ಹೊಸ ₹20 ನೋಟು ಬಿಡುಗಡೆ ಮಾಡಿದ ಆರ್‌ಬಿಐ; ಹಳೆ ನೋಟಿಗೂ ಹೊಸದಕ್ಕೂ ವ್ಯತ್ಯಾಸವೇನು?
ಮಹಾತ್ಮ ಗಾಂಧಿ (ಹೊಸ) ಸರಣಿಯ ₹20 ರ ನೋಟುಗಳು RBI ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಸಹಿಯೊಂದಿಗೆ ಬಿಡುಗಡೆಯಾಗಲಿವೆ. ಹಳೆಯ ನೋಟುಗಳು ಕೂಡಾ ಚಲಾವಣೆಯಲ್ಲಿ ಮುಂದುವರಿಯಲಿವೆ. ಆದರೆ, ಈ ಎರಡು ಹೊಸ ನೋಟುಗಳ ನಡುವಿನ ವ್ಯತ್ಯಾಸ ಏನಿವೆ ನೋಡಿ..

RBI ಗವರ್ನರ್ ಸಂಜಯ್ ಮಲ್ಹೋತ್ರಾ ಡಿಸೆಂಬರ್ 11, 2024 ರಿಂದ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರ ಅಧಿಕಾರಾವಧಿ 3 ವರ್ಷಗಳವರೆಗೆ ಇರುತ್ತದೆ. ಅವರ ಅವಧಿಯಲ್ಲಿ RBIಯಿಂದ ಬರುತ್ತಿರುವ ಮೊದಲ ನೋಟು ಇದು. ಹೊಸ ₹20 ನೋಟಿನ ವಿನ್ಯಾಸ ಮತ್ತು ವೈಶಿಷ್ಟ್ಯಗಳು ಪ್ರಸ್ತುತ ಚಲಾವಣೆಯಲ್ಲಿರುವ ನೋಟುಗಳಿಗೆ ಹೇಗೆ ಭಿನ್ನವಾಗಿವೆ ಎಂಬುದನ್ನು ನೋಡಿ..
ಹಳೆಯ ₹20 ನೋಟು ಮತ್ತು ಹೊಸ ₹20 ನೋಟಿನ ನಡುವಿನ ವ್ಯತ್ಯಾಸವೆಂದರೆ ಹೊಸ ಗವರ್ನರ್‌ರ ಸಹಿ ಮಾತ್ರ. ಹಳೆಯ ₹20 ನೋಟುಗಳು ಚಲಾವಣೆಯಲ್ಲಿ ಮುಂದುವರಿಯುತ್ತವೆ ಎಂದು RBI ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ನೋಟುಗಳು ಮಹಾತ್ಮ ಗಾಂಧಿ (ಹೊಸ) ಸರಣಿಯ ಭಾಗವಾಗಿ ಹಸಿರು-ಹಳದಿ ಬಣ್ಣದಲ್ಲಿ ಎಲ್ಲೋರಾ ಗುಹೆಗಳ ಚಿತ್ರದೊಂದಿಗೆ ಇರುತ್ತವೆ.
RBI ಕಾಯ್ದೆಯ ಸೆಕ್ಷನ್ 26(2) ರ ಪ್ರಕಾರ, ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ಪ್ರತಿ ನಾಣ್ಯ ಮತ್ತು ನೋಟನ್ನು ಎಲ್ಲರೂ ಬಳಸಬೇಕು. ಇದು ಮಾನ್ಯವಲ್ಲ ಎಂದು ಯಾರೂ ಹೇಳುವಂತಿಲ್ಲ. ಹಾಗೆ ಹೇಳುವುದಿದ್ದರೆ ಆರ್‌ಬಿಐ ಕಾಯ್ದೆ ಹೀಗೆ ಹೇಳುತ್ತದೆ. RBI ಪ್ರಕಾರ, ಕಾನೂನುಬದ್ಧವಾಗಿ ಚಲಾವಣೆಯಲ್ಲಿರುವ ಪ್ರತಿ ನೋಟನ್ನು ದೇಶಾದ್ಯಂತ ಎಲ್ಲಿ ಬೇಕಾದರೂ ಬಳಸಬಹುದು.
ದೇಶದ ನೋಟುಗಳನ್ನು ನಾಲ್ಕು ಕರೆನ್ಸಿ ಮುದ್ರಣಾಲಯಗಳಲ್ಲಿ ಮುದ್ರಿಸಲಾಗುತ್ತದೆ. ಅವುಗಳಲ್ಲಿ ಎರಡು ನಾಸಿಕ್ ಮತ್ತು ದೇವಾಸ್ ಪ್ರದೇಶಗಳಲ್ಲಿ SPMCIL ಅಡಿಯಲ್ಲಿವೆ. ಇನ್ನೆರಡು ಮೈಸೂರು ಮತ್ತು ಸಾಲ್ಬೋನಿ ಪ್ರದೇಶಗಳಲ್ಲಿ BRBNMPL ನಿರ್ವಹಣೆಯಲ್ಲಿವೆ.
ನಾಣ್ಯಗಳನ್ನು ಮುಂಬೈ, ಹೈದರಾಬಾದ್, ಕೋಲ್ಕತ್ತಾ ಮತ್ತು ನೋಯ್ಡಾದಲ್ಲಿರುವ ನಾಲ್ಕು ಟಂಕಸಾಲೆಗಳಲ್ಲಿ ತಯಾರಿಸಲಾಗುತ್ತದೆ. ಇವೆಲ್ಲವೂ SPMCIL ಒಡೆತನದಲ್ಲಿದೆ. ಹೊಸ ₹20 ನೋಟುಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿವೆ.