ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ; ಎರಡು ದಿನದಲ್ಲಿ ಕಡಿಮೆಯಾಯ್ತು 14 ಸಾವಿರ ರೂಪಾಯಿ
ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಸತತ ಎರಡನೇ ದಿನವೂ ಕುಸಿತ ಕಂಡಿದೆ. 22 ಮತ್ತು 24 ಕ್ಯಾರೆಟ್ ಚಿನ್ನದ ದರಗಳು ಗಮನಾರ್ಹವಾಗಿ ಇಳಿಕೆಯಾಗಿದ್ದು, ಬೆಳ್ಳಿ ಬೆಲೆ ಸ್ಥಿರವಾಗಿದೆ. ಪ್ರಮುಖ ನಗರಗಳ ಇಂದಿನ ದರವನ್ನು ಇಲ್ಲಿ ನೀಡಲಾಗಿದೆ.

10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?
ನೀವೇನಾದ್ರೂ ಚಿನ್ನ ಖರೀದಿಗೆ ಪ್ಲಾನ್ ಮಾಡಿಕೊಂಡಿದ್ರೆ, ಈ ದಿನ ನಿಮಗೆ ಸುವರ್ಣವಕಾಶ. ಸೋಮವಾರದ ಬಳಿಕ ಇಂದು ಸಹ ಭಾರತದಲ್ಲಿ ಚಿನ್ನದ ಬೆಲೆ ಕುಸಿತವಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಎರಡು ದಿನದ ಅವಧಿಯಲ್ಲಿ 14 ಸಾವಿರ ರೂಪಾಯಿವರೆಗೆ ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ಭಾರತದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 12,470 ರೂಪಾಯಿ (70 ರೂ. ಇಳಿಕೆ)
10 ಗ್ರಾಂ: 1,24,700 ರೂಪಾಯಿ (700 ರೂ.ಇಳಿಕೆ)
100 ಗ್ರಾಂ: 12,47,000 ರೂಪಾಯಿ (7,000 ರೂ. ಇಳಿಕೆ)
ಭಾರತದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 13,604 ರೂಪಾಯಿ (76 ರೂ.ಇಳಿಕೆ)
10 ಗ್ರಾಂ: 1,36,040 ರೂಪಾಯಿ (760 ರೂ. ಇಳಿಕೆ)
100 ಗ್ರಾಂ: 13,60,000 ರೂಪಾಯಿ (7600 ರೂ. ಇಳಿಕೆ)
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ಇಂದು ಭಾರತದ ಪ್ರಮುಖ ನಗರಗಳಲ್ಲಿಂದು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ : 1,24,700 ರೂಪಾಯಿ, ಮುಂಬೈ: 1,24,700 ರೂಪಾಯಿ, ದೆಹಲಿ: 1,24,850 ರೂಪಾಯಿ, ಬೆಂಗಳೂರು: 1,24,700 ರೂಪಾಯಿ, ಹೈದರಾಬಾದ್: 1,24,700 ರೂಪಾಯಿ, ವಡೋದರ: 1,24,500 ರೂಪಾಯಿ
ಇಂದು ಬೆಳ್ಳಿ ಬೆಲೆ
ಸೋಮವಾರ ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿತ್ತು. ಆದ್ರೆ ಇಂದು ಬೆಳ್ಳಿ ದರ ಸ್ಥಿರವಾಗಿದ್ದು, ನಿನ್ನೆಯ ಬೆಲೆಯಲ್ಲಿಯೇ ಖರೀದಿಸಬಹುದಾಗಿದೆ. ಇತ್ತೀಚೆಗೆ ಚಿನ್ನದ ಜೊತೆ ಬೆಳ್ಳಿ ಮೇಲಿನ ಹೂಡಿಕೆ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
10 ಗ್ರಾಂ: 1900 ರೂಪಾಯಿ
100 ಗ್ರಾಂ: 19,000 ರೂಪಾಯಿ
1000 ಗ್ರಾಂ: 1,90,000 ರೂಪಾಯಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.









