RBI ನಿಜವಾಗಿಯೂ 500 ರೂ. ನೋಟುಗಳನ್ನು ರದ್ದು ಮಾಡುತ್ತಿದೆಯೇ? ಕೇಂದ್ರದ ಸ್ಪಷ್ಟನೆ
PIB ಫ್ಯಾಕ್ಟ್ ಚೆಕ್: ಕೇಂದ್ರ ಸರ್ಕಾರ ಮತ್ತೊಮ್ಮೆ ನೋಟು ಅಮಾನ್ಯೀಕರಣಕ್ಕೆ ಸಿದ್ಧವಾಗಿದೆಯೇ? ಭಾರತೀಯ ರಿಸರ್ವ್ ಬ್ಯಾಂಕ್ 500 ರೂಪಾಯಿ ನೋಟುಗಳ ಚಲಾವಣೆಯನ್ನು ನಿಲ್ಲಿಸುತ್ತದೆಯೇ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

500 ರೂ. ನೋಟು ನಿಷೇಧ?
2016ರ ನೋಟು ಅಮಾನ್ಯೀಕರಣದ ಕಹಿ ನೆನಪು ಮಾಸುವ ಮುನ್ನವೇ, ಮತ್ತೆ ನೋಟು ರದ್ದತಿಯ ಸುದ್ದಿ ಹರಿದಾಡುತ್ತಿದೆ. ಈ ಸುಳ್ಳು ಪ್ರಚಾರ ಜನರಲ್ಲಿ ಆತಂಕ ಸೃಷ್ಟಿಸಿದೆ. ಇದರ ಹಿಂದಿನ ಸತ್ಯಾಸತ್ಯತೆ ಏನು ಎಂಬುದರ ವಿವರ ಇಲ್ಲಿದೆ ನೋಡಿ
ಸುಳ್ಳು ಸುದ್ದಿ ವೈರಲ್
2023ರಲ್ಲಿ 2000 ರೂ. ನೋಟು ಹಿಂಪಡೆದ ನಂತರ, ಈಗ 500 ರೂ. ನೋಟುಗಳನ್ನೂ ರದ್ದು ಮಾಡಲಾಗುತ್ತದೆ ಎಂಬ ವದಂತಿ ಹಬ್ಬಿದೆ. 2026ರ ಮಾರ್ಚ್‌ಗೆ ಚಲಾವಣೆ ನಿಲ್ಲಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರವಾಗುತ್ತಿದೆ.
ಇದು ಸುಳ್ಳು ಸುದ್ದಿ, ನಂಬಬೇಡಿ
ಈ ವದಂತಿಯನ್ನು ಸರ್ಕಾರ ಮತ್ತು ಆರ್‌ಬಿಐ ನಿರಾಕರಿಸಿವೆ. ಇದು ಸುಳ್ಳು ಸುದ್ದಿ, 500 ರೂ. ನೋಟು ಚಲಾವಣೆಯಲ್ಲಿ ಮುಂದುವರಿಯಲಿದೆ ಎಂದು ಪಿಐಬಿ ಫ್ಯಾಕ್ಟ್ ಚೆಕ್ ವಿಭಾಗ 'X' ಮೂಲಕ ಸ್ಪಷ್ಟಪಡಿಸಿದೆ. ಇಂತಹ ಸುದ್ದಿ ನಂಬಬೇಡಿ ಎಂದಿದೆ.
ಇದನ್ನೂ ಓದಿ: ಎರಡೇ ದಿನದಲ್ಲಿ 11,500 ಕೋಟಿ ನಷ್ಟ ಕಂಡ ಎಲ್‌ಐಸಿ, ಏನು ಕಾರಣ?
ಹಣಕಾಸು ರಾಜ್ಯ ಸಚಿವರಿಂದ ಸ್ಪಷ್ಟನೆ
ನೋಟು ರದ್ದತಿ ಬಗ್ಗೆ ಸುಳ್ಳು ಸುದ್ದಿ ಹೊಸದೇನಲ್ಲ. ಕಳೆದ ವರ್ಷವೂ, 500 ರೂ. ನೋಟು ರದ್ದು ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ್ದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

