MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಭಾರತದಲ್ಲಿ ಬದಲಾಗಲಿದೆ 50, 100, 500ರ ನೋಟು ! ಆರ್ ಬಿಐ ಪ್ಲಾನ್ ಇದು

ಭಾರತದಲ್ಲಿ ಬದಲಾಗಲಿದೆ 50, 100, 500ರ ನೋಟು ! ಆರ್ ಬಿಐ ಪ್ಲಾನ್ ಇದು

ನೋಟಿನ ವಿಷ್ಯದಲ್ಲಿ ಆರ್ ಬಿಐ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆರ್ ಬಿಐ ಈಗಿರುವ 50,100, 500ರ ನೋಟನ್ನು ರದ್ದು ಮಾಡಿ ಹೊಸ ನೋಟು ಜಾರಿಗೆ ತರು ಚಿಂತನೆ ನಡೆಸಿದೆ. 

2 Min read
Author : Roopa Hegde
Published : May 29 2026, 06:25 PM IST
Share this Photo Gallery
  • FB
  • TW
  • Linkdin
  • Whatsapp
17
ನೋಟು ಬದಲಾವಣೆ
Image Credit : Asianet News

ನೋಟು ಬದಲಾವಣೆ

ನಮ್ಮ ಕೈನಲ್ಲಿರುವ ನೋಟು ಕೇವಲ ವಹಿವಾಟಿನ ಸಾಧನ ಅಲ್ಲ. ದೇಶದ ಆರ್ಥಿಕತೆ ಸಂಕೇತ. ಯುಪಿಐ ಪೇಮೆಂಟ್ ಮತ್ತು ಆನ್ಲೈನ್ ವಹಿವಾಟು ಹೆಚ್ಚಾಗ್ತಿದ್ರೂ ನಗದಿಗೆ ಬೇಡಿಕೆ ಕಡಿಮೆ ಆಗಿಲ್ಲ. ಸದ್ಯ ಭಾರತದಲ್ಲಿ ಪೇಪರ್ ನೋಟುಗಳಿವೆ. ಅವುಗಳನ್ನು ಸಂಪೂರ್ಣವಾಗಿ ಬದಲಿಸುವ ಆಲೋಚನೆಯಲ್ಲಿ ರಿಸರ್ವ್ ಬ್ಯಾಂಕ್ ಇದೆ. ಆರ್ ಬಿಐ (RBI) ಸಾಂಪ್ರದಾಯಿಕ ಕಾಗದದ ನೋಟುಗಳನ್ನು ಪಾಲಿಮರ್ ಅಥವಾ ಪ್ಲಾಸ್ಟಿಕ್ ನೋಟಾಗಿ ಬದಲಿಸುವ ಯೋಜನೆ ಮಾಡ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಪ್ಲಾಸ್ಟಿಕ್ ನೋಟು
Image Credit : Asianet News

ಪ್ಲಾಸ್ಟಿಕ್ ನೋಟು

ಮಾಧ್ಯಮ ವರದಿಗಳ ಪ್ರಕಾರ, ಪಾಟ್ನಾ ಮತ್ತು ಮುಂಬೈನಲ್ಲಿ ಇತ್ತೀಚೆಗೆ ನಡೆದ ಆರ್ ಬಿಐ ಮಂಡಳಿಯ ಸಭೆಗಳಲ್ಲಿ ಪಾಲಿಮರ್ ನೋಟುಗಳ ಬಗ್ಗೆ ಚರ್ಚೆ ನಡೆದಿದೆ. ಹೆಚ್ಚುತ್ತಿರುವ ನಗದು ಬೇಡಿಕೆ, ನೋಟುಗಳ ತ್ವರಿತ ಕ್ಷೀಣತೆಯ ಸಮಸ್ಯೆ ಮತ್ತು ನಕಲಿ ನೋಟುಗಳನ್ನು ತಡೆಗಟ್ಟುವಿಕೆ ಸೇರಿದಂತೆ ಅನೇಕ ಸಮಸ್ಯೆಗೆ ಪಾಲಿಮರ್ ಅಥವಾ ಪ್ಲಾಸ್ಟಿಕ್ ನೋಟು ಪರಿಹಾರವಾಗಲಿದೆ.

Related Articles

Related image1
ಪ್ರವಾಸೋದ್ಯಮದಲ್ಲಿ ಎಐ ತಂತ್ರಜ್ಞಾನ, ವಿಮಾನ, ಹೋಟೆಲ್ ಬುಕ್ಕಿಂಗ್ ಇನ್ಮುಂದೆ ಮತ್ತಷ್ಟು ಸುಲಭ!
Related image2
ಕಳೆದ ಆರು ವರ್ಷದಿಂದ ರಿಲಯನ್ಸ್‌ ಗ್ರೂಪ್‌ನಿಂದ ಒಂದೇ ಒಂದು ರೂಪಾಯಿ ವೇತನ ಪಡೆಯದ ಮುಖೇಶ್‌ ಅಂಬಾನಿ!
37
ಕಾದದ ನೋಟಿನ ಸಮಸ್ಯೆ
Image Credit : Asianet News

ಕಾದದ ನೋಟಿನ ಸಮಸ್ಯೆ

ಭಾರತದಲ್ಲಿ ಪ್ರತಿದಿನ ಶತಕೋಟಿ ಕರೆನ್ಸಿ ನೋಟುಗಳ ಚಲಾವಣೆಯಾಗುತ್ತದೆ. ಒಂದೇ ನೋಟನ್ನು ಅನೇಕರು ಬಳಸೋದ್ರಿಂದ, ನಿರಂತರವಾಗಿ ನಡೆಯುವ ವಿನಿಮಯದಿಂದ ಕಾಗದದ ನೋಟುಗಳು ಬೇಗ ಹರಿಯುತ್ತಿವೆ. ನೋಟುಗಳು ಕೊಳೆಯಾಗ್ತಿವೆ. ನೋಟುಗಳ ಮರುಮುದ್ರಣ ಸರ್ಕಾರ ಮತ್ತು ಕೇಂದ್ರ ಬ್ಯಾಂಕ್ಗೆ ಭಾರಿ ನಷ್ಟವುಂಟು ಮಾಡ್ತಿದೆ. ಇದೆಲ್ಲಕ್ಕೆ ಪಾಲಿಮರ್ ನೋಟು ಉತ್ತಮ ಪರ್ಯಾಯ ಎಂದು ಪರಿಗಣಿಸಲಾಗುತ್ತಿದೆ.

47
ಪ್ಲಾಸ್ಟಿಕ್ ನೋಟು ಏಕೆ ಬೆಸ್ಟ್?
Image Credit : Asianet News

ಪ್ಲಾಸ್ಟಿಕ್ ನೋಟು ಏಕೆ ಬೆಸ್ಟ್?

ಬ್ಯಾಂಕಿಂಗ್ ತಜ್ಞರ ಪ್ರಕಾರ, ಪ್ಲಾಸ್ಟಿಕ್ ನೋಟುಗಳು ಸಾಮಾನ್ಯ ಕಾಗದದ ನೋಟುಗಳಿಗಿಂತ ಸುಮಾರು ಎರಡೂವರೆ ಪಟ್ಟು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ನೀರು, ತೇವಾಂಶ ಮತ್ತು ಧೂಳಿನ ಪರಿಣಾಮ ಇವುಗಳ ಮೇಲಾಗುವುದು ಕಡಿಮೆ. ಈಗಾಗಲೇ ಅನೇಕ ದೇಶಗಳು ಪ್ಲಾಸ್ಟಿಕ್ ಕರೆನ್ಸಿ ಜಾರಿಗೆ ತಂದಿವೆ. ಅಲ್ದೆ ಈ ನೋಟುಗಳ ಭದ್ರತೆ. ಈ ನೋಟುಗಳನ್ನು ನಕಲಿ ಮಾಡೋದು ಕಷ್ಟ. ಭಾರತದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಿದೆ. ಇಂಥ ಸಂದರ್ಭದಲ್ಲಿ ಪ್ಲಾಸ್ಟಿಕ್ ನೋಟುಗಳು ಭಾರತಕ್ಕೆ ಸೂಕ್ತ.

57
ಈ ದೇಶದಲ್ಲಿದೆ ಪ್ಲಾಸ್ಟಿಕ್ ನೋಟು
Image Credit : Asianet News

ಈ ದೇಶದಲ್ಲಿದೆ ಪ್ಲಾಸ್ಟಿಕ್ ನೋಟು

ಮೊದಲೇ ಹೇಳಿದಂತೆ ವಿಶ್ವದ ಅನೇಕ ದೇಶಗಳು ಪ್ಲಾಸ್ಟಿಕ್ ನೋಟುಗಳನ್ನು ಜಾರಿಗೆ ತಂದಿವೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ , ವಿಯೆಟ್ನಾಂ, ರೊಮೇನಿಯಾ, ಬ್ರೂನಿ ಮತ್ತು ಪಪುವಾ ನ್ಯೂಗಿನಿಯಾ ದೇಶಗಳಲ್ಲಿ ಪ್ಲಾಸ್ಟಿಕ್ ನೋಟುಗಳು ಚಲಾವಣೆಯಲ್ಲಿವೆ. ವಿಶ್ವದ ಸುಮಾರು 60 ದೇಶಗಳು ಪಾಲಿಮರ್ ನೋಟುಗಳನ್ನು ಜಾರಿಗೆ ತಂದಿವೆ. ವಿಶ್ವದ ಅತ್ಯಂತ ಜನಪ್ರಿಯ ಕರೆನ್ಸಿಯಾದ ಯುಎಸ್ ಡಾಲರ್ ಇನ್ನೂ ಸಂಪೂರ್ಣವಾಗಿ ಪ್ಲಾಸ್ಟಿಕ್ ಆಗಲ್ಲ. ಅಮೆರಿಕದ ನೋಟುಗಳನ್ನು ಹತ್ತಿ ಮತ್ತು ಲಿನಿನ್ನ ವಿಶೇಷ ಮಿಶ್ರಣದಿಂದ ತಯಾರಿಸಲ್ಪಡುತ್ತವೆ.

67
ವಿಫಲವಾಗಿತ್ತು ಪ್ಲಾನ್
Image Credit : Asianet News

ವಿಫಲವಾಗಿತ್ತು ಪ್ಲಾನ್

ಈ ಹಿಂದೆ 2012ರಲ್ಲಿ ಪ್ಲಾಸ್ಟಿಕ್ ನೋಟುಗಳ ಪ್ರಾಯೋಗಿಕ ಪ್ರಯತ್ನ ನಡೆದಿದೆ. 2012 ರಲ್ಲಿ, ರಿಸರ್ವ್ ಬ್ಯಾಂಕ್ 10 ರೂಪಾಯಿ ಮೌಲ್ಯದ 1 ಬಿಲಿಯನ್ ಪ್ಲಾಸ್ಟಿಕ್ ನೋಟುಗಳನ್ನು ಜಾರಿಗೆ ತರಲು ಮುಂದಾಗಿತ್ತು. ಎಟಿಎಂ ಯಂತ್ರಗಳು ಮತ್ತು ಬ್ಯಾಂಕುಗಳಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಈ ಪ್ರಯೋಗವನ್ನು ನಿಲ್ಲಿಸಲಾಯಿತು.

77
ಮುಂದಿರುವ ಸವಾಲು
Image Credit : Asianet News

ಮುಂದಿರುವ ಸವಾಲು

ಈಗ್ಲೂ ಪ್ಲಾಸ್ಟಿಕ್ ನೋಟುಗಳನ್ನು ಜಾರಿಗೆ ತರುವುದು ಸುಲಭವಲ್ಲ. ಎಟಿಎಂ ಯಂತ್ರಗಳನ್ನು ಹೊಸ ಪರಿಕರಗಳೊಂದಿಗೆ ನವೀಕರಿಸಿದ ನಂತರವೇ ಹೊಸ ಪ್ಲಾಸ್ಟಿಕ್ ನೋಟುಗಳನ್ನು ಜಾರಿಗೆ ತರಬೇಕು. ಪ್ಲಾಸ್ಟಿಕ್ ನೋಟಿಗೆ ಸಂಬಂಧಿಸಿದ ಪರಿಕರಗಳನ್ನು ಯಂತ್ರಗಳಲ್ಲಿ ಅಳವಡಿಸಲು ಈಗಾಗಲೇ ಪ್ಲಾಸ್ಟಿಕ್ ನೋಟುಗಳನ್ನು ಬಳಸುತ್ತಿರುವ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗ್ತಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ವ್ಯವಹಾರ
ಹಣ (Hana)
ಆರ್‌ಬಿಐ

Latest Videos
Recommended Stories
Recommended image1
ಪ್ರವಾಸೋದ್ಯಮದಲ್ಲಿ ಎಐ ತಂತ್ರಜ್ಞಾನ, ವಿಮಾನ, ಹೋಟೆಲ್ ಬುಕ್ಕಿಂಗ್ ಇನ್ಮುಂದೆ ಮತ್ತಷ್ಟು ಸುಲಭ!
Recommended image2
ಇನ್​ಸ್ಟಾ, ಫೇಸ್​ಬುಕ್​, ವಾಟ್ಸ್​ಆ್ಯಪ್​ಗೆ ಮಾಸಿಕ ಶುಲ್ಕ ನಿಗದಿ: ದುಡ್ಡು ಕೊಟ್ರೆ ಮಾತ್ರ ಬಳಕೆ- ಡಿಟೇಲ್ಸ್​ ಇಲ್ಲಿದೆ
Recommended image3
ಕಳೆದ ಆರು ವರ್ಷದಿಂದ ರಿಲಯನ್ಸ್‌ ಗ್ರೂಪ್‌ನಿಂದ ಒಂದೇ ಒಂದು ರೂಪಾಯಿ ವೇತನ ಪಡೆಯದ ಮುಖೇಶ್‌ ಅಂಬಾನಿ!
Related Stories
Recommended image1
ಪ್ರವಾಸೋದ್ಯಮದಲ್ಲಿ ಎಐ ತಂತ್ರಜ್ಞಾನ, ವಿಮಾನ, ಹೋಟೆಲ್ ಬುಕ್ಕಿಂಗ್ ಇನ್ಮುಂದೆ ಮತ್ತಷ್ಟು ಸುಲಭ!
Recommended image2
ಕಳೆದ ಆರು ವರ್ಷದಿಂದ ರಿಲಯನ್ಸ್‌ ಗ್ರೂಪ್‌ನಿಂದ ಒಂದೇ ಒಂದು ರೂಪಾಯಿ ವೇತನ ಪಡೆಯದ ಮುಖೇಶ್‌ ಅಂಬಾನಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved