ತಂದೆ ರಂಗಭೂಮಿ ಕಲಾವಿದ, ಸಹೋದರಿಯರು ಗಾಯಕಿಯರು; Lata ಬಗ್ಗೆ ತಿಳಿಯದ ವಿಚಾರಗಳಿವು!
92 ವರ್ಷಕ್ಕೆ ಶಾರದೆ ಮಡಿಲು ಸೇರಿದ ಬಹುಭಾಷಾ ಗಾಯಕಿ ಲಂತಾ ಮಂಗೇಶ್ಕರ್ ಅವರ ಜೀವನದಲ್ಲಿ ಯಾರಿಗೂ ತಿಳಿಯದ 8 ಸತ್ಯಗಳು ಇಲ್ಲಿವೆ....
13 ವರ್ಷವಿದ್ದಾಗ ಸಂಗೀತ ಜರ್ನಿ ಆರಂಭಿಸಿ ಲತಾ ಮಂಗೇಶ್ಕರ್ 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. 7 ದಶಕಗಳ ಕಾಲ ಅವರೇ ಗಾನ ಕೋಗಿಲೆಯಾಗಿ ಭಾರತದ ಸಂಗೀತ ಕ್ಷೇತ್ರದ ಸ್ವರ ಸಾಮ್ರಾಜ್ಞೆಯಾಗಿ ಮಿಂಚಿದ್ದರು. 1942 ರಿಂದ 2015ವರೆಗೂ ಬ್ರೇಕ್ ತೆಗೆದುಕೊಳ್ಳದೇ ಹಾಡಿ ಭಾರತೀಯರನ್ನು ಮನೋರಂಜಿಸಿದ್ದಾರೆ.
ಚಿತ್ರರಂಗದ ನಿರ್ದೇಶಕರು ಮತ್ತು ನಿರ್ಮಾಪಕರು ಲತಾ ಮಂಗೇಶ್ಕರ್ ರೆಕಾರ್ಡಿಂಗ್ ಸ್ಟುಡಿಯೋನ ದೇಗುಲವೆಂದು ಕರೆಯುತ್ತಿದ್ದರು. ಆಕೆ ಗಾನ ಕೋಗಿಲೆ, ಮೆಲೋಡಿ ಕ್ವೀನ್ ಎಂದು ಕರೆಯುತ್ತಿದ್ದರು. ತಮ್ಮ ಸಿನಿಮಾದಲ್ಲಿ ಲತಾ ಹಾಡಿದರೆ ಸಿನಿಮಾ ಸೂಪರ್ ಹಿಟ್ ಆಗಿಯೇ ಆಗುತ್ತದೆ ಎಂಬ ನಂಬಿಕೆ ನಿರ್ಮಾಪಕ, ನಿರ್ದೇಶಕರಲ್ಲಿತ್ತು.
ಒಬ್ಬ ವ್ಯಕ್ತಿಯನ್ನು ತಮ್ಮ ಧ್ವನಿಯಿಂದ ನಗಿಸುವುದು, ಅಳಿಸುವುದು ಮತ್ತು ಕುಣಿಸುವ ಸಾಮರ್ಥ್ಯ ಹೊಂದಿದ್ದ ಗಾಯಕಿ ಲತಾ. ಹೀಗಾಗಿ ಚಿತ್ರರಂಗಕ್ಕೆ ಕಾಲಿಟ್ಟ ಪ್ರತಿಯೊಬ್ಬರೂ ಆಕೆಯನ್ನು ದೇವರಂತೆ ಪೂಜಿಸುತ್ತಾರೆ. ಶ್ರೇಯಾ ಘೋಶಾಲ್, ಸುನಿಧಿ ಚೌಹಾಣ್, ಶಿಲ್ಪಾ ರಾವ್..ಎಲ್ಲ ಈಗಿನ ಗಾಯಕಿಯರಿಗೂ ಲತಾ ಅವರೇ inspiration.
ಲತಾ ಅವರದ್ದು ಕಲಾ ಕುಟುಂಬ. ಲತಾ ಅವರ ತಂದೆ ರಂಗಭೂಮಿ ಕಲಾವಿದರು. ಅವರದ್ದೇ ನಾಟಕ ಸಂಸ್ಥೆಯಿತ್ತು. ಸಹೋದರಿ ಮೀನಾ, ಉಶಾ ಮತ್ತು ಆಶಾ ಕೂಡ ಗಾಯಕಿಯರು. 'ನಮ್ಮ ಮನೆಯ ಮಕ್ಕಳೆಲ್ಲರೂ ಗಾಯಕಿಯರು. ನಮಗೆ ಈ ವಿಚಾರವೇ ಗೊತ್ತಿಲ್ಲ ನೋಡು,' ಎಂದು ಒಮ್ಮೆ ಅವರ ತಂದೆ ಹೇಳಿದ್ದರಂತೆ.
ಲತಾ ಮಂಗೇಶ್ಕರ್ ಅವರಿಗೆ ಮೊದಲ ಬ್ರೇಕ್ ನೀಡಿದವರು ಬಾಲಿವುಡ್ ಚಲನಚಿತ್ರ ಸಂಯೋಜಕ ಗುಲಾಮ್ ಹೈದರ್. ಪಾರ್ಟೀಶನ್ ನಂತರ ಹೈದರ್ ಲಾಹೋರ್‌ಗೆ ಸ್ಥಳಾಂತರಗೊಂಡರೂ, ಅವರು ಬಾಲಿವುಡ್ ಕೊಡುಗೆ ಅಪಾರ. 1948 ರಲ್ಲಿ ಮಜ್ಬೂರ್ ಚಿತ್ರಕ್ಕಾಗಿ "ದಿಲ್ ಮೇರಾ ತೋಡಾ" ಹಾಡಲು ಲತಾಗೆ ಅವಕಾಶ ಕೊಟ್ಟಿದ್ದರು ಅಂದಿನಿಂದ ಇಂದಿನವರೆಗೂ ಲತಾ ಎಂದೂ ತಿರುಗಿ ನೋಡಿಲ್ಲ.
ಜರ್ನಿ ಆರಂಭದಲ್ಲಿ ಲತಾ ಅವರಿಗೆ ಹಿರಿಯ ಗಾಯಕರಿಂದ ದೊಡ್ಡ ಸ್ಪರ್ಧೆ ಮತ್ತು ಸವಾಲುಗಳು ಎದುರಾಗಿದ್ದವು. ಅದರಲ್ಲಿ ಲತಾಗೆ ದೊಡ್ಡ ಕಾಂಪಿಟೇಷನ್ ಕೊಟ್ಟವರು ನೂರ್ ಜೆಹಾನ್. ಪಾರ್ಟೀಶನ್ ನಂತರ ಅವರು ಹೊರ ಹೊಗದಿದ್ದರೆ, ಲತಾ ಆಟ ಶುರುವಾಗುವುದು ತಡವಾಗುತ್ತಿದ್ದು ಎಂದು 2004ರ Outlook ಮ್ಯಾಗಜೀನ್ ವರದಿ ಮಾಡಿತ್ತು.
ಮೂರು ರಾಜ್ಯ ಪ್ರಶಸ್ತಿ, 12 ಬೆಂಗಾಲಿ ಪ್ರತಿಷ್ಠಿತ ಪ್ರಶಸ್ತಿ, ಎರಡು ಭಾರತೀಯ ವೋಕಲ್ ಪ್ರಶಸ್ತಿ, ಭಾರತ ರತ್ನ ಪ್ರಶಸ್ತಿ..ಹೀಗಾ ಲೆಕ್ಕವಿಲ್ಲದಷ್ಟು ಸಾಲು ಸಾಲು ಪ್ರಶಸ್ತಿಗಳನ್ನು ತಮ್ಮ ಮಡಿಲಿಗೇರಿಸಿಕೊಂಡಿದ್ದಾರೆ ಈ ಸ್ವರ ಸಾಮ್ರಾಜ್ಞೆ. ಲತಾ ಅವರ ನಿವಾಸದ ತುಂಬಾ ಅವಾರ್ಡ್‌ಗಳು ತುಂಬಿವೆ ಹಾಗೂ ಜಾಗವಿಲ್ಲದ ಕಾರಣ ಅವರ ಸ್ಟುಡಿಯೋದಲ್ಲಿ ಅವಾರ್ಡ್‌ಗಳನ್ನು ಇಡಲಾಗಿದೆ.
ಹಿಂದಿ ಚಿತ್ರರಂಗಕ್ಕೆ ಮಾತ್ರ ಲತಾ ಅವರು ಧ್ವನಿ ಸೀಮಿತವಾಗಿರಲಿಲ್ಲ. ಭಾರತದಲ್ಲಿ 36 ಭಾಷೆಗಳಲ್ಲಿ ಹಾಡನ್ನು ಹಾಡಿದ್ದಾರೆ ಅದರಲ್ಲಿ ಹೈಲೈಟ್ ಆದ ಭಾಷೆ ಅಂದ್ರೆ ಮರಾಠಿ, ತಮಿಳು, ಭೋಜಪುರಿ, ಕನ್ನಡ, ಬೆಂಗಾಲಿ ಮತ್ತು ಅಸ್ಸಾಮಿ.