ಗುಡ್ ಬೈ ಹೇಳುತ್ತಿದೆ ನೆಚ್ಚಿನ ಟೊಯೋಟಾ ಇನ್ನೋವಾ ಕ್ರೈಸ್ಟಾ ಕಾರು, ಸ್ಥಗಿತಕ್ಕೆ ಕಾರಣವೇನು?
ಗುಡ್ ಬೈ ಹೇಳುತ್ತಿದೆ ನೆಚ್ಚಿನ ಟೊಯೋಟಾ ಇನ್ನೋವಾ ಕ್ರೈಸ್ಟಾ ಕಾರು, ಸ್ಥಗಿತಕ್ಕೆ ಕಾರಣವೇನು?. ಜನರ ಬೇಡಿಕೆ, ಮಾರಾಟದಲ್ಲೂ ಅಗ್ರ ಸ್ಥಾನದಲ್ಲಿರುವ ಇನ್ನೋವಾ ಕ್ರೈಸ್ಟಾ ಕಾರು ಸ್ಥಗಿತಗೊಳ್ಳಲು ಕಾರಣವೇನು?

ಇನ್ನೋವಾ ಕ್ರೈಸ್ಟಾ ಕಾರಿಗೆ ಏನಾಯಿತು?
ಭಾರತದಲ್ಲಿ ಟೋಯೋಟಾ ಇನ್ನೋವಾ ಕ್ರೈಸ್ಟಾ ಕಾರಿನ ಜನಪ್ರಿಯತೆ ಬಿಡಿಸಿ ಹೇಳಬೇಕಾಗಿಲ್ಲ. ರಾಜಕಾರಣಿಗಳು, ಉದ್ಯಮಿಗಳಿಂದ ಹಿಡಿದು ಸಾಮಾನ್ಯ ಕಾರು ಹೊಂದಿರುವ ಕುಟುಂಬಕ್ಕೂ ಇನ್ನೋವಾ ಕ್ರೈಸ್ಟಾ ಕಾರು ಅಚ್ಚು ಮೆಚ್ಚು. ರಸ್ತೆಯಲ್ಲಿ ಒಮ್ಮೆ ಕಣ್ಣಾಡಿಸಿದರೆ ಸಾಕು ಎಲ್ಲೆಡೆ ಕ್ರೈಸ್ಟಾ ಕಾರು ಗಮನಿಸಬಹುದು. ಆದರೆ ಇದೇ ಇನ್ನೋವಾ ಕ್ರೈಸ್ಟಾ ಕಾರು ಸ್ಥಗಿತಗೊಳ್ಳುತ್ತಿದೆ.
ಯಾವಾಗಿನಿಂದ ಕ್ರೈಸ್ಟಾ ಕಾರು ಸ್ಥಗಿತ
ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಟೋಯೋಟಾ ಇನ್ನೋವಾ ಕ್ರೈಸ್ಟಾ ಕಾರು 2027, ಮಾರ್ಚ್ 1 ರಿಂದ ಕ್ರೈಸ್ಟಾ ಕಾರು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. 2026ರಿಂದ ಉತ್ಪಾದನೆ ಹಂತ ಹಂತವಾಗಿ ಕಡಿತಗೊಳ್ಳಲಿದೆ. ಇಷ್ಟೇ ಅಲ್ಲ 2027ರ ಆರಂಭದಿಂದ ಬುಕಿಂಗ್ ಕೂಡ ಸ್ಥಗಿತಗೊಂಡು, 2027ರ ಮಾರ್ಚ್ ತಿಂಗಳಲ್ಲಿ ಸಂಪೂರ್ಣ ಉತ್ಪಾದನೆ ಸ್ಥಗಿತಗೊಳ್ಳಲಿದೆ.
2015ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕ್ರೈಸ್ಟಾ
ಟೋಯೋಟಾ ಇನ್ನೋವಾ ಜನಪ್ರಿಯತೆಯಿಂದ 2015ರಲ್ಲಿ ಟೋಯೋಟಾ ಇನ್ನೋವಾ ಕಾರನ್ನು ಕ್ರೈಸ್ಟಾ ಕಾರಾಗಿ ಬಿಡುಗಡೆ ಮಾಡಿತ್ತು. ಭಾರತದಲ್ಲಿ 2016ರಲ್ಲಿ ಲಾಂಚ್ ಆಗಿತ್ತು. ಮತ್ತಷ್ಟು ಆಕರ್ಷಕ, ಆರಾಮದಾಯಕ ಪ್ರಯಾಣಕ್ಕಾಗಿ ಕ್ರೈಸ್ಟಾ ಕಾರು ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು. 2025ರಲ್ಲಿ ಕ್ರೈಸ್ಟಾ 10 ವರ್ಷದ ಸಂಭ್ರಮವನ್ನು ಆಚರಿಸಿತ್ತು. ಇನ್ನು ಬೇಡಿಕೆ ವಿಚಾರದಲ್ಲಿ ಎಂಪಿವಿ ಸೆಗ್ಮೆಂಟ್‌ನಲ್ಲಿ ಟೋಯೋಟಾ ಕ್ರೈಸ್ಟಾ ಕಾರಿಗೆ ಪೈಪೋಟಿಗೆ ನೀಡುವ ಕಾರು ಮಾರುಕಟ್ಟೆಲ್ಲಿ ಇಲ್ಲ.
ಇನ್ನೋವೋ ಕ್ರೈಸ್ಟಾ ಕಾರು ಸ್ಥಗಿತಕ್ಕೆ ಕಾರಣವೇನು?
ಟೋಯೋಯಾ ಇನ್ನೋವಾ ಕ್ರೈಸ್ಟಾ ಕಾರು ಸ್ಥಗಿತಗೊಳ್ಳಲು ಮುಖ್ಯ ಕಾರಣ CAFE 3 ನಿಯಮ. ಹೌದು ಕಾರ್ಪೋರೇಟ್ ಎವರೇಜ್ ಫ್ಯೂಯೆಲ್ ಎಕಾನಮಿ ನಿಯಮ ಮುಂದಿನ ವರ್ಷದಲ್ಲಿ ಜಾರಿಯಾಗಲಿದೆ. ಇದು ಹಲವು ಕಾರುಗಳ ಮೇಲೆ ಪರಿಣಾಮ ಬೀರಲಿದೆ. ಪ್ರಮುಖವಾಗಿ ಉತ್ತಮ ಮೈಲೇಜ್ ಹಾಗೂ ಎಮಿಶನ್ ನಿಯಮ ಮತ್ತಷ್ಟು ಕಠಿಣವಾಗುತ್ತಿದೆ. ಕ್ರೈಸ್ಟಾ ಕಾರು 2.4 ಲೀಟರ್ ಡೀಸಲ್ ಎಂಜಿನ್ ಕಾರು. ಈ ನಿಮಯಮಗಳಿಗೆ ಅನುಸಾರ, ಎಂಪಿವಿ ಕಾರು ಉತ್ಪಾದನೆ ಕಷ್ಟ ಸಾಧ್ಯ. ಹೀಗಾಗಿ ಕ್ರೈಸ್ಟಾ ಕಾರು ಸ್ಥಗಿತಗೊಳ್ಳುತ್ತಿದೆ.
2025ಕ್ಕೆ ಸ್ಥಗಿತಗೊಳಿಸಲು ಪ್ಲಾನ್ ಮಾಡಿದ್ದ ಟೊಯೋಟಾ
2025ರ ಅಂತ್ಯಕ್ಕೆ ಟೋಯೋಟಾ ಇನ್ನೋವಾ ಕ್ರೈಸ್ಟಾ ಕಾರು ಸ್ಥಗಿತಗೊಳಿಸಲು ಟೋಯೋಟಾ ಪ್ಲಾನ್ ಮಾಡಿತ್ತು. ಆದರೆ ಭಾರಿ ಬೇಡಿಕೆ, ಎಂಪಿವಿ ಮಾರಾಟದಲ್ಲೂ ನಂಬರ್ 1 ಆಗಿದ್ದ ಕಾರಣ ಸ್ಥಗಿತ ಪ್ಲಾನ್ ಮುಂದೂಡಿತ್ತು. ಆದರೆ CAFE 3 ನಿಯಮ ಜಾರಿ ಖಚಿತಗೊಂಡಿದೆ. ಹೀಗಾಗಿ ಅನಿವಾರ್ಯವಾಗಿ ಭಾರಿ ಬೇಡಿಕೆಯ ಕಾರು ಗುಡ್ ಬೈ ಹೇಳುತ್ತಿದೆ.
ಟೋಯೋಟಾ ಇನ್ನೋವಾ ಹೈಕ್ರಾಸ್
2025ರಲ್ಲಿ ಕ್ರೈಸ್ಟಾ ಸ್ಥಗಿತಗೊಳಿಸುವ ಪ್ಲಾನ್ ಮಾಡಿದ್ದ ಟೋಯೋಟಾ, ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿತ್ತು. CAFE 3 ನಿಯಮದ ಅನುಸಾರ ಟೋಯೋಟಾ ಹೈಕ್ರಾಸ್ ಕಾರು ಬಿಡುಗಡೆ ಮಾಡಿದೆ. ಹೈಬ್ರಿಡ್ ಎಂಜಿನ್ ಕಾರುಗಳನ್ನು ಬಡುಗಡೆ ಮಾಡುವ ಮೂಲಕ ಟೋಯೋಟಾ ಕ್ರೈಸ್ಟಾ ಮಾರುಕಟ್ಟೆಯನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದೆ.
ಟೋಯೋಟಾ ಇನ್ನೋವಾ ಹೈಕ್ರಾಸ್
ಹೈಬ್ರಿಡ್ ವರ್ಶನ್ ಕ್ರೈಸ್ಟಾ ಬಿಡುಗಡೆಯಾಗುತ್ತಾ?
ಟೋಯೋಟಾ ಇನ್ನೋವಾ ಕ್ರೈಸ್ಟಾ ಸ್ಥಗಿತಗೊಳಿಸಿ, ಇದೇ ಕ್ರೈಸ್ಟಾ ಹೈಬ್ರಿಡ್ ವರ್ಶನ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಕುರಿತು ಚರ್ಚೆಯಾಗುತ್ತಿದೆ. ಆದರೆ ಈ ಸಾಧ್ಯತೆಗಳು ಕಡಿಮೆ. ಕಾರಣ ಈಗಾಗಲೇ ಇನ್ನೋವಾ ಹೈಕ್ರಾಸ್ ಕಾರು ಹೈಬ್ರಿಡ್ ವೇರಿಯೆಂಟ್ ಕಾರಾಗಿದೆ. ಹೀಗಾಗಿ ರಸ್ತೆಯಲ್ಲಿ ರಾಜನಂತೆ ಮರೆಯುತ್ತಿರುವ ಕ್ರೈಸ್ಟಾ ಗುಡ್ ಬೈ ಹೇಳಲೇಬೇಕಾಗಿದೆ.

