MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • Swiss bank: ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಭಾರೀ ಪ್ರಮಾಣ ಇಳಿಕೆ

Swiss bank: ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಭಾರೀ ಪ್ರಮಾಣ ಇಳಿಕೆ

Swiss bank indian money drops by 3000 crore but customer deposits rise 2025 kannada ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರ ಒಟ್ಟು ಹಣ 36 ಸಾವಿರ ಕೋಟಿ ರೂ.ಗೆ ಇಳಿದಿದ್ದರೂ, ವೈಯಕ್ತಿಕ ಮತ್ತು ಕಂಪನಿ ಖಾತೆಗಳ ಠೇವಣಿಯಲ್ಲಿ 50% ಏರಿಕೆ ದಾಖಲಾಗಿದೆ.

1 Min read
Author : Sushma Hegde
Published : Jun 19 2026, 10:28 AM IST
Share this Photo Gallery
  • FB
  • TW
  • Linkdin
  • Whatsapp
14
ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಭಾರೀ ಪ್ರಮಾಣ ಇಳಿಕೆ
Image Credit : Asianet News

ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಭಾರೀ ಪ್ರಮಾಣ ಇಳಿಕೆ

ನವದೆಹಲಿ/ಜ್ಯೂರಿಚ್: ಸ್ವಿಜರ್ಲೆಂಡ್‌ನ ರಾಷ್ಟ್ರೀಯ ಬ್ಯಾಂಕ್ (SNB) ಬಿಡುಗಡೆ ಮಾಡಿದ 2025ರ ವಾರ್ಷಿಕ ಅಂಕಿಅಂಶಗಳ ಪ್ರಕಾರ, ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರಿಗೆ ಸಂಬಂಧಿಸಿದ ಒಟ್ಟು ಹಣದ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 3,000 ಕೋಟಿ ರೂ. ಇಳಿಕೆಯಾಗಿ 36,000 ಕೋಟಿ ರೂ. ಮಟ್ಟಕ್ಕೆ ತಲುಪಿದೆ.

2024ರಲ್ಲಿ ಭಾರತೀಯರ ಹಣದ ಪ್ರಮಾಣ ಭಾರೀ ಏರಿಕೆ ಕಂಡು ಸುಮಾರು 39,000 ಕೋಟಿ ರೂ. ತಲುಪಿತ್ತು. ಆದರೆ 2025ರಲ್ಲಿ ಒಟ್ಟು ಮೊತ್ತದಲ್ಲಿ ಸುಮಾರು 8% ಕುಸಿತ ಕಂಡುಬಂದಿದೆ. ಇದರಿಂದ ಭಾರತೀಯರ ಸ್ವಿಸ್ ಠೇವಣಿಗಳ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಆದರೆ ಗ್ರಾಹಕ ಖಾತೆಗಳಲ್ಲಿ ಹಣ ಹೆಚ್ಚಳ!
Image Credit : X

ಆದರೆ ಗ್ರಾಹಕ ಖಾತೆಗಳಲ್ಲಿ ಹಣ ಹೆಚ್ಚಳ!

ಒಟ್ಟು ಠೇವಣಿ ಮೊತ್ತ ಕಡಿಮೆಯಾದರೂ, ಭಾರತೀಯ ವ್ಯಕ್ತಿಗಳು ಹಾಗೂ ಕಂಪನಿಗಳು ನೇರವಾಗಿ ಗ್ರಾಹಕ ಖಾತೆಗಳಲ್ಲಿ ಇಟ್ಟಿರುವ ಮೊತ್ತದಲ್ಲಿ ಸುಮಾರು 50% ಹೆಚ್ಚಳ ಕಂಡುಬಂದಿದೆ. ಈ ವಿಭಾಗದಲ್ಲಿ ಸುಮಾರು 6,000 ಕೋಟಿ ರೂ. ಹೆಚ್ಚಳ ದಾಖಲಾಗಿದ್ದು, ಇದು ಒಟ್ಟು ಭಾರತೀಯ ಹಣದ ಪ್ರಮಾಭ ಸುಮಾರು 16% ರಷ್ಟಾಗುತ್ತದೆ .

34
ಈ ಹಣವೆಲ್ಲ ಕಪ್ಪುಹಣವೇ?
Image Credit : our own

ಈ ಹಣವೆಲ್ಲ ಕಪ್ಪುಹಣವೇ?

