Business Ideas: ನಿಮ್ಮ ಊರಲ್ಲೇ ಶುರು ಮಾಡಬಹುದಾದ ಕಡಿಮೆ ರಿಸ್ಕ್‌ನ ಬ್ಯುಸಿನೆಸ್‌ಗಳಿವು!
ಕೆಲಸವೇ ಇರಲಿ, ವ್ಯಾಪಾರವೇ ಆಗಲಿ, ನಮ್ಮಲ್ಲಿ ಅದೃಷ್ಟ ಮತ್ತು ಬುದ್ಧಿವಂತಿಕೆ ಇದ್ದರೆ ಖಂಡಿತ ಯಶಸ್ಸು ಸಾಧಿಸಬಹುದು. ಓದಿಲ್ಲದಿದ್ದರೂ, ಜಾಣ್ಮೆಯಿಂದ ವ್ಯಾಪಾರ ಮಾಡಿ ಲಕ್ಷಗಟ್ಟಲೆ ಸಂಪಾದಿಸಬಹುದು ಎಂಬುದು ಹಲವರ ಅಭಿಪ್ರಾಯ.
16

Image Credit : Money\Twitter
ಅದೃಷ್ಟ, ಬುದ್ಧಿವಂತಿಕೆ ಇದ್ದರೆ
ಕೆಲಸ ಅಥವಾ ವ್ಯಾಪಾರ, ಯಾವುದರಲ್ಲೇ ಆಗಲಿ ಯಶಸ್ಸು ಗಳಿಸಲು ಅದೃಷ್ಟ ಮತ್ತು ಬುದ್ಧಿವಂತಿಕೆ ಮುಖ್ಯ. ಓದಿಲ್ಲದಿದ್ದರೂ ಜಾಣ್ಮೆಯಿಂದ ವ್ಯಾಪಾರ ಮಾಡಿ ಲಕ್ಷಗಟ್ಟಲೆ ಸಂಪಾದಿಸಬಹುದು. ನೀವೂ ಸಹ ಉದ್ಯೋಗದ ಬದಲು ಸ್ವಂತ ವ್ಯಾಪಾರ ಆರಂಭಿಸಲು ಬಯಸಿದರೆ, ಈ ಮಾಹಿತಿ ನಿಮಗಾಗಿ.
26
Image Credit : Money\Twitter
ಮೆಡಿಕಲ್ ಕೊರಿಯರ್ ಸರ್ವೀಸ್
ನಿಮ್ಮ ಬಳಿ ವಾಹನವಿದ್ದು, ಕೆಲಸದಲ್ಲಿ ಕೌಶಲ್ಯವಿದ್ದರೆ ಮೆಡಿಕಲ್ ಕೊರಿಯರ್ ಸೇವೆ ಆರಂಭಿಸಬಹುದು. ಅಗತ್ಯವಿರುವವರಿಗೆ ಔಷಧಿ ಮತ್ತು ಉಪಕರಣಗಳನ್ನು ತಲುಪಿಸಬಹುದು. ಸ್ಥಳೀಯ ಆಸ್ಪತ್ರೆ, ಮೆಡಿಕಲ್ ಶಾಪ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡರೆ, ಇದೊಂದು ಉತ್ತಮ ಲಾಭದಾಯಕ ವ್ಯಾಪಾರವಾಗಲಿದೆ.
36
Image Credit : Money\Twitter
ಈವೆಂಟ್ ಕ್ಯಾಟರಿಂಗ್
ನಿಮಗೆ ಅಡುಗೆ ಮಾಡುವುದು ಇಷ್ಟವಾದರೆ, ಈವೆಂಟ್ ಕ್ಯಾಟರಿಂಗ್ ಆರಂಭಿಸಬಹುದು. ಪಾರ್ಟಿ, ಮದುವೆ ಸೇರಿದಂತೆ ಯಾವುದೇ ಸಮಾರಂಭಗಳಿಗೆ ಅಡುಗೆ ಮಾಡಿ ಹಣ ಗಳಿಸಬಹುದು. ಅಲ್ಲದೆ, ನಿಮ್ಮ ಮನೆಯ ಬಳಿಯೇ ಒಂದು ಸಣ್ಣ ಕ್ಯಾಂಟೀನ್ ಅಥವಾ ಮೀಲ್ಸ್ ಪಾಯಿಂಟ್ ತೆರೆದು ಉತ್ತಮ ಆದಾಯ ಗಳಿಸಬಹುದು.
46
Image Credit : Money\Twitter
ಉಪ್ಪಿನಕಾಯಿ ತಯಾರಿಕೆ
ಉಪ್ಪಿನಕಾಯಿ ತಯಾರಿಕೆ ವ್ಯಾಪಾರದಲ್ಲಿ ರಿಸ್ಕ್ ತೀರಾ ಕಡಿಮೆ. ಬಾಯಲ್ಲಿ ನೀರೂರಿಸುವ ಉಪ್ಪಿನಕಾಯಿಗಳನ್ನು ತಯಾರಿಸಿ, ಅಕ್ಕಪಕ್ಕದವರಿಗೆ ಮತ್ತು ಸ್ಥಳೀಯ ಅಂಗಡಿಗಳಿಗೆ ಹೋಲ್‌ಸೇಲ್ ಆಗಿ ಮಾರಾಟ ಮಾಡಿದರೆ ಉತ್ತಮ ಹಣ ಗಳಿಸಬಹುದು. ಇದರ ಜೊತೆಗೆ ಟೆಂಟ್ ಹೌಸ್, ಕೋಳಿ ಸಾಕಣೆಯಂತಹ ಉದ್ಯಮಗಳೂ ಒಳ್ಳೆಯ ಆದಾಯ ತರುತ್ತವೆ.
56
Image Credit : Money\Twitter
ಹಾಲಿನ ವ್ಯಾಪಾರ
ನಿಮ್ಮ ಬಳಿ ಹಸು, ಎಮ್ಮೆಗಳಿದ್ದರೆ ಹಾಲಿನ ವ್ಯಾಪಾರ ಆರಂಭಿಸುವುದು ಉತ್ತಮ. ಹೈನುಗಾರಿಕೆಯಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬಹುದು.
66
Image Credit : Getty
ಗೊಬ್ಬರದ ಅಂಗಡಿ
ಹಾಗೆಯೇ, ಬೀಜ ಮತ್ತು ಗೊಬ್ಬರದ ಅಂಗಡಿ ತೆರೆದು, ರೈತರಿಗೆ ಬೀಜ-ಗೊಬ್ಬರದ ಬಗ್ಗೆ ಅರಿವು ಮೂಡಿಸಿ, ಆಧುನಿಕ ಕೃಷಿ ಉಪಕರಣಗಳನ್ನು ಮಾರಾಟ ಮಾಡುವ ಮೂಲಕವೂ ವ್ಯಾಪಾರವನ್ನು ಬೆಳೆಸಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.
Latest Videos

