ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಹುಚ್ಚಿನಿಂದ ಒಡಿಶಾದಲ್ಲಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಒಬ್ಬ ಯುವಕ ನಾಗರಹಾವಿನ ವಿಡಿಯೋ ಮಾಡಲು ಹೋಗಿ ಸಾವನ್ನಪ್ಪಿದ್ದಾನೆ.
ನವದೆಹಲಿ (ಅಕ್ಟೋಬರ್ 10): ಸೋಶಿಯಲ್ ಮೀಡಿಯಾ ಹುಚ್ಚು! ರಾತ್ರೋರಾತ್ರಿ ಫೇಮಸ್ ಆಗಬೇಕು ಅನ್ನೋ ಆಸೆ. ಇದೇ ಹುಚ್ಚಿನಿಂದ ಸಾವಿರಾರು ಯುವಕರು ಪ್ರಾಣ ಕಳೆದುಕೊಂಡ ವರದಿ ನಮ್ಮ ಮುಂದೆ. ಇದೀಗ ಒಬ್ಬ ಪುಣ್ಯಾತ್ಮ ನಾಗರ ಹಾವಿನ ಮುಂದೆ ಹೀರೋ ಆಗಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.
ಘಟನೆ ನಡೆದಿರೋದು ಒಡಿಶಾದ ಪುರಿ ಜಿಲ್ಲೆಯ ಕಾಂತಾಪುರ ಗ್ರಾಮದಲ್ಲಿ. ಹೆಸರು ತಪನ್ ಕುಮಾರ್. ಸೋಶಿಯಲ್ ಮೀಡಿಯಾಗಾಗಿ ರೀಲ್ (Social Media Reel) ಮಾಡುತ್ತಿದ್ದ. ಅಂತೆಯೇ ತಜ್ಞರು ವಿಷಪೂರಿತ ಹಾವುಗಳನ್ನ ಹಿಡಿಯುವ ವೇಳೆ ಅಲ್ಲಿಗೆ ಹೋಗಿ ವಿಡಿಯೋ ಮಾಡಿ ಅದನ್ನು ಇನ್‌ಸ್ಟಾಗ್ರಾಮನಲ್ಲಿ (Instagram) ಪೋಸ್ಟ್ ಮಾಡುತ್ತಿದ್ದ. ಆದರೆ ಒಂದು ನಾಗರಹಾವು (Cobra) ಆತನ ಹಲವು ಬಾರಿ ಕಚ್ಚಿದೆ.
ಸ್ನೇಕ್ ಮಾಸ್ಟರ್ ಶುಭೇಂದು ಮಲಿಕ್ ಹೇಳುವ ಪ್ರಕಾರ.. ಶುಕ್ರವಾರ ಮಧ್ಯಾಹ್ನ ಹಾವು ಹಿಡಿಯುವ ವೇಳೆ ಅನಾಹುತ ತಪ್ಪಿದೆ. ಇನ್‌ಸ್ಟಾಗ್ರಾಮ್‌ಗಾಗಿ ವಿಡಿಯೋ ಮಾಡುತ್ತಿದ್ದಾಗ ಆ ಹಾವು ಆತನ ಬೆರಳು ಮತ್ತು ಮೊಣಕೈ ಹಾಗೂ ಕೈ ಮೇಲ್ಭಾಗ ಕಚ್ಚಿದೆ. ದೇಹ ವಿಷ ಹೊಕ್ಕಿದ ಬೆನ್ನಲ್ಲೇ ಆರೋಗ್ಯ ಹದಗೆಟ್ಟಿದೆ. ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರು. ಸ್ಥಳೀಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಪುರಿಗೆ ಕುಳುಹಿಸಿದರು. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಆತನ ಪ್ರಾಣ ಹಾರಿ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಧಾನ್ ಹಾವುಗಳನ್ನ ಹಿಡಿಯೋದನ್ನು ಕಲಿತಿದ್ದ. ಆದರೆ ಈ ಬಾರಿ ಅದು ಅವರ ಪ್ರಾಣಕ್ಕೆ ಕಂಠಕ ತಂದಿದೆ.
ಮತ್ತೊಂದು ದುರಂತ ನಡೆದಿದ್ದು ಹೇಗೆ?
ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಮತ್ತೊಬ್ಬ ಯುವಕ ಪ್ರಾಣ ಕಳೆದುಕೊಡಿದ್ದಾನೆ. ಇದು ಕೂಡ ಓಡಿಶಾದಲ್ಲೇ ನಡೆದಿದೆ. ಬೌಧ್ ಜಿಲ್ಲೆಯ ಖುರ್ದಾ-ಬೋಲಂಗೀರ್ ರೈಲು ಮಾರ್ಗದಲ್ಲಿ ನಡೆದಿದೆ. ಶುಕ್ರವಾರ ಸಂಜೆ ತಾಲುಪಲಿ ಗ್ರಾಮದ ನಿವಾಸಿ ರೈಲು ಹಳಿಗಳ ಮೇಲೆ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಅವನಿಗೆ ಬಂದು ಡಿಕ್ಕಿ ಹೊಡೆದಿದೆ. ಈ ಯುವಕ ಅಪಾಯಕಾರಿ ವಿಡಿಯೋ ಮಾಡುತ್ತಿದ್ದ. ರೈಲು ಬರುತ್ತಿರೋದನ್ನೇ ಗಮನಿಸಿ ರೈಲು ಹಳಿಗಳ ಮೇಲೆ ಮಲಗಿ ಚಿತ್ರೀಕರಣ ಮಾಡುತ್ತಿದ್ದಾಗ ಟ್ರೈನ್ ಹರಿದು ಅನಾಹುತ ಸಂಭವಿಸಿದೆ.
ಲೈಕ್ ವ್ಯೂವ್ಸ್‌ಗಾಗಿ ಪ್ರಾಣವನ್ನೇ ಕಳೆದುಕೊಂಡರು. ಒಡಿಶಾದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳ ತುಂಬಾ ಹೃದಯ ವಿದ್ರಾವಕ ಆಗಿವೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಹೋಗಿ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. 10 ಸೆಕೆಂಡ್ ವಿಡಿಯೋಗಾಗಿ ಇಂಥ ಅಪಾಯಕಾರಿ ರೀಲ್ಸ್‌ಗಳು ಒಳ್ಳೆದಲ್ಲ. ಓಡಿಶಾದಲ್ಲಿ ನಡೆದ ಪ್ರಕರಣಗಳು ಇಂದು ಆತಂಕಕ್ಕೆ ಕಾರಣವಾಗಿದೆ. ಯುವಕರ ರೀಲ್ಸ್ ಹುಚ್ಚು ಇಲ್ಲಿಗೆ ನಿಲ್ಲಬೇಕು. ತಾನೂ ಕೂಡ ಸೋಶಿಯಲ್ ಮೀಡಿಯಾ ಸ್ಟಾರ್ ಆಗಬೇಕು ಸಾವಿರಾರು ಮಂದಿ ನನ್ನನ್ನ ಮೆಚ್ಚಿಕೊಳ್ಳಬೇಕು. ರಾತ್ರೋರಾತ್ರಿ ಫೇಮಸ್ ಆಗಬೇಕು ಎಂದು ಕನಸು ಕಾಣೋದು ಸಹಜ. ಆದರೆ ಇಂಥ ಅಪಾಯಕಾರಿ ಹುಚ್ಚಿಗೆ ಇಳಿದರೆ, ನಿಮ್ಮ ಕುಟುಂಬ ನಿಮ್ಮನ್ನ ನಂಬಿ ಇರುತ್ತದೆ. ಏನಾದರೂ ಹೆಚ್ಚು ಕಡಿಮೆ ಆದರೆ ಜೀವನ ಪರ್ಯಂತ ಕುಟುಂಬ ಕಣ್ಣೀರಲ್ಲಿ ಮುಳುಗಿರುತ್ತದೆ. ಹಾಗಾಗಿ ಹುಚ್ಚುಹುಚ್ಚಾಗಿ ರೀಲ್ಸ್ ಮಾಡೋದನ್ನ ನಿಲ್ಲಿಸಬೇಕಾಗಿದೆ.


