Kannada

18,640 ಕೋಟಿ ರೂ. ಬಿಡುಗಡೆ

ಕೇಂದ್ರ ಸರ್ಕಾರವು ಪಿಎಂ-ಕಿಸಾನ್ ಯೋಜನೆಯ 22ನೇ ಕಂತನ್ನು ಬಿಡುಗಡೆ ಮಾಡಲಿದೆ. ಒಟ್ಟು 18,640 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ.

Kannada

ಮಾರ್ಚ್ 13 ರಂದು ಹಣ ಜಮಾ

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 13ರಂದು ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿಮ ಸುಮಾರು 9.32 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಈ ಹಣ ಜಮೆ ಮಾಡಲಿದ್ದಾರೆ.

Image credits: X
Kannada

ವಾರ್ಷಿಕ 6,000 ರೂ. ಸಹಾಯಧನ

ರೈತ ಕುಟುಂಬಗಳಿಗೆ ಪ್ರತಿ ವರ್ಷ 6,000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತದೆ. ಈ ಮೊತ್ತವನ್ನು ತಲಾ 2,000 ರೂಪಾಯಿಯಂತೆ ಮೂರು ಸಮಾನ ಕಂತುಗಳಲ್ಲಿ ವಿತರಿಸಲಾಗುತ್ತದೆ.

Image credits: X
Kannada

4.27 ಲಕ್ಷ ಕೋಟಿ ರೂ.ಗಳ ಮೈಲಿಗಲ್ಲು

ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಪ್ರಕಾರ, ಈ 22ನೇ ಕಂತಿನ ಬಿಡುಗಡೆಯೊಂದಿಗೆ ಯೋಜನೆಯಡಿ ವಿತರಿಸಲಾದ ಒಟ್ಟು ಮೊತ್ತವು 4.27 ಲಕ್ಷ ಕೋಟಿ ರೂಪಾಯಿ ಮೈಲಿಗಲ್ಲು ಮುಟ್ಟಿದೆ.

Image credits: X
Kannada

ಮಹಿಳಾ ರೈತರಿಗೆ ಆದ್ಯತೆ

ಈ ಬಾರಿ ವಿಶೇಷವಾಗಿ 2.15 ಕೋಟಿಗೂ ಹೆಚ್ಚು ಮಹಿಳಾ ರೈತರು ಆರ್ಥಿಕ ಸಹಾಯ ಪಡೆಯಲಿದ್ದಾರೆ. ಇದು ಗ್ರಾಮೀಣ ಭಾಗದಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ವೇಗ ನೀಡಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Image credits: X
Kannada

ನೇರ ನಗದು ವರ್ಗಾವಣೆ (DBT)

2019 ರಲ್ಲಿ ಯೋಜನೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 4.09 ಲಕ್ಷ ಕೋಟಿ ರೂ.ಗಳನ್ನು ಈಗಾಗಲೇ ಡಿಬಿಟಿ ಮೂಲಕ ರೈತರ ಖಾತೆಗಳಿಗೆ ನೇರವಾಗಿ ಕಳುಹಿಸಲಾಗಿದೆ.

Image credits: X
Kannada

ಇ-ಕೆವೈಸಿ (e-KYC) ಕಡ್ಡಾಯ

ಯಾವುದೇ ವಿಳಂಬವಿಲ್ಲದೆ ಹಣವನ್ನು ಪಡೆಯಲು ರೈತರು ತಮ್ಮ ವಿವರಗಳನ್ನು ಪಿಎಂ-ಕಿಸಾನ್ ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಿರಬೇಕು. ಮುಖ್ಯವಾಗಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣ ಮಾಡಿರಬೇಕು.

Image credits: X
Kannada

ಕೃಷಿ ಚಟುವಟಿಕೆಗೆ ನೆರವು

ಈ ಕಂತಿನ ಹಣವು ರೈತರಿಗೆ ಕೃಷಿ ಪರಿಕರಗಳನ್ನು ಖರೀದಿಸಲು ಸಹಾಯ ಮಾಡಲಿದೆ. ಇದು ಗ್ರಾಮೀಣ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದಲ್ಲದೆ, ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ನೆರವಾಗಲಿದೆ.

Image credits: iSTOCK

ಎಂಜಿನಿಯರಿಂಗ್ ಬಿಟ್ಟು ಮೈಕ್ ಹಿಡಿದ ಸಂಜನಾ: ಈಗ ಪ್ರತಿ ಶೋಗೆ ₹40 ಲಕ್ಷ ಚಾರ್ಜ್‌!

ಚಿನ್ನ, ಬೆಳ್ಳಿ, ಬಿಟ್‌ಕಾಯಿನ್.. ಈ ಮೂರರಲ್ಲಿ ಯಾವುದ್ರಲ್ಲಿ ಹೂಡಿಕೆ ಮಾಡ್ಬೇಕು?

2025ರ ಸ್ವಿಗ್ಗಿ ಹಿಸ್ಟರಿ: ಭಾರತೀಯರು ಅತಿ ಹೆಚ್ಚು ಆರ್ಡರ್ ಮಾಡಿದ ಫುಡ್ ಯಾವುದು?

ಚಿನ್ನ ಖರೀದಿ ಶೇ.12 ಕುಸಿತ: ಈ ವರ್ಷ ಎಷ್ಟು ಟನ್ ಇಳಿಕೆ?