ಕಡಿಮೆ ಬೆಲೆಯಲ್ಲಿ ಹೆಚ್ಚು OTT ಸಬ್‌ಸ್ಕ್ರಿಪ್ಷನ್ ಆಕ್ಸೆಸ್ ನೀಡುವ Jioನ ಸೂಪರ್ ಪ್ಲಾನ್‌ಗಳು
ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಕೈಗೆಟುಕುವ ಬೆಲೆಯಲ್ಲಿ ಹೈ-ಸ್ಪೀಡ್ ಡೇಟಾ ಮತ್ತು ಉಚಿತ OTT ಸಬ್‌ಸ್ಕ್ರಿಪ್ಷನ್‌ಗಳನ್ನು ನೀಡುತ್ತಿದೆ. Hotstar, Netflix, Prime Video ಸೇರಿದಂತೆ ಹಲವು ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳ ಉಚಿತ ಸಬ್‌ಸ್ಕ್ರಿಪ್ಷನ್ ಲಭ್ಯವಿದೆ.

ಉತ್ತಮ ಇಂಟರ್ನೆಟ್ ಸಂಪರ್ಕ ಮತ್ತು ಕೈಗೆಟುಕುವ ಡೇಟಾ ಪ್ಲಾನ್
ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ನಮ್ಮ ನಿತ್ಯದ ಒಡನಾಡಿಯಾಗಿದೆ. ಆನ್‌ಲೈನ್ ಶಾಪಿಂಗ್‌ನಿಂದ ಬ್ಯಾಂಕಿಂಗ್‌ವರೆಗೆ ಮತ್ತು ನೇವಿಗೇಷನ್‌ನಿಂದ ಮನರಂಜನೆಯವರೆಗೆ, ನಾವು ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಅನ್ನು ಅವಲಂಬಿಸಿದ್ದೇವೆ. ಹಾಗಾಗಿ ಉತ್ತಮ ಇಂಟರ್ನೆಟ್ ಸಂಪರ್ಕ ಮತ್ತು ಕೈಗೆಟುಕುವ ಡೇಟಾ ಪ್ಲಾನ್ ಹೊಂದಿರುವುದು ಅತ್ಯಗತ್ಯ.
ನಂಬರ್ ಒನ್ ಟೆಲಿಕಾಂ ಕಂಪನಿ
ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಅತಿ ವೇಗದ ಇಂಟರ್ನೆಟ್ ಮತ್ತು ಬಜೆಟ್ ಸ್ನೇಹಿ ಪ್ಲಾನ್‌ಗಳಿಗೆ ಹೆಸರುವಾಸಿಯಾಗಿದೆ. ಈಗ Jio ಹೈ-ಸ್ಪೀಡ್ ಡೇಟಾವನ್ನು ಮಾತ್ರವಲ್ಲದೆ ಉಚಿತ OTT ಸಬ್‌ಸ್ಕ್ರಿಪ್ಷನ್‌ಗಳನ್ನು ಸಹ ನೀಡುತ್ತಿದೆ. ಜಿಯೋದ ಈ ನಿರ್ಧಾರ ಬಳಕೆದಾರರಿಗೆ ಅನಿಯಮಿತ ಮನರಂಜನೆಗೆ ಕಾರಣವಾಗಿದೆ.
OTT ಪ್ಲಾಟ್‌ಫಾರ್ಮ್‌ಗಳ ಉಚಿತ ಸಬ್‌ಸ್ಕ್ರಿಪ್ಷನ್
Hotstar, Netflix, Prime Video, Sony Liv, Zee5 ಮುಂತಾದ ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳ ಉಚಿತ ಸಬ್‌ಸ್ಕ್ರಿಪ್ಷನ್ Jio ನ ಕೆಲವು ಆಯ್ದ ಪ್ಲಾನ್‌ಗಳಲ್ಲಿ ನೀಡುತ್ತಿದೆ. ಕೆಲವು ಪ್ಲಾನ್‌ಗಳು ಕೇವಲ 100 ರೂಪಾಯಿಯಿಂದ ಪ್ರಾರಂಭವಾಗುತ್ತವೆ. ಉಚಿತ OTT ಸಬ್‌ಸ್ಕ್ರಿಪ್ಷನ್‌ನೊಂದಿಗೆ ಲಭ್ಯವಾಗುವ Jio ನ 5 ಅತ್ಯುತ್ತಮ ಪ್ಲಾನ್ ಮಾಹಿತಿ ಇಲ್ಲಿದೆ.
ಪ್ಲಾನ್ 1
ಬೆಲೆ: 100 ರೂಪಾಯಿ
ಇದು ಕಡಿಮೆ ಬೆಲೆಯ ಪ್ಲಾನ್ ಆಗಿದ್ದು, Jio Hotstar ಸಬ್‌ಸ್ಕ್ರಿಪ್ಷನ್ ಉಚಿತವಾಗಿ ಲಭ್ಯವಾಗುತ್ತದೆ. 90 ದಿನ ವ್ಯಾಲಿಡಿಟಿಯನ್ನು ಹೊಂದಿದ್ದು, ಈ ಪ್ಲಾನ್‌ನಲ್ಲಿ 5G ಸಪೋರ್ಟ್ ಜೊತೆ 5GB ಡೇಟಾ ಲಭ್ಯವಾಗುತ್ತದೆ.
ಪ್ಲಾನ್ 2
ಬೆಲೆ: 445 ರೂಪಾಯಿ
ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಬಳಕೆದಾರರಿಗೆ ಪ್ರತಿದಿನ 2GB ಡೇಟಾ, ಅನಿಯಮಿತ ಕರೆಗಳು + ದಿನಕ್ಕೆ 100 SMS ಸೌಲಭ್ಯ ಸಿಗಲಿದೆ. ಈ ಪ್ಲಾನ್‌ನಲ್ಲಿ Sony Liv, Zee5, Lionsgate Play, Discovery+, Fan Code, Sun NXT, Planet Marathi, Kanchha Lannka, HoiChoi, Chaupal ಸಬ್‌ಸ್ಕ್ರಿಪ್ಷನ್ ಸಿಗುತ್ತದೆ. ಇದರೊಂದಿಗೆ JioTV ಮತ್ತು Jio AICloud ಸಹ ಉಚಿತವಾಗಿ ಲಭ್ಯವಿದೆ
ಪ್ಲಾನ್ 3
ಬೆಲೆ: 1029 ರೂಪಾಯಿ
ಈ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಉಚಿತವಾಗಿ Prime Video ಸಬ್‌ಸ್ಕ್ರಿಪ್ಷನ್ ಸಿಗುತ್ತದೆ. 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ದಿನಕ್ಕೆ 2GB ಡೇಟಾ ಮತ್ತು 100 ಎಸ್ಎಂಎಸ್ ಹಾಗೂ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡಬಹುದಾಗಿದೆ. ಇದರೊಂದಿಗೆ ಉಚಿತ JioTV ಮತ್ತು Jio AICloud ಸೌಲಭ್ಯವಾಗುತ್ತದೆ.
ಪ್ಲಾನ್ 4
ಬೆಲೆ: 1049 ರೂಪಾಯಿ
ಈ ಪ್ಲಾನ್ ನಿಮಗೆ ಉಚಿತ Sony Liv ಮತ್ತು Zee5 ಆಕ್ಸೆಸ್ ನೀಡುತ್ತದೆ. ₹1029 ಪ್ಲಾನ್‌ನಂತೆಯೇ ಡೇಟಾ ಮತ್ತು ವ್ಯಾಲಿಡಿಟಿಯನ್ನು ಇದು ಸಹ ಒಳಗೊಂಡಿದೆ. 84 ದಿನಗಳವರೆಗೆ ದಿನಕ್ಕೆ 2GB ಡೇಟಾ, ಅನಿಯಮಿತ ಕರೆ, ಉಚಿತ JioTV ಮತ್ತು AI Cloud ಸೌಲಭ್ಯ ಲಭ್ಯವಾಗುತ್ತದೆ.
ಪ್ಲಾನ್ 5
ಬೆಲೆ: 1299 ರೂಪಾಯಿ
ಉಚಿತ Netflix ಸಬ್‌ಸ್ಕ್ರಿಪ್ಷನ್‌ನೊಂದಿಗೆ ದಿನಕ್ಕೆ 2GB ಡೇಟಾ (84 ದಿನಗಳ ವ್ಯಾಲಿಡಿಟಿ) ಸಿಗುತ್ತದೆ. ಅನಿಯಮಿತ ಕರೆಗಳು ಮತ್ತು ದಿನಕ್ಕೆ ಉಚಿತವಾಗಿ 100 ಎಸ್‌ಎಂಎಸ್ ಕಳುಹಿಸಬಹುದಾಗಿದೆ. ಉಚಿತವಾಗಿ JioTV ಮತ್ತು AI Cloud ಬಳಸಬಹುದಾಗಿದೆ.
ಉಚಿತ ಮನರಂಜನೆ
ನಿಮ್ಮ ಡೇಟಾ ಪ್ಲಾನ್‌ನೊಂದಿಗೆ ಉಚಿತ ಮನರಂಜನೆಯನ್ನು ಬಯಸಿದರೆ, Jio ನ ಈ OTT ಸಬ್‌ಸ್ಕ್ರಿಪ್ಷನ್ ಪ್ಲಾನ್‌ಗಳು ನಿಮಗೆ ಸೂಕ್ತವಾಗಿವೆ. ಈ ಪ್ಲಾನ್‌ಗಳು ಕೇವಲ ಡೇಟಾವನ್ನು ಒದಗಿಸುವುದಲ್ಲದೆ, ಮನರಂಜನೆಯ ಅರ್ಧ ಡಜನ್ ಬಾಗಿಲುಗಳನ್ನು ತೆರೆಯುತ್ತವೆ.