ಎಂದ ನೆಟ್ಟಿಗ್ಗರು!
ಇತ್ತೀಚೆಗೆ ಬಾಂದ್ರಾದ ಡಬ್ಬಿಂಗ್ ಸ್ಟುಡಿಯೊ ಹೊರಗೆ ಆಮೀರ್ ಖಾನ್ (Aamir Khan) ಕಾಣಿಸಿಕೊಂಡರು. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿವೆ. ಆದರೆ ಅವರ ಸ್ಥಿತಿಯನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಆಮೀರ್ ಅವರ ಕೆನ್ನೆಗಳು ಒಳ ಹೋಗಿವೆ ಮತ್ತು ಗಡ್ಡದ ಕೂದಲು ಕೂಡ ಬಿಳಿಯಾಗಿರುವುದನ್ನು ಫೋಟೋಗಳಲ್ಲಿ ಕಾಣಬಹುದು. ಅಷ್ಟೇ ಅಲ್ಲ, ಈ ವೇಳೆ ಅವರು ಕೆಂಪು ಬಣ್ಣದ ಶಾರ್ಟ್ಸ್ ಮತ್ತು ಚಪ್ಪಲಿ ಧರಿಸಿದ್ದರು. ಆಮೀರ್ ಅವರನ್ನು ಈ ಸ್ಥಿತಿಯಲ್ಲಿ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಅವರಿಗೆ ಮುದುಕ ಎಂದು ಕರೆಯುತ್ತಿದ್ದಾರೆ ಮತ್ತು ಕೆಲವರು ಅವರು ಭಾರತದಲ್ಲಿ ಸುರಕ್ಷಿತವಾಗಿಲ್ಲ ಎಂದೂ ಕಾಲೆಳೆಯುತ್ತಿದ್ದಾರೆ. ಇದರ ಜೊತೆಗೆ ಮುಂಬೈನ ಬೇರೆ ಬೇರೆ ಸ್ಥಳಗಳಲ್ಲಿ ಯಾವ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ ನೋಡಿ.
ಕಾರ್ತಿಕ್ ಆರ್ಯನ್ ಶೂಟಿಂಗ್ ಸೆಟ್‌ನಲ್ಲಿ ಕಾಣಿಸಿಕೊಂಡರು. ಈ ವೇಳೆ ಅವರ ಕೂದಲು ಅಸ್ತವ್ಯಸ್ತ ಆಗಿತ್ತು ಮತ್ತು ಅವರು ಕೆಂಪು ಬಣ್ಣದ ಜಾಕೆಟ್ ಧರಿಸಿದ್ದರು. ಹೊರಬಿದ್ದ ಫೋಟೋಗಳಲ್ಲಿ, ಅವರು ಸ್ವಲ್ಪ ಅಸಮಾಧಾನಗೊಂಡಿರುವಂತೆ ಕಾಣುತ್ತದೆ.
ಈ ದಿನಗಳಲ್ಲಿ ಆಮೀರ್ ಖಾನ್ ತಮ್ಮ ಮುಂಬರುವ ಚಿತ್ರ ಲಾಲ್ ಸಿಂಗ್ ಚಡ್ಡಾ ಡಬ್ಬಿಂಗ್ (dubbing) ನಲ್ಲಿ ನಿರತರಾಗಿದ್ದಾರೆ. ಮುಂಬೈನಲ್ಲಿ ಕರೀನಾ ಕಪೂರ್ (Kareena Kapoor) ಅವರೊಂದಿಗೆ ಈ ಸಿನಿಮಾದ ಉಳಿದ ಭಾಗದ ಚಿತ್ರೀಕರಣವನ್ನು ಅವರು ಈಗಾಗಲೇ ಪೂರ್ಣಗೊಳಿಸಿದ್ದರು.
ಮಾಜಿ ಪೋರ್ನ್ ಸ್ಟಾರ್ (Porn Star) ಮತ್ತು ಬಾಲಿವುಡ್ ನಟಿ ಸನ್ನಿ ಲಿಯೋನ್ (Sunny Leone) ವಿಮಾನ ನಿಲ್ದಾಣದಲ್ಲಿ (Airport) ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಅವರು ಆಕಾಶ ಬಣ್ಣದ ಬಟ್ಟೆಗಳನ್ನು ಧರಿಸಿದ್ದರು. ಕ್ಯಾಮೆರಾಮನ್ ಗೆ ತುಂಬಾ ಸ್ಟೈಲಿಶ್ ಪೋಸ್ (Stylish Pose) ಕೊಟ್ಟಿದ್ದಾರೆ ಸನ್ನಿ.
ಅದಿತಿ ರಾವ್ ಹೈದರಿ (Aditi Rao Hydari) ಕೆಲವು ದಿನಗಳ ನಂತರ ಮುಂಬೈನ ಜಿಮ್‌ನ ಹೊರಗೆ ಕಾಣಿಸಿಕೊಂಡರು. ಅವರು ಕಪ್ಪು ಬಣ್ಣದ ಜಿಮ್ ವೇರ್ ಧರಿಸಿದ್ದರು. ಅದಿತಿ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ಕಾರಣ, ಆಕೆಯನ್ನು ಗುರುತಿಸುವುದೇ ಕಷ್ಟವಾಗಿತ್ತು.
ಹಾಸ್ಯನಟರಾದ ಸುನಿಲ್ ಗ್ರೋವರ್ ಮತ್ತು ಜಿಗರ್ ಸರಿಯಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ವೇಳೆ ಸುನಿಲ್ ಬಿಳಿ ಬಣ್ಣದ ಟೀ ಶರ್ಟ್ ಹಾಗೂ ಜಾಕೆಟ್ ಧರಿಸಿದ್ದರು. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಮಾಸ್ಕ್ ಕೂಡ ಧರಿಸಿದ್ದರು. ಅದೇ ಸಮಯದಲ್ಲಿ ಜಿಗರ್ ಕಪ್ಪು ಟಿ-ಶರ್ಟ್ ಧರಿಸಿದ್ದರು.
ರಾಕುಲ್ ಪ್ರೀತ್ ಸಿಂಗ್ ಮುಂಬೈನ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಕ್ಯಾಮಾರೆಗೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ, ಅವರು ಪಿಂಕ್ ಬಣ್ಣದ ಕ್ರಾಪ್ ಶರ್ಟ್ ಮತ್ತು ಲೆಗ್ಗಿಂಗ್ಸ್ ಧರಿಸಿದ್ದರು. ಆಕೆ ಮೊಬೈಲ್ ನಲ್ಲಿ ಬ್ಯುಸಿಯಾಗಿರವುದ್ದನ್ನು ಫೋಟೋಗಳಲ್ಲಿ ಕಾಣಬಹುದು.