ಪ್ರಪಂಚದಲ್ಲೇ ಅತಿ ದೊಡ್ಡ ಚಿನ್ನದ ಗಣಿ: ಈ ದೇಶದಲ್ಲಿ ತೋಡಿದಷ್ಟು ಬಂಗಾರ!
ಗೋಲ್ಡ್ ಮೈನ್: ನಿಮಗೆ ಗೊತ್ತಾ? ಪ್ರಪಂಚದಲ್ಲಿ ಬಂಗಾರ ಹೆಚ್ಚಾಗಿ ತರಿಸಿಕೊಳ್ಳುವ ದೇಶಗಳಲ್ಲಿ ಇಂಡಿಯಾ ಟಾಪ್‌ನಲ್ಲಿ ಇರುತ್ತೆ. ಹಾಗಾದರೆ ಅತಿ ದೊಡ್ಡ ಬಂಗಾರದ ಗಣಿ ಇರುವ ದೇಶ ಯಾವುದು? ಆ ಬಂಗಾರದ ಗಣಿಯಿಂದ ವರ್ಷಕ್ಕೆ ಬರೋಬ್ಬರಿ 48 ಟನ್ ಬಂಗಾರ ಉತ್ಪಾದನೆ ಆಗುತ್ತಂತೆ. ಈ ಗಣಿ ಎಲ್ಲಿದೆ? ಇದರ ವಿಶೇಷತೆಗಳೇನು ಅಂತಾ ತಿಳಿದುಕೊಳ್ಳೋಣ ಬನ್ನಿ.
14

ಪ್ರಪಂಚದಲ್ಲೇ ಅತಿ ದೊಡ್ಡ, ರಿಚೆಸ್ಟ್ ಗೋಲ್ಡ್ ಮೈನ್ ಆದ ಗ್ರಾಸ್ ಬೆರ್ಗ್ ಇಂಡೋನೇಷ್ಯಾದಲ್ಲಿದೆ. ಪ್ರಪಂಚದಲ್ಲಿ ಕೆಲವು ಶತಮಾನಗಳಿಂದ ಗೋಲ್ಡ್ ಮೈನಿಂಗ್ ಒಂದು ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ.
24
ಕೆಲವು ವರದಿಗಳ ಪ್ರಕಾರ ಈ ಮೈನ್ ವರ್ಷಕ್ಕೆ ಸುಮಾರು 48 ಟನ್ ಬಂಗಾರವನ್ನು ಉತ್ಪಾದನೆ ಮಾಡುತ್ತದೆ. ಈ ಮೈನ್‌ಗೆ ಸಂಬಂಧಿಸಿದ ಮತ್ತೊಂದು ಮುಖ್ಯವಾದ ವಿಷಯ ಏನಪ್ಪಾ ಅಂದ್ರೆ ಇದು ಬಂಗಾರದ ಜೊತೆಗೆ ಪ್ರಪಂಚದಲ್ಲೇ ಅತಿ ದೊಡ್ಡ ಕಾಪರ್ ಮೈನ್ಸ್ ಗಳಲ್ಲಿ ಒಂದಾಗಿದೆ.
34
ಪ್ರಪಂಚದಲ್ಲೇ ಅತಿ ದೊಡ್ಡ ಗೋಲ್ಡ್ ಮೈನ್ ಈ ಮೈನ್‌ನಿಂದ ಸಾಕಷ್ಟು ಪ್ರಮಾಣದಲ್ಲಿ ಬಂಗಾರವನ್ನು ತೆಗೆಯಲಾಗುತ್ತಿದೆ. ಇಂಡೋನೇಷ್ಯಾದ ಈ ಮೈನ್‌ನಲ್ಲಿ ಸುಮಾರು 20,000 ಜನ ಕೆಲಸ ಮಾಡ್ತಿದ್ದಾರೆ.
44
40 ಬಿಲಿಯನ್ ಡಾಲರ್ ಬೆಲೆಬಾಳುವ ಬಂಗಾರ ತುಂಬಾ ವರ್ಷಗಳಿಂದ ಇಂಡೋನೇಷ್ಯಾ ಬೆಲೆಬಾಳುವ ಆಸ್ತಿಗಳಲ್ಲಿ ಗ್ರಾಸ್ ಬೆರ್ಗ್ ಮೈನ್ ಒಂದು. ಇಂಡೋನೇಷ್ಯಾ ಸರ್ಕಾರ ಫ್ರೀಪೋರ್ಟ್-ಮೆಕ್‌ಮೊರಾನ್‌ಗೆ 2041ರವರೆಗೆ ಮೈನಿಂಗ್ ಮುಂದುವರಿಸಲು ಅನುಮತಿ ನೀಡಿದೆ.
Latest Videos