Gold And  Silver Price: ಚಿನ್ನದ ಬೆಲೆ ಏರಿಕೆ ವೇಗ ಕಡಿಮೆಯಾಗಿದ್ದು, ಇಳಿಕೆ ಕಾಣುತ್ತಿದೆ. ಚಿನ್ನ ಮತ್ತು ಬೆಳ್ಳಿ ಅನುಪಾತವು ಭವಿಷ್ಯದ ಬೆಲೆ ಏರಿಳಿತಗಳ ಸುಳಿವು ನೀಡುತ್ತಿದೆ.

ನವದೆಹಲಿ: ಚಿನ್ನದ ಬೆಲೆ ಏರಿಕೆ ವೇಗ ಕಡಿಮೆಯಾಗಿದ್ದು, ಸಾಮಾನ್ಯ ಜನರು ನಿಟ್ಟುಸಿರು ಬಿಡುತ್ತಿದ್ದಾರೆ. ಕಳೆದೊಂದು ವಾರದಿಂದ ಚಿನ್ನದ ಬೆಲೆ ಹಂತ ಹಂತವಾಗಿ ಇಳಿಕೆಯತ್ತ ಸಾಗುತ್ತಿದೆ. 2025 ಏಪ್ರಿಲ್‌ನಲ್ಲಿ ಪ್ರತಿ ಔನ್ಸ ಬೆಲೆ 3,500 ಡಾಲರ್‌ ಆಗಿ ಹೊಸ ದಾಖಲೆಯನ್ನು ಬರೆದಿತ್ತು. ಈ ಸಾರ್ವಕಾಲಿಕ ದಾಖಲೆ ಬಳಿಕ ಚಿನ್ನದ ದರ ಇಳಿಕೆಯತ್ತ ಸಾಗುತ್ತಿರೋದು ಕಂಡು ಬರುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಚಿನ್ನ ಪ್ರತಿ ಔನ್ಸ್‌ಗೆ 3,250 ಡಾಲರ್‌ಗೆ ಟ್ರೇಡ್ ಆಗುತ್ತಿದೆ. ಸಾರ್ವಕಾಲಿಕ ದಾಖಲೆಗಿಂತ 250 ಡಾಲರ್ ಅಥವಾ ಶೇ.7ರಷ್ಟು ಬೆಲೆ ಕಡಿಮೆಯಾಗಿದೆ. ಕಳೆದ 9 ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಸುಮಾರು ಶೇ.50ರಷ್ಟು ಏರಿಕೆಯಾಗಿತ್ತು. ಸದ್ಯದ ಮಾರುಕಟ್ಟೆ ಬೆಳವಣಿಗೆ ಗಮನಿಸುತ್ತಿರುವ ಹೂಡಿಕೆದಾರರಲ್ಲಿ ಭವಿಷ್ಯದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಾಗುತ್ತಾ ಅಥವಾ ಇಳಿಕೆಯಾಗುತ್ತಾ ಎಂಬ ಪ್ರಶ್ನೆ ಮೂಡಿದೆ. 

ಫೈನಾನಿಶಿಯಲ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಸದ್ಯ ಚಿನ್ನ ಮತ್ತು ಬೆಳ್ಳಿಯ ಅನುಪಾತ (Gold/Silver Ratio) 100:1 ಒಂದಾಗಿದೆ. ಇದರರ್ಥ ಒಂದು ಔನ್ಸ್ ಚಿನ್ನ ಖರೀದಿಸಲು 100 ಔನ್ಸ್ ಬೆಳ್ಳಿ ಬೇಕಾಗುತ್ತದೆ. ಈ ಅನುಪಾತವು 70:1ಕ್ಕೆ ಹತ್ತಿರವಾಗಿದೆ. ಅಂದ್ರೆ ಚಿನ್ನದ ಬೆಲೆ ಇಳಿಕೆಯಾದ್ರೆ ಬೆಳ್ಳಿ ದರ ಏರಿಕೆ ಕಾಣಲಿದೆ. ಇದೇ ರೀತಿಯಾಗಿ ಚಿನ್ನ ಮತ್ತು ಪ್ಲಾಟಿನಂ (Gold/Platinum Ratio) ನಡುವಿನ ಅನುಪಾತ 1 ರಿಂದ 2 ಅಂತರದಲ್ಲಿದೆ. ಆದರೆ ಸದ್ಯ ಈ ಅನುಪಾತ 3.5ರಷ್ಟಿದೆ. ಈ ಅನುಪಾತದಲ್ಲಿ ಚಿನ್ನದ ಬೆಲೆಯನ್ನು ಅತಿಯಾಗಿ ಮೌಲ್ಯೀಕರಣ ಮಾಡಲಿದೆ. ಇದರಲ್ಲಿ ಕರೆಕ್ಷನ್ ಸಹ ಇರಬಹುದು ಎಂದು ಅಂದಾಜಿಸಲಾಗುತ್ತದೆ. 

ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದು ಹೇಗೆ?
2022-23ರ ಜಾಗತೀಕ ರಾಜಕೀಯ ಒತ್ತಡದಿಂದಾಗ ಸೆಂಟ್ರಲ್ ಬ್ಯಾಂಕ್‌ಗಳ ಖರೀದಿ ಮತ್ತು ಗ್ಲೋಬಲ್ ಮಾರುಕಟ್ಟೆಯ ಅನಿಶ್ಚಿತತೆಯಿಂದಾಗಿ ಸುರಕ್ಷಿತ ಹೂಡಿಕೆಯೆಂದು ಪರಿಗಣಿಸಲ್ಪಡುವ ಚಿನ್ನಕ್ಕೆ ಬೇಡಿಕೆ ಹೆಚ್ಚಾಯ್ತು. 2025ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಂಡು ಸುಂಕದ ನಿರ್ಧಾರಗಳಿಂದ ಈ ವರ್ಷದ ಫೆಬ್ರವರಿಯಿಂದ ಚಿನ್ನದ ಬೆಲೆ ಏರಿಕೆ ವೇಗ ಪಡೆದುಕೊಳ್ತು. ಚೀನಾ ಮತ್ತು ಅಮೆರಿಕ ನಡುವೆ ವ್ಯವಹಾರಿಕ ಸಂಬಂಧದ ಕುರಿತು ಮಾತುಕತೆ ನಡೆಯುತ್ತಿರೋದು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಕಾರಣವಾಗಿದೆ. ಈ ಒಂದು ಬೆಳವಣಿಗೆಯಿಂದಾಗಿ ಹೂಡಿಕೆದಾರರು ಚಿನ್ನದ ಬದಲಾಗಿ ಕೈಗಾರಿಕಾ ಸರಕುಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.

ಸದ್ಯ US Dollar Index 100ಕ್ಕಿಂತ ಅಧಿಕವಾಗಿದೆ. ಇದು ಕಳೆದ ಮೂರು ವರ್ಷಗಳಲ್ಲಿನ ಅತ್ಯುನ್ನತ ಮಟ್ಟವಾಗಿದೆ. ಸಾಮಾನ್ಯವಾಗಿ ಡಾಲರ್ ಬಲಗೊಂಡಾಗ, ಅದು ಚಿನ್ನದ ಬೆಲೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಚಿನ್ನದ ಬೆಲೆಯಲ್ಲಿ ಇತ್ತೀಚೆಗೆ ಇಳಿಕೆ ಕಂಡುಬಂದಿದೆ. ಡಾಲರ್ ಬಲಗೊಳ್ಳುತ್ತಿರೋದರಿಂದ ಭವಿಷ್ಯದಲ್ಲಿ ಚಿನ್ನದ ಬೆಲೆ ಇಳಿಕೆಯಾಗಬಹುದು ಎಂದು ಆರ್ಥಿಕ ತಜ್ಞರು ಊಹಿಸುತ್ತಿದ್ದಾರೆ. 

ಚಿನ್ನದ ಬೆಲೆಯ ಭವಿಷ್ಯವಾಣಿ
ಚಿನ್ನದ ಬೆಲೆ ಹೀಗೆಯೇ ಆಗುತ್ತೆ ಅಂತ ನಿಖರವಾಗಿ ಹೇಳಲು ಅಸಾಧ್ಯ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಆರ್ಥಿಕ ಹಿಂಜರಿತ, ವ್ಯಾಪಾರ ಯುದ್ಧ ಅಥವಾ ಅಮೆರಿಕದ ಫೆಡರಲ್ ಸಾಲ ಅಂತಹ ಬಿಕ್ಕಟ್ಟುಗಳು ಉಂಟಾದ್ರೆ ಮತ್ತೆ ಚಿನ್ನದ ಬೆಲೆ ಏರಿಕೆಯಾಗಬಹುದು. ಸದ್ಯದ ವರದಿ ಪ್ರಕಾರ ಅಮೆರಿಕ ಅಮೆರಿಕವು $36 ಟ್ರಿಲಿಯನ್ ಸಾಲವನ್ನು ಹೊಂದಿದೆ. ಭವಿಷ್ಯದಲ್ಲಿ ಫೆಡರಲ್ ರಿಸರ್ವ್ ಬಡ್ಡಿದರ ಕಡಿತಗೊಳಿಸಿದ್ರೆ ಚಿನ್ನಕ್ಕೆ ಹೆಚ್ಚು ಸಮರ್ಥನೆ ಸಿಗಲಿದೆ. ಅಮೆರಿಕದ ಜಿಡಿಪಿ -0.3 ಪ್ರತಿಶತ ಕುಸಿತ, ಗ್ರಾಹಕರ ವಿಶ್ವಾಸ ಕುಸಿತ, ಬಡ್ಡಿದರ ಕುಸಿತಗಳು ಜೂನ್‌ನಲ್ಲಿ ಸಂಭವಿಸಬಹುದು. ಈ ಎಲ್ಲಾ ಮಾರುಕಟ್ಟೆ ಅಂಶಗಳು ಚಿನ್ನ ಬೆಲೆ ಸಕಾರಾತ್ಮಕ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗುತ್ತಿದೆ. 

ಭಾರತದಲ್ಲಿ ಇಂದಿನ ಚಿನ್ನದ ಬೆಲೆ 
ಗೂಡ್ಸ್ ರಿಟರ್ನ್ ವರದಿ ಪ್ರಕಾರ ಭಾರತದಲ್ಲಿಂದು 22 ಮತ್ತು 24 ಕ್ಯಾರಟ್ ಚಿನ್ನ ಹಾಗೂ ಬೆಳ್ಳಿ ಬೆಲೆ ಹೀಗಿದೆ. 
22 ಕ್ಯಾರಟ್ ಚಿನ್ನದ ಬೆಲೆ
10 ಗ್ರಾಂ: ₹87,550
100 ಗ್ರಾಂ: ₹8,75,500 

24 ಕ್ಯಾರಟ್ ಚಿನ್ನದ ಬೆಲೆ 
10 ಗ್ರಾಂ: ₹95,510
100 ಗ್ರಾಂ: ₹9,51,000

ದೇಶದಲ್ಲಿಂದು ಬೆಳ್ಳಿ ಬೆಲೆ 
10 ಗ್ರಾಂ: ₹980
100 ಗ್ರಾಂ: ₹9,800
1000 ಗ್ರಾಂ: ₹98,000