ಕೇಂದ್ರ ಸಚಿವ ನಿತಿನ್ ಗಡ್ಕರಿ ಇದೀಗ ಹೊಸ ಕ್ರಾಂತಿಗೆ ಮುಂದಾಗಿದ್ದಾರೆ. ಈ ಕಾರಿಗೆ ಪೆಟ್ರೋಲ್ ಬೇಕಿಲ್ಲ, ಸಂಪೂರ್ಣ ಎಥೆನಾಲ್‌ನಿಂದ ಚಲಿಸಲಿದೆ. ಇದರ ನಿರ್ವಹಣೆ ಪ್ರತಿ ಲೀಟರ್‌ಗ 25 ರೂಪಾಯಿ. ಅಕ್ಟೋಬರ್‌ನಲ್ಲಿ ಈ ಕಾರು ಬಿಡುಗಡೆಯಾಗುತ್ತಿದೆ.

ನವದೆಹಲಿ (ಸೆ.27) ಎಥೆನಾಲ್ ಕೋಲಾಹಲ ನಿಧಾನವಾಗಿ ತಗ್ಗಿದರು ಆತಂಕ ದೂರವಾಗಿಲ್ಲ. ಇದರ ನಡುವೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭಾರತದಲ್ಲಿ ಹೊಸ ಕ್ರಾಂತಿಗೆ ಸಜ್ಜಾಗಿದ್ದಾರೆ. ಪೆಟ್ರೋಲ್ ಬೇಡ, ಸಂಪೂರ್ಣವಾಗಿ ಎಥೆನಾಲ್‌ನಿಂದಲೇ ಚಲಿಸುವ ಕಾರು ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ. ಟೋಯೋಟಾ ಫ್ಲೆಕ್ಸ್ ಫ್ಯೂಯೆಲ್ ಇನ್ನೋವಾ ಕಾರನ್ನು ನಿತಿನ್ ಗಡ್ಕರಿ ಮುಂದಿನ ತಿಂಗಳು ಬಿಡುಗಡೆ ಮಾಡಲಿದ್ದಾರೆ. ವಿಶೇಷ ಅಂದರೆ ಈ ಕಾರಿನಿ ನಿರ್ವಹಣೆ ಅತೀ ಸುಲಭವಾಗಲಿದೆ. ದುಬಾರಿ ಪೆಟ್ರೋಲ್ ಈ ಕಾರಿಗೆ ಬೇಕಿಲ್ಲ, ಕೇವಲ ಎಥೆನಾಲ್, ಅಂದರೆ ಶೇಕಡಾ 100ರಷ್ಟು ಎಥೆನಾಲ್ ಮೂಲಕ ಈ ಕಾರು ಚಲಿಸಲಿದೆ ಎಂದು ಗಡ್ಕರಿ ಹೇಳಿದ್ದಾರೆ.

ಮುಂದಿನ ತಿಂಗಳಿನಿಂದ ಎಥೆನಾಲ್ ಕಾರು

ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಿತಿನ್ ಗಡ್ಕರಿ ಏಥೆನಾಲ್ ಕುರಿತು ಟೀಕೆಗಳಿಗೆ ಉತ್ತರಿಸುತ್ತಾ ಸ್ಫೋಟಕ ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಪೆಟ್ರೋಲ್‌ನಲ್ಲಿ ಎಥೆನಾಲ್ ಶೇಕಡಾ 20ರಷ್ಟು ಬ್ಲೆಂಡ್ ಮಾಡಲಾಗುತ್ತಿದೆ. 19ಕ್ಕೂ ಹೆಚ್ಚು ದೇಶಗಳು ಹಲವು ವರ್ಷಗಳಿಂದ ಎಥೆನಾಲ್ ಬ್ಲೆಂಡ್ ಪೆಟ್ರೋಲ್ ಬಳಸುತ್ತಿದೆ. ಇದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಭಾರತದಲ್ಲಿ ವಾಹನಗಳಿಗೆ ಎಥೆನಾಲ್ ಬಳಕೆಯಿಂದ ಸಮಸ್ಯೆ ಇಲ್ಲ. ಇದರಿಂದ ರೈತರಿಗೂ ಆದಾಯ ಸಿಗಲಿದೆ. ಸದ್ಯ ಶೇಕಡಾ 20ರಷ್ಟು ಎಥೆನಾಲ್, ಅಕ್ಟೋಬರ್ ತಿಂಗಳಲ್ಲಿ ಟೋಯೋಟಾ ಇನ್ನೋವೋ ಫ್ಲೆಕ್ಸ್ ಫ್ಯುಯೆಲ್ ಕಾರು ಬಿಡುಗಡೆ ಮಾಡಲು ಆಹ್ವಾನಿಸಿದ್ದಾರೆ. ಈ ಕಾರು ಶೇಕಡಾ 100ರಷ್ಟು ಎಥೆನಾಲ್ ಇಂಧನದಲ್ಲಿ ಚಲಿಸಲಿದೆ ಎಂದು ಗಡ್ಕರಿ ಹೇಳಿದ್ದಾರೆ.

ಎಥೆನಾಲ್ ಕಾರಿನಲ್ಲಿದೆ ವಿಶೇಷತೆ

ಎಥೆನಾಲ್ ಕಾರಿನ ಖರ್ಚು ಪೆಟ್ರೋಲ್‌ಗೆ ಹೋಲಿಸಿದರೆ ಪ್ರತಿ ಲೀಟರ್ 25 ರೂಪಾಯಿಯಿಂತೆ ಕಡಿಮೆಯಾಗಲಿದೆ. ಒಂದೆಡೆ ಪೆಟ್ರೋಲ್ ಅವಲಂಬಿಸಬೇಕಾಗಿಲ್ಲ, ಮತ್ತೊಂದೆಡೆ ನಿರ್ವಹಣಾ ಖರ್ಚು ಕೂಡ ಕಡಿಮೆಯಾಗಲಿದೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಇನ್ನೋವಾ ಫ್ಲೆಕ್ಸ್ ಫ್ಯೂಯೆಲ್ ಕಾರು ಕೇವಲ ಎಥೆನಾಲ್ ವಿಶೇಷತೆ ಮಾತ್ರವಲ್ಲ, ಈ ಕಾರು ಚಲಿಸುವಾಗ ಶೇಕಡಾ 60ರಷ್ಟು ವಿದ್ಯುತ್ ಉತ್ಪಾದಿಸಲಿದೆ. ಇದರಿಂದ ಕಾರಿನ ಬ್ಯಾಟರಿ, ಎಸಿ ಸೇರಿದಂತೆ ಹಲವು ಅವಶ್ಯಕತೆಗಳನ್ನು ಪೂರೈಸಲಿದೆ. ಇದರಿಂದ ಮೈಲೇಜ್ ಕೂಡ ಹೆಚ್ಚಾಗಲಿದೆ.

ಭಾರತದಲ್ಲಿ ಎಥೆನಾಲ್ ಬ್ಲೆಂಡಿಂಗ್ ಕುರಿತು ಹಲವು ಆರೋಪಗಳಿವೆ. ಆದರೆ ಎಥೆನಾಲ್‌ನಿಂದ ವಾಹನಗಳಿಗೆ ಸಮಸ್ಯೆಯಾದ ಅಧಿಕೃತ ದೂರುಗಳಿಲ್ಲ. ಎಥೆನಾಲ್‌ನಿಂದ ವಾಹನಗಳಿಗೆ ಟೀಕಿಸುಂತೆ ಹಾನಿಯಾಗುವುದಿಲ್ಲ. ಶೀಘ್ರದಲ್ಲೇ ಹಲವು ಕಂಪನಿಗಳು ಶೇಕಡಾ 100ರಷ್ಟು ಎಥೆನಾಲ್ ಇಂಧನದ ಕಾರು ಅಭಿವೃದ್ಧಿಪಡಿಸಲಿದೆ. ಇದರಿಂದ ಭಾರತದಲ್ಲಿ ಪೆಟ್ರೋಲ್ ಅವಲಂಬನೆ ಕಡಿಮೆ ಮಾಡಿ ಎಥೆನಾಲ್ ಇಂಧನಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ರೈತರಿಗೂ ಆದಾಯ, ಪರಿಸರಕ್ಕೂ ಪೂರಕವಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.