ತಜ್ಞರ ಪ್ರಕಾರ, ಸ್ವಿಸ್ ಬ್ಯಾಂಕ್‌ಗಳಲ್ಲಿ ಇರುವ ಎಲ್ಲಾ ಭಾರತೀಯ ಹಣವನ್ನು ಕಪ್ಪುಹಣ ಎಂದು ಪರಿಗಣಿಸುವುದು ತಪ್ಪು. ಇದರಲ್ಲಿ ಭಾರತೀಯ ಕಂಪನಿಗಳ ವ್ಯವಹಾರಿಕ ಖಾತೆಗಳು, ಬ್ಯಾಂಕ್‌ಗಳ ನಡುವಿನ ಹಣಕಾಸು , ವ್ಯವಹಾರಗಳು, ಹೂಡಿಕೆ ನಿಧಿಗಳು, ವೈಯಕ್ತಿಕ ಉಳಿತಾಯ ಖಾತೆಗಳು, ಷೇರು ಮತ್ತು ಬಾಂಡ್‌ಗಳಿಗೆ ಸಂಬಂಧಿಸಿದ ಹೂಡಿಕೆಗಳು ಇತ್ಯಾದಿ ಸೇರಿರುತ್ತವೆ.

44
 ವರದಿಯಲ್ಲಿ ಸೇರದ ಹಣ ಯಾವುದು?
Image Credit : Getty

ವರದಿಯಲ್ಲಿ ಸೇರದ ಹಣ ಯಾವುದು?

ಸ್ವಿಸ್ ರಾಷ್ಟ್ರೀಯ ಬ್ಯಾಂಕ್‌ನ ಅಧಿಕೃತ ಅಂಕಿಅಂಶಗಳಲ್ಲಿ ಬೇರೆ ದೇಶಗಳ ಹೆಸರಿನಲ್ಲಿ ಅಥವಾ ಟ್ರಸ್ಟ್‌ಗಳು, ಶೆಲ್ ಕಂಪನಿಗಳ ಮೂಲಕ ಇಡಲಾಗಿರುವ ಹಣವನ್ನು ಪ್ರತ್ಯೇಕವಾಗಿ ಗುರುತಿಸಲಾಗುವುದಿಲ್ಲ. ಆದ್ದರಿಂದ ಈ ಅಂಕಿಅಂಶಗಳು ಭಾರತೀಯರ ಒಟ್ಟು ಜಾಗತಿಕ ಆಸ್ತಿ ವಿವರವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ.

ಸರ್ಕಾರದ ಕ್ರಮಗಳ ಪರಿಣಾಮವೇ?

ಕಳೆದ ಕೆಲವು ವರ್ಷಗಳಿಂದ ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವೆ ತೆರಿಗೆ ಮಾಹಿತಿ ವಿನಿಮಯ ಒಪ್ಪಂದ ಜಾರಿಯಲ್ಲಿದೆ. ಇದರ ಪರಿಣಾಮವಾಗಿ ವಿದೇಶಿ ಖಾತೆಗಳ ಪಾರದರ್ಶಕತೆ ಹೆಚ್ಚಾಗಿದ್ದು, ಅಕ್ರಮ ಹಣ ವರ್ಗಾವಣೆಯ ಮೇಲೆ ನಿಗಾ ಬಲಗೊಂಡಿದೆ ಎಂದು ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ವ್ಯವಹಾರ
ಹಣ (Hana)
ಭಾರತ ಸುದ್ದಿ

Latest Videos
Recommended Stories
Recommended image1
100 ಸಿಸಿಯ ಮೈಲೇಜ್‌, 150 ಸಿಸಿಯಂಥ ಪರ್ಫಾಮೆನ್ಸ್‌, ಗ್ರಾಹಕರ ಮೊದಲ ಆಯ್ಕೆಯಾಗುತ್ತಿರುವುದೇಕೆ 125 ಸಿಸಿ ಬೈಕ್‌ಗಳು?
Recommended image2
30 ಕೆಜಿ ತೂಕ ಇಳಿಕೆ ಸಾಧ್ಯವೇ ಇಲ್ಲ, ಬೆಟ್ ಕಟ್ಟಿ 2.5 ಲಕ್ಷ ರೂ ಕಳೆದುಕೊಂಡ ಉದ್ಯಮಿ ನಿತಿನ್ ಕಾಮತ್
Recommended image3
Mini Scorpio ರಿಲೀಸ್‌ ಮಾಡಲು ರೆಡಿಯಾದ ಮಹೀಂದ್ರಾ, ಕಮ್ಮಿ ಬಜೆಟ್‌ನಲ್ಲಿ ಲಕ್ಸುರಿ ಲುಕ್ ಕೊಡಲಿದೆ ವಿಜನ್ ಎಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved