- Home
- Automobile
- Car News
- ಕೇವಲ ₹1 ಲಕ್ಷಕ್ಕೆ ಸ್ವಂತ ಕಾರು; ತಿಂಗಳಿಗೆ ₹6 ಸಾವಿರ ಪಾವತಿಸಿ ಮಾರುತಿ ಆಲ್ಟೋ ಕಾರಿನ ಮಾಲೀಕರಾಗಿ!
ಕೇವಲ ₹1 ಲಕ್ಷಕ್ಕೆ ಸ್ವಂತ ಕಾರು; ತಿಂಗಳಿಗೆ ₹6 ಸಾವಿರ ಪಾವತಿಸಿ ಮಾರುತಿ ಆಲ್ಟೋ ಕಾರಿನ ಮಾಲೀಕರಾಗಿ!
ಕಾರು ಕೊಳ್ಳೋದು ಅಂದ್ರೆ ಒಂದು ದೊಡ್ಡ ಕನಸು. ದುಡ್ಡಿದ್ದವ್ರಿಗೆ ಮಾತ್ರ ಕಾರು ಅಂತಿದ್ದ ಕಾಲ ಈಗಿಲ್ಲ. ಮಧ್ಯಮ ವರ್ಗದವರೂ ಕಾರು ಕೊಳ್ಳೋಕೆ ಶುರು ಮಾಡಿದ್ದಾರೆ. ತಿಂಗಳಿಗೆ ಕೇವಲ 6 ಸಾವಿರ ಕಟ್ಟಿ ಹೊಸ ಕಾರು ನಿಮ್ಮದಾಗಿಸಿಕೊಳ್ಳಿ. ಈಗ ಒಂದು ಸೂಪರ್ ಕಾರಿನ ಬಗ್ಗೆ ತಿಳ್ಕೊಳ್ಳೋಣ.

ಕಡಿಮೆ ಬೆಲೆಗೆ ಕಾರು ಬೇಕಂದ್ರೆ ಮಾರುತಿ ಆಲ್ಟೊ K10 ಬೆಸ್ಟ್. 4 ಲಕ್ಷದಿಂದ ಶುರುವಾಗೋ ಈ ಕಾರನ್ನ ತಿಂಗಳಿಗೆ ಕೇವಲ 6 ಸಾವಿರ ಕಟ್ಟಿ ನಿಮ್ಮದಾಗಿಸಿಕೊಳ್ಳಬಹುದು. ಕಾರಿನ ಫೀಚರ್ಸ್ ಏನೇನಿದೆ ನೋಡಿ..
ಈ ಕಾರಿನಲ್ಲಿ 998 cc, 3-ಸಿಲಿಂಡರ್ K10C ಪೆಟ್ರೋಲ್ ಇಂಜಿನ್ ಇದೆ. 66 bhp @ 6,000 rpm ಪವರ್ ಇಂಜಿನ್‌ದು. 89 Nm @ 3,500 rpm. 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT (ಆಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್) ಇದೆ. ಮೈಲೇಜ್ ಪೆಟ್ರೋಲ್‌ಗೆ 24.39 kmpl, CNGಗೆ 33.85 km/kg.
ಈ ಕಾರಿನಲ್ಲಿ ಡ್ರೈವರ್ ಮತ್ತು ಪ್ಯಾಸೆಂಜರ್‌ಗಳಿಗೆ ಏರ್‌ಬ್ಯಾಗ್ಸ್ ಇವೆ. ಕೆಲವು ವೇರಿಯಂಟ್‌ಗಳಲ್ಲಿ 6 ಏರ್‌ಬ್ಯಾಗ್ಸ್ ಇದೆ. ರಿವರ್ಸ್ ಪಾರ್ಕಿಂಗ್ ಸೆನ್ಸರ್ಸ್, 7-ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್ ಪ್ಲೇ ಇದೆ. ಎಲ್ಲಾ ವೇರಿಯಂಟ್‌ಗಳಲ್ಲೂ ಪವರ್ ಸ್ಟೀರಿಂಗ್ ಜೊತೆಗೆ AC ಇದೆ.
ಈ ಕಾರು ಮೆಟಾಲಿಕ್ ಗ್ರೇ, ರೆಡ್, ಗೋಲ್ಡ್, ಬ್ಲಾಕ್, ಸಿಲ್ವರ್, ವೈಟ್ ಕಲರ್‌ಗಳಲ್ಲಿ ಸಿಗುತ್ತೆ. ಬೆಲೆ: ಆಲ್ಟೊ K10 Std - 4 ಲಕ್ಷ, LXi - 4.80 ಲಕ್ಷ, VXi - 5.10 ಲಕ್ಷ, VXi (O) - 5.50 ಲಕ್ಷ, VXi+ - 5.80 ಲಕ್ಷ.
ಒಂದು ಲಕ್ಷ ಡೌನ್ ಪೇಮೆಂಟ್
ಒಂದು ಲಕ್ಷ ಡೌನ್ ಪೇಮೆಂಟ್ ಕೊಟ್ಟು ಈ ಕಾರನ್ನ ನಿಮ್ಮದಾಗಿಸಿಕೊಳ್ಳಿ. ಉಳಿದ ಹಣಕ್ಕೆ 9% ಬಡ್ಡಿದರದಲ್ಲಿ 4 ಲಕ್ಷದವರೆಗೆ ಲೋನ್ ಸಿಗುತ್ತೆ. 7 ವರ್ಷಗಳ EMI ಆಯ್ಕೆ ಮಾಡಿಕೊಂಡ್ರೆ ತಿಂಗಳಿಗೆ 6,553 ರೂ. ಕಟ್ಟಬೇಕು. ತಿಂಗಳಿಗೆ 6 ಸಾವಿರ ಕಟ್ಟಿ ಕಾರಿನ ಕನಸು ನನಸು ಮಾಡಿಕೊಳ್ಳಿ.