ಸರ್ಕಾರಿ ಭೂಮಿ 250 ಕೋಟಿಗೆ ಇನ್ಫೋಸಿಸ್ ಮಾರಾಟ ವಿವಾದ, ಸ್ಪಷ್ಟನೆ ನೀಡಿದ ಮಾಜಿ ಸಿಎಫ್ಒ
ಸರ್ಕಾರಿ ಭೂಮಿ 250 ಕೋಟಿಗೆ ಇನ್ಫೋಸಿಸ್ ಮಾರಾಟ ವಿವಾದ, ಸ್ಪಷ್ಟನೆ ನೀಡಿದ ಮಾಜಿ ಸಿಎಫ್ಒ, ಸರ್ಕಾರದಿಂದ ಇನ್ಫೋಸಿಸ್ ಕ್ಯಾಂಪಸ್‌ಗೆ ಜಾಗ ಪಡೆದು ಮಾರಾಟ ಮಾಡಿದ್ದಾರೆ ಅನ್ನೋ ಆರೋಪ, ವಿವಾದ ತೀವ್ರಗೊಳ್ಳುತ್ತಿದ್ದಂತೆ ಸಿಎಫ್ಒ ಮಾಹಿತಿ ಬಹಿರಂಗಪಡಿಸಿದ್ದಾರೆ.

ಇನ್ಫೋಸಿಸ್‌ಗೆ ಸುತ್ತಿಕೊಂಡ ಭೂಮಿ ವಿವಾದ
ಟೆಕ್ ದೈತ್ಯ ಕಂಪನಿ ಇನ್ಫೋಸಿಸ್ ಮೇಲೆ ಸರ್ಕಾರಿ ಭೂಮಿ ಮಾರಾಟ ವಿವಾದ ಸುತ್ತಿಕೊಂಡಿದೆ. ಇನ್ಫೋಸಿಸ್ ಕ್ಯಾಂಪಸ್ ನಿರ್ಮಾಣಕ್ಕೆ ಸರ್ಕಾರದಿಂದ ವಿನಾಯಿತಿ ದರದಲ್ಲಿ ಭೂಮಿ ಪಡೆದು ಇದೀಗ 250 ಕೋಟಿ ರೂಪಾಯಿಗೆ ರಿಯಲ್ ಎಸ್ಟೇಟ್ ಕಂಪನಿಗೆ ಮಾರಾಟ ಮಾಡಿದೆ ಅನ್ನೋ ವಾವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಕುರಿತು ಹಲವರು ಗಂಭೀರ ಆರೋಪ ಮಾಡಿದ್ದಾರೆ. ಈ ಪೈಕಿ ಕಾಂಗ್ರೆಸ್ ನಾಯಕ, ಕಾರ್ತಿ ಚಿದಂಬರಂ ಕೂಡ ಟ್ವೀಟ್ ಮೂಲಕ ಇನ್ಫೋಸಿಸ್ ವಿರುದ್ದ ಆರೋಪ ಮಾಡಿದ್ದಾರೆ. ಇಷ್ಟೇ ಅಲ್ಲ ಭೂಮಿ ವಾಪಸ್ ನೀಡಲು ಸೂಚಿಸಿದ್ದಾರೆ. ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಇನ್ಫೋಸಿಸ್ ಮಾಜಿ ಫಿನಾನ್ಶಿಯಲ್ ಆಫೀಸರ್ ಮೋಹನ್‌ದಾಸ್ ಪೈ ಸ್ಪಷ್ಟನೆ ನೀಡಿದ್ದಾರೆ. ಇನ್ಫೋಸಿಸ್ ಇದೀಗ 250 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದು ಸರ್ಕಾರಿಭೂಮಿಯಲ್ಲ ಎಂದಿದ್ದಾರೆ.
ಅದು ಸರ್ಕಾರಿ ಭೂಮಿಯಲ್ಲhandas pai twet
ಮೋಹನ್‌ದಾಸ್ ಪೈ ಟ್ವೀಟ್ ಮೂಲಕ ಕಾರ್ತಿ ಚಿದಂಬರಂಗೆ ತಿರುಗೇಟು ನೀಡಿದ್ದಾರೆ. ಈ ರೀತಿ ಸುಳ್ಳು ಮಾಹಿತಿ ಹರಡುವುದನ್ನು ನಿಲ್ಲಿಸಿ ಎಂದು ಸೂಚಿಸಿದ್ದಾರೆ. ಇಷ್ಟೇ ಅಲ್ಲ ಇದು ಸರ್ಕಾರಿ ಭೂಮಿಯಲ್ಲ. ಕ್ಯಾಂಪಸ್ ನಿರ್ಮಾಣಕ್ಕಾಗಿ ಅಂದು ಇನ್ಫೋಸಿಸ್ ಮಾರುಕಟ್ಟೆಯಿಂದ ಖರೀದಿಸಿದ ಖಾಸಗಿ ಭೂಮಿ. ಸದ್ಯ ಇನ್ಫೋಸಿಸ್ ಕ್ಯಾಂಪಸ್ ನಿರ್ಮಾಣದ ಅಗತ್ಯವಿಲ್ಲ, ಹೀಗಾಗಿ ಮಾರಾಟ ಮಾಡಲಾಗಿದೆ ಎಂದು ಮೋಹನ್‌ದಾಸ್ ಪೈ ಸ್ಪಷ್ಟನೆ ನೀಡಿದ್ದಾರೆ.
ಕಾರ್ತಿಕ್ ಚಿದಂಬರ್ ಆರೋಪವೇನು?
ಕ್ಯಾಂಪಸ್ ನಿರ್ಮಾಣಕ್ಕಾಗಿ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಜಾಗ ಪಡೆದಿದ್ದರೆ, ಬೇರೆ ಉದ್ದೇಶಕ್ಕೆ ಇನ್ಫೋಸಿಸ್ ಬಳಸಿಕೊಳ್ಳುವಂತಿಲ್ಲ. ಇದೇ ವೇಳೆ ಈ ಜಾಗವನ್ನು ಈಗಿನ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡುವ ಹಕ್ಕು ಕೂಡ ಇನ್ಫೋಸಿಸ್‌ಗೆ ಇಲ್ಲ. ಹೀಗಾಗಿ ತಕ್ಷಣವೇ ಜಾಗ ವಾಪಸ್ ಪಡೆದು ಸರ್ಕಾರಕ್ಕೆ ಒಪ್ಪಿಸಿ ಎಂದು ಮಾಜಿ ಹಣಕಾಸು ಸಚಿವ ಪಿ ಚಿದಂಬಂರಂ ಪುತ್ರ ಕಾರ್ತಿ ಚಿದಂಬರಂ ಹೇಳಿದ್ದರು.
53.5 ಏಕರೆ ಭೂಮಿ
ಬೆಂಗಳೂರಿನ ಹೊರವಲಯದ ಆನೇಕಲ್ ತಾಲೂಕಿನಲ್ಲಿ ಕ್ಯಾಂಪಸ್ ನಿರ್ಮಾಣಕ್ಕಾಗಿ ಭೂಮಿ ಖರೀದಿಸಿತ್ತು. 53.5 ಎಕರೆ ಭೂಮಿಯನ್ನು ಇದೀಗ ಇನ್ಫೋಸಿಸ್ ಪೂರ್ವಾಂಕರ ರಿಯಲ್ ಎಸ್ಟೇಟ್ ಕಂಪನಿಗೆ ಮಾರಾಟ ಮಾಡಿದೆ. 250 ಕೋಟಿ ರೂಪಾಯಿಗೆ ಈ ಭೂಮಿಯನ್ನು ಮಾರಾಟ ಮಾಡಲಾಗಿದೆ. ಇದೀಗ ಪೂರ್ವಾಂಕರ ರಿಯಲ್ ಎಸ್ಟೇಟ್ ಕಂಪನಿ ದುಬಾರಿ ಪ್ರಾಜೆಕ್ಟ್ ಜಾರಿಗೊಳಿಸುತ್ತಿದೆ.
ಭಾರಿ ವಿವಾದ
ಇನ್ಫೋಸಿಸ್ ಭೂಮಿ ವಿವಾದ ಭಾರಿ ಕೋಲಾಹಲ ಸೃಷ್ಟಿಸಿತ್ತು. ಕಾರ್ತಿ ಚಿದಂಬರಂ ಸೇರಿದಂತೆ ಹಲವರು ಸೋಶಿಯಲ್ ಮೀಡಿಯಾ ಮೂಲಕ ಇನ್ಫೋಸಿಸ್ ವಿರುದ್ದ ಆಕ್ರೋಶ ಹೊರಹಾಕಿದ್ದರು. ಈ ಮೂಲಕ ಭೂಮಿ ವಿವಾದವೂ ಇನ್ಫೋಸಿಸ್ ಮೇಲೆ ಸುತ್ತಿಕೊಂಡಿದೆ.
ಭಾರಿ ವಿವಾದ
ಕೆಲಸದ ಸಮಯದ ವಿವಾದ
ಇತ್ತೀಚೆಗೆ ಇನ್ಫೋಸಿಸ್ ಹಲವು ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿದೆ. ಭೂಮಿ ವಿವಾದಕ್ಕಿಂತಲೂ ಮೊದಲು ಇನ್ಫೋಸಿಸ್ ಮಖ್ಯಸ್ಥ ನಾರಾಯಣ ಮೂರ್ತಿ ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಅನ್ನೋ ಹೇಳಿಕೆ ನೀಡಿ ಭಾರಿ ವಿವಾದ ಸೃಷ್ಟಿಸಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಗಿತ್ತು.
ಕೆಲಸದ ಸಮಯದ ವಿವಾದ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

