ಇದಪ್ಪಾ ಬೆಲೆ ಇಳಿಕೆ ಅಂದ್ರೆ, ಪಾತಾಳದತ್ತ ಬಂಗಾರದ ಬಲೆ; 21 ಸಾವಿರ ರೂಪಾಯಿ ಕುಸಿತ
Gold And Silver Price Today: ಭಾರತದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. 22, 24, ಮತ್ತು 18 ಕ್ಯಾರಟ್ ಚಿನ್ನದ ದರಗಳು ಇಳಿಕೆಯಾಗಿವೆ. ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ.
18

ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷ, ಅಮೆರಿಕ-ಚೀನಾದ ನಡುವಿನ ವ್ಯಾಪಾರ ಬಿಕ್ಕಟ್ಟು ಚಿನ್ನದ ಮೇಲೆ ನೇರ ಪರಿಣಾಮ ಬೀರಿತ್ತು. ಹಾಗಾಗಿ ಪ್ರತಿದಿನ ಚಿನ್ನದ ಬೆಲೆಯಲ್ಲಿ ಏರಿಳಿತ ಆಗುತ್ತಿರುತ್ತದೆ. ಆದ್ದರಿಂದ ಜನರು ಚಿನ್ನದ ಬೆಲೆ ಇಳಿಕೆಯಾಗೋದನ್ನು ಕಾಯುತ್ತಿದ್ದಾರೆ.
28
ಇಂದು ದೇಶದಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಒಂದು ವೇಳೆ ನೀವು ಚಿನ್ನ ಖರೀದಿಗೆ ಪ್ಲಾನ್ ಮಾಡುತ್ತಿದ್ರೆ, ಇಂದು ಖರೀದಿಸಬಹುದಾಗಿದೆ. ಇಂದಿನ 22, 24 ಮತ್ತು 18 ಕ್ಯಾರಟ್ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
38
ಇಂದಿನ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,610 ರೂಪಾಯಿ
8 ಗ್ರಾಂ: 68,800 ರೂಪಾಯಿ
10 ಗ್ರಾಂ: 86,100 ರೂಪಾಯಿ
100 ಗ್ರಾಂ: 8,61,000 ರೂಪಾಯಿ
48
ಇಂದಿನ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,393 ರೂಪಾಯಿ
8 ಗ್ರಾಂ: 75,144 ರೂಪಾಯಿ
10 ಗ್ರಾಂ: 93,930 ರೂಪಾಯಿ
100 ಗ್ರಾಂ: 9,39,300 ರೂಪಾಯಿ
58
ಇಂದಿನ 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,045 ರೂಪಾಯಿ
8 ಗ್ರಾಂ: 56,360 ರೂಪಾಯಿ
10 ಗ್ರಾಂ: 70,450 ರೂಪಾಯಿ
100 ಗ್ರಾಂ: 7,04,500 ರೂಪಾಯಿ
68
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 86,100 ರೂಪಾಯಿ, ಮುಂಬೈ: 86,100 ರೂಪಾಯಿ, ನವದೆಹಲಿ: 86,250 ರೂಪಾಯಿ, ಕೋಲ್ಕತ್ತಾ: 86,100 ರೂಪಾಯಿ, ಬೆಂಗಳೂರು: 86,100 ರೂಪಾಯಿ, ಹೈದರಾಬಾದ್: 86,100 ರೂಪಾಯಿ, ವಡೋದರಾ: 86,150, ಅಹಮದಾಬಾದ್: 86,100 ರೂಪಾಯಿ
78
ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆ?
ಗೂಡ್ಸ್ ರಿಟರ್ನ್ ವರದಿ ಪ್ರಕಾರ, ಚಿನ್ನದ ಬೆಲೆ ಇಳಿಕೆಯ ಮಾಹಿತಿ ಇಲ್ಲಿದೆ.
22 ಕ್ಯಾರಟ್ 10 ಗ್ರಾಂ: 19,500 ರೂಪಾಯಿ ಇಳಿಕೆ
24 ಕ್ಯಾರಟ್ 10 ಗ್ರಾಂ: 21,300 ರೂಪಾಯಿ ಇಳಿಕೆ
18 ಕ್ಯಾರಟ್ 10 ಗ್ರಾಂ: 15,900 ರೂಪಾಯಿ ಇಳಿಕೆ
88
ದೇಶದಲ್ಲಿಂದು ಬೆಳ್ಳಿ ಬೆಲೆ
ಚಿನ್ನದ ಜೊತೆಯಲ್ಲಿಂದು ಬೆಳ್ಳಿ ದರದಲ್ಲಿಯೂ ಕುಸಿತ ಕಂಡು ಬಂದಿದೆ. 1 ಕೆಜಿ ಬೆಳ್ಳಿ ದರದಲ್ಲಿ 900 ರೂಪಾಯಿ ಇಳಿಕೆಯಾಗಿದೆ.
10 ಗ್ರಾಂ: 970 ರೂಪಾಯಿ
100 ಗ್ರಾಂ: 9,700 ರೂಪಾಯಿ
1,000 ಗ್ರಾಂ: 97,000 ರೂಪಾಯಿ
Latest Videos