MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಆಜ್ ಕಿ ರಾತ್ ಮಾದಕತೆಗೆ ಹೊಸ ದಾಖಲೆ ಸೃಷ್ಟಿ, ಓಡೋಡಿ ಬಂದು ಧನ್ಯವಾದ ಹೇಳಿದ ತಮನ್ನಾ

ಆಜ್ ಕಿ ರಾತ್ ಮಾದಕತೆಗೆ ಹೊಸ ದಾಖಲೆ ಸೃಷ್ಟಿ, ಓಡೋಡಿ ಬಂದು ಧನ್ಯವಾದ ಹೇಳಿದ ತಮನ್ನಾ

ಆಜ್ ಕಿ ರಾತ್ ಮಾದಕತೆಗೆ ಹೊಸ ದಾಖಲೆ ಸೃಷ್ಟಿ, ಸ್ತ್ರೀ 2 ಸಿನಿಮಾದ ಈ ಹಾಡು ಹಾಗೂ ತಮನ್ನಾ ಡ್ಯಾನ್ಸ್ ಭಾರಿ ಸದ್ದು ಮಾಡಿತ್ತು. ಇದೀಗ ಈ ಆಜ್ ಕಿ ರಾತ್ ಹೊಸ ದಾಖಲೆ ಬರೆದಿದೆ. ಇದರ ಬೆನ್ನಲ್ಲೇ ತಮನ್ನಾ ಭಾಟಿಯಾ ಧನ್ಯವಾದ ಹೇಳಿದ್ದಾರೆ. 

2 Min read
Author : Chethan Kumar
Published : Jan 16 2026, 06:38 PM IST
Share this Photo Gallery
  • FB
  • TW
  • Linkdin
  • Whatsapp
16
ಆಜ್ ಕಿ ರಾತ್ ಹೊಸ ದಾಖಲೆ
Image Credit : stockPhoto

ಆಜ್ ಕಿ ರಾತ್ ಹೊಸ ದಾಖಲೆ

ಸ್ತ್ರೀ 2 ಸಿನಿಮಾದ ಆಜ್ ಕಿ ರಾತ್ ಹಾಡು ಹಾಗೂ ನಟಿ ತಮನ್ನಾ ಭಾಟಿಯಾ ಡ್ಯಾನ್ಸ್ ಭರ್ಜರಿ ಮೋಡಿ ಮಾಡಿದೆ. ಈ ಹಾಡಿನಲ್ಲಿ ತಮನ್ನಾ ಮಾದಕತೆ, ಅದ್ಭುತ ಡ್ಯಾನ್ಸ್ ಹಲವರ ಆ್ಯಂಥಮ್ ಸಾಂಗ್ ಆಗಿ ಹೊರಹೊಮ್ಮಿತ್ತು. ಪಡ್ಡೆ ಹುಡುಗರಿಗೆ ತಮನ್ನಾ ಭಾಟಿಯಾ ಪ್ರತಿ ಹೆಜ್ಜೆಗಳು ಕನಸಿನಲ್ಲೂ ಕನವರಿಸುವಂತೆ ಮಾಡಿತ್ತು. ಇದೀಗ ಇದೇ ಆಜ್ ಕಿ ರಾತ್ ಹೊಸ ದಾಖಲೆ ಬರೆದಿದೆ.

26
ಏನಿದು ಆಜ್ ಕಿ ರಾತ್ ದಾಖಲೆ
Image Credit : PR HANDOUT

ಏನಿದು ಆಜ್ ಕಿ ರಾತ್ ದಾಖಲೆ

ತಮನ್ನಾ ಭಾಟಿಯಾ ಸೊಂಟ ಬಳುಕಿಸಿದ ಆಜ್ ಕಿ ರಾತ್ ಹಾಡು ಇದೀಗ ಬರೋಬ್ಬರಿ 1 ಬಿಲಿಯನ್ ವೀಕ್ಷಣೆ ಕಂಡಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ. ಯೂಟ್ಯೂಬ್‌ನಲ್ಲಿ ಆಜ್ ಕಿ ರಾತ್ 1 ಬಿಲಿಯನ್ ವೀಕ್ಷಣೆ ಗಡಿ ದಾಟಿದೆ. ಪ್ರತಿ ದಿನ ಆಜ್ ಕಿ ರಾತ್ ಹಾಡು ವೀಕ್ಷಣೆ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೇ ಇದೆ.

Related Articles

Related image1
ಬಾಹುಬಲಿ ಹಾಡಿನ ವಿವಾದ: ಅದು ಹಲ್ಲೆ ಅಲ್ಲ, ಆತ್ಮಶೋಧನೆ ಕ್ಷಣ' ಎಂದ ನಟಿ ತಮನ್ನಾ ಭಾಟಿಯಾ!
Related image2
ಜಿಮ್ ಮಾಡಿದ್ರೂ ತೂಕ ಇಳಿತಿಲ್ವಾ? ತಮನ್ನಾ ಭಾಟಿಯಾ ಟ್ರೈನರ್ ಹೇಳಿದ ತೂಕ ಇಳಿಕೆ ತಂತ್ರ ಇದು!
36
ಧನ್ಯವಾದ ಹೇಳಿದ ತಮನ್ನಾ ಭಾಟಿಯಾ
Image Credit : Youtube-Saregama Music

ಧನ್ಯವಾದ ಹೇಳಿದ ತಮನ್ನಾ ಭಾಟಿಯಾ

ಆಜ್ ಕಿ ರಾತ್ ಸಾಂಗ್ ಹೊಸ ದಾಖಲೆ ಬರೆಯುತ್ತಿದ್ದಂತೆ ತಮನ್ನಾ ಭಾಟಿಯಾ ಸೋಶಿಯಲ್ ಮೀಡಿಯಾ ಮೂಲಕ ಧನ್ಯವಾದ ಹೇಳಿದ್ದಾರೆ. ಆಜ್ ಕಿ ರಾತ್ ಹಾಡು ಶೂಟಿಂಗ್ ಮುಗಿಸಿ ಮೊದಲು ತಮನ್ನಾ ವೀಕ್ಷಿಸುತ್ತಿರುವ ಕ್ಲಿಪ್ ಶೇರ್ ಮಾಡಿದ್ದಾರೆ. ಇದೇ ವೇಳೆ ಮೊದಲ ವೀಕ್ಷಣೆಯಿಂದ ಇದೀಗ 1 ಬಿಲಿಯನ್ ವೀಕ್ಷಣೆ. ನಿಮ್ಮಲ್ಲರ ಪ್ರೀತಿಗೆ ಧನ್ಯವಾದ ಎಂದು ತಮನ್ನಾ ಭಾಟಿಯಾ ಹೇಳಿದ್ದಾರೆ.

46
ಸ್ತ್ರೀ 2 ಸಿನಿಮಾಗೆ ಯಶಸ್ಸು ಕೊಟ್ಟ ಆಜ್ ಕಿ ರಾತ್
Image Credit : tamannaah bhatia instagram

ಸ್ತ್ರೀ 2 ಸಿನಿಮಾಗೆ ಯಶಸ್ಸು ಕೊಟ್ಟ ಆಜ್ ಕಿ ರಾತ್

ಕಾಮಿಡಿ ಹಾರರ್ ಸ್ತ್ರೀ 2 ಸಿನಿಮಾ ಅದ್ಭುತ ಯಶಸ್ಸು ಸಿಕ್ಕಿತ್ತು. ಇದಕ್ಕೆ ಆಜ್ ಕಿ ರಾತ್ ಹಾಡಿನ ಕೂಡುಗೆಯೂ ಇದೆ. ಮಧುಬಂತಿ ಬಗ್ಚಿ ಹಾಗೂ ದಿವ್ಯ ಕುಮಾರ್ ಹಾಡಿರುವ ಈ ಹಾಡಿಗೆ ಅಮಿತಾಬ್ ಭಟ್ಟಾಚಾರ್ಯ ಸಾಹಿತ್ಯ ಬರೆದಿದ್ದಾರೆ. ಸಚಿನ್ ಜಿಗರ್ ಸಂಗೀತ ನಿರ್ದೇಶನ ಮಾಡಿದ್ದಾರೆ.

56
ವಾ ನು ಕಾವಲಯ ಹಾಡಿನ ಬೆನ್ನಲ್ಲೇ ಆಜ್ ಕಿ ರಾತ್
Image Credit : Asianet News

ವಾ ನು ಕಾವಲಯ ಹಾಡಿನ ಬೆನ್ನಲ್ಲೇ ಆಜ್ ಕಿ ರಾತ್

ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದಲ್ಲಿ ವಾ ನು ಕಾವಾಲಯ್ಯ ಐಟಂ ಸಾಂಗ್ ಭಾರಿ ಸದ್ದು ಮಾಡಿತ್ತು. ಈ ಹಾಡಿನಲ್ಲಿ ತಮನ್ನಾ ಡ್ಯಾನ್ಸ್‌ಗೆ ಹಲವರು ಮನಸೋತಿದ್ದರು.ಇದರ ಬಳಿಕ ಆಜ್ ಕಿ ರಾತ್ ಬಿಡುಗಡೆಯಾಗಿತ್ತು. ಇದು ಹಿಂದಿನ ದಾಖಲೆಗಳನ್ನು ಪುಡಿ ಮಾಡಿ ಹೊಸ ಇತಿಹಾಸ ಬರೆದಿದೆ.

ವಾ ನು ಕಾವಲಯ ಹಾಡಿನ ಬೆನ್ನಲ್ಲೇ ಆಜ್ ಕಿ ರಾತ್

66
ತಮನ್ನಾ ಭಾಟಿಯಾ ಮುಂದಿನ ಸಿನಿಮಾ ಯಾವುದು
Image Credit : Google

ತಮನ್ನಾ ಭಾಟಿಯಾ ಮುಂದಿನ ಸಿನಿಮಾ ಯಾವುದು

ಅಭಿಮಾನಿಗಳು ತಮನ್ನಾ ಭಾಟಿಯಾ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದಾರೆ. VVAN (ವ್ವಾನ್) ಅನ್ನೋ ಸಿನಿಮಾ ಮೂಲಕ ತಮನ್ನಾ ಭಾಟಿಯಾ ತೆರೆಗೆ ಬರಲು ಸಜ್ಜಾಗಿದ್ದಾರೆ. ದೀಪಕ್ ಮಿಶ್ರಾ ಹಾಗೂ ಅರುಣಬ್ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ನಾಯಕನಾಗಿ ಸಿದ್ಧಾರ್ಥ್ ಮಲ್ಹೋತ್ರ ಕಾಣಿಸಿಕೊಂಡಿದ್ದಾರೆ. ಮೇ 15ಕ್ಕೆ ಈ ಸಿನಿಮಾ ತೆರೆ ಕಾಣಲಿದೆ.

ತಮನ್ನಾ ಭಾಟಿಯಾ ಮುಂದಿನ ಸಿನಿಮಾ ಯಾವುದು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ತಮನ್ನಾ ಭಾಟಿಯಾ
ಬಾಲಿವುಡ್
ಮನರಂಜನಾ ಸುದ್ದಿ

Latest Videos
Recommended Stories
Recommended image1
National Startup Day: ಸ್ಟಾರ್ಟ್ ಅಪ್ ಶುರುಮಾಡೋ ಕನಸು ಕಾಣ್ತಿದ್ರೆ, ಈ ಸಿನಿಮಾ ಮಿಸ್ ಮಾಡದೆ ನೋಡಿ
Recommended image2
Actor Dhanush Wedding: 20 ವರ್ಷದ ಮಗನಿರೋ ತಮಿಳು ನಟ ಧನುಷ್‌ಗೆ ಮದುವೆ, ನೆಟ್‌ವರ್ಥ್ ಏನು?
Recommended image3
ಮೊದಲು 'ಕಪಾಲಿ ಥಿಯೇಟರ್' ಇದ್ದ ಜಾಗದಲ್ಲಿ ಈಗ ತೆಲುಗು ಸ್ಟಾರ್ ಮಹೇಶ್ ಬಾಬು ಸಿನಿಮಾಸ್ ಶುರು..!
Related Stories
Recommended image1
ಬಾಹುಬಲಿ ಹಾಡಿನ ವಿವಾದ: ಅದು ಹಲ್ಲೆ ಅಲ್ಲ, ಆತ್ಮಶೋಧನೆ ಕ್ಷಣ' ಎಂದ ನಟಿ ತಮನ್ನಾ ಭಾಟಿಯಾ!
Recommended image2
ಜಿಮ್ ಮಾಡಿದ್ರೂ ತೂಕ ಇಳಿತಿಲ್ವಾ? ತಮನ್ನಾ ಭಾಟಿಯಾ ಟ್ರೈನರ್ ಹೇಳಿದ ತೂಕ ಇಳಿಕೆ ತಂತ್ರ ಇದು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved