- Home
- Automobile
- Car News
- ಜನ 80000 EV ಖರೀದಿಸಿದರು, ಈಗ ಅದೇ ಎಲೆಕ್ಟ್ರಿಕ್ ಕಾರು ಹೊಸ ಅವತಾರದಲ್ಲಿ ಎಂಟ್ರಿ! ಇತರೆ ಕಂಪನಿಗಳು ಶೇಕ್
ಜನ 80000 EV ಖರೀದಿಸಿದರು, ಈಗ ಅದೇ ಎಲೆಕ್ಟ್ರಿಕ್ ಕಾರು ಹೊಸ ಅವತಾರದಲ್ಲಿ ಎಂಟ್ರಿ! ಇತರೆ ಕಂಪನಿಗಳು ಶೇಕ್
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗುತ್ತಿದ್ದು, ಎಂಜಿ ಮೋಟಾರ್ಸ್ ತನ್ನ ವಿಂಡ್ಸರ್ ಇವಿ ಕಾರಿನ ಹೊಸ ಪ್ರೀಮಿಯಂ ಆವೃತ್ತಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಹೊಸ ಕಾರು ಆಕರ್ಷಕ ವಿನ್ಯಾಸ, ಎರಡು ಬ್ಯಾಟರಿ ಆಯ್ಕೆಗಳು ಮತ್ತು ಅತ್ಯುತ್ತಮ ಮೈಲೇಜ್ ಹೊಂದಿರಲಿದೆ. ಇದೆ.

ಕಾರು ಪ್ರಿಯರಿಗೆ ಎಕ್ಸೈಟಿಂಗ್ ನ್ಯೂಸ್
ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದೇಶದಲ್ಲಿ ಹೆಚ್ಚಾಗುತ್ತಿದೆ. ನಗರದ ಮಂದಿ ಇಂಧನ ಚಾಲಿತ ವಾಹನಗಳಿಗೆ ಗುಡ್‌ಬೈ ಹೇಳುತ್ತಿದ್ದಾರೆ. ಬೈಕು, ಕಾರು, ಆಟೋ ಎಲ್ಲವೂ ಎಲೆಕ್ಟ್ರಿಕ್ ಮಯ ಆಗುತ್ತಿವೆ. ಇದೇ ಹೊತ್ತಲ್ಲೇ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ಕಾರು ಹೊಸ ವರ್ಸನ್‌ನಲ್ಲಿ ಬಿಡುಗಡೆ ಆಗಲಿದ್ದು, ಕಾರು ಪ್ರಿಯರನ್ನ ಎಕ್ಸೈಟಿಂಗ್ ಮಾಡ್ತಿದೆ.
ವಿಶೇಷತೆ ಏನು?
ನೀವು ಏನಾದರೂ ಎಲೆಕ್ಟ್ರಿಕ್ ಕಾರನ್ನ ಖರೀದಿಸಬೇಕು ಎಂಬ ಕನಸು ಕಾಣ್ತಿದ್ದರೆ.. ಸ್ವಲ್ಪದಿನ ಕಾದರೆ, ಎಂಜಿ ವಿಂಡ್ಸರ್ ಹೊಸ ಅವತಾರದಲ್ಲಿ ಬರುತ್ತಿದೆ. ಕಂಪನಿ ತನ್ನ ಹೊಸ ಕಾರಿನ ಲುಕ್ ಅನ್ನು ಟೀಸರ್ ಮೂಲಕ ಬಿಡುಗಡೆ ಮಾಡಿದೆ. ಇನ್ನು ಕಂಪನಿ ತನ್ನ ಹೊಸ ಮಾಡೆಲ್ ಕಾರಿನಲ್ಲಿ ಹಲವು ಬದಲಾವಣೆಗಳನ್ನ ಮಾಡಿದೆ.
80 ಸಾವಿರ ಕಾರುಗಳು ಮಾರಾಟ
ವಿಂಡ್ಸನ್ ಕಾರುಗಳು ಭಾರತೀಯ ಮಾರುಕಟ್ಟೆಗೆ ಎಂಟ್ರಿಯಾಗಿ ಎರಡು ವರ್ಷ ಆಗಿದೆ. ಈ ಎರಡು ವರ್ಷಗಳಲ್ಲಿ 80 ಸಾವಿರ ಕಾರುಗಳನ್ನ ಮಾರಾಟ ಮಾಡಿ ಸಂಚಲನ ಸೃಷ್ಟಿಸಿದೆ. ಇದೀಗ ಹೊಸ ಅವತಾರದಲ್ಲಿ ಪ್ರೀಮಿಯಂ ವರ್ಷನ್ ಕಾರನ್ನು ಬಿಡುಗಡೆ ಮಾಡಲು ಎಂಜಿ ಮೋಟಾರ್ಸ್ ಪ್ಲಾನ್ ಮಾಡಿದೆ.
ವಿಂಡರ್ಸ್ ಇವಿ ಇಂಡಲ್ಟ್ ಸಿರೀಸ್
- ತನ್ನ ಹಳೆಯ ಮಾದರಿಯ ಕಾರುಗಳಿಂಗಿತ ಡಿಫ್ರೆಂಟ್ ಡಿಸೈನ್
- ಪ್ರಯಾಣಿಕರಿಗೆ ಹೊಸ ರೂಫ್ ಸ್ಕ್ರೀನ್ ಅಳವಡಿಸಲಿದೆ
- ವಿಶೇಷ ಆವೃತ್ತಿಯ ಶ್ಯಾಡೋ ಗೋಲ್ಡ್ ಬಣ್ಣದಲ್ಲಿ ಸಿಗಲಿದೆ
- 18 ಇಂಚಿನ ಕಪ್ಪು ಮಿಶ್ರಲೋಹದ ಚಕ್ರ
- ಹಿಂಭಾಗದ ಕ್ವಾರ್ಟರ್ ಗ್ಲಾಸ್‌ಗೆ ಇಂಡಲ್ಜ್ ಬ್ಯಾಡ್ಜ್
- ಎಲ್‌ಇಡಿ ಲೈಟಿಂಗ್, ಬಾಡಿ ಕ್ಲಾಡಿಂಗ್ ಹೊಂದಿದೆ
- ಸೀಟುಗಳು ಹೊಸ ಅರ್ಬನ್ ಟ್ಯಾನ್ ಮತ್ತು ಕಪ್ಪು ಬಣ್ಣ
ಬ್ಯಾಟರಿ ಬಳಕೆ ಹೇಗೆ?
- ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಒಳಗೊಂಡಿದೆ
- ವಿಂಡ್ಸರ್ ಎರಡು ಬ್ಯಾಟರಿ ಪ್ಯಾಕ್ ಹೊಂದಿದೆ
- 38kWh ಮತ್ತು 52.9kWh ಬ್ಯಾಟರಿ
- ಸಣ್ಣ ಬ್ಯಾಟರಿ ಪ್ಯಾಕ್ 332 ಕಿಲೋಮೀಟರ್ ಮೈಲೇಜ್
- ದೊಡ್ಡ ಬ್ಯಾಟರಿ ಪ್ಯಾಕ್ 449 ಕಿಲೋಮೀಟರ್ ಮೈಲೇಜ್
- 136hp ಪವರ್ ಮತ್ತು 200Nm ಟಾರ್ಕ್ ಅನ್ನು ಉತ್ಪಾದನೆ
ಬೆಲೆ ಎಷ್ಟಾಗುತ್ತದೆ?
ಕಂಪನಿ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ಘೋಷಿಸಿಕೊಂಡಿದೆ. ಆದರೆ ಅದರ ಬೆಲೆ ಎಷ್ಟು ಅನ್ನೋದ್ರ ಬಗ್ಗೆ ಯಾವುದೇ ಮಾಹಿತಿಯನ್ನ ನೀಡಿಲ್ಲ. ಒಂದು ಅಂದಾಜಿನ ಪ್ರಕಾರ,14.70 ಲಕ್ಷದಿಂದ 19 ಲಕ್ಷದವರೆಗೆ ಅದರ ಬೆಲೆ ಇರಲಿದೆ ಹೇಳಲಾಗುತ್ತಿದೆ.

