Jio, Airtel ಬೆವರಿಳಿಸಿದ ವೊಡಾಫೋನ್ ಐಡಿಯಾ; 300GBಯ 5G ಇಂಟರ್‌ನೆಟ್
ವೊಡಾಫೋನ್ ಐಡಿಯಾ 300GB 5G ಡೇಟಾ ನೀಡುವ ಮೂಲಕ ಜಿಯೋ ಮತ್ತು ಏರ್‌ಟೆಲ್‌ಗೆ ಪೈಪೋಟಿ ನೀಡುತ್ತಿದೆ. 4G ಸಿಮ್‌ಗಳನ್ನು 5Gಗೆ ಅಪ್‌ಗ್ರೇಡ್ ಮಾಡಿಕೊಳ್ಳುವ ಮೂಲಕ ಗ್ರಾಹಕರು ಈ ಆಫರ್‌ನ ಲಾಭ ಪಡೆಯಬಹುದು.

ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ವೊಡಾಫೋನ್ ಐಡಿಯಾ ಹಂತ ಹಂತವಾಗಿ 5G ಇಂಟರ್‌ನೆಟ್ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. 4G ನೆಟ್‌ವರ್ಕ್‌ನಿಂದ 5G ಇಂಟರ್‌ನೆಟ್‌ಗೆ ವೇಗವಾಗಿ ವೊಡಾಫೋನ್ ಐಡಿಯಾ ಬದಲಾಗುತ್ತಿದೆ.
ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಪ್ರಿಪೇಯ್ಡ್ ಸೇರಿದಂತೆ ಎಲ್ಲಾ ರೀತಿಯ ಪ್ಲಾನ್‌ಗಳು ದುಬಾರಿಯಾಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿವೆ. ಇದೀಗ ಹೊಸ ಪ್ಲಾನ್ ಮೂಲಕ ಜಿಯೋ ಮತ್ತು ಏರ್‌ಟೆಲ್ ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನು ವೊಡಾಫೋನ್ ಐಡಿಯಾ ಮಾಡುತ್ತಿದೆ.
ವೊಡಾಫೋನ್ ಐಡಿಯಾ 5G ಪ್ಲಾನ್ 299 ರೂ,ಯಿಂದ ಆರಂಭವಾಗುತ್ತದೆ. ಕೇವಲ 299 ರೂ.ಯಲ್ಲಿ ಗ್ರಾಹಕರಿಗೆ 300GBಯವರೆಗೆ 5G ಇಂಟರ್‌ನೆಟ್ ಸಿಗಲಿದೆ. ಈ ಲಾಭ ಪಡೆಯಲು ಗ್ರಾಹಕರು ತಮ್ಮ 4G ಸಿಮ್‌ನ್ನು 5Gಗೆ ಅಪ್‌ಗ್ರೇಡ್ ಮಾಡಿಕೊಳ್ಳಬೇಕು. ಸಿಮ್‌ನ್ನು 5Gಗೆ ಅಪ್‌ಗ್ರೇಡ್ ಮಾಡಿಕೊಳ್ಳಲು Viನ ಸ್ಟೋರ್‌ಗೆ ಹೋಗಿ ಅಪ್‌ಗ್ರೇಡ್‌ಗೆ ಮನವಿ ಸಲ್ಲಿಸಬೇಕು. ಸಣ್ಣದೊಂದು ವೆರಿಫಿಕೇಶನ್ ಪ್ರೊಸೆಸ್ ಬಳಿಕ ನಿಮ್ಮ ಸಿಮ್ 4G ಯಿಂದ 5G ಗೆ ಅಪ್‌ಗ್ರೇಡ ಆಗುತ್ತದೆ.
ಈ ವಿಷಯ ಗಮನದಲ್ಲಿರಲಿ!
ಗ್ರಾಹಕರು ತಮ್ಮ ಮೊಬೈಲ್‌ನ ಸಿಮ್ ಹಾಕುವ ಮೊದಲನೇ ಸ್ಲಾಟ್‌ನಲ್ಲಿ Viನ 5G ಸಿಮ್ ಹಾಕಬೇಕು. ಒಂದು ವೇಳೆ ನೆಟ್‌ವರ್ಕ್ ಸಿಗದಿದ್ರೆ 2ನೇ ಸ್ಲಾಟ್‌ನಲ್ಲಿ ಪ್ರಯತ್ನಿಸಬೇಕು. ಉತ್ತಮ 5G ನೆಟ್‌ವರ್ಕ್ ಪಡೆದುಕೊಳ್ಳಲು ಗ್ರಾಹಕರು ತಮ್ಮ ಮೊಬೈಲ್‌ನ್ನು ಪವರ್ ಸೇವಿಂಗ್ ಮೋಡ್‌ನಲ್ಲಿ ಇರಿಸದಂತೆ ವೊಡಾಫೋನ್ ಐಡಿಯಾ ಸಲಹೆ ನೀಡಿದೆ. ಪವರ್ ಸೇವಿಂಗ್ ಮೋಡ್ ಆನ್ ಇದ್ರೆ ನೆಟ್‌ವರ್ಕ್‌ನಲ್ಲಿ ಅಡಚಣೆಯುಂಟಾಗುವ ಸಾಧ್ಯತೆಗಳಿರತ್ತವೆ.
ವೊಡಾಪೋನ್ ನೀಡುತ್ತಿರುವ ಈ 5G ಪ್ಲಾನ್ ಖಂಡಿತವಾಗಿಯೂ ಗ್ರಾಹಕರನ್ನು ಆಕರ್ಷಿಸಲಿದೆ ಎಂದು ಹೇಳಲಾಗುತ್ತಿದೆ. ಜಿಯೋ ಮತ್ತು ಏರ್‌ಟೆಲ್ ಸಹ 5G ರೊಲ್‌ಔಟ್ ಮಾಡುತ್ತಿವೆ. ಆದ್ರೆ ಈ ಎರಡು ಟೆಲಿಕಾಂ ಕಂಪನಿಗಳು ಹೆಚ್ಚಿನ ಬೆಲೆ ವಿಧಿಸುತ್ತಿರೋದರಿಂದ ಗ್ರಾಹಕರು ವೊಡಾಫೋನ್ ಐಡಿಯಾದತ್ತ ಮುಖ ಮಾಡಬಹುದು. ಒಂದು ವೇಳೆ ವೊಡಾಫೋನ್ ಈ ಬೆಲೆಯಲ್ಲಿ 199 ರೂ. ಗೆ ಇಳಿಕೆ ಮಾಡಿದ್ರೆ ಏರ್ಟೆಲ್ ಮತ್ತು ಜಿಯೋಗೆ ದೊಡ್ಡ ಹೊಡೆತವನ್ನು ನೀಡಲಿದೆ.