MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Business
  • ನಮ್ಮ ಕರೆನ್ಸಿ ನೋಟುಗಳಿಗೆ ಸ್ಪೂರ್ತಿ ಈ ಐತಿಹಾಸಿಕ ಸ್ಮಾರಕಗಳು: ಫೋಟೋಗಳಲ್ಲಿ ನೋಡಿ..

ನಮ್ಮ ಕರೆನ್ಸಿ ನೋಟುಗಳಿಗೆ ಸ್ಪೂರ್ತಿ ಈ ಐತಿಹಾಸಿಕ ಸ್ಮಾರಕಗಳು: ಫೋಟೋಗಳಲ್ಲಿ ನೋಡಿ..

ಕಳೆದೆರಡು ವರ್ಷಗಳಲ್ಲಿ ನಮ್ಮಲ್ಲಿ ಹೆಚ್ಚಿನವರು ಆನ್‌ಲೈನ್ ಪಾವತಿ ವಿಧಾನಗಳಿಗೆ ಬದಲಾಗಿದ್ದೇವೆ. ಆದರೂ, ಈಗಲೂ ಸಹ ಅನೇಕರು ಕರೆನ್ಸಿ ನೋಟುಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಕರೆನ್ಸಿ ನೋಟು ಇಟ್ಟುಕೊಂಡರೆ ಅದರ ಭಾವನೆನೇ ಬೇರೆ ಎನ್ನುತ್ತಾರೆ. ಅದು ವಿನ್ಯಾಸವಾಗಿರಬಹುದು ಅಥವಾ ಹಣದ ಭೌತಿಕ ಉಪಸ್ಥಿತಿಯಾಗಿದೆ. ಕರೆನ್ಸಿ ನೋಟುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ನೋಟುಗಳು ದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ನೋಟವನ್ನು ಸಹ ಪ್ರದರ್ಶಿಸುತ್ತವೆ. ನಮ್ಮ ಕರೆನ್ಸಿ ನೋಟುಗಳು ಭಾರತದ ಪ್ರಸಿದ್ಧ ಸ್ಮಾರಕಗಳು ಮತ್ತು ಹೆಗ್ಗುರುತುಗಳ ಚಿತ್ರಗಳನ್ನು ಒಳಗೊಂಡಿರುತ್ತವೆ.  ನೋಟುಗಳ ಮೇಲೆ ಮುದ್ರಿತವಾಗಿರುವ ಐತಿಹಾಸಿಕ ಸ್ಥಳಗಳನ್ನು ಅನ್ವೇಷಿಸುವ ಟ್ವಿಟ್ಟರ್‌ ಪೋಸ್ಟ್‌ವೊಂದು ಇತ್ತೀಚೆಗೆ ವೈರಲ್‌ ಆಗಿದೆ.  ದೇಸಿ ಥಗ್ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ಇದನ್ನು ಪೋಸ್ಟ್‌ ಮಾಡಲಾಗಿದೆ. "ಭಾರತೀಯ ಕರೆನ್ಸಿ ನೋಟುಗಳಲ್ಲಿ ಮುದ್ರಿತ ಐತಿಹಾಸಿಕ ಸ್ಮಾರಕಗಳು ಮತ್ತು ಘಟನೆಗಳು" ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

1 Min read
BK Ashwin
Published : Apr 30 2023, 02:52 PM IST
Share this Photo Gallery
  • FB
  • TW
  • Linkdin
  • Whatsapp
15

ಕೋನಾರ್ಕ್‌ನಲ್ಲಿರುವ ಸೂರ್ಯ ದೇವಾಲಯವನ್ನು ಒಳಗೊಂಡ 10 ರೂ. ಕರೆನ್ಸಿ ನೋಟನ್ನು ಅವರು ಹಂಚಿಕೊಂಡಿದ್ದಾರೆ. ಯುನೆಸ್ಕೋ ಪ್ರಕಾರ, ಇದು ಸೂರ್ಯ ದೇವರ ರಥದ ಸ್ಮಾರಕವಾಗಿದೆ ಮತ್ತು ಅದರ 24 ಚಕ್ರಗಳನ್ನು ಸಾಂಕೇತಿಕ ವಿನ್ಯಾಸಗಳಿಂದ ಅಲಂಕರಿಸಲಾಗಿದೆ ಹಾಗೂ ಇದನ್ನು ಆರು ಕುದುರೆಗಳ ತಂಡವು ಮುನ್ನಡೆಸುತ್ತದೆ. ಇದನ್ನು 13 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.
 

25

ಮುಂದಿನ ಪೋಸ್ಟ್ ಎಲ್ಲೋರಾದ ಕೈಲಾಶ್ ದೇವಾಲಯವನ್ನು ಒಳಗೊಂಡಿದೆ, ಇದನ್ನು ₹ 20 ಕರೆನ್ಸಿ ನೋಟಿನಲ್ಲಿ ಚಿತ್ರಿಸಲಾಗಿದೆ. ಈ ದೇವಾಲಯವು ದೇಶದ ಅತ್ಯಂತ ದೊಡ್ಡ ಬಂಡೆಯಿಂದ ಕತ್ತರಿಸಿದ ದೇವಾಲಯಗಳಲ್ಲಿ ಒಂದಾಗಿದೆ ಮತ್ತು UNESCO ವಿಶ್ವ ಪರಂಪರೆಯ ತಾಣವಾಗಿದೆ.

 

35

ಕರ್ನಾಟಕದ ಖ್ಯಾತ ಪ್ರವಾಸಿ ಸ್ಥಳ ಹಂಪಿಯಲ್ಲಿನ ಐತಿಹಾಸಿಕ ಕಲ್ಲಿನ ರಥವು ಫ್ಲೋರೊಸೆಂಟ್ ನೀಲಿ ಬಣ್ಣದ ₹ 50 ನೋಟಿನಲ್ಲಿ ಕಂಡುಬಂದಿದೆ. 

ಇನ್ನು, ₹ 100 ಕರೆನ್ಸಿ ನೋಟು ಗುಜರಾತ್‌ನಲ್ಲಿರುವ ರಾಣಿ ಕಿ ವಾವ್ ಅನ್ನು ಚಿತ್ರಿಸುತ್ತದೆ. 1063 ರಲ್ಲಿ ಚೌಲುಕ್ಯ ರಾಜವಂಶದ ರಾಣಿ ಉದಯಮತಿ ಅವರು ಮೆಟ್ಟಿಲು ಬಾವಿಯನ್ನು ನಿರ್ಮಿಸಿದರು.

ಇನ್ನೊಂದೆಡೆ, ಮಧ್ಯಪ್ರದೇಶದಲ್ಲಿರುವ ಪ್ರಸಿದ್ಧ ಸಾಂಚಿ ಸ್ತೂಪವನ್ನು ₹ 200 ಕರೆನ್ಸಿ ನೋಟಿನ ಹಿಂಭಾಗದಲ್ಲಿ ಮುದ್ರಿಸಲಾಗಿದೆ ಎಂದೂ ಟ್ವೀಟ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ಇದನ್ನು ಚಕ್ರವರ್ತಿ ಅಶೋಕನು ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ನಿರ್ಮಿಸಲಾಗಿದೆ. 

45

ಇದೇ ರೀತಿ ₹ 500ರ ನೋಟಿನ ಹಿಂಭಾಗದಲ್ಲಿ ದೆಹಲಿಯ ಪ್ರಖ್ಯಾತ ಹಾಗೂ ಐತಿಹಾಸಿಕ ಕೆಂಪುಕೋಟೆಯನ್ನು ತೋರಿಸಲಾಗಿದೆ ಎಂಬ ಫೋಟೋವನ್ನು ಸಹ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. 

55

ಇನ್ನೊಂದೆಡೆ, ಭಾರತೀಯ ಮುಖಬೆಲೆಯ ಅತಿದೊಡ್ಡ ನೋಟು 2000 ರೂ. ಸ್ಮಾರಕವನ್ನು ಹೊಂದಿಲ್ಲ. ಆದರೆ ಹೆಗ್ಗುರುತು ಘಟನೆಯನ್ನು ಹೊಂದಿದೆ ಎಂದು ಹೇಳಿದ್ದಾರೆ. ಮೆಜೆಂಟಾ ಬಣ್ಣದ ನೋಟು ಭಾರತದ ಮೊದಲ ಯಶಸ್ವಿ ಮಂಗಳಯಾನ ಮಂಗಳಯಾನವನ್ನು ತೋರಿಸುತ್ತದೆ.
 

About the Author

BA
BK Ashwin
ಭಾರತ
ಟ್ವಿಟರ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved