MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಮಗನ ಸಾವಿನ ನೋವಿನಲ್ಲೇ ಮೋದಿ ಭೇಟಿ, 15,000 ಕೋಟಿ ರೂ ದಾನ ಘೋಷಿಸಿದ ವೇದಾಂತ ಮುಖ್ಯಸ್ಥ

ಮಗನ ಸಾವಿನ ನೋವಿನಲ್ಲೇ ಮೋದಿ ಭೇಟಿ, 15,000 ಕೋಟಿ ರೂ ದಾನ ಘೋಷಿಸಿದ ವೇದಾಂತ ಮುಖ್ಯಸ್ಥ

ಮಗನ ಸಾವಿನ ನೋವಿನಲ್ಲೇ ಮೋದಿ ಭೇಟಿ, ಮಹತ್ವದ ಮಾತುಕತೆ ನಡೆಸಿದ ವೇದಾಂತ ಮುಖ್ಯಸ್ಥ ಮೊದಲೇ ನಿರ್ಧರಿಸಿದಂತೆ 15,000 ಕೋಟಿ ರೂ ದಾನ ಮಾಡುವುದಾಗಿ ಪ್ರಧಾನಿ ಮೋದಿಗೆ ತಿಳಿಸಿದ್ದಾರೆ. ಯಾರಿಗೆಲ್ಲಾ ಆಸ್ತಿ ದಾನ?

2 Min read
Author : Chethan Kumar
Published : Feb 03 2026, 04:18 PM IST
Share this Photo Gallery
  • FB
  • TW
  • Linkdin
  • Whatsapp
16
ವೇದಾಂತ ಮುಖ್ಯಸ್ಥ ಅನಿಲ್ ಅಗರ್ವಾಲ್ ನೋವಿನಲ್ಲೂ ಮಹತ್ವದ ನಿರ್ಧಾರ
Image Credit : stockPhoto

ವೇದಾಂತ ಮುಖ್ಯಸ್ಥ ಅನಿಲ್ ಅಗರ್ವಾಲ್ ನೋವಿನಲ್ಲೂ ಮಹತ್ವದ ನಿರ್ಧಾರ

ವೇದಾಂತ ಮುಖ್ಯಸ್ಥ ಅನಿಲ್ ಅಗರ್ವಾಲ್ ಪುತ್ರ 49ರ ಹರೆಯ ಅಗ್ನಿವೇಶ್ ಅಗರ್ವಾಲ್ ಸಾವಿನ ಬಳಿಕ ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಜನವರಿ 7 ರಂದು ಅಗ್ನಿವೇಶ್ ಅಗರ್ವಾಲ್ ನಿಧನರಾಗಿದ್ದರು. ಇದೀಗ ಒಂದು ತಿಂಗಳಲ್ಲೇ ವೇದಾಂತ ಮುಖ್ಯಸ್ಥ ಅನಿಲ್ ಅಗರ್ವಾಲ್ ಆಸ್ತಿ ದಾನ ಪ್ರಕ್ರಿಯೆ ಆರಂಭಿಸಿದ್ದಾರೆ. ಪ್ರಧಾನಿ ಮೋದಿಗೂ ತಮ್ಮ ಆಸ್ತಿ ದಾನದ ಕುರಿತು ಮಾಹಿತಿ ನೀಡಿದ್ದಾರೆ.

26
ಆಸ್ತಿಯ ಶೇಕಡಾ 75ರಷ್ಟು ದಾನ
Image Credit : x.com/AnilAgarwal_Ved

ಆಸ್ತಿಯ ಶೇಕಡಾ 75ರಷ್ಟು ದಾನ

ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮದಲ್ಲಿ ವಿಶ್ವದ ನಾಯಕರ ಜೊತೆಗಿನ ದುಂಡು ಮೇಜು ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಹ್ವಾನದ ಮೇರೆಗೆ ಅನಿಲ್ ಅಗರ್ವಾಲ್ ಕೂಡ ಪಾಲ್ಗೊಂಡಿದ್ದರು. ವಿಶ್ವ ನಾಯಕರ ಜೊತೆ ಅನಿಲ್ ಅಗರ್ವಾಲ್ ಗ್ಲೋಬಲ್ ಎನರ್ಜಿ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಹಾಗೂ ಅಗರ್ವಾಲ್ ಮಹತ್ವದ ಮಾತುಕತೆ ನಡೆಸಿದ್ದಾರೆ. ಪುತ್ರನ ನಿಧನದ ಬೆನ್ನಲ್ಲೇ ಘೋಷಿಸಿದಂತೆ ತಾವು ತಮ್ಮ ಆಸ್ತಿಯ ಶೇಕಡಾ 75ರಷ್ಟು ದಾನ ಮಾಡುವುದಾಗಿ ಮೋದಿಗೆ ತಿಳಿಸಿದ್ದಾರೆ.

Related Articles

Related image1
ಮೈನಿಂಗ್‌ ದಿಗ್ಗಜ, ವೇದಾಂತ ಚೇರ್ಮನ್‌ ಅನಿಲ್‌ ಅಗರ್ವಾಲ್‌ಗೆ ಪುತ್ರ ವಿಯೋಗ, 49ನೇ ವಯಸ್ಸಿಗೆ ಸಾವು ಕಂಡ ಏಕೈಕ ಪುತ್ರ ಅಗ್ನಿವೇಶ್‌!
Related image2
ತಿರುಪತಿ ತಿಮ್ಮಪ್ಪನಿಗೆ 1.2 ಕೋಟಿ ರೂಪಾಯಿ ಮೌಲ್ಯದ ಬ್ಲೇಡ್‌ ದಾನ ಮಾಡಿದ ಹೈದರಾಬಾದ್‌ ಉದ್ಯಮಿ
36
ಮಗನ ಆಶಯದಂತೆ ಸಮಾಜಮುಖಿ ಕೆಲಸ
Image Credit : X@@AnilAgarwal_Ved

ಮಗನ ಆಶಯದಂತೆ ಸಮಾಜಮುಖಿ ಕೆಲಸ

ನನ್ನ ಮಗನ ಆಶಯದಂತೆ ನಾನು ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುತ್ತೇನೆ. ನನ್ನ ದುಡಿದ ಹಣದಲ್ಲಿ 15,000 ಕೋಟಿ ರೂಪಾಯಿ ಹಣವನ್ನು ದಾನ ಮಾಡುತ್ತೇನೆ. ಶಿಕ್ಷಣ, ಆರೋಗ್ಯ ಸೇರಿದಂತೆ ಸಮಾಜಕ್ಕೆ ಒಳಿತಾಗುವ ಕ್ಷೇತ್ರಕ್ಕೆ 15,000 ಕೋಟಿ ರೂಪಾಯಿ ದಾನದ ಮೂಲಕ ನೀಡುತ್ತೇನೆ ಎಂದು ಅನಿಲ್ ಅಗರ್ವಾಲ್ , ಮೋದಿ ಜೊತೆಗಿನ ಮಾತುಕತೆಯಲ್ಲಿ ಹೇಳಿದ್ದಾರೆ.

46
ನೀವು ಎದೆಗುಂದಬೇಡಿ, ನಿಮ್ಮ ಸೇವೆ ಮುಂದುವರಿಯಬೇಕು
Image Credit : Getty

ನೀವು ಎದೆಗುಂದಬೇಡಿ, ನಿಮ್ಮ ಸೇವೆ ಮುಂದುವರಿಯಬೇಕು

ಮಾತುಕತೆ ವೇಳೆ ಪ್ರಧಾನಿ ಮೋದಿ, ಅಗ್ನಿವೇಶ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಅನಿಲ್ ಅಗರ್ವಾಲ್ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಅನಿಲ್ ಅಗರ್ವಾಲ್ ಹಾಗೂ ನಿಮ್ಮ ಪತ್ನಿ ಇಬ್ಬರು ಎದೆಗಂದಬಾರದು. ನಿಮ್ಮ ಕೊಡುಗೆ ಸಮಾಜಕ್ಕೆ ಅತ್ಯವಶ್ಯಕ. ನಿಮ್ಮ ಜೊತೆ ನಾವಿದ್ದೇವೆ. ಇಡೀ ದೇಶದವಿದೆ. ಹೀಗಾಗಿ ನೀವು ಉತ್ಸಾಹದಿಂದ ಕೆಲಸ ಮಾಡಬೇಕು ಎಂದು ಮೋದಿ ಮನವಿ ಮಾಡಿದ್ದಾರೆ.

56
ಪ್ರಧಾನಿ ಮೋದಿ ಪಡೆದ ನಾವು ಲಕ್ಕಿ
Image Credit : X

ಪ್ರಧಾನಿ ಮೋದಿ ಪಡೆದ ನಾವು ಲಕ್ಕಿ

ನರೇಂದ್ರ ಮೋದಿಯನ್ನು ಪ್ರಧಾನಿಯಾಗಿ ಪಡೆದ ನಾವು ಲಕ್ಕಿ. ದೇಶದ ಜನರ ಮಾತುಗಳನ್ನು, ನಾಡಿ ಮಿಡಿತವನ್ನು ಮೋದಿ ಕೇಳುತ್ತಾರೆ ಎಂದಿದ್ದಾರೆ. ಪ್ರಧಾನಿ ಮೋದಿ ಸಹಾನುಭೂತಿ, ಜನರೊಂದಿಗೆ ಬಲವಾದ ಸಂಪರ್ಕ ಹೊಂದಿರುವ ನಾಯಕ ಎಂದು ಬಣ್ಣಿಸಿದ್ದಾರೆ. ಮೋದಿ ನೀಡಿದ ಬೆಂಬಲ ನಮಗೆ ಮತ್ತಷ್ಟು ಶಕ್ತಿ ನೀಡಿದೆ ಎಂದು ಅನಿಲ್ ಅಗರ್ವಾಲ್ ಹೇಳಿದ್ದಾರೆ.

66
ಅಗ್ನಿವೇಶ್ ದುರಂತ ಸಾವು
Image Credit : x.com/AnilAgarwal_Ved

ಅಗ್ನಿವೇಶ್ ದುರಂತ ಸಾವು

ಜನವರಿ 7 ರಂದು ಅನಿಲ್ ಅಗರ್ವಾಲ್ ಅವರ ಏಕೈಕ ಪುತ್ರ ಅಗ್ನಿವೇಶ್ ಅಗರ್ವಾಲ್, ಅಮೆರಿಕದಲ್ಲಿ ಸ್ಕೀಯಿಂಗ್ ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಹೃದಯಾಘಾತದಿಂದ ನಿಧನರಾಗಿದ್ದರು. ಈ ದುಃಖದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಖುದ್ದಾಗಿ ಸಂತಾಪ ಸೂಚಿಸಿ, ಬೆಂಬಲ ನೀಡಿದ್ದಕ್ಕೆ ಅಗರ್ವಾಲ್ ಧನ್ಯವಾದ ತಿಳಿಸಿದ್ದಾರೆ.

ಅಗ್ನಿವೇಶ್ ದುರಂತ ಸಾವು

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಭಾರತ ಸುದ್ದಿ
ವ್ಯವಹಾರ

Latest Videos
Recommended Stories
Recommended image1
ಪ್ರತಿ ಚದರ ಮೀಟರ್‌ಗೆ 98,466 ರೂಪಾಯಿ, ಕೋನದಾಸಪುರದ 52 ಎಕರೆ ಜಾಗ ಹರಾಜು ಮಾಡಿ ಭರ್ಜರಿ ಲಾಭ ಮಾಡಿದ ಬಿಡಿಎ!
Recommended image2
ಬ್ಯಾಂಕ್ ಗ್ರಾಹಕರೇ ಎಚ್ಚರ, ನಿಮ್ಮ ಮೊಬೈಲ್‌ಗೆ ಈ ಮೆಸೇಜ್ ಬಂದಿದೆಯಾ ಚೆಕ್ ಮಾಡಿ?
Recommended image3
Stock Market: 20 ವರ್ಷಗಳ ಹಿಂದೆ 1 ಲಕ್ಷ ಹೂಡಿಕೆ ಮಾಡಿದ್ದರೆ, ಇಂದು ನಿಮ್ಮ ಹಣ ಎಷ್ಟಾಗುತ್ತಿತ್ತು ಗೊತ್ತಾ?
Related Stories
Recommended image1
ಮೈನಿಂಗ್‌ ದಿಗ್ಗಜ, ವೇದಾಂತ ಚೇರ್ಮನ್‌ ಅನಿಲ್‌ ಅಗರ್ವಾಲ್‌ಗೆ ಪುತ್ರ ವಿಯೋಗ, 49ನೇ ವಯಸ್ಸಿಗೆ ಸಾವು ಕಂಡ ಏಕೈಕ ಪುತ್ರ ಅಗ್ನಿವೇಶ್‌!
Recommended image2
ತಿರುಪತಿ ತಿಮ್ಮಪ್ಪನಿಗೆ 1.2 ಕೋಟಿ ರೂಪಾಯಿ ಮೌಲ್ಯದ ಬ್ಲೇಡ್‌ ದಾನ ಮಾಡಿದ ಹೈದರಾಬಾದ್‌ ಉದ್ಯಮಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved