MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Chandrayaan-3: ಬಾಹ್ಯಾಕಾಶದ ಕತ್ತಲಲೋಕದ ಬಗ್ಗೆ ನೀವು ಮಿಸ್‌ ಮಾಡದೇ ನೋಡಬೇಕಾದ ಸಿನಿಮಾಗಳು!

Chandrayaan-3: ಬಾಹ್ಯಾಕಾಶದ ಕತ್ತಲಲೋಕದ ಬಗ್ಗೆ ನೀವು ಮಿಸ್‌ ಮಾಡದೇ ನೋಡಬೇಕಾದ ಸಿನಿಮಾಗಳು!

ಚಂದ್ರನ ಮೇಲೆ ಮಾನವ ಕಾಲಿಟ್ಟು 50 ವರ್ಷವಾಗಿದೆ. ಅಂದಿನ ತಂತ್ರಜ್ಞಾನಕ್ಕೂ ಇಂದಿನ ತಂತ್ರಜ್ಞಾನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಭಾರತದ ವಿಕ್ರಮ್‌ ಲ್ಯಾಂಡಿಂಗ್‌ ಮಾಡುವ ಹಂತದಲ್ಲಿ ಬಾಹ್ಯಾಕಾಶದ ಕತ್ತಲಲೋಕದ ಬಗ್ಗೆ ನೀವು ಮಿಸ್‌ ಮಾಡದೇ ನೋಡಲೇಬೇಕಾದ ಸ್ಪೇಸ್‌ ಮೂವಿಗಳ ಲಿಸ್ಟ್‌ ಇಲ್ಲಿದೆ. ಇದು ಬಾಹ್ಯಾಕಾಶದ ರಿಯಲ್‌ ಯೋಜನೆಗಳ ಕುರಿತಾಗಿ ಬಂದಿರುವ ಸಿನಿಮಾಗಳು 

2 Min read
Santosh Naik
Published : Aug 22 2023, 06:39 PM IST| Updated : Aug 22 2023, 06:40 PM IST
Share this Photo Gallery
  • FB
  • TW
  • Linkdin
  • Whatsapp
112
The Right Stuff

The Right Stuff

ದ ರೈಟ್‌ ಸ್ಟಫ್‌(1983): ಫಿಲಿಪ್‌ ಕೌಫ್‌ಮನ್‌ 1979ರಲ್ಲಿ ಇದೇ ಹೆಸರಲ್ಲಿ ಬಂದ ಪುಸ್ತಕವನ್ನೇ ಸಿನಿಮಾವನ್ನಾಗಿ ಮಾಡಿದ್ದರು. ಅಮೆರಿಕದ ಮೊಟ್ಟಮೊದಲ ಮಾನವ ಸಹಿತ ಗಗನಯಾನದ 7 ಮಂದಿ ಸೇನಾ ಪೈಲಟ್‌ಗಳ ಕುರಿತಾಗಿ ಚಿತ್ರ ಮೂಡಿಬಂದಿದೆ. ಬಾಕ್ಸಾಫೀಸ್‌ನಲ್ಲಿ ಹಣ ಗಳಿಸಲು ವಿಫಲವಾದರೂ, 8 ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡು, 4ರಲ್ಲಿ ಗಲುವು ಕಂಡಿತ್ತು. ಅಮೇಜಾನ್‌ನಲ್ಲಿ ಈ ಚಿತ್ರವನ್ನು ವೀಕ್ಷಿಸಬಹುದು.

212
For All Mankind

For All Mankind

ಫಾರ್‌ ಆಲ್‌ ಮ್ಯಾನ್‌ಕೈಂಡ್‌ (1989): ನಾಸಾದ ದೃಶ್ಯಾವಳಿಗಳನ್ನು ಬಳಸಿಕೊಂಡು ತೆರೆಗೆ ಬಂದ ಅತ್ಯುತ್ತಮ ಚಿತ್ರಗಳಲ್ಲಿ ಒಂದು. ಸ್ಪೇಸ್‌ ರೇಸ್‌ ಅನ್ನೋದು ಕೊನೆಯೇ ಆಗದಿದ್ದರೆ, ಅದರಿಂದಾಗುವ ಪರಿಣಾಮವೇನು ಅನ್ನೋದನ್ನು ಇದರಲ್ಲಿ ವಿವರಿಸಲಾಗಿದೆ. ಅದರೊಂದಿಗೆ ಅಮೆರಿಕದ ಅಪೊಲೊ ಸಾಹಸಗಳನ್ನು ವಿವರಿಸಲಾಗಿದೆ. ಅಮೇಜಾನ್‌ನಲ್ಲಿ ಈ ಚಿತ್ರವಿದೆ.

312
Apollo 13

Apollo 13

ಅಪೊಲೋ 13 (1995): ಟಾಮ್‌ ಹಾಂಕ್ಸ್‌ ನಟನೆಯ ಚಿತ್ರ. ಕಮಾಂಡರ್‌ ಜಿಮ್‌ ಲೊವೆಲ್‌ ಪಾತ್ರಕ್ಕೆ ಜೀವ ತುಂಬಿದ್ದರು. ಚಂದ್ರ ಯೋಜನೆಯಲ್ಲಿ ಹಾದಿಯಲ್ಲಿ ಆದ ತಾಂತ್ರಿಕ ಸಮಸ್ಯೆ ಅದರಿಂದ ಜೀವಕ್ಕೆ ಅಪಾಯವಾಗುವಾಗ, ಅವರು ಭೂಮಿಗೆ ಹಿಂತಿರುಗಿ ಬರುವ ಕಥೆ ಹೊಂದಿದೆ. ಅಮೇಜಾನ್‌ ಹಾಗೂ ಯೂಟ್ಯೂಬ್‌ನಲ್ಲಿ ಈ ಚಿತ್ರವಿದೆ.

412
Hidden Figures

Hidden Figures

ಹಿಡನ್‌ ಫಿಗರ್ಸ್‌ (2016): ನಾಸಾದ ವಿಜ್ಞಾನಿಗಳು ಎಂದರೆ ಬರೀ ಬಿಳಿ ಬಣ್ಣದವರು ಎನ್ನುವ ಕಲ್ಪನೆಗಳನ್ನು ಅಳಿಸಿಹಾಕಿದಂತ ಸಿನಿಮಾ. ನಾಸಾದ ಆರಂಭಿಕ ಯೋಜನೆಗಳಲ್ಲಿ ಕೆಲಸ ಮಾಡಿದ್ದ ಮೂವರು ಕಪ್ಪು ವರ್ಣೀಯ ಇಂಜಿನಿಯರ್‌ಗಳ ಕಥೆ ಸಿನಿಮಾದ ಜೀವಾಳ. ಅಮೇಜಾನ್‌ನಲ್ಲಿ ಈ ಚಿತ್ರವಿದೆ.
 

512
The Last Man on the Moon

The Last Man on the Moon

ದ ಲಾಸ್ಟ್‌ ಮ್ಯಾನ್‌ ಆನ್‌ ದ ಮೂನ್‌ (2016): ಅಮೆರಿಕದ ಕೊನೆಯ ಅಪೊಲೊ ಮಿಷನ್‌ನ ಕುರಿತಾದ ಚಿತ್ರ ಇದು. ಈ ಯೋಜನೆ ಮಿಷನ್‌ ಕಮಾಂಡರ್‌ ಎಗ್ಯುನ್‌ ಸೆರನ್‌ ಅವರ ಜೀವನವನ್ನು ಹೇಗೆ ಬದಲಿಸಿತು ಎನ್ನುವ ಕಥೆ ಹೊಂದಿದೆ. ಚಂದ್ರ ಕಾರ್ಯಾಚರಣೆಗೆ ಅಮೆರಿಕ ಸುರಿಯುತ್ತಿರುವ ಹಣದ ಬಗ್ಗೆ ಬಹುದೊಡ್ಡ ಆಕ್ಷೇಪಗಳು ವ್ಯಕ್ತವಾದ ಅಂಶಗಳನ್ನೂ ಇದು ಹೊಂದಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ನೋಡಬಹುದು.

612
The Farthest

The Farthest

ದಿ ಫಾರ್ತೆಸ್ಟ್‌ (2017): 1977ರಲ್ಲಿ ನಾಸಾ ಎರಡು ಗಾಢಾಂತರಿಕ್ಷ ನೌಕೆಗಳಾದ ವೋಯೆಜರ್‌-1 ಹಾಗೂ ವೋಯೆಜರ್‌-2ಅನ್ನು ಉಡಾವಣೆ ಮಾಡಿತ್ತು. 70ರ ದಶಕದಲ್ಲಿ ಅಮೆರಿಕದ ಇಂಜಿನಿಯರಿಂಗ್‌ ಅದ್ಭುತ ವೊಯೇಜರ್‌ ನೌಕೆ. ಇಂದು ಈ ಎರಡೂ ನೌಕೆಗಳು ನಾವು ನಿರೀಕ್ಷೆಯೇ ಮಾಡದಷ್ಟು ದೂರಕ್ಕೆ ಸಾಗಿವೆ. ಅದರ ಕುರಿತಾದ ಸಿನಿಮಾ ಇದಾಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿದೆ.

712
The Mars Generation

The Mars Generation

ದ ಮಾರ್ಸ್‌ ಜನರೇಷನ್‌ (2017): ಮಾನವ ಸಹಿತ ಬಾಹ್ಯಾಕಾಶ ಪರಿಶೋಧನೆಯ ಕಥೆ. ಈ ಸಾಕ್ಷ್ಯಚಿತ್ರದಲ್ಲಿ ಮುಂದಿನ ಯುಗದ ಬಾಹ್ಯಾಕಾಶದ ಕುತೂಹಲ ಹೊಂದಿರುವ ಹುಡುಗರ ಕಥೆಯನ್ನು ಹೊಂದಿದೆ. ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿದೆ.

812
Salyut 7

Salyut 7

ಸಲ್ಯುತ್‌ 7 (2017): ರಷ್ಯಾದ ಚಿತ್ರ ಇದಾಗಿದೆ. ಬಾಹ್ಯಾಕಾಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುವ ಕಥೆಯನ್ನು ಇದು ಒಳಗೊಂಡಿದೆ. ರಷ್ಯಾದ ಸ್ಪೇಸ್‌ ಪ್ರೋಗ್ರಾಮ್ ಬಗ್ಗೆ ಬಂದಿರುವ ಕೆಲವೇ ಕೆಲವು ಬಿಗ್‌ ಬಜೆಟ್‌ ಸಿನಿಮಾ ಇದಾಗಿದೆ.

912
Mercury 13

Mercury 13

ಮರ್ಕ್ಯುರಿ 13 (2018): "ಮರ್ಕ್ಯುರಿ 13" ಸಾಕ್ಷ್ಯಚಿತ್ರವು ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ಸಂಭಾವ್ಯ ಅಭ್ಯರ್ಥಿಗಳಾಗಿ ಪರೀಕ್ಷಿಸಲ್ಪಟ್ಟ ಮಹಿಳೆಯರ ಗುಂಪನ್ನು ಹೈಲೈಟ್ ಮಾಡುತ್ತದೆ. ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿದೆ.

1012
First Man

First Man

ಫರ್ಸ್ಟ್‌ ಮ್ಯಾನ್‌ (2018): ನೀಲ್‌ ಆರ್ಮ್‌ಸ್ಟ್ರಾಂಗ್‌ಅವರ ಅಪೊಲೊ 11 ಮಿಷನ್‌ನ ಕಥೆ. ಆರಂಭದಲ್ಲಿ ಬೋರ್‌ ಹೊಡೆಸಿದರೂ, ಕೊನೆಯಲ್ಲಿ ಚಂದ್ರನ ಮೇಳೆ ಆರ್ಮ್‌ಸ್ಟ್ರಾಂಗ್‌ ಇಳಿಯುವ ದೃಶ್ಯಗಳನ್ನು ಮನೋಜ್ಞವಾಗಿ ತೋರಿಸಲಾಗಿದೆ. ಅಮೆಜಾನ್‌ನಲ್ಲಿ ಈ ಚಿತ್ರವಿದೆ.

1112
Apollo 11

Apollo 11

ಅಪೊಲೊ 11 (2019): ಅಮೆರಿಕ 1969ರಲ್ಲಿ ಮಾಡಿದ ಚಂದ್ರಯಾನ ಹಾಗೂ ಚಂದ್ರನ ಮೇಲೆ ಮಾನವನ ಲ್ಯಾಂಡಿಂಗ್‌ ಕಥೆಯನ್ನು ಹೊಂದಿದೆ. ಈ ಚಿತ್ರದಲ್ಲಿ ಆರ್ಮ್‌ಸ್ಟ್ರಾಂಗ್‌ ಅವರ ನೈಜ ವಿಡಿಯೋಗಳನ್ನು ಬಳಸಿಕೊಳ್ಳಲಾಗಿದೆ. ಅಮೆಜಾನ್‌ನಲ್ಲಿ ಈ ಚಿತ್ರವಿದೆ.

1212
Mission Mangal

Mission Mangal

ಮಿಷನ್‌ ಮಂಗಲ್‌ (2019): ಇನ್ನು ಭಾರತದ ಮಟ್ಟಿಗೆ ಮಿಷನ್‌ ಮಂಗಲ್‌ ಸಿನಿಮಾ. ಮಂಗಳನ ಕಕ್ಷೆಗೆ ಆರ್ಬಿಟರ್‌ಅನ್ನು ಸೇರಿಸಿದ ಕಥೆ ಇದು ಹೊಂದಿದ್ದು, ಹಾಟ್‌ಸ್ಟಾರ್‌ನಲ್ಲಿ ಈ ವಿತ್ರ ವೀಕ್ಷಿಸಬಹುದು.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಇಸ್ರೋ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved