MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಬೆಂಗಳೂರಿನ ಮಾಜಿ ಪತ್ರಕರ್ತೆ, ಭಾರತದ ಐಟಿ ದಿಗ್ಗಜನ ಪತ್ನಿ ದೇಶ ಕಂಡ ಅತ್ಯಂತ ದೊಡ್ಡ ಮಹಿಳಾ ಕೊಡುಗೈ ದಾನಿ

ಬೆಂಗಳೂರಿನ ಮಾಜಿ ಪತ್ರಕರ್ತೆ, ಭಾರತದ ಐಟಿ ದಿಗ್ಗಜನ ಪತ್ನಿ ದೇಶ ಕಂಡ ಅತ್ಯಂತ ದೊಡ್ಡ ಮಹಿಳಾ ಕೊಡುಗೈ ದಾನಿ

ಈಕೆ ದೇಶದ ಅತೀ ದೊಡ್ಡ ಮಹಿಳಾ ಕೊಡುಗೈ ದಾನಿಯಾಗಿದ್ದಾರೆ. ಇದಕ್ಕಾಗಿ ಅನೇಕ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿದೆ. ಬೆಂಗಳೂರು, ಬಾಂಬೆಯಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡಿದ್ದಾರೆ. ದೇಶದ ಎರಡನೇ ಅತೀ ದೊಡ್ಡ ಕಂಪೆನಿ ಮಾತ್ರವಲ್ಲ 5,76,401 ಕೋಟಿ ಮಾರುಕಟ್ಟೆ ಬಂಡವಾಳ ಹೊಂದಿರುವ ಐಟಿ ಕಂಪೆನಿ ಕಟ್ಟಿದ  ಟೆಕ್ ಮಾಂತ್ರಿಕನ ಪತ್ನಿಯಾಗಿದ್ದಾರೆ. ಅರ್ಘ್ಯಮ್ ಫೌಂಡೇಶನ್‌ನ ಸಂಸ್ಥಾಪಕಿಯಾಗಿದ್ದಾರೆ.

2 Min read
Author : Gowthami K
Published : Aug 21 2023, 04:23 PM IST
Share this Photo Gallery
  • FB
  • TW
  • Linkdin
  • Whatsapp
19

ಅವರೇ  ರೋಹಿಣಿ ನಿಲೇಕಣಿ , 1960 ರಲ್ಲಿ ಜನಿಸಿದ ರೋಹಿಣಿ ಅರ್ಘ್ಯಮ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಭಾರತದ ದೊಡ್ಡ ಪರೋಪಕಾರಿಗಳಲ್ಲಿ (philanthropists) ಒಬ್ಬರು. ಅರ್ಘ್ಯಮ್ 2001 ರಲ್ಲಿ ಸ್ಥಾಪನೆಯಾದ NGO ಆಗಿದೆ ಮತ್ತು ಇದು ನೀರು ಮತ್ತು ನೈರ್ಮಲ್ಯ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29

ರೋಹಿಣಿ ನಿಲೇಕಣಿ ಅವರು ರೋಹಿಣಿ ನಿಲೇಕಣಿ ಪರೋಪಕಾರಿ ಸಂಸ್ಥೆಯ ಅಧ್ಯಕ್ಷರೂ ಆಗಿದ್ದಾರೆ. ರೋಹಿಣಿ ನಿಲೇಕಣಿ ಅವರ ತಂದೆ ಇಂಜಿನಿಯರ್ ಆಗಿದ್ದರೆ, ತಾಯಿ ಗೃಹಿಣಿ. ರೋಹಿಣಿ ಎಲ್ಫಿನ್‌ಸ್ಟೋನ್ ಕಾಲೇಜಿನಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ ಮತ್ತು 1980 ರಲ್ಲಿ ಬಾಂಬೆ ಮ್ಯಾಗಜೀನ್‌ನಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಅವರು ಬೆಂಗಳೂರಿನ ಸಂಡೇ ಮ್ಯಾಗಜೀನ್‌ನಲ್ಲಿಯೂ ಕೆಲಸ ಮಾಡಿದ್ದಾರೆ.

39

ರೋಹಿಣಿ ನಿಲೇಕಣಿ ಅವರು ಐಟಿ ದೈತ್ಯ ಇನ್ಫೋಸಿಸ್‌ನ ಸಹ-ಸಂಸ್ಥಾಪಕರಾಗಿರುವ ಟೆಕ್ ಮಾಂತ್ರಿಕ ನಂದನ್ ನಿಲೇಕಣಿ ಅವರನ್ನು ವಿವಾಹವಾಗಿದ್ದಾರೆ. ಇನ್ಫೋಸಿಸ್ ಈಗ 576,401 ಕೋಟಿ ಮಾರುಕಟ್ಟೆ ಬಂಡವಾಳದೊಂದಿಗೆ ಭಾರತದ ಎರಡನೇ ಅತಿದೊಡ್ಡ ಐಟಿ ಸಂಸ್ಥೆಯಾಗಿದೆ. 

49

ರೋಹಿಣಿ ಮತ್ತು ನಂದನ್ ನಿಲೇಕಣಿ ಮೊದಲ ಬಾರಿಗೆ 1977 ರಲ್ಲಿ ಹಿಂದಿನ ಕಾಲೇಜಿನಲ್ಲಿ ರಸಪ್ರಶ್ನೆ ಸ್ಪರ್ಧೆಯ ಸಂದರ್ಭದಲ್ಲಿ ಭೇಟಿಯಾದರು. ಬಳಿಕ ಪ್ರೀತಿಯಾಗಿ, ಮದುವೆಯಾಗಿ ದಂಪತಿಗೆ ಜಾನ್ಹವಿ ಮತ್ತು ನಿಹಾರ್ ಎಂಬ ಇಬ್ಬರು ಮಕ್ಕಳಿದ್ದಾರೆ.

59

ರೋಹಿಣಿ ನಿಲೇಕಣಿ ಈಗ ಅಶೋಕ ಟ್ರಸ್ಟ್‌ ಫಾರ್‌ ರಿಸರ್ಚ್‌ ಇನ್‌ ಇಕಾಲಜಿ ಅಂಡ್‌ ಎನ್ವಿರಾನ್‌ಮೆಂಟ್‌ನ (ATREE) ಟ್ರಸ್ಟಿಗಳ ಮಂಡಳಿಯಲ್ಲಿದ್ದಾರೆ ಮತ್ತು ಭಾರತದ ಸ್ಪರ್ಧಾ ಆಯೋಗದ ಪ್ರಖ್ಯಾತ ವ್ಯಕ್ತಿಗಳ ಸಲಹಾ ಗುಂಪಿನಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸೆಪ್ಟೆಂಬರ್ 2021 ರಲ್ಲಿ, ರೋಹಿಣಿ ಅರ್ಘ್ಯಮ್ ಫೌಂಡೇಶನ್‌ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. 

69

ರೋಹಿಣಿ ನಿಲೇಕಣಿ ಮತ್ತು ಅವರ ಪತಿ ನಂದನ್ ನಿಲೇಕಣಿ ತಮ್ಮ ಚಾರಿಟಿ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ರೋಹಿಣಿ ನಿಲೇಕಣಿ ಅವರು ಆಗಸ್ಟ್ 2013 ರಲ್ಲಿ ಇನ್ಫೋಸಿಸ್‌ನಲ್ಲಿ 5.77 ಲಕ್ಷ ಷೇರುಗಳನ್ನು ಚಾರಿಟಿ ಉದ್ದೇಶಕ್ಕಾಗಿ ಮಾರಾಟ ಮಾಡಿದರು. 

79

2010 ಮತ್ತು 2014 ರಲ್ಲಿ ಫೋರ್ಬ್ಸ್ ಮ್ಯಾಗಜೀನ್‌ನಿಂದ ರೋಹಿಣಿ ಅವರನ್ನು ಏಷ್ಯಾದ ಹೀರೋಸ್ ಆಫ್ ಫಿಲಾಂತ್ರಪಿ ಎಂದು ಹೆಸರಿಸಲಾಗಿದೆ. 2022 ರಲ್ಲಿ, ಫೋರ್ಬ್ಸ್ ಇಂಡಿಯಾ ಲೀಡರ್‌ಶಿಪ್ ಅವಾರ್ಡ್ಸ್‌ನಲ್ಲಿ ರೋಹಿಣಿ ನಿಲೇಕಣಿ ಅವರಿಗೆ ಅತ್ಯುತ್ತಮ ತಳಮಟ್ಟದ ಪರೋಪಕಾರಿ ಪ್ರಶಸ್ತಿಯನ್ನು ನೀಡಲಾಯಿತು. ಅವರು ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ (ASSOCHAM) ನಿಂದ 2020-21 ವರ್ಷದ  ಪರೋಪಕಾರಿ  ಪ್ರಶಸ್ತಿಯನ್ನು ಪಡೆದರು. 

89

2022 ರಲ್ಲಿ, ಎಡೆಲ್ ಗಿವ್ ಹುರುನ್ ಇಂಡಿಯಾ ಲೋಕೋಪಕಾರಿ ಪಟ್ಟಿ 2022 ರ ಮಹಿಳಾ ಲೋಕೋಪಕಾರಿಗಳ ಪಟ್ಟಿಯಲ್ಲಿ ರೋಹಿಣಿ ನಿಲೇಕಣಿ ಅವರನ್ನು ಹೆಸರಿಸಲಾಯಿತು. ವಿಶ್ವದ ಎರಡನೇ ಅತಿದೊಡ್ಡ ಕಂಪನಿ CEO ಭಾರತೀಯ, ಈ ಜಾಗತಿಕ ಐಕಾನ್‌ಗೂ ಕರ್ನಾಟಕಕ್ಕೂ ಇದೆ ನಂಟು!

99

ರೋಹಿಣಿ ಅವರು 2022 ರಲ್ಲಿ ರೂ 120 ಕೋಟಿ ದೇಣಿಗೆ ನೀಡಿದ್ದರು. ಏಪ್ರಿಲ್ 2023 ರಲ್ಲಿ ರೋಹಿಣಿ ನಿಲೇಕಣಿ ಅವರು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಗೆ 100 ಕೋಟಿ ರೂ ದೇಣಿಗೆ ನೀಡಿದ್ದಾರೆ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
 
1st ODI • NZ vs IND 2026
Live
NZNZ
(22.3 ov)102/5
INDIND
-
IND chose to bowl.
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ಕೋಟಿ ಕೋಟಿ ಮೌಲ್ಯದ ಇನ್ಫೋಸಿಸ್ ಕಟ್ಟಿದರೂ ಹಳೆಯ ಸಾಧನೆಗಳ ಮೇಲೆ ನಂಬಿಕೆಯಿಲ್ಲ! ನಾರಾಯಣ ಮೂರ್ತಿ ಹೇಳಿದ ಈ ಮಾತಿನ ಅರ್ಥವೇನು?
Recommended image2
10 ಕೋಟಿ ಡೌನ್‌ಲೋಡ್ ಗುರಿ, ಸಚಿನ್ ತೆಂಡೂಲ್ಕರ್ ಹೂಡಿಕೆ; ಈ ಭಾರತೀಯ ಗೇಮ್ ಈಗ ಜಾಗತಿಕ ಮಟ್ಟದಲ್ಲಿ ಸದ್ದು!
Recommended image3
ಡೇಟಾ ಸೆಂಟರ್‌ ಸ್ಟಾರ್ಟ್‌ ಮಾಡ್ಬೇಕು ಅಂತಿದೀನಿ, 12,500 ಕೋಟಿ ಸಾಲ ಕೊಡಿ ಎಂದು ಬ್ಯಾಂಕ್‌ ಮುಂದೆ ನಿಂತ ಗೌತಮ್‌ ಅದಾನಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved