MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Car News
  • ಬಿಸಿಲ ಬೇಗೆಯಲ್ಲಿ ಕಾರಿನ ಪೈಂಟ್ ಮಸುಕಾಗದಂತೆ ಕಾಪಾಡುವುದು ಹೇಗೆ?

ಬಿಸಿಲ ಬೇಗೆಯಲ್ಲಿ ಕಾರಿನ ಪೈಂಟ್ ಮಸುಕಾಗದಂತೆ ಕಾಪಾಡುವುದು ಹೇಗೆ?

ಬಿಸಿಲ ಬೇಗೆಯಲ್ಲಿ ಕಾರಿನ ಪೈಂಟ್ ಮಸುಕಾಗದಂತೆ ಕಾಪಾಡುವುದು ಹೇಗೆ?, ಈ ಬಾರಿಯ ಬಿಸಿಲು ವಿಪರೀತವಾಗಿದೆ. ಹಲವರು ಅಸ್ವಸ್ಥರಾಗುತ್ತಿದ್ದಾರೆ. ಈ ಪರಿ ಬಿಸಿಲಿಗೆ ನಿಮ್ಮ ನೆಚ್ಚಿನ ಕಾರಿನ ಬಣ್ಣ ಫೇಡ್ ಆಗದಂತೆ ತಡೆಯಲು ಇಲ್ಲಿದೆ ಸೂತ್ರ

2 Min read
Author : Chethan Kumar
Published : Apr 23 2026, 07:14 PM IST
Share this Photo Gallery
  • FB
  • TW
  • Linkdin
  • Whatsapp
16
ಡೇಂಜರ್ ಬಿಸಿಲು
Image Credit : Asianet News

ಡೇಂಜರ್ ಬಿಸಿಲು

ಇತ್ತೀಚಿನ ಕೆಲ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿದೆ. ವಾತಾವರಣ ಗಂಭೀರವಾಗುತ್ತಿದೆ. ಉರಿ ಬಿಸಿಲು ಹಲವರನ್ನು ಅಸ್ವಸ್ಥರನ್ನಾಗಿ ಮಾಡಿದೆ. ಬಿಸಿನಲ್ಲಿ ಪ್ರಯಾಣ ಮಾಡುವುದನ್ನು ತಪ್ಪಿಸಲು ವೈದ್ಯರು ಸೂಚಿಸುತ್ತಲೇ ಇದ್ದಾರೆ. ಈ ಬಿಸಿಲಿಗೆ ನೆಚ್ಚಿನ ಕಾರಿನ ಬಣ್ಣ ಮಾಸುವುದು ಸಹಜ. ಆದರೆ ಸಣ್ಣ ಉಪಾಯ ಮಾಡಿದರೆ ಬಿಸಿಲ ಬೇಗೆಯಲ್ಲಿ ಕಾರಿನ ಪೈಂಟ್ ಫೇಡ್ ಆಗದಂತೆ ಕಾಪಾಡಿಕೊಳ್ಳಬಹುದು.

26
ಡಾರ್ಕ್ ಬಣ್ಣದ ಕಾರು
Image Credit : our own

ಡಾರ್ಕ್ ಬಣ್ಣದ ಕಾರು

ಪ್ರಮುಖವಾಗಿ ಡಾರ್ಕ್ ಬಣ್ಣದ ಕಾರಿನ ಪೈಂಟ್ ಬೇಗನ ಮಾಸುತ್ತದೆ. ಮುಖ್ಯ ಕಾರಣ ಕಪ್ಪು, ಕಡು ನೀಲಿ, ಕೆಂಪು, ಗ್ರೇ ಸೇರಿದಂತೆ ಕಡು ಬಣ್ಣದ ಕಾರುಗಳು ಸೂರ್ಯನ ಬೆಳಕಿನ ಯುವಿಗಳನ್ನು ಬೇಗನೆ ಹೀರಿಕೊಳ್ಳುತ್ತದೆ. ಇದರಿಂದ ಕಡು ಬಣ್ಣದ ಕಾರುಗಳ ಪೈಂಟ್ ಬೇಗನೆ ಫೇಡ್ ಆಗುತ್ತದೆ. ಇದನ್ನು ತಪ್ಪಿಸಲು ಕೆಲ ಸರಳ ಸೂತ್ರಗಳನ್ನು ಪಾಲಿಸಿದರೆ ಸಾಕು.

Related Articles

Related image1
Car Discount: 1 ಲೀಟರ್‌ಗೆ 27.97 ಕಿಮೀ ಮೈಲೇಜ್, 1 ಲಕ್ಷ ರೂಪಾಯಿ ಡಿಸ್ಕೌಂಟ್ ಇರುವ ಎಸ್‌ಯುವಿ ಆಫರ್ ಮಿಸ್ ಮಾಡ್ಕೋಬೇಡಿ!
Related image2
EV Car Battery Care: ಎಲೆಕ್ಟ್ರಿಕ್ ಕಾರು ಖರೀದಿಸಿದ್ದೀರಾ? ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಇಲ್ಲಿವೆ ಸಿಂಪಲ್ ಟಿಪ್ಸ್
36
ಕಾರಿನ ಪಾರ್ಕಿಂಗ್
Image Credit : our own

ಕಾರಿನ ಪಾರ್ಕಿಂಗ್

ಸೂರ್ಯನ ಬಿಸಿನಲ್ಲಿ ಕಾರು ಪಾರ್ಕ್ ಮಾಡಿದರೆ ಎಪ್ರಿಲ್ ಹಾಗೂ ಮೇ ತಿಂಗಳ ಬಿಸಿಲು ಸಾಕು. ಎರಡೇ ತಿಂಗಳಲ್ಲಿ ಕಾರು ಫೇಡ್ ಆಗಲಿದೆ. ಹೀಗಾಗಿ ನೆರಳಿನಲ್ಲಿ ಪಾರ್ಕಿಂಗ್ ಉತ್ತಮ. ಅಂದರೆ ಮರದ ಕೆಳಗೆ ಪಾರ್ಕಿಂಗ್ ಹೆಚ್ಚು ಉತ್ತಮವಲ್ಲ. ಹಕ್ಕಿಗಳ ಹಿಕ್ಕೆ, ಮರದ ರೆಂಬೆ ಕೊಂಬೆಗಳೂ ಬಿದ್ದರೂ ಕಾರಿನ ಪೈಂಟ್ ಹಾಗೂ ಬಾಡಿ ಡ್ಯಾಮೇಜ್ ಆಗಲಿದೆ. ಹೀಗಾಗಿ ಪಾರ್ಕಿಂಗ್ ಸ್ಥಳದಲ್ಲಿ ಮೇಲ್ಚಾವಣಿ ಇರುವ ಕಡೆ ಪಾರ್ಕಿಂಗ್ ಉತ್ತಮ

46
ಬೆಂಗಳೂರಲ್ಲಿ ಪಾರ್ಕಿಂಗ್ ಸಮಸ್ಯೆಯಲ್ಲಿ ಪೈಂಟ್ ಫೇಡ್
Image Credit : our own

ಬೆಂಗಳೂರಲ್ಲಿ ಪಾರ್ಕಿಂಗ್ ಸಮಸ್ಯೆಯಲ್ಲಿ ಪೈಂಟ್ ಫೇಡ್

ಬೆಂಗಳೂರು ಸೇರಿದಂತೆ ಹಲವೆಡೆ ಕಾರು ಪಾರ್ಕ್ ಮಾಡಲು ಜಾಗವೇ ಇರುವುದಿಲ್ಲ. ಈ ವೇಳೆ ಬಿಸಿನಲ್ಲೇ ಪಾರ್ಕ್ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಇಂತಹ ಸಂದರ್ಭಗಳಲ್ಲಿ ಉತ್ತಮ ಕಾರು ಕವರ್ ಖರೀದಿಸಿ. ಸೂರ್ಯನ ಕಿರಣಗಳ ಯುವಿಗಳನ್ನು ತಡೆಯುವ ಹಾಗೂ ಕಾರಿನ ಉತ್ತಮ ರಕ್ಷಣೆ ನೀಡುವ ಕವರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಂತಹ ಕವರ್‌ಗಳು ಒಂದು ಹಂತದವರಗೆ ಕಾರಿಗೆ ರಕ್ಷಣೆ ನೀಡಲಿದೆ.

56
ಕಾರು ವಾಶಿಂಗ್
Image Credit : our own

ಕಾರು ವಾಶಿಂಗ್

ಬೇಸಿಗೆಯಲ್ಲಿ ಸೂರ್ಯನ ಕಿರಣಗಳನ್ನು ಕಾರು ಹೀರಿಕೊಳ್ಳುತ್ತದೆ. ಇತ್ತ ಧೂಳು ಕಾರಿನ ಮೇಲಿದ್ದಾಗ ಸಹಜವಾಗಿ ಕಾರಿನ ಬಣ್ಣ ಮಸುಕಾಗುತ್ತದೆ. ಹೀಗಾಗಿ ನಿಯಮಿತವಾಗಿ ಕಾರು ವಾಶ್ ಮಾಡುವುದು ಉತ್ತಮ. ಕಾರು ವಾಶ್ ಮಾಡುವಾಗ ಮೊದಲು ಕಾರಿನ ಮೇಲೆ ಸರಿಯಾದ ಪ್ರಮಾಣದಲ್ಲಿ ನೀರು ಹಾಯಿಸಿ ತೊಳೆಯಬೇಕು.

66
ವ್ಯಾಕ್ಸಿಂಗ್ ಬಳಕೆ
Image Credit : audi India

ವ್ಯಾಕ್ಸಿಂಗ್ ಬಳಕೆ

ಕಾರಿಗೆ ವ್ಯಾಕ್ಸಿಂಗ್ ಅಥವಾ ಸಿಲಾಂಟ್ ಬಳಕೆಯಿಂದ ಸೂರ್ಯನ ಪ್ರಖರಣ ಕಿರಣಗಳಿಂದ ರಕ್ಷಣೆ ಸಿಗಲಿದೆ. ವ್ಯಾಕ್ಸ್ ರಕ್ಷಣಾತ್ಮಕ ಪದರದ ರೀತಿ ಕೆಲಸ ಮಾಡುತ್ತದೆ. ಇದರಿಂದ ಬೇಗನ ಫೇಡ್ ಆಗುವುದನ್ನು ತಪ್ಪಿಸುತ್ತದೆ. ಬೇಸಿಗೆ ಕಾಲ ಆರಂಭಗೊಳ್ಳುವ ಮುನ್ನವೇ ವ್ಯಾಕ್ಸಿಂಗ್ ಮಾಡಿಸುವುದು ಉತ್ತಮ.ಇನ್ನು ಸೆರಾಮಿಕ್ ಕೋಟಿಂಗ್, ಪೈಂಟ್ ಪ್ರೊಟೆಕ್ಷನ್ ಫಿಲ್ಮ್ ಸೇರಿದಂತೆ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳು ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಲಭ್ಯವಿದೆ.

ವ್ಯಾಕ್ಸಿಂಗ್ ಬಳಕೆ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಕಾರುಗಳು
ಬೇಸಿಗೆ
ಭಾರತ ಸುದ್ದಿ
ಆಟೋಮೊಬೈಲ್

Latest Videos
Recommended Stories
Recommended image1
ಒಂದೇ ಚಾರ್ಜ್‌ಗೆ 681ಕಿ.ಮೀ ರೇಂಜ್‌, ಟೆಸ್ಲಾ ಹೊಸ ಕಾರು ಭಾರತಕ್ಕೆ ಲಗ್ಗೆ! ಐಷಾರಾಮಿ SUV ಮಾರುಕಟ್ಟೆಯಲ್ಲಿ ಸಂಚಲನ
Recommended image2
India s Green Shift : ಶೀಘ್ರದಲ್ಲೇ ಆಲ್ಕೋಹಾಲ್‌ನಿಂದ ಓಡಾಡಲಿವೆ ಭಾರತದ ಕಾರುಗಳು!
Recommended image3
ಬೆಂಗಳೂರಲ್ಲಿ ಆಡಿ SQ8 ಲಾಂಚ್, ಇದು ಆಲ್ ವ್ಹೀಲ್ ಸ್ಟೀರಿಂಗ್ ಫೀಚರ್ ಕಾರು
Related Stories
Recommended image1
Car Discount: 1 ಲೀಟರ್‌ಗೆ 27.97 ಕಿಮೀ ಮೈಲೇಜ್, 1 ಲಕ್ಷ ರೂಪಾಯಿ ಡಿಸ್ಕೌಂಟ್ ಇರುವ ಎಸ್‌ಯುವಿ ಆಫರ್ ಮಿಸ್ ಮಾಡ್ಕೋಬೇಡಿ!
Recommended image2
EV Car Battery Care: ಎಲೆಕ್ಟ್ರಿಕ್ ಕಾರು ಖರೀದಿಸಿದ್ದೀರಾ? ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಇಲ್ಲಿವೆ ಸಿಂಪಲ್ ಟಿಪ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved