2025ರಲ್ಲಿ ಹೆಚ್ಚು ಸಂಪತ್ತುಗಳಿಸಿದ ಭಾರತದ ಶ್ರೀಮಂತರ ಪಟ್ಟಿ ರಿಲೀಸ್, ಅಂಬಾನಿಗೆ ಎಷ್ಟನೇ ಸ್ಥಾನ?
2025ರಲ್ಲಿ ಹೆಚ್ಚು ಸಂಪತ್ತುಗಳಿಸಿದ ಭಾರತದ ಶ್ರೀಮಂತರ ಪಟ್ಟಿ ರಿಲೀಸ್, ಅಂಬಾನಿಗೆ ಎಷ್ಟನೇ ಸ್ಥಾನ?, ಬ್ಲೂಮ್‌ಬರ್ಗ್ ಬಿಲೇನಿಯರ್ಸ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಮೊದಲ ಸ್ಥಾನ ಯಾರಿಗೆ, ಅಂಬಾನಿ-ಅದಾನಿ ಈ ವರ್ಷ ಆಸ್ತಿಗಳಿಸಿದೆಷ್ಟು?

ಈ ವರ್ಷ ಉದ್ಯಮಿಗಳ ಪಾಲಿಗೆ ಹೇಗಿತ್ತು?
ಹೊಸ ವರ್ಷ ಬರ ಮಾಡಿಕೊಳ್ಳಲು ಎಲ್ಲರು ಸಜ್ಜಾಗಿದ್ದಾರೆ. 2025ರ ಅಂತಿಮ ಘಟ್ಟದಲ್ಲಿ ನಾವಿದ್ದೇನೆ. ಈ ವರ್ಷ ಉದ್ಯಮಿಗಳ ಪಾಲಿಗೆ ಹೇಗಿತ್ತು? ಯಾರು ಎಷ್ಟು ಆಸ್ತಿ ಮಾಡಿದ್ದಾರೆ. ಸಂಪತ್ತು ಎಷ್ಟು ಹೆಚ್ಚಾಗಿದೆ ಅನ್ನೋದು ಬ್ಲೂಮ್‍ಬರ್ಗ್ ಬಿಲೇನಿಯರ್ ಪಟ್ಟಿ ಬಿಡುಗಡೆ ಮಾಡಿದೆ. ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಭಾರತದ ಶ್ರೀಮಂತ ಉದ್ಯಮಿಗಳು ಆಸ್ತಿ ಎಷ್ಟು ಹೆಚ್ಚಾಗಿದೆ ಅನ್ನೋ ಮಾಹಿತಿಯನ್ನು ಬ್ಲೂಮ್‌ಬರ್ಗ್ ನೀಡಿದೆ.
ಮುಕೇಶ್ ಅಂಬಾನಿಗೆ ಮೊದಲ ಸ್ಥಾನ
ಮುಕೇಶ್ ಅಂಬಾನಿ 2025ರಲ್ಲಿ ಭಾರತೀಯರ ಶ್ರೀಮಂತರು, ಉದ್ಯಮಿಗಳ ಪೈಕಿ ಹೆಚ್ಚು ಆಸ್ತಿಗಳಿಸಿದ್ದಾರೆ. 2025ರಲ್ಲಿ ಮುಕೇಶ್ ಅಂಬಾನಿ ಖಜಾನೆಗೆ $16.50 ಬಿಲಿಯನ್ ಆಸ್ತಿ ಸೇರಿಕೊಂಡಿದೆ. ಭಾರತೀಯ ರೂಪಾಯಿಗಳಲ್ಲಿ 1,48,147.75 ಕೋಟಿ ರೂಪಾಯಿ. ಈ ವರ್ಷ ಭರ್ಜರಿ ಆಸ್ತಿ ಹೆಚ್ಚಳವಾಗಿದೆ.
ಅದಾನಿ ಹಿಂದಿಕ್ಕಿದ ಲಕ್ಷ್ಮಿ ಮಿತ್ತಲ್
ಸ್ಟೀಲ್ ಉದ್ಯಮ ಸಾಮ್ರಾಜ್ಯ ಕಟ್ಟಿರುವ ಲಕ್ಷ್ಮಿ ಮಿತ್ತಲ್ ಈ ವರ್ಷ ಹೆಚ್ಚು ಆದಾಯಗಳಿಸಿದ್ದಾರೆ. ಈ ವರ್ಷ $12 ಬಿಲಿಯನ್ ಅಮೆರಿಕನ್ ಡಾಲರ್ ಸಂಪತ್ತು ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ ಲಕ್ಷ್ಮಿ ಮಿತ್ತಲ್ ಒಟ್ಟು ಆಸ್ತಿ 31 ಮಿಲಿಯನ್ ಅಮೆರಿಕನ್ ಡಾಲರ್‌ಗೆ ಏರಿಕೆಯಾಗಿದೆ. ಮಿತ್ತಲ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 70ನೇ ಸ್ಥಾನದಲ್ಲಿದ್ದಾರೆ.
ಸುನಿಲ್ ಮಿತ್ತಲ್ ಆಸ್ತಿಯಲ್ಲೂ ಏರಿಕೆ
ಭಾರತಿ ಎರ್‌ಟೆಲ್ ಮುಖ್ಯಸ್ಥ ಸುನಿಲ್ ಮಿತ್ತಲ್ ಆಸ್ತಿಯಲ್ಲೂ ಭಾರಿ ಏರಿಕೆ ಕಂಡಿದೆ. 2025ರಲ್ಲಿ ಸುನಿಲ್ ಮಿತ್ತಲ್ ಆಸ್ತಿಯಲ್ಲಿ 6 ಬಿಲಿಯನ್ ಅಮೆರಿಕನ್ ಡಾಲರ್ ಏರಿಕೆಯಾಗಿದೆ. ಈ ವರ್ಷ ಭಾರತಿ ಏರ್‌ಟೆಲ್ ಷೇರುಗಳು ಶೇಕಡಾ 31ರಷ್ಟು ಏರಿಕೆಯಾಗಿದೆ. ಈ ಮೂಲಕ ಸುನಿಲ್ ಮಿತ್ತಲ್ ಒಟ್ಟು ಆಸ್ತಿ 29 ಬಿಲಿಯನ್ ಅಮೆರಿಕನ್ ಡಾಲರ್.
ಸುನಿಲ್ ಮಿತ್ತಲ್ ಆಸ್ತಿಯಲ್ಲೂ ಏರಿಕೆ
ಅದಾನಿ ಆಸ್ತಿಯಲ್ಲಿ ನಿರೀಕ್ಷಿತ ಏರಿಕೆ ಇಲ್ಲ
ಗೌತಮ್ ಅದಾನಿ ಭಾರತದ ಶ್ರೀಮಂತ ಉದ್ಯಮಿ. ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ನಡುವೆ ಮೊದಲ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯುತ್ತಲೇ ಇರುತ್ತದೆ. ಆದರೆ 2025ರಲ್ಲಿ ಗೌತಮ್ ಅದಾನಿ ಆಸ್ತಿ 5.9 ಬಿಲಿಯನ್ ಅಮೆರಿಕನ್ ಡಾಲರ್ ಏರಿಕೆಯಾಗಿದೆ. ಈ ಮೂಲಕ ಅದಾನಿ ಒಟ್ಟು ಆಸ್ತಿ 84 ಬಿಲಿಯನ್ ಅಮೆರಿಕನ್ ಡಾಲರ್.
ಅದಾನಿ ಆಸ್ತಿಯಲ್ಲಿ ನಿರೀಕ್ಷಿತ ಏರಿಕೆ ಇಲ್ಲ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

