3 ದಿನದಲ್ಲಿ 2,460 ರೂಪಾಯಿ ಇಳಿಕೆ; ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ?
Gold And Silver Price Today: ಕಳೆದ ಮೂರು ದಿನಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಹೂಡಿಕೆದಾರರು ಕೈಗಾರಿಕೋದ್ಯಮದ ಸರಕುಗಳತ್ತ ಹೆಚ್ಚು ಒಲವು ತೋರುತ್ತಿರುವುದರಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಚಿನ್ನದ ಬೆಲೆ ಇಳಿಕೆಯಿಂದಾಗಿ ಆಭರಣ ಪ್ರಿಯರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

ಚಿನ್ನದ ಬೆಲೆ ಇಳಿಕೆಯಾಗುತ್ತಿರೋದರಿಂದ ಆಭರಣ ಪ್ರಿಯರು ನೆಮ್ಮದಿಯಿಂದ ಉಸಿರು ಬಿಡುತ್ತಿದ್ದಾರೆ. ಭಾರತದಲ್ಲಿ ಮದುವೆ ಸೀಸನ್ ಆಗಿರೋದರಿಂದ ಬೆಲೆ ಏರಿಕೆಯಾದ್ರೂ ಜನರು ಅನಿವಾರ್ಯವಾಗಿ ಚಿನ್ನ ಖರೀದಿ ಮಾಡಬೇಕಾಗುತ್ತದೆ. ಕಳೆದ ಮೂರು ದಿನಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 2,460 ರೂ.ವರೆಗೆ ಇಳಿಕೆಯಾಗಿದೆ.
ಅಮೆರಿಕ ಟ್ಯಾರಿಫ್ ಹೆಚ್ಚಿಸಿದ್ದ್ದರಿಂದ ಚಿನ್ನದ ಬೆಲೆ ದಿಢೀರ್ ಅಂತ ಏರಿಕೆಯಾಗಿತ್ತು. ಚಿನ್ನವನ್ನು ಸುರಕ್ಷಿತವಾದ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಟ್ಯಾರಿಫ್ ಹೆಚ್ಚಾಗುತ್ತಿದ್ದಂತೆ ಚಿನ್ನದ ಮೇಲಿನ ಹೂಡಿಕೆ ಏರಿಕೆಯಾಗಿತ್ತು. ಇದೀಗ ಹೂಡಿಕೆದಾರರು ಕೈಗಾರಿಕೋದ್ಯಮದ ಸರಕುಗಳ ಮೇಲೆ ಹೂಡಿಕೆ ಮಾಡುತ್ತಿರೋದರಿಂದ ಚಿನ್ನದ ಬೆಲೆ ಇಳಿಕೆಯಾಗಿದೆ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,755 ರೂಪಾಯಿ
8 ಗ್ರಾಂ: 70,040 ರೂಪಾಯಿ
10 ಗ್ರಾಂ: 87,550 ರೂಪಾಯಿ
100 ಗ್ರಾಂ: 8,75,500 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,551 ರೂಪಾಯಿ
8 ಗ್ರಾಂ: 76,408 ರೂಪಾಯಿ
10 ಗ್ರಾಂ: 95,510 ರೂಪಾಯಿ
100 ಗ್ರಾಂ: 9,55,100 ರೂಪಾಯಿ
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,164 ರೂಪಾಯಿ
8 ಗ್ರಾಂ: 57,312 ರೂಪಾಯಿ
10 ಗ್ರಾಂ: 71,640 ರೂಪಾಯಿ
100 ಗ್ರಾಂ: 7,16,400 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 87,550 ರೂಪಾಯಿ, ಮುಂಬೈ: 87,550 ರೂಪಾಯಿ, ಬೆಂಗಳೂರು: 87,550 ರೂಪಾಯಿ, ದೆಹಲಿ: 87,700 ರೂಪಾಯಿ, ಹೈದರಾಬಾದ್: 87,550 ರೂಪಾಯಿ, ವಡೋದರಾ: 87,600 ರೂಪಾಯಿ, ಅಹಮದಾಬಾದ್: 87,600 ರೂಪಾಯಿ, ಕೇರಳ: 87,550 ರೂಪಾಯಿ, ಪುಣೆ: 87,550 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 980 ರೂಪಾಯಿ
100 ಗ್ರಾಂ: 9,800 ರೂಪಾಯಿ
1000 ಗ್ರಾಂ: 98,000 ರೂಪಾಯಿ
Gold
ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆ
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಳಿಕೆ ಹೀಗಿದೆ.
ಏಪ್ರಿಲ್ 28: 680 ರೂಪಾಯಿ
ಏಪ್ರಿಲ್ 30: 60 ರೂಪಾಯಿ
ಮೇ 1: 2180 ರೂಪಾಯಿ
ಮೇ 2: 220 ರೂಪಾಯಿ