ಬೆಲೆ ಇಳಿಕೆಯಾಗೋದನ್ನು ಕಾಯುತ್ತಿದ್ದೀರಾ? ಇಲ್ಲಿದೆ ನೋಡಿ ಇಂದಿನ ಬಂಗಾರ-ಬೆಳ್ಳಿ ದರ
Gold And Silver Price Today: ಚಿನ್ನ ಖರೀದಿಸುವ ಮುನ್ನ 22 ಮತ್ತು 24 ಕ್ಯಾರಟ್ ಚಿನ್ನದ ಬೆಲ ಎಷ್ಟಿದೆ ಎಂದು ತಿಳಿದುಕೊಳ್ಳಬೇಕು. ಎರಡರದ ದರಗಳು ಬೇರೆ ಬೇರೆಯಾಗಿರುತ್ತದೆ.

ಚಿನ್ನದ ಬೆಲೆ ಇಳಿಕೆಯಾಗೋದನ್ನು ಕಾಯುತ್ತಿದ್ದೀರಾ? ಆಷಾಢದಲ್ಲಿಯೂ ಚಿನ್ನ ಖರೀದಿಸುವ ಪ್ಲಾನ್ ಮಾಡಿಕೊಂಡಿದ್ದೀರಾ? ಹಾಗಾದ್ರೆ ಇಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಿ. ಚಿನ್ನ ಮತ್ತು ಬೆಳ್ಳಿಗೆ ಇಂದು ಬೇಡಿಕೆ ಹೆಚ್ಚಾಗಿ
ಸದ್ಯ ಬೆಳ್ಳಿ ಮೇಲಿನ ಹೂಡಿಕೆಯೂ ಅಧಿಕವಾಗಿರೋ ಕಾರಣ ಬೆಲೆ ಏರಿಕೆಯಾಗುತ್ತಿದೆ. ಮತ್ತೊಂದೆಡೆ ಸಿಟಿ ಗ್ರೂಪ್ ವರದಿ ಭವಿಷ್ಯದಲ್ಲಿ ಚಿನ್ನದ ದರ ಇಳಿಕೆಯಾಗುವ ಭವಿಷ್ಯವನ್ನು ನುಡಿದಿದೆ. ಸದ್ಯ ಬೆಲೆ ಹೆಚ್ಚಾದ್ರೂ ಮುಂದಿನ ದಿನಗಳಲ್ಲಿ ಬೆಲೆ ಹಂತ ಹಂತವಾಗಿ ಕಡಿಮೆಯಾಗಲಿದೆ ಎಂದು ಸಿಟಿ ಗ್ರೂಪ್ ಹೇಳಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,170 ರೂಪಾಯಿ
8 ಗ್ರಾಂ: 73,360 ರೂಪಾಯಿ
10 ಗ್ರಾಂ: 91,700 ರೂಪಾಯಿ
100 ಗ್ರಾಂ: 9,17,000 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,004 ರೂಪಾಯಿ
8 ಗ್ರಾಂ: 80,032 ರೂಪಾಯಿ
10 ಗ್ರಾಂ: 1,00,040 ರೂಪಾಯಿ
100 ಗ್ರಾಂ: 10,00,400 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 91,700 ರೂಪಾಯಿ, ಮುಂಬೈ: 91,700 ರೂಪಾಯಿ, ದೆಹಲಿ: 91,850 ರೂಪಾಯಿ, ಕೋಲ್ಕತ್ತಾ: 91,700 ರೂಪಾಯಿ, ಬೆಂಗಳೂರು: 91,700 ರೂಪಾಯಿ, ವಡೋದರ: 91,750 ರೂಪಾಯಿ, ಹೈದರಬಾದ್: 91,700 ರೂಪಾಯಿ, ಪುಣೆ: 91,700 ರೂಪಾಯಿ, ಅಹಮದಾಬಾದ್: 91,750 ರೂಪಾಯಿ
ದೇಶದಲ್ಲಿಂದು ಬೆಳ್ಳಿ ದರ
ಇಂದು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 600 ರೂ.ಗಳಷ್ಟು ಏರಿಕೆಯಾಗಿದೆ. ಅದೇ ರೀತಿ ಬೆಳ್ಳಿ ದರಲ್ಲಿಯೂ ಕೊಂಚ ಏರಿಕೆ ಕಂಡು ಬಂದಿದೆ. 1 ಕೆಜಿ ಬೆಳ್ಳಿ ದರದಲ್ಲಿ 2,100 ರೂ.ಗಳಷ್ಟು ಹೆಚ್ಚಳವಾಗಿದೆ.
10 ಗ್ರಾಂ: 1,160 ರೂಪಾಯಿ
100 ಗ್ರಾಂ: 11,600 ರೂಪಾಯಿ
1000 ಗ್ರಾಂ: 1,16,00 ರೂಪಾಯಿ