ಕಪ್ಪು, ಬಿಳಿ ಅಥವಾ ಕೆಂಪು; ಯಾವ ಬಣ್ಣದ ಕಾರು ನಿಮಗೆ ಲಾಭದಾಯಕ?
ಕಪ್ಪು, ಬಿಳಿ ಅಥವಾ ಕೆಂಪು; ಯಾವ ಬಣ್ಣದ ಕಾರು ನಿಮಗೆ ಲಾಭದಾಯಕ? ಕಾರಿನ ಬಣ್ಣದ ಆಯ್ಕೆ ಕೇವಲ ಸೌಂದರ್ಯಕ್ಕಾಗಿ ಅಲ್ಲ, ಇದು ನಿರ್ವಹಣೆ, ಮರುಮಾರಾಟ ಮೌಲ್ಯದ ಮೇಲೂ ಪರಿಣಾಮ ಬೀರುತ್ತದೆ.

ಕಾರು ಖರೀದಿ ಹಾಗೂ ಬಣ್ಣ
ಹೊಸ ಕಾರು ಖರೀದಿ ವೇಳೆ ಬಣ್ಣ ಪ್ರಮುಖ ವಿಷಯ. ಸಾಮಾನ್ಯವಾಗಿ ಖರೀದಿಸುವವರಿಗೆ ಯಾವ ಬಣ್ಣ ಯಶಸ್ಸು ತಂದುಕೊಡುತ್ತೆ, ನಮ್ಮ ನಕ್ಷತ್ರ,ರಾಶಿಗೆ ಯಾವ ಬಣ್ಣ ಸೂಕ್ತ ಎಂದು ವಿಚಾರಿಸಿ ಕಾರು ಖರೀದಿಸುವವರ ಸಂಖ್ಯೆ ಹೆಚ್ಚು. ಇದರ ಜೊತೆಗೆ ಮತ್ತೆ ಕೆಲವು ವಿಚಾರಗಳನ್ನು ಗಮನದಲ್ಲಿಡಬೇಕು.
ಕಪ್ಪು vs ಬಿಳಿ vs ಕೆಂಪು: ಕಾರಿನ ಬಣ್ಣ ಆಯ್ಕೆಯಲ್ಲಿ ಈ ವಿಷಯಗಳನ್ನು ಮರೆಯಬೇಡಿ!
ಹೊಸ ಕಾರು ಖರೀದಿಸುವಾಗ ಬಣ್ಣದ ಆಯ್ಕೆ ಬಹಳ ಮುಖ್ಯ. ಇದು ಕೇವಲ ಸೌಂದರ್ಯವಲ್ಲ, ನಿರ್ವಹಣೆ, ಕಾರಿನೊಳಗಿನ ತಾಪಮಾನ ಮತ್ತು ಮರುಮಾರಾಟ ಮೌಲ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಖರೀದಿ ವೇಳೆ ಬಣ್ಣದ ಕಡೆಗೂ ಗಮನ ನೀಡಿದರೆ ಮುಂದೆ ಆರ್ಥಿಕವಾಗಿ, ಅಥವಾ ಆರಾಮಾದಾಯಕ ಪ್ರಯಾಣಕ್ಕೂ ನೆರವಾಗಲಿದೆ.
ಕಪ್ಪು ಬಣ್ಣ: ರಾಯಲ್ ಲುಕ್, ನಿರ್ವಹಣೆಯ ಸವಾಲುಗಳೇನು?
ಕಪ್ಪು ಬಣ್ಣದ ಕಾರುಗಳು ಪ್ರೀಮಿಯಂ ಲುಕ್ ನೀಡುತ್ತವೆ. ಆದರೆ, ಧೂಳು ಮತ್ತು ಗೀರುಗಳು ಬೇಗನೆ ಕಾಣಿಸುತ್ತವೆ. ಬೇಸಿಗೆಯಲ್ಲಿ ಕಾರು ಬೇಗನೆ ಬಿಸಿಯಾಗುತ್ತದೆ. ಬೇಸಿಗೆಯಲ್ಲಿ ಎಸಿ ಮೋಡ್ 2 ಅಥವಾ ಮೂರಲ್ಲೇ ಇಡಬೇಕು. ಇದರಿಂದ ಹೆಚ್ಚು ಇಂಧನ ಖರ್ಚಾಗಲಿದೆ. ಆದರೆ ಆಗಾಗ್ಗೆ ಸ್ವಚ್ಛಗೊಳಿಸುವವರಿಗೆ ಇದು ಉತ್ತಮ ಆಯ್ಕೆ.
ಬಿಳಿ ಬಣ್ಣ: ಪ್ರಶಾಂತತೆ ಮತ್ತು ಮರುಮಾರಾಟ ಮೌಲ್ಯ
ಬಿಳಿ ಬಣ್ಣದ ಕಾರುಗಳು ಶಾಖವನ್ನು ಹಿಮ್ಮೆಟ್ಟಿಸುತ್ತವೆ, ಇದರಿಂದ ಕ್ಯಾಬಿನ್ ತಂಪಾಗಿರುತ್ತದೆ. ನಿರ್ವಹಣೆ ಸುಲಭ ಮತ್ತು ಮರುಮಾರಾಟ ಮೌಲ್ಯ ಹೆಚ್ಚು. ಪ್ರಾಯೋಗಿಕವಾಗಿ ಇದು ಭಾರತಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. ಅಫಶೀಯಲ್ ಕಲರ್ ಎಂದೇ ಜನಪ್ರಿಯವಾಗಿದೆ. ಬಹುತೇಕರು ಬಿಳಿ ಬಣ್ಣದ ಕಾರನ್ನೇ ಆಯ್ಕೆ ಮಾಡುತ್ತಾರೆ.
ಕೆಂಪು ಬಣ್ಣ: ಸ್ಪೋರ್ಟಿ ಲುಕ್ ಮತ್ತು ಗಮನ ಸೆಳೆಯುವಿಕೆ
ಕೆಂಪು ಬಣ್ಣದ ಕಾರುಗಳು ಸ್ಪೋರ್ಟಿ ಲುಕ್ ನೀಡಿ ಎಲ್ಲರ ಗಮನ ಸೆಳೆಯುತ್ತವೆ. ಆದರೆ, ಮರುಮಾರಾಟ ಮೌಲ್ಯ ಕಡಿಮೆ ಇರಬಹುದು ಮತ್ತು ಬಿಸಿಲಿಗೆ ಬಣ್ಣ ಬೇಗನೆ ಫೇಡ್ ಆಗುವ ಸಾಧ್ಯತೆಯಿದೆ. ಬಣ್ಣ ಫೇಡ್ ಆದಂತೆ ಕಾರಿನ ಮೌಲ್ಯ ಕಡಿಮೆಯಾಗುತ್ತದೆ. ಬಹುತೇಕರು ಹೆಚ್ಚು ಸ್ಪೋರ್ಟೀವ್ ಆಗಿ ಕಾಣಲು ಕೆಂಪು ಬಣ್ಣದ ಕಾರು ಖರೀದಿಸುತ್ತಾರೆ. ಇದು ವೈಯಕ್ತಿಕ ಆಯ್ಕೆಯಾಗಿದೆ.
ಯಾವ ಬಣ್ಣವನ್ನು ಆಯ್ಕೆ ಮಾಡಬೇಕು?
ಪ್ರೀಮಿಯಂ ಲುಕ್‌ಗೆ ಕಪ್ಪು, ಕಡಿಮೆ ನಿರ್ವಹಣೆ ಮತ್ತು ಉತ್ತಮ ಮರುಮಾರಾಟ ಮೌಲ್ಯಕ್ಕೆ ಬಿಳಿ, ಹಾಗೂ ವಿಶೇಷವಾಗಿ ಕಾಣಲು ಕೆಂಪು ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ನಿಮ್ಮ ವೈಯಕ್ತಿಕ ಇಷ್ಟವನ್ನು ಅವಲಂಬಿಸಿದೆ. ಇದರ ಜೊತೆಗೆ ರಾಶಿಗೆ ಅನುಗುಣವಾಗಿ,ತಮ್ಮ ತಮ್ಮ ಯಶಸ್ಸಿಗೆ ಅನುಗುಣವಾಗಿ ಕಾರು ಬಣ್ಣ ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ಹೊಸ ಕಾರು: ಅತ್ಯುತ್ತಮ ಬಣ್ಣ ಯಾವುದು?
ಅಂತಿಮವಾಗಿ, ನಿಮಗೆ ಪ್ರತಿದಿನ ನೋಡಿ ಸಂತೋಷ ನೀಡುವ ಬಣ್ಣವೇ ಅತ್ಯುತ್ತಮ. ನಿಮ್ಮ ಅಗತ್ಯ ಮತ್ತು ಇಷ್ಟಗಳನ್ನು ಪರಿಗಣಿಸಿ ನಿರ್ಧರಿಸಿ. ತಾಂತ್ರಿಕವಾಗಿ, ಬಿಳಿ ಬಣ್ಣವು ಉತ್ತಮ ಆಯ್ಕೆಯಾಗಿದೆ. ಕೆಲ ಬಣ್ಣಗಳು ಬಾಳಿಕೆ, ನಿರ್ವಹಣೆ, ಮೌಲ್ಯದ ಕಾರಣಗಳಿಂದ ನೆರವಾಗಲಿದೆ. ಆದರೆ ಕಾರು ಖರೀದಿಸುವಾಗ ಇಷ್ಟದ ಅಥವಾ ಯಶಸ್ಸಿನ ಬಣ್ಣದ ಕಾರು ಹೆಚ್ಚು ಖುಷಿ ನೀಡಲಿದೆ.

