Mumbai: 'ಲಾಲ್ ಸಿಂಗ್ ಚಡ್ಡಾ' ಸ್ಕ್ರೀನಿಂಗ್ ಆಯೋಜಿಸಿದ ಆಮೀರ್ ಖಾನ್
ಮುಂಬೈನ ಜುಹುದಲ್ಲಿರುವ ರೆಕಾರ್ಡಿಂಗ್ ಸ್ಟುಡಿಯೋ ಸನ್ನಿ ಸೂಪರ್ ಸೌಂಡ್‌ನಲ್ಲಿ ಆಮೀರ್ ಖಾನ್ (Aamir Khan) ಅವರ ಮುಂಬರುವ ಚಿತ್ರ 'ಲಾಲ್ ಸಿಂಗ್ ಚಡ್ಡಾ' (Laal Singh Chaddha) ಸ್ಕ್ರೀನಿಂಗ್ ನಡೆಯಿತು. ಈ ಸಂದರ್ಭದಲ್ಲಿ ಅನೇಕ ಸೆಲೆಬ್ರೆಟಿಗಳು ಚಿತ್ರ ವೀಕ್ಷಿಸಲು ಆಗಮಿಸಿದ್ದರು. ಆಗಸ್ಟ್ 5 ರಂದು ಸಂಜೆ ನಡೆದ ಈ ಸ್ಕ್ರೀನಿಂಗ್‌ನಲ್ಲಿ ಸ್ವತಃ ಆಮೀರ್ ಖಾನ್ ಕೂಡ ಹಾಜರಿದ್ದರು. ಈ ಚಿತ್ರವು 1994ರಲ್ಲಿ ಬಿಡುಗಡೆಯಾದ ಟಾಮ್ ಹ್ಯಾಂಕ್ಸ್ ಅಭಿನಯದ ಹಾಲಿವುಡ್ ಚಲನಚಿತ್ರ 'ಫಾರೆಸ್ಟ್ ಗಂಪ್' ನ ರಿಮೇಕ್.
ಅದ್ವೈತ್ ಚಂದನ್ ನಿರ್ದೇಶನದ 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ ಆಮೀರ್ ಜೊತೆಗೆ ಕರೀನಾ ಕಪೂರ್ ಖಾನ್, ಮೋನಾ ಸಿಂಗ್ ಮತ್ತು ನಾಗ ಚೈತನ್ಯ ಕೂಡ ಕಾಣಿಸಿಕೊಳ್ಳಲಿದ್ದಾರೆ. ಆಗಸ್ಟ್ 11ರಂದು ಬಿಡುಗಡೆಯಾಗಲಿರುವ ಈ ಚಿತ್ರವು ಅಕ್ಷಯ್ ಕುಮಾರ್ ಅಭಿನಯದ 'ರಕ್ಷಾ ಬಂಧನ' ಚಿತ್ರದ ಜೊತೆಗೆ ಮುಖಾಮುಖಿಯಾಗಲಿದೆ.
ಈ ಚಿತ್ರ ಪ್ರದರ್ಶನ ಸಮಾರಂಭದಲ್ಲಿ ಆಮೀರ್ ಖಾನ್ ಸಿಂಪಲ್ ಆಗಿ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆಮೀರ್ ಕಪ್ಪು ಬಣ್ಣದ ಧೋತಿ ಪ್ಯಾಂಟ್ ಜೊತೆಗೆ ಕಂದು ಬಣ್ಣದ ಶಾರ್ಟ್ ಕುರ್ತಾ ಧರಿಸಿದ್ದರು.
ಅವರಲ್ಲದೆ, ಸಿನಿಮಾದ ಚಿತ್ರಕಥೆಗಾರ ಅತುಲ್ ಕುಲಕರ್ಣಿ, ನಿರ್ಮಾಪಕ ಸಂದೀಪ್ ಸಿಂಗ್, ನಟರಾದ ಮಕರಂದ್ ದೇಶಪಾಂಡೆ ಮತ್ತು ಶೇಖರ್ ಸುಮನ್ ಸಹ ಸಮಾರಂಭದಲ್ಲಿ ಕಾಣಿಸಿಕೊಂಡರು.
ಈ ಸಂದರ್ಭದಲ್ಲಿ ‘ಬಾಹುಬಲಿ’ಯಂತಹ ಪಾತ್ರಕ್ಕೆ ಧ್ವನಿ ನೀಡಿದ ನಟ ಶರದ್ ಕೇಳ್ಕರ್ ಕೂಡ ಆಗಮಿಸಿದರು. ಅವರು ತಮ್ಮ ಪತ್ನಿ ಕೀರ್ತಿ ಕೇಳ್ಕರ್ ಅವರೊಂದಿಗೆ ಚಿತ್ರ ವೀಕ್ಷಿಸಲು ಆಗಮಿಸಿದ್ದರು.
ಶೇಖರ್ ಸುಮನ್ ಅವರು ತಮ್ಮ ಪತ್ನಿ ಅಲ್ಕಾ ಸುಮನ್ ಅವರೊಂದಿಗೆ 'ಲಾಲ್ ಸಿಂಗ್ ಚಡ್ಡಾ' ಸ್ಕ್ರೀನಿಂಗ್‌ನಲ್ಲಿ ಭಾಗವಹಿಸಿದ್ದರು. ಪ್ರಿಂಟ್ ಇರುವ ಹಾಫ್ ಶರ್ಟ್ ನಲ್ಲಿ ಶೇಖರ್ ತುಂಬಾ ಯಂಗ್ ಆಗಿ ಕಾಣುತ್ತಿದ್ದರು.
'ಜಗ್ ಜಗ್ ಜಿಯೋ' ಖ್ಯಾತಿಯ ಮನೀಶ್ ಪಾಲ್ ಮತ್ತು 'ಖಾಮೋಶಿಯಾನ್' ಮತ್ತು 'ಪಲ್ಟಾನ್' ಖ್ಯಾತಿಯ ನಟ ಗುರ್ಮೀತ್ ಚೌಧರಿ ಸೇರಿದಂತೆ ಹಲವು ನಟರು ಈ ಚಿತ್ರ ಪ್ರದರ್ಶನಕ್ಕೆ ಹಾಜರಾಗಿದ್ದರು.