ವೊಡಾಫೋನ್ ಐಡಿಯಾ ಹೊಸ ಪೋಸ್ಟ್‌ಪೇಯ್ಡ್ ಫ್ಯಾಮಿಲಿ ಪ್ಲಾನ್ ಬಿಡುಗಡೆ ಮಾಡಿದೆ.  ಅನಿಯಮಿತ ಕರೆಗಳು, ಡೇಟಾ ಮತ್ತು OTT ಸಬ್‌ಸ್ಕ್ರಿಪ್ಶನ್‌ಗಳು ಸಿಗುತ್ತವೆ.

ನವದೆಹಲಿ: ಇಂದು ಪ್ರತಿಯೊಬ್ಬರ ಬಳಿಯೂ ಫೋನ್ ಇದೆ ಮತ್ತು ಹೆಚ್ಚಿನವರು ಇಂಟರ್ನೆಟ್ ಬಳಸುತ್ತಾರೆ. ಕಾಲ್, ಡೇಟಾ ಹೀಗೆ ಪ್ರತ್ಯೇಕ ರೀಚಾರ್ಜ್‌ಗಳು ಬಳಕೆದಾರರ ಜೇಬಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಪ್ರತ್ಯೇಕ ರೀಚಾರ್ಜ್ ಮಾಡಿಕೊಳ್ಳುವ ಬದಲಾಗಿ ಫ್ಯಾಮಿಲಿ ಪ್ಯಾಕ್ ಖರೀದಿಸುವುದು ಉತ್ತಮ. ಇತೀಚೆಗೆ ವೊಡಾಫೋನ್ ಐಡಿಯಾ ಪೋಸ್ಟ್‌ಪೇಯ್ಡ್ ಫ್ಯಾಮಿಲಿ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಇಡೀ ಕುಟುಂಬ ಒಟ್ಟಿಗೆ ಡೇಟಾವನ್ನು ಆನಂದಿಸಬಹುದು. ಇದು ಹಣ ಉಳಿಸುವುದರ ಜೊತೆಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ವೊಡಾಫೋನ್ ಐಡಿಯಾ ಬಿಡುಗಡೆ ಮಾಡಿರುವ ಪೋಸ್ಟ್‌ಪೇಯ್ಡ್ ಫ್ಯಾಮಿಲಿ ಪ್ಲಾನ್‌ಗಳು ಮೊದಲ ಮತ್ತು ಎರಡನೇ ಸ್ಥಾಣದಲ್ಲಿರುವ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೈಲ್‌ಗೆ ತೀವ್ರ ಸ್ಪರ್ಧೆಯನ್ನು ನೀಡಬಹುದು ಎಂದು ಅಂದಾಜಿಸಲಾಗುತ್ತಿದೆ.

Vi ಮ್ಯಾಕ್ಸ್ ಫ್ಯಾಮಿಲಿ ಪ್ಲಾನ್ ಏಕೆ ಆಯ್ಕೆ ಮಾಡಬೇಕು?

ಈ ಪ್ಲಾನ್ ಪ್ರೈಮರಿ ಮತ್ತು ಸೆಕೆಂಡರಿ ಬಳಕೆದಾರರ ಜೊತೆಗೆ 6 ಇತರರನ್ನು ಸೇರಿಸಿಕೊಳ್ಳಬಹುದು. ಇದರಲ್ಲಿ ಅನಿಯಮಿತ ಕರೆಗಳು, ಡೇಟಾ ಮತ್ತು ಹಲವು OTT ಸಬ್‌ಸ್ಕ್ರಿಪ್ಶನ್‌ಗಳು ಸಿಗುತ್ತವೆ.

Vi ಮ್ಯಾಕ್ಸ್ ಫ್ಯಾಮಿಲಿ ಪ್ಲಾನ್ ಬೆಲೆ ಎಷ್ಟು?

ಈ ಪ್ಲಾನ್ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ. ಈ ಪ್ಯಾಕ್‌ನ ಬೆಲೆ ತಿಂಗಳಿಗೆ ಕೇವಲ 871 ರೂ.

Vi ಮ್ಯಾಕ್ಸ್ ಫ್ಯಾಮಿಲಿ ಪ್ಲಾನ್ ವಿವರಗಳು

ವೊಡಾಫೋನ್ ಐಡಿಯಾ ಈ ಫ್ಯಾಮಿಲಿ ಪ್ಯಾಕ್‌ನ್ನು ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಈ ವಿಶೇಷ ಪ್ಲಾನ್‌ನಲ್ಲಿ ಎರಡು ಮೊಬೈಲ್ ಕನೆಕ್ಷನ್‌ಗಳು ಸಿಗುತ್ತವೆ. ಪ್ರತಿದಿನ 120GB ಡೇಟಾ ಸಿಗುತ್ತದೆ. ಪ್ರೈಮರಿ ಬಳಕೆದಾರರಿಗೆ 70GB ಮತ್ತು ಸೆಕೆಂಡರಿ ಬಳಕೆದಾರರಿಗೆ 40GB ಡೇಟಾ ಸಿಗುತ್ತದೆ. ಹೆಚ್ಚುವರಿಯಾಗಿ 10GB ಶೇರ್ ಮಾಡಲು ಸಿಗುತ್ತದೆ. 400GB ಡೇಟಾ ರೋಲ್‌ಓವರ್ ಸೌಲಭ್ಯವಿದೆ. ಪ್ರತಿ ಬಳಕೆದಾರರಿಗೆ 200GB ಡೇಟಾ ಸಿಗುತ್ತದೆ. ರಾತ್ರಿ 12 ರಿಂದ ಬೆಳಗ್ಗೆ 6 ರವರೆಗೆ ಅನಿಯಮಿತ ಡೇಟಾ ಸಿಗುತ್ತದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ವರ್ಗದ ಜನತೆಗೆ ಈ ಪ್ಲಾನ್ ಪರಿಣಾಮಕಾರಿಯಾಗಿದೆ.

Vi ಮ್ಯಾಕ್ಸ್ ಫ್ಯಾಮಿಲಿ ರೀಚಾರ್ಜ್ OTT ಪ್ರಯೋಜನಗಳು

ಈ ಪ್ಯಾಕ್‌ನಲ್ಲಿ ಪ್ರೈಮರಿ ಬಳಕೆದಾರರಿಗೆ Netflix Basic ಸಬ್‌ಸ್ಕ್ರಿಪ್ಶನ್ ಉಚಿತವಾಗಿ ಸಿಗುತ್ತದೆ. Vi Movies & TV ಆ್ಯಪ್ ಮೂಲಕ OTT ಕಂಟೆಂಟ್ ವೀಕ್ಷಿಸಬಹುದು. Vi ‘Choice’ ಪ್ರಯೋಜನದ ಅಡಿಯಲ್ಲಿ ಒಂದು OTT ಪ್ಲಾಟ್‌ಫಾರ್ಮ್ ಆಯ್ಕೆ ಮಾಡಿಕೊಳ್ಳಬಹುದು.

Vi ಮ್ಯಾಕ್ಸ್ ಫ್ಯಾಮಿಲಿ ರೀಚಾರ್ಜ್ ಆಡ್-ಆನ್

ಕುಟುಂಬದ ಇತರ ಸದಸ್ಯರನ್ನು ಸೇರಿಸಲು 299 ರೂ. ಪಾವತಿಸಬೇಕು. ಒಟ್ಟು ಆರು ಜನರನ್ನು ಸೇರಿಸಬಹುದು. ಹೊಸ ಸದಸ್ಯರಿಗೆ 40GB ಡೇಟಾ ಮತ್ತು ಅನಿಯಮಿತ ಕರೆಗಳು ಸಿಗುತ್ತವೆ. ಪ್ರತಿ ಬಳಕೆದಾರರಿಗೆ ಅನಿಯಮಿತ 5G ಡೇಟಾ ಸಿಗುತ್ತದೆ.

ಗಮನಿಸಿ: Vi ಫ್ಯಾಮಿಲಿ ಪ್ಯಾಕ್ ರೀಚಾರ್ಜ್ ದೆಹಲಿ-NCR, ಮುಂಬೈ, ಪಾಟ್ನಾ, ಚಂಡೀಗಢ ಮುಂತಾದ ನಗರಗಳಲ್ಲಿ ಲಭ್ಯವಿದೆ. ರೀಚಾರ್ಜ್ ಮಾಡುವ ಮೊದಲು ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ.

ಸಾರ್ವಜನಿಕ ವಲಯದ ಉದ್ಯಮವಾಗುತ್ತಾ ವೊಡಾಫೋನ್ ಐಡಿಯಾ?

ಕೇಂದ್ರ ಸರ್ಕಾರದ ಬಳಿಯಲ್ಲಿ ವೊಡಾಫೋನ್ ಐಡಿಯಾ ಕಂಪನಿಯ ಶೇ.49ರಷ್ಟು (ಶೇ.48.99) ಪಾಲುದಾರಿಕೆಯನ್ನು ಹೊಂದಿದೆ. ವೊಡಾಫೋನ್ ಐಡಿಯಾವನ್ನು ಸಾರ್ವಜನಿಕ ವಲಯದ ಉದ್ಯಮವನ್ನಾಗಿ ಮಾಡುವ ಯಾವುದೇ ಯೋಚನೆ ಮತ್ತು ಪ್ರಸ್ತಾವನನೆ ಸರ್ಕಾರದ ಮುಂದಿಲ್ಲ. ಒಂದು ವೇಳೆ ಹೆಚ್ಚಿನ ಪಾಲುದಾರಿಕೆ ಖರೀದಿಸಿದ್ರೆ ಅದು ಸರ್ಕಾರಿ ಸಂಸ್ಥೆಯಾಗಲಿದೆ. ನಾವು ಶೇ.49ರ ಪಾಲುದಾರಿಕೆಯಲ್ಲಿ ಮುಂದುವರಿಯುತ್ತವೆ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದರು.