- Home
- Automobile
- Car News
- ಭಾರತಕ್ಕೆ ಬರುತ್ತಿದೆ ಹೊಸ ಡೆಂಝಾ ಕಾರು, 600 ಕಿ.ಮಿ ಮೈಲೇಜ್, ಕೆಗೆಟುಕುವ ಬೆಲೆ ಜೊತೆ ಆಫರ್
ಭಾರತಕ್ಕೆ ಬರುತ್ತಿದೆ ಹೊಸ ಡೆಂಝಾ ಕಾರು, 600 ಕಿ.ಮಿ ಮೈಲೇಜ್, ಕೆಗೆಟುಕುವ ಬೆಲೆ ಜೊತೆ ಆಫರ್
ಭಾರತಕ್ಕೆ ಹೊಸ ಎಲೆಕ್ಟ್ರಿಕ್ ಕಾರು ಎಂಟ್ರಿಯಾಗುತ್ತಿದೆ. ಲಕ್ಷುರಿ ಬ್ರ್ಯಾಂಡ್ ಆದರೆ ಕಡಿಮೆ ಬೆಲೆ. ಜೊತೆಗೆ ಹಲವು ವಿಶೇಷತೆ ಈ ಕಾರಿನಲ್ಲಿದೆ. ಡೆಂಝಾ ಕಾರುಗಳು ಎಂಟ್ರಿಯಿಂದ ಹಲವು ಟಾಟಾ, ಮಹಿಂದ್ರ ಸೇರಿದಂತೆ ಹಲವು ಲಕ್ಷುರಿ ಕಾರುಗಳಿಗೂ ನಡುಕ ಶುರುವಾಗಿದೆ.

ಭಾರತಕ್ಕೆ ಡೆಂಝಾ ಕಾರು
ಭಾರತದಲ್ಲಿ ಈಗಾಗಲೇ ಕೈಗೆಟುಕುವ ಬೆಲೆಯಿಂದ ಹಿಡಿದು ಲಕ್ಷುರಿ ಎಲೆಕ್ಟ್ರಿಕ್ ಕಾರುಗಳು ಲಭ್ಯವಿದೆ. ಇದೀಗ ಡೆಂಝಾ ಲಕ್ಷುರಿ ಬ್ರ್ಯಾಂಡ್ ಭಾರತಕ್ಕೆ ಕಾಲಿಡುತ್ತಿದೆ. ಡೆಂಝಾ ಕಾರ್ಸ್ ಭಾರತಕ್ಕೆ ಆಗಮಿಸುತ್ತಿರುವ ಸುದ್ದಿ ಬಹಿರಂಗವಾಗುತ್ತಿದ್ದಂತೆ ಹಲವು ಬ್ರ್ಯಾಂಡ್‌ಗಳಿಗೆ ನಡುಕ ಶುರುವಾಗಿದೆ. ಅತ್ಯಂತ ಆಕರ್ಷಕ, ಐಷಾರಾಮಿ ಕಾರು ಇದಾಗಿದೆ. ಜೊತೆಗೆ ಅತ್ಯಂತ ಅಡ್ವಾನ್ಸ್ ಟೆಕ್ನಾಲಜಿ, ಕೈಗೆಟುಕುವ ಬೆಲೆ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.
ಬಿವೈಡಿ ಸಂಸ್ಥೆಯ ಲಕ್ಷುರಿ ಬ್ರ್ಯಾಂಡ್ ಡೆಂಝಾ
ಭಾರತದಲ್ಲಿ ಚೀನಾ ಮೂಲದ ಬಿವೈಡಿ ಕಾರು ಭರ್ಜರಿ ಮಾರುಕಟ್ಟೆ ಆಕ್ರಮಿಸಿಕೊಳ್ಳುತ್ತಿದೆ. ಬಿವೈಡಿ ಮಾರುಕಟ್ಟೆ ವಿಸ್ತರಣೆಯಾಗುತ್ತಿದ್ದಂತೆ ಬಿವೈಡಿ ಸಂಸ್ಥೆಯ ಲಕ್ಷುರಿ ಕಾರು ಬ್ರ್ಯಾಂಡ್ ಡೆಂಝಾ ಇದೀಗ ಭಾರತಕ್ಕೆ ಆಗಮಿಸುತ್ತಿದೆ. ಎರಡ ರಿಂದ ಮೂರು ಮಾಡೆಲ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಡೆಂಝಾ ಮುಂದಾಗಿದೆ.
ಡೆಂಝಾ Z9 GT ಕಾರು ಮೊದಲು ಬಿಡುಗಡೆ
ಡೆಂಝಾ ಬ್ರ್ಯಾಂಡ್ ಪೈಕಿ Z9 GT ಕಾರು ಮೊದಲು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಕಾರಿನ ಪವರ್ ಎಲ್ಲರನ್ನು ಅಚ್ಚರಿಗೊಳಿಸುತ್ತದೆ. ಈ ಎಲೆಕ್ಟ್ರಿಕ್ ಕಾರು 1,156hp ಪವರ್ ಹೊಂದಿದೆ. 0-100 ಕಿ.ಮೀ ವೇಗವನ್ನು ಕೇವಲ 2.7 ಸೆಕೆಂಡ್‌ನಲ್ಲಿ ಪಡೆದುಕೊಳ್ಳಲಿದೆ. ಜೊತೆಗೆ ಒಂದು ಬಾರಿ ಚಾರ್ಜ್ ಮಾಡಿದರೆ 600 ಕಿಲೋಮೀಟರ್ ಮೈಲೇಜ್ ನೀಡಲಿದೆ. ಈ ಕಾರಿನಲ್ಲಿ 122.5kWh ಬ್ಯಾಟರಿ ಪ್ಯಾಕ್ ಬಳಸಲಾಗಿದೆ.
ಹಂತ ಹಂತವಾಗಿ ವಿಸ್ತರಣೆ
Z9 GT ಹಾಗೂ D9 ಕಾರುಗಳನ್ನು ಭಾರತದಲ್ಲಿ ಮೊದಲು ಬಿಡುಗಡೆ ಮಾಡಲು ಡೆಂಝಾ ಪ್ಲಾನ್ ಮಾಡಿಕೊಂಡಿದೆ. ಬಳಿಕ ಹಂತ ಹಂತವಾಗಿ BAO5 ಹಾಗೂ Z ಮಾಡೆಲ್ ಕಾರುಗಳನ್ನು ಬಿಡುಗಡೆ ಮಾಡಲು ಡೆಂಝಾ ಪ್ಲಾನ್ ಮಾಡಿದೆ.D9 ಕಾರು 103kWh ಬ್ಯಾಟರಿ ಪ್ಯಾಕ್ ಹೊಂದಿದೆ. ಫುಲ್ ಚಾರ್ಜ್‌ಗೆ 520 ಕಿಲೋಮೀಟರ್ ಮೈಲೇಜ್ ನೀಡಲಿದೆ. ಡಿ9 ಕಾರು ಟೋಯೋಟಾ ವೆಲ್‌ಫೈರ್, ಎಂಜಿ ಎಂ9 ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಮರ್ಸೀಡಿಸ್ ಬೆಂಜ್ ಸಹಯೋಗದಲ್ಲಿ ಆರಂಭ
ಡೆಂಝಾ ಕಾರು ಮರ್ಸಡೀಸ್ ಬೆಂಜ್ ಸಹಯೋಗದಲ್ಲಿ ಆರಂಭಗೊಂಡಿತು. 2010ರಲ್ಲಿ ಡೆಂಝಾ ಮಾತೃಸಂಸ್ಥೆ ಬಿವೈಡಿ ಹಾಗೂ ಮರ್ಸಿಡೀಸ್ ಬೆಂಜ್ ಪಾರ್ಟ್ನರ್‌ಶಿಪ್‌ನಲ್ಲಿ ಆರಂಭಗೊಂಡ ಈ ಬ್ರ್ಯಾಂಡ್ 2024ರ ವೇಳೆಗೆ ಬಿವೈಡಿ ಎಲ್ಲಾ ಪಾಲು ಖರೀದಿಸಿ ಏಕ ಮಾಲೀಕನಾಗಿ ಹೊರಹೊಮ್ಮಿತು.

