ಆಮೀರ್ ಖಾನ್‌ಗೆ ಸೌತ್‌ನ ಈ ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡುವ ಆಸೆಯಂತೆ

ಆಮೀರ್ ಖಾನ್ ಸೌತ್‌ನ ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಸಾಕಷ್ಟು ನಿರ್ದೇಶಕರು ಜೊತೆ ಕೆಲಸ ಮಾಡಲು ಬಯಸುವುದಾಗಿ ಹೇಳಿದ ಆಮೀರ್ ಅವರ ಮನಸ್ಸಿಗೆ ಬಂದ ಮೊದಲ ಹೆಸರು ಎಸ್ಎಸ್ ರಾಜಮೌಳಿ.

bollywood Actor aamir Khan expressed his wish to work with the ss rajamouli sgk

ಬಾಲಿವುಡ್ ಸ್ಟಾರ್ ನಟ, ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಕರೆಸಿಕೊಳ್ಳುವ ಆಮೀರ್ ಖಾನ್ ಸದ್ಯ ಲಾಲ್ ಸಿಂಗ್ ಚಡ್ಡಾ ರಿಲೀಸ್ ನ ಬ್ಯುಸಿಯಲ್ಲಿದ್ದಾರೆ. ಲಾಲ್ ಸಿಂಗ್ ಚಡ್ಡಾ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಇದೇ ತಿಂಗಳು 11ರಂದು ಸಿನಿಮಾ ದೇಶದಾದ್ಯಂತ ತೆರೆಗೆ ಬರುತ್ತಿದೆ. ಅನೇಕ ವರ್ಷಗಳ ಬಳಿಕ ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಮೂಲಕ ಅಭಿಮಾನಿಗಳ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈ ನಡುವೆ ಆಮೀರ್ ಖಾನ್ ಬಹಿಷ್ಕರಿಸುವಂತೆ ಒತ್ತಾಯ ಕೂಡ ಕೇಳಿಬರುತ್ತಿದೆ. ದೇಶವಿರೋಧಿ ಆಮೀರ್ ಖಾನ್ ಸಿನಿಮಾ ನೋಡಬೇಡಿ ಎಂದು ಟ್ರೆಂಡ್ ಮಾಡಲಾಗುತ್ತಿದೆ. ಮಿಸ್ಟರ್ ಪರ್ಫೆಕ್ಷನಿಸ್ಟ್ ತನ್ನ ಸಿನಿಮಾ ಬಹಿಷ್ಕರಿಸಬೇಡಿ ಎಂದು ಕೇಳಿಕೊಂಡರೂ ಸಹ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡಲಾಗುತ್ತಿದೆ.
 
ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಆಮೀರ್ ಖಾನ್ ಗೆ ನಾಯಕಿಯಾಗಿ ಕರಿನಾ ಕಪೂರ್ ಕಾಣಿಸಿಕೊಂಡಿದ್ದಾರೆ. ಆಮೀರ್ ಖಾನ್ ಮತ್ತು ಕರಿನಾ ಕಪೂರ್ ಇಬ್ಬರೂ ಸದ್ಯ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಇತ್ತೀಚಿಗಷ್ಟೆ ಆಮೀರ್ ಖಾನ್ ಕಾಫಿ ವಿತ್ ಕರಣ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಕರಿನಾ ಕಪೂರ್ ಜೊತೆ ಶೋಗೆ ಹಾಜರಾಗಿದ್ದರು. ಈ ವೇಳೆ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಸದ್ಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ರಿಲೀಸ್ ಗೆ ಕಾಯುತ್ತಿರುವ ಆಮೀರ್ ಖಾನ್ ಗೆ ಮುಂದಿನ ಸಿನಿಮಾ ಬಗ್ಗೆಯೂ ಪ್ರಶ್ನೆ ಎದುರಾಗುತ್ತಿದೆ. ಸದ್ಯ ಮುಂದಿನ ಸಿನಿಮಾಗೆ ನೀವು ಯಾರ ಜೊತೆ ಕೆಲಸ ಮಾಡಬೇಕೆಂದು ಬಯಸುತ್ತೀರಿ ಎಂದು ಕರಣ್ ಜೋಹರ್ ಕೇಳಿದರು. ಆಮೀರ್ ಖಾನ್ ಇಂಟ್ರಸ್ಟಿಂಗ್ ಉತ್ತರ ನೀಡಿದರು.ಸೌತ್‌ನ ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಸಾಕಷ್ಟು ನಿರ್ದೇಶಕರು ಜೊತೆ ಕೆಲಸ ಮಾಡಲು ಬಯಸುವುದಾಗಿ ಹೇಳಿದ ಆಮೀರ್ ಅವರ ಮನಸ್ಸಿಗೆ ಬಂದ ಮೊದಲ ಹೆಸರು ಎಸ್ಎಸ್ ರಾಜಮೌಳಿ.

ಆಮೀರ್ ಖಾನ್ ರಾಜಮೌಳಿ ಹೆಸರು ಹೇಳುತ್ತಿರುವುದು ಇದೇ ಮೊದಲಲ್ಲ. ಈ ಮೊದಲು  ಸಹ ಅನೇಕ ಬಾರಿ ರಾಜಮೌಳಿ ಜೊತೆ ಕೆಲಸ ಮಾಡುವ ಬಯಕೆ ಹೊರಹಾಕಿದ್ದರು. ಕಾಫಿ ಕರಣ್ ಶೋನಲ್ಲೂ ಬಾಹುಬಲಿ ನಿರ್ದೇಶಕರ ಜೊತೆ ಕೆಲಸ ಮಾಡುವ ಬಯಕೆ ಹೊರಹಾಕಿದ್ದಾರೆ. ಆಮೀರ್ ಖಾನ್ ಮತ್ತು ರಾಜಮೌಳಿ ಇಬ್ಬರೂ ಒಟ್ಟಿಗೆ ಸೇರಿದರೆ ಸಿನಿ ಅಭಿಮಾನಿಗಳಿಗೆ ದೊಡ್ಡ ಹಬ್ಬ. ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆಮೀರ್ ಖಾನ್ ಮತ್ತು ರಾಜಮೌಳಿ ಇಬ್ಬರು ಸಿನಿಮಾ ಮಾಡಲಿ ಎಂದು ಅಭಿಮಾನಿಗಳ ಹಾರೈಸುತ್ತಿದ್ದಾರೆ.  

bollywood Actor aamir Khan expressed his wish to work with the ss rajamouli sgk

ಆಮೀರ್ ಖಾನ್ ಸಿನಿಮಾಗೆ ಬೆಂಬಲ; ಚಿರಂಜೀವಿ ವಿರುದ್ಧ ನಟಿ ವಿಜಯಶಾಂತಿ ಕಿಡಿ

ಅಂದಹಾಗೆ ಇತ್ತೀಚಿಗಷ್ಟೆ ಆಮೀರ್ ಖಾನ್ ತನ್ನ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಸೌತ್ ಸ್ಟಾರ್ ಗಳಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ರಾಜಮೌಳಿ ಕೂಡ ಆಮೀರ್ ಖಾನ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಚಿರಂಜೀವಿ, ನಾಗಾರ್ಜುನ ಮತ್ತು ರಾಜಮೌಳಿ ಸೇರಿದಂತೆ ಅನೇಕರು ಸಿನಿಮಾ ಲಾಲ್ ಸಿಂಗ್ ಚಡ್ಡಾ ಸಿನಿಮಾ ವೀಕ್ಷಿಸಿದ್ದಾರೆ. ಸೌತ್ ಸ್ಟಾರ್ ಗಳ ಪಪ್ತಿಕ್ರಿಯೆಗೆ ಆಮೀರ್ ಖಾನ್ ಕಣ್ಣೀರಾಗಿದ್ದರು. ಭಾವುಕರಾಗಿ ಚಿರಂಜೀವಿ ತಬ್ಬಿಕೊಂಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಲಾಲ್ ಸಿಂಗ್ ಚಡ್ಡಾ, ಆಮೀರ್ ಖಾನ್ ಬಹಿಷ್ಕರಿಸಿ ಟ್ರೆಂಡ್‌ಗೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಬೇಸರ

ಖ್ಯಾತ ನಿರ್ದೇಶಕ ರಾಜಮೌಳಿ ಆರ್ ಆರ್ ಆರ್ ಸೂಪರ್ ಸಕ್ಸಸ್ ಬಳಿಕ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ.  ಈ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಇನ್ನು ಬಹಿರಂಗ ಪಡಿಸಿಲ್ಲ. ಸದ್ಯದಲ್ಲೇ ಬಹುನಿರೀಕ್ಷೆಯ ಚಿತ್ರದ ಬಗ್ಗೆ ಮಾಹಿತಿ ರಿವೀಲ್ ಮಾಡುವ ಸಾಧ್ಯತೆ ಇದೆ.  

Latest Videos
Follow Us:
Download App:
  • android
  • ios