ಮಹೀಂದ್ರ ಸ್ಕಾರ್ಪಿಯೋ ಎನ್ ಕಾರು ಖರೀದಿಸುವ ಗ್ರಾಹರಿಗೆ ಅತ್ಯಾಧುನಿಕ ಫೀಚರ್ ಸೌಲಭ್ಯ ಸಿಗಲಿದೆ. ಕಾರು ಪ್ರಿಯರಿಗೆ ಬಂಪರ್ ಕೊಡುಗೆ ನೀಡಲಾಗಿದೆ. ಏನಿದು ಮಹೀಂದ್ರ ಕಂಪನಿಯ ಹೊಸ Scorpio-N ಅಪ್‌ಡೇಟ್?

ಮುಂಬೈ (ಆ.06) ಭಾರತದಲ್ಲಿ ಅತ್ಯುತ್ತಮ ಹಾಗೂ ಕೈಗೆಟುಕುವ ಕಾರುಗಳ ಪಟ್ಟಿಯಲ್ಲಿ ಮಹೀಂದ್ರ ಸ್ಕಾರ್ಪಿಯೋ ಸ್ಥಾನ ಪಡೆದಿದೆ. ಮಹೀಂದ್ರ ಹೊಸ ಶೈಲಿ, ಪವರ್‌ಫುಲ್ ಎಂಜಿನ್, ಆಕರ್ಷಕ ವಿನ್ಯಾಸಗಳೊಂದಿಗೆ ಕಾರು ಬಿಡುಗಡೆ ಮಾಡುತ್ತಿದೆ. ಈ ಮೂಲಕ ಭಾರತದಲ್ಲಿ ಹಾಗೂ ವಿದೇಶಗಳ ಕಾರು ಮಾರುಕಟ್ಟೆ ವಿಸ್ತರಿಸುತ್ತಿದೆ. ಮಹೀಂದ್ರ ಕಾರುಗಳ ಪೈಕಿ ಮಹೀಂದ್ರ ಸ್ಕಾರ್ಪಿಯೋ ಎನ್ ಇದೀಗ ಮಹತ್ವದ ಅಪ್‌ಡೇಟ್ ಪಡೆದುಕೊಂಡಿದೆ. ಎಸ್‌ಯುವಿ ಕಾರುಗಳ ಮೂಲಕ ದೇಶದಲ್ಲಿ ಸಂಚಲನ ಸೃಷ್ಟಿಸಿರುವ ಮಹೀಂದ್ರ ತನ್ನ ಜನಪ್ರಿಯ ಸ್ಕಾರ್ಪಿಯೊ-ಎನ್ ಮಾದರಿಗೆ (Scorpio-N) ಹಲವು ಹೊಸ ಅತ್ಯಾಧುನಿಕ ಸೌಲಭ್ಯಗಳನ್ನು ಸೇರ್ಪಡೆಗೊಳಿಸಿದೆ.

ಹೊಸ ವೈಶಿಷ್ಟ್ಯಗಳು

  • ದೊಡ್ಡ ಗಾತ್ರದ ಪ್ಯಾನರೊಮಿಕ್‌ ಸ್ಕೈರೂಫ್‌: ಎಸ್‌ಯುವಿ ಒಳಭಾಗದಲ್ಲಿ ಹೆಚ್ಚಿನ ವಿಶಾಲತೆ ಮತ್ತು ಮುಕ್ತತೆಯ ಅನುಭವ ನೀಡಲಿದೆ.
  • 540 ಡಿಗ್ರಿ ಸರೌಂಡ್ ವ್ಯೂ ಸಿಸ್ಟಮ್ ಹಾಗೂ ಬ್ಲೈಂಡ್ ವ್ಯೂ ಮಾನಿಟರ್ : ವಾಹನದ ಸುತ್ತಮುತ್ತಲಿನ ಹಾಗೂ ಚಾಲಕನಿಗೆ ಕಾಣದ ಜಾಗದ ದೃಶ್ಯಗಳು ಸ್ಕ್ರೀನ್‌ನಲ್ಲಿ ಕಾಣಿಸಲಿದೆ. ಸುರಕ್ಷಿತ ಮತ್ತು ಸುಲಭ ಚಾಲನೆಗೆ ನೆರವಾಗುವ ಅತ್ಯಾಧುನಿಕ ಕ್ಯಾಮೆರಾ ತಂತ್ರಜ್ಞಾನ ನೀಡಲಾಗಿದೆ.
  • ಹೊಸ ಆರ್18 ಡೈಮಂಡ್ ಕಟ್ ಮಿಶ್ರ ಲೋಹದ ಚಕ್ರಗಳು – ವಾಹನದ ದಿಟ್ಟ ಮತ್ತು ಆಕರ್ಷಕ ವಿನ್ಯಾಸಕ್ಕೆ ಮತ್ತಷ್ಟು ಮೆರುಗು
  • 31.24 ಸೆಂ.ಮೀ. ಫ್ಲೋಟಿಂಗ್ ಎಚ್‌ಡಿ ಟಚ್‌ಸ್ಕ್ರೀನ್ ಇನ್ಫೊಟೇನ್‌ಮೆಂಟ್ ಸಿಸ್ಟಮ್ ಹಾಗೂ ಆರು ಫಿಸಿಕಲ್ ಬಟನ್‌ಗಳನ್ನು ಒಳಗೊಂಡ ನವೀಕರಿಸಿದ ಡ್ಯಾಷ್‌ಬೋರ್ಡ್‌
  • 26.03 ಸೆಂ.ಮೀ. ಎಚ್‌ಡಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಪೂರ್ಣ ಪರದೆ ದಿಕ್ಸೂಚಿ ಹಾಗೂ ಸಾಮಾನ್ಯ, ಮಾಹಿತಿದಾಯಕ ಮತ್ತು ಕನಿಷ್ಠ- ಎಂಬ ಮೂರು ಡಿಸ್‌ಪ್ಲೇ ಆಯ್ಕೆಗಳು.
  • ಮುಂಭಾಗದಲ್ಲಿ ಕುಳಿತುಕೊಳ್ಳುವವರಿಗಾಗಿ 65 ವಾಟ್ ಯುಎಸ್‌ಬಿ ಟೈಪ್-ಸಿ ಫಾಸ್ಟ್ ಚಾರ್ಜಿಂಗ್ ಪೋರ್ಟ್.
  • ಅಡ್ವೆಂಚರ್ ಸ್ಟಾಟಿಸ್ಟಿಕ್ಸ್ – ಎಂಜಿನ್ ಕಾರ್ಯಕ್ಷಮತೆ, ರೋಲ್ ಮತ್ತು ಪಿಚ್, ಕಾಂಪಾಸ್, ಅಲ್ಟಿಮೀಟರ್, ಜಿ-ಫೋರ್ಸ್ ಸೇರಿದಂತೆ ವಾಹನದ ಪ್ರಮುಖ ಮಾಹಿತಿಯನ್ನು ತೋರಿಸುವ ವ್ಯವಸ್ಥೆ.

3.80 ಲಕ್ಷಕ್ಕೂ ಹೆಚ್ಚು ಮಾರಾಟ ದಾಖಲೆ

2022ರಲ್ಲಿ ಮಹೀಂದ್ರ ಸ್ಕಾರ್ಪಿಯೋ ಎನ್ ಕಾರು ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಸಾರ್ಪಿಯೋ ಕಾರಿನ ಹೊಸ ಅವತಾರ ಹಾಗೂ ಹೊಸ ಎನ್ ವರ್ಶನ್ ಕಾರು ಇದಾಗಿತ್ತು. ಅತ್ಯುತ್ತಮ ಕಾರುಗಳಲ್ಲಿ ಒಂದಾಗಿರುವ ಮಹೀಂದ್ರ ಸ್ಕಾರ್ಪಿಯೋ ಎನ್ ಬರೋಬ್ಬರಿ 3.80 ಲಕ್ಷ ಗ್ರಾಹಕರ ತಲುಪಿದೆ.

ಮಹೀಂದ್ರ ಸ್ಕಾರಿಪಿಯೋ ಎನ್ ಕಾರಿನ ಬೆಲೆ 13.69 ಲಕ್ಷ ರೂಪಾಯಿಯಿಂದ ಆರಂಭಗೊಂಡು, 25.49 ಲಕ್ಷ ರೂಪಾಯಿವರಿಗಿದೆ. ಇದು ಎಕ್ಸ್ ಶೋ ರೂಂ ಬೆಲೆ ಆಗಿವೆ. ವಿಶೇಷ ಅಂದರೆ ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್‌ನಲ್ಲಿ ಸ್ಕಾರ್ಪಿಯೋ ಎನ್ ಕಾರು ಲಭ್ಯವಿದೆ.

2024ರಲ್ಲಿ ಜೆಡ್‌8 ಸೆಲೆಕ್ಟ್‌, 2025ರಲ್ಲಿ ಜೆಡ್‌8ಟಿ ಮಾದರಿಗಳನ್ನು ಪರಿಚಯಿಸಿದ ಮಹೀಂದ್ರಾ, ನಂತರ ಲೆವೆಲ್-2 ಚಾಲಕನಿಗೆ ನೆರವಾಗುವ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆ (ಎಡಿಎಎಸ್‌) ತಂತ್ರಜ್ಞಾನವನ್ನು ಸೇರ್ಪಡೆ ಮಾಡುವ ಮೂಲಕ ವಾಹನವನ್ನು ಮತ್ತಷ್ಟು ಆಧುನಿಕಗೊಳಿಸಿದೆ. ವಿನ್ಯಾಸ, ಶಕ್ತಿಶಾಲಿ ಕಾರ್ಯಕ್ಷಮತೆ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಶ್ರೇಷ್ಠ ಗುಣಮಟ್ಟದ ಚಲನಶೀಲತೆ ನೆರವಿನಿಂದ ಸ್ಕಾರ್ಪಿಯೊ-ಎನ್ ತನ್ನ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ. ಈ ಎಸ್‌ಯುವಿಯಲ್ಲಿ ಜಿ20 ಟಿಜಿಡಿಐ ಎಂಸ್ಟಾಲಿನ್‌, ಪೆಟ್ರೋಲ್ ಹಾಗೂ ಡಿ22 ಎಂಹಾಕ್‌ ಡೀಸೆಲ್ ಎಂಜಿನ್‌ಗಳ ಆಯ್ಕೆಗಳಿದ್ದು, ರಿಯರ್-ವೀಲ್ ಡ್ರೈವ್ (RWD) ಮತ್ತು ಫೋರ್-ವೀಲ್ ಡ್ರೈವ್ (4WD) ಮಾದರಿಗಳಲ್ಲೂ ಲಭ್ಯವಿದೆ.

ಇದಲ್ಲದೆ ಲೆವೆಲ್-2 ಚಾಲಕನಿಗೆ ನೆರವಾಗುವ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆ (ಎಡಿಎಎಸ್‌), 12-ಸ್ಪೀಕರ್ ಸೋನಿ ಆಡಿಯೊ ಸಿಸ್ಟಮ್, ವೆಂಟಿಲೇಟೆಡ್ ಸೀಟ್‌ಗಳು, ಸ್ವಯಂಚಾಲಿತವಾಗಿ ಮಸುಕಾಗುವ ಹಿನ್ನೋಟದ ಕನ್ನಡಿ (ಆಟೊ ಡಿಮ್ಮಿಂಗ್‌ ಐಆರ್‌ವಿಎಂ), ಚಾಲಕನ ಸೀಟನ್ನು ಬಟನ್‌ ಮೂಲಕವೇ ಹೊಂದಿಸಬಹುದಾದ 6-ವೇ ಪವರ್ಡ್ ಡ್ರೈವರ್ ಸೀಟ್, ಚರ್ಮದ ಸೀಟ್‌ಗಳು ಹಾಗೂ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸೇರಿದಂತೆ ಹಲವಾರು ಹೆಚ್ಚುವರಿ ಸೌಲಭ್ಯಗಳನ್ನು ಒಳಗೊಂಡಿದೆ